Asianet Suvarna News Asianet Suvarna News

ಬಿಹಾರದ ಈ ರೈತನಿಗೆ 7 ಹೆಣ್ಣು ಮಕ್ಕಳು : ಎಲ್ಲರೂ ಪೊಲೀಸ್ ಅಧಿಕಾರಿಗಳು

Biharದ ಶರನ್ ಜಿಲ್ಲೆಯಲ್ಲಿ ರೈತರೊಬ್ಬರು 7 ಹೆಣ್ಣು ಮಕ್ಕಳು ದೇಶ ಕಾಯುವ ಕೆಲಸ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಈ ಹೆಣ್ಣು ಮಕ್ಕಳ ಸಾಹಸಗಾಥೆ ಈಗ Social media ದಲ್ಲಿ ಸಖತ್ ವೈರಲ್ ಆಗಿದೆ.

this farmer from Bihar saran district has 7 daughters all of them are police officers akb
Author
First Published Dec 5, 2023, 2:00 PM IST

ಬಿಹಾರ: ಬಿಹಾರದ ಶರನ್ ಜಿಲ್ಲೆಯಲ್ಲಿ ರೈತರೊಬ್ಬರು 7 ಹೆಣ್ಣು ಮಕ್ಕಳು ದೇಶ ಕಾಯುವ ಕೆಲಸ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಶರಣ್ ಜಿಲ್ಲೆಯ ಬಡ ರೈತ ರಾಜ್‌ಕುಮಾರ್ ಸಿಂಗ್ (ಕಮಲ್ ಸಿಂಗ್) ಅವರು ತಮ್ಮ 7 ಜನ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪೊಲೀಸ್ ಹಾಗೂ ರಕ್ಷಣಾ ಪಡೆಯಲ್ಲಿ ಕೆಲಸ ಸಿಗುವಂತೆ ಮಾಡಿದ್ದಾರೆ. ಈ ಹೆಣ್ಣು ಮಕ್ಕಳ ಸಾಹಸಗಾಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ 7 ಜನ ಹೆಣ್ಣು ಮಕ್ಕಳು ತಮ್ಮ ಪೋಷಕರಿಗಾಗಿ ನಗರದಲ್ಲಿ ಬಹುಮಹಡಿ ಮನೆಯೊಂದನ್ನು ಕಟ್ಟಿದ್ದು, ಇದರಲ್ಲಿ ಬಂದ ಬಾಡಿಗೆಯಿಂದ ಪೋಷಕರು ಇಳಿವಯಸ್ಸಿನಲ್ಲಿ ಸುಖಿ ಜೀವನ ನಡೆಸುವಂತಾಗಿದೆ. ತಮ್ಮ ಈ 7 ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ತಂದೆ ರಾಜ್‌ಕುಮಾರ್ ಸಿಂಗ್ ಬರೀ ಈ ಜನ್ಮದಲ್ಲಿ ಮಾತ್ರವಲ್ಲ ಪ್ರತಿ ಜನ್ಮದಲ್ಲೂ ಈ 7 ಮಕ್ಕಳು ನನ್ನ ಮಕ್ಕಳಾಗಿಯೇ ಹುಟ್ಟಲಿ ಎಂದು ಹೇಳುತ್ತಾರೆ.

ಬಿಹಾರದ ಶರಣ್ ಜಿಲ್ಲೆಯ ರೈತ ರಾಜ್‌ಕುಮಾರ್ ಸಿಂಗ್ (ಕಮಲ್ ಸಿಂಗ್‌) ಹಾಗೂ ಶಾರದಾ ದೇವಿ ಸಿಂಗ್ ಅವರ ಮಕ್ಕಳಲ್ಲಿ ಮೊದಲನೇಯವರಾದ ರಾಣಿ ಸಿಂಗ್ ಅವರು ಬಿಹಾರ ಪೊಲೀಸ್ ಇಲಾಖೆಯಲ್ಲಿ (Bihar Police Department) ಕೆಲಸ ಮಾಡುತ್ತಿದ್ದಾರೆ. ನಂತರದವರು ರೇಣು ಸಿಂಗ್ ಇವರು, ಸಶಸ್ತ್ರ ಸೀಮಾ ಬಲದಲ್ಲಿ ಕೆಲಸ ಮಾಡುತ್ತಿದ್ದಾರೆ.  ಮೂರನೇ ಪುತ್ರಿ ಸೋನಿ ಸಿಂಗ್ (CRPF)ಸಿಆರ್‌ಪಿಎಫ್‌( ಕೇಂದ್ರ ಮೀಸಲು ಪೊಲೀಸ್ ಪಡೆ) ಯಲ್ಲಿ ಕೆಲಸ ಮಾಡುತ್ತಿದ್ದಾರೆ. 4ನೇ ಪುತ್ರಿ ಪ್ರೀತಿ ಸಿಂಗ್ ಅಪರಾಧ ದಳದಲ್ಲಿ ಕೆಲಸ ಮಾಡುತ್ತಿದ್ದಾರೆ. 5ನೇ ಪುತ್ರಿ ಪಿಂಕಿ ಸಿಂಗ್ ಅಬಕಾರಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 6ನೇ ಪುತ್ರಿ ರಿಂಕಿ ಸಿಂಗ್ ಬಿಹಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. (ಪಿಂಕಿ ಹಾಗೂ ರಿಂಕಿ ಅವಳಿಗಳಾಗಿದ್ದಾರೆ) ಹಾಗೆಯೇ ಕೊನೆಯ ಪುತ್ರಿ ನಾನಿ ಸಿಂಗ್ ಸರ್ಕಾರಿ ರೈಲ್ವೆ ಪೊಲೀಸ್(GRP) ಆಗಿ ಕೆಲಸ ಮಾಡುತ್ತಿದ್ದಾರೆ. 

ಹೆಣ್ಣು ಮಕ್ಕಳೆಂದರೆ ಟೆನ್ಸನ್‌ (ಚಿಂತೆ) ಅನ್ನುತ್ತಾರೆ. ಆದರೆ ಅವರು  10 ಸನ್‌(10 ಮಕ್ಕಳಿಗೆ ಸಮ) ಅವರು ಅಪ್ಪ ಅಮ್ಮನ ವೃದ್ಧಾಪ್ಯಕ್ಕೆ ಪೆನ್ಷನ್ ಕೂಡ ಆಗಬಲ್ಲರು. ಪ್ರಧಾನಿ ಮೋದಿ ಬೇಟಿ ಬಚಾವೋ ಬೇಟಿ ಪಡಾವೋ ಎಂದು ಹೇಳಿದ್ದರು ನಾವದನ್ನು ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ 7 ಹೆಣ್ಣು ಮಕ್ಕಳ ತಾಯಿ ಶಾರದಾ ದೇವಿ ಸಿಂಗ್, 7 ಹೆಣ್ಣು ಮಕ್ಕಳ ನಂತರ  ರಾಜ್‌ಕುಮಾರ್ ಸಿಂಗ್ ಹಾಗೂ ಶಾರದಾ ದೇವಿ ಸಿಂಗ್ ಪುತ್ರನಿಗೆ ಓರ್ವ ಗಂಡು ಮಗ ಹುಟ್ಟಿದ್ದಾನೆ ಆತನ ಹೆಸರು ರಾಜೀವ್ ಸಿಂಗ್

ಹೆಣ್ಣು ಮಕ್ಕಳು ಹುಟ್ಟಿದರೆ ಖರ್ಚು ಹೆಚ್ಚು ಅವರಿಗೆ ನಾವು ವರದಕ್ಷಿಣೆ ನೀಡಬೇಕು ಮದುವೆ ಮಾಡಿ ಕೊಡಬೇಕು ಎಂದು ಬಹುತೇಕರು ಹೆಣ್ಣು ಮಕ್ಕಳು ಹುಟ್ಟಿದಾಗ ಸಂಕಟ ಪಡುತ್ತಾರೆ ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಈ ದಂಪತಿಯನ್ನು ಸಂದರ್ಶಕರೊಬ್ಬರು ಕೇಳಿದ್ದು, ಇದಕ್ಕೆ ಉತ್ತರಿಸಿದ ಈ ರೈತ ನಾವು ವರದಕ್ಷಿಣೆಯಾಗಿ ಅವರಿಗೆ ಶಿಕ್ಷಣವನ್ನು ನೀಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.  ಮೊದಲಿಗೆ ನಮ್ಮ ಮನೆಯಲ್ಲೂ ಬಡತನವಿತ್ತು ದೊಡ್ಡ ಅಕ್ಕ ಹಾಗೂ ನಂತರ ಜನಿಸಿದ ಅಕ್ಕ ಸರ್ಕಾರಿ ಶಾಲೆಯಲ್ಲಿ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡರು ನಂತರ ನಮ್ಮ ಸ್ಥಿತಿ ಸುಧಾರಿಸಿತ್ತು. ನಂತರ ಅವರಿಬ್ಬರು ನಮ್ಮನೆಲ್ಲಾ ಖಾಸಗಿ ಶಾಲೆಯಲ್ಲಿ ಓದಿಸಿದಳು ಎಂದು ಹೆಮ್ಮೆಯಿಂದ ಹೇಳುತ್ತಾನೆ ಈ 7 ಅಕ್ಕಂದಿರ ಹೆಮ್ಮೆಯ ತಮ್ಮ ರಾಜೀವ್ ಸಿಂಗ್. ಮೂಲತಃ ರಾಜಸ್ಥಾನಿಗರಾದ ನಾವು ಇಲ್ಲಿ ಬಂದು ನೆಲೆಸಿದ್ದೇವೆ, ನಮ್ಮ ಸೋದರಿಯರು ಇಲ್ಲಿ ಸಿಂಗ್ ಸಿಸ್ಟರ್ಸ್‌ಗಳೆಂದೇ ಫೇಮಸ್ ಆಗಿದ್ದಾರೆ ಎಂದು ರಾಜೀವ್ ಹೇಳಿದ್ದಾರೆ. 

ಈ ಸಹೋದರಿಯರ ಏಕೈಕ ತಮ್ಮ ರಾಜೀವ್ ಸಿಂಗ್ ಬಿಟೆಕ್ ಮುಗಿಸಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಕೆಲವರು ಹೀಗೆ ಎಲ್ಲರಿಗೂ ಹೇಗೆ ಕೆಲಸ ಸಿಕ್ಕಿತ್ತು ಎಷ್ಟು ಹಣ ನೀವು ನೀಡಿದಿರಿ ಎಂದು ಕೇಳುತ್ತಾರೆ. ಆದರೆ ನಾವು ಒಬ್ಬರಿಗೂ ಕೆಲಸಕ್ಕಾಗಿ ಹಣ ನೀಡಿಲ್ಲ ಅವರು ಚೆನ್ನಾಗಿ ಓದಿದರು, ಕಷ್ಟಪಟ್ಟರು ಅವರಿಗೆ ಕೆಲಸ ಸಿಕ್ಕಿತು ಎನ್ನುತ್ತಾರೆ ಈ ಹೆಮ್ಮೆಯ ಹೆಣ್ಣು ಮಕ್ಕಳ ಪೋಷಕರು.  ಈ 7 ಜನ ಹೆಣ್ಣು ಮಕ್ಕಳು ಪೋಷಕರಿಗಾಗಿ ಪಟ್ಟಣದಲ್ಲಿ ಜಾಗ ತೆಗೆದು 4 ಅಂತಸ್ಥಿನ ಮನೆಯೊಂದನ್ನು ಕಟ್ಟಿದ್ದು, ಇದರಲ್ಲಿ ಬರುವ ಬಾಡಿಗೆ ಹಣವನ್ನು ಡಿಪಾಸಿಟ್ ಮಾಡಿ ಇಳಿವಯಸ್ಸಿನಲ್ಲಿ ತಮ್ಮ ಪೋಷಕರಿಗೆ ಪೆನ್ಷನ್ ಬರುವಂತೆ ಮಾಡಿದ್ದಾರೆ ಈ ಹೆಣ್ಣು ಮಕ್ಕಳು. ಈ ಮನೆಗೆ ಸೆವೆನ್ ಸಿಸ್ಟರ್ ಪ್ಯಾಲೇಸ್ ಎಂದು ಹೆಸರಿಡಲಾಗಿದೆ. 

 

Follow Us:
Download App:
  • android
  • ios