Asianet Suvarna News Asianet Suvarna News

Bollywood : ಹಿರಿಯ ನಾಯಕರನ್ನು ತಬ್ಬಿಕೊಂಡ್ರೆ ಅಪ್ಪನನ್ನು ತಬ್ಬಿಕೊಂಡಂತಾಗ್ತಿತ್ತು... ಅನುಭವ ಬಿಚ್ಚಿಟ್ಟ ನಟಿ

ಚಿತ್ರರಂಗದಲ್ಲಿ ಹಿರಿಯ ನಟನ ಜೊತೆ ಯಂಗ್ ಹಿರೋಯಿನ್ ನಟಿಸೋದು ಕಾಮನ್ ಆಗಿದೆ. ಆದ್ರೆ ಎಲ್ಲ ಸಂದರ್ಭದಲ್ಲೂ ಇಂಥ ಜೋಡಿ ನೋಡೋದು ಕಷ್ಟ. ಬರೀ ನೋಡೋದು ಮಾತ್ರವಲ್ಲ ಕೆಲ ವಯಸ್ಸಾದ ಹಿರೋ ಜೊತೆ ನಟಿಸೋದು ಕಷ್ಟ ಎನ್ನುತ್ತಾರೆ ಈ ನಟಿ. 
 

This Actress Revealed That She Used To Feel Uncomfortable While Romancing Older Heroes On Screen roo
Author
First Published Jun 22, 2024, 12:43 PM IST

ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ತೆಲಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಇಶಾ ಕೊಪ್ಪಿಕರ್ ಬಾಲಿವುಡ್ ಮೊದಲ ಚಿತ್ರ ಫಿಜಾ. ಹಿಂದಿ ಚಿತ್ರಗಳಲ್ಲದೆ  ಅವರು ಅನೇಕ ದಕ್ಷಿಣ ಭಾರತದ  ಚಿತ್ರಗಳಲ್ಲಿಯೂ ಕೆಲಸ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ಶಿವ ಕಾರ್ತಿಕೇಯನ್, ರಾಕುಲ್ ಪ್ರೀತ್ ಸಿಂಗ್ ಅವರ ತಮಿಳು ಚಿತ್ರ ಅಯಾಲನ್ ನಲ್ಲಿ ಇಶಾ ನಟಿಸಿದ್ದಾರೆ. ಇಶಾ ಕೊಪ್ಪಿಕರ್, ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನ ಕರಾಳ ಸತ್ಯವನ್ನು ಮತ್ತೊಮ್ಮೆ ಜಗತ್ತಿಗೆ ತೆರೆದಿಟ್ಟಿದ್ದಾರೆ. ಅದ್ರ ಜೊತೆ ಹಿರಿಯ ನಟರ ಜೊತೆ ನಟಿಸಿದ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. 

ಸಿದ್ಧಾರ್ಥ್ ಕಣ್ಣನ್ ಜೊತೆ ಸಂದರ್ಶನದಲ್ಲಿ ಮಾತನಾಡಿದ ಇಶಾ (Isha), ಹಿರಿಯನ ನಟರೊಂದಿಗೆ ರೋಮ್ಯಾನ್ಸ್ (Romance) ಮಾಡುವಾಗ ತಮ್ಮ ಅನುಭವ ಹೇಗಿತ್ತು ಎಂಬುದನ್ನು ಹೇಳಿದ್ದಾರೆ. ಹಿರಿಯ ನಟರ ಜೊತೆ ರೋಮ್ಯಾನ್ಸ್ ಸಾಧ್ಯವಿಲ್ಲ ಅನ್ನೋದು ಇಶಾ ವಾದ. ಅವರನ್ನು ತಬ್ಬಿಕೊಂಡ್ರೆ ತಂದೆಯನ್ನು ತಬ್ಬಿಕೊಂಡಂತೆ ಆಗ್ತಿತ್ತು ಎಂದಿದ್ದಾರೆ.

ಮಗನಿಗೆ ಈ ನಟನ ಹೆಸರಿಡಲು ಮುಂದಾಗ ನಿರೂಪಕಿ; 2-3 ಹೆಂಡ್ತೀರ್ ಆಗ್ತಾರೆ ಅನ್ನೋ ಭಯ ಶುರುವಾಯ್ತಾ?

ನೀವು ನಿಮಗಿಂತ 20ರಿಂದ 30 ವರ್ಷ ಹಿರಿಯ ವಯಸ್ಸಿನ ವ್ಯಕ್ತಿ ಜೊತೆ ಕೆಲಸ ಮಾಡ್ತಿದ್ದರೆ ಅಸಹಜತೆ ಎದುರಿಸುತ್ತೀರಿ. ನಾನು ಹಿರಿಯ ನಾಯಕರ ಜೊತೆ ಕೆಲಸ ಮಾಡುವಾಗ ನನಗೆ ಹಾಗೆ ಆಗ್ತಿತ್ತು. ನೀವು ನಿಮ್ಮ ಪ್ರೇಮಿ ಅಥವಾ ಸ್ನೇಹಿತನನ್ನು ತಬ್ಬಿಕೊಳ್ತಿದ್ದೀರಿ ಎಂಬ ಭಾವನೆ ಬರೋದಿಲ್ಲ. ವಯಸ್ಸಾದ ಹೀರೋನನ್ನು ತಬ್ಬಿಕೊಂಡಾಗ ಅಪ್ಪನನ್ನು ಹಗ್ ಮಾಡಿದ ಅನುಭವವಾಗುತ್ತದೆ ಎಂದು ಇಶಾ ಹೇಳಿದ್ದಾರೆ. ನಾನು ಆಗ ಹೊಸಬಳಾಗಿದ್ದೆ. ಇದು ಸಾಮಾನ್ಯ ಎಂದು ಭಾವಿಸಿದ್ದೆ. ನೀವು ಕಲಾವಿದರಾಗಿರುವ ಕಾರಣ ನಟನೆಗೆ ಹೆಚ್ಚು ಆದ್ಯತೆ ನೀಡ್ತೀರಿ. ನಿಮ್ಮ ಜೊತೆ ನಟಿಸುತ್ತಿರುವ ವ್ಯಕ್ತಿ ವಯಸ್ಸಾದವನು ಎಂಬುದನ್ನು ಗಮನಿಸೋದಿಲ್ಲ. ಎಲ್ಲರ ಜೊತೆಯೂ ಈ ಅನುಭವ ಆಗೋದಿಲ್ಲ. ಕೆಲವರು ವಯಸ್ಸಾದ್ರೂ ಫಿಟ್ ಆಗಿದ್ದಾರೆ. ತಮ್ಮ ದೇಹವನ್ನು ಮೆಂಟೇನ್ ಮಾಡಿದ್ದಾರೆ. ಅವರನ್ನು ನೋಡಿದ್ರೆ ಏಜ್ ಆಗಿರೋದು ತಿಳಿಯೋದಿಲ್ಲ. ಆದ್ರೆ ಮತ್ತೆ ಕೆಲವರು ತಮ್ಮ ದೇಹ, ಸ್ವಭಾವದಿಂದ ಹಿರಿಯರು ಎನ್ನುವ ಭಾವನೆ ಮೂಡಿಸ್ತಾರೆ. ಅವರ ಜೊತೆ ಕೆಲಸ ಮಾಡೋದು ಕಷ್ಟವಾಗುತ್ತದೆ ಎಂದು ಇಶಾ ಹೇಳಿದ್ದಾರೆ.

ನಾಯಕ ಎಂದ ಮಾತ್ರಕ್ಕೆ ವಯಸ್ಸಿಗೆ ಮಹತ್ವ ಇಲ್ಲ ಎಂದಲ್ಲ. ನಾಯಕರು ವಯಸ್ಸು, ತಾವು ಹೇಗೆ ಕಾಣ್ತೇವೆ ಎಂಬುದನ್ನೆಲ್ಲ ಗಮನಿಸಬೇಕು. ತಮ್ಮ ವಯಸ್ಸು, ಲುಕ್ ಗೆ ತಕ್ಕಂತ ಪಾತ್ರ ಮಾಡ್ಬೇಕು. ಇನ್ಮುಂದೆ ಇದು ಬದಲಾಗುತ್ತೆ ಎನ್ನುವ ನಿರೀಕ್ಷೆ ಇದೆ. ಯಾಕೆಂದ್ರೆ ನೋಡುಗರು ಮೂರ್ಖರಲ್ಲ. ಥಿಯೇಟರ್ ನಲ್ಲಿ ಎಷ್ಟೋ ಜನರು ಹೇಳಿದ ಮಾತನ್ನು ನಾನು ಕೇಳಿದ್ದೇನೆ. ಮುದುಕನ ಹಾಗೆ ಕಾಣ್ತಾನೆ, ಮನೆಯಲ್ಲಿ ಕುಳಿತುಕೊಳ್ಳೋದು ಬಿಟ್ಟು ಮಗನ ವಯಸ್ಸಿನ ಹುಡುಗಿ ಜೊತೆ ರೋಮ್ಯಾನ್ಸ್ ಮಾಡ್ತಿದ್ದಾನೆ ಅಂತ ಪ್ರೇಕ್ಷಕರು ಹೇಳ್ತಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲೂ ಜನರು ಹೇಳ್ತಿದ್ದಾರೆಂದು ಇಶಾ ಹೇಳಿದ್ದಾರೆ. 

ಕಾಟೇರ ಬೆಡಗಿ ಯೋಗಾಭ್ಯಾಸ ! ಯೋಗ ಹೇಗೆ ಮಾಡ್ತಾರೆ ನೋಡಿ ಮಾಲಾಶ್ರೀ ಪುತ್ರಿ !

ಇದಕ್ಕೂ ಮುನ್ನ ಇಶಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು. ಅನೇಕ ಬಾರಿ ನಿರ್ಮಾಪಕರು, ನಿರ್ದೇಶಕರು ಮೀಟಿಂಗ್ ಗೆ ಕರೆದು ಅನುಚಿತವಾಗಿ ಮುಟ್ಟಿದ್ದಲ್ಲದೇ, ನಾಯಕನ ಜೊತೆ ಸ್ನೇಹ ಬೆಳೆಸಬೇಕು ಎಂದು ಕೈ ಒತ್ತಿ ಹೇಳುತ್ತಿದ್ದರು. ಅಷ್ಟೇ ಅಲ್ಲ, ಒಮ್ಮೆ ಒಬ್ಬ ದೊಡ್ಡ ಹೀರೋ ನನ್ನನ್ನು ಒಬ್ಬನೇ ಭೇಟಿಯಾಗಲು ಬರುವಂತೆ ಹೇಳಿದ್ದ. ಆ ಸಮಯದಲ್ಲಿ ಬೇರೆ ನಟಿಯ ಜೊತೆ ನಂಟು ಇದ್ದ ಕಾರಣ ತನ್ನ ಡ್ರೈವರ್ ನನ್ನು ಕೂಡ ಕರೆದುಕೊಂಡು ಬಂದಿರಲಿಲ್ಲ. ನೀವು ಬಾಲಿವುಡ್‌ನಲ್ಲಿ ಉಳಿಯಬೇಕಾದರೆ, ಸ್ನೇಹಪರವಾಗಿರಬೇಕೆಂದು ಸಲಹೆ ನೀಡಿದ್ದ ಎಂದು ಇಶಾ ಹೇಳಿದ್ದರು.

Latest Videos
Follow Us:
Download App:
  • android
  • ios