Asianet Suvarna News Asianet Suvarna News

ಮಲಗುವಾಗ ಕೂದಲು ಬಿಚ್ಚಿ ಮಲಗಬೇಕೋ, ಕಟ್ಟಿ ಮಲಗಬೇಕೋ ?

ಸುಂದರವಾದ ಕೂದಲು (Hair) ಬೇಕೆಂದು ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಹೀಗಾಗಿಯೇ ಕೂದಲ ಆರೈಕೆ (Care)ಗಾಗಿ ಹಲವು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ತಿಳಿಯದೇ ಮಾಡುವ ಮಿಸ್ಟೇಕ್ಸ್‌ (Mistakes) ನಮ್ಮ ಕೂದಲು ಹಾಳಾಗಲು ಕಾರಣವಾಗುತ್ತದೆ. ಅಂಥಾ ತಪ್ಪುಗಳು ಯಾವುವು ?

Things You Should Never Do to Your Hair Before Bed Vin
Author
Bengaluru, First Published Jun 30, 2022, 3:17 PM IST

ಸೌಂದರ್ಯದ (Beauty) ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ (Care) ಇದ್ದೇ ಇರುತ್ತದೆ. ಹಾಗೆಯೇ ಚರ್ಮ ಹಾಗೂ ಕೂದಲಿನ (Hair) ಬಗ್ಗೆಯೂ ಹೆಚ್ಚು ಮುತುವರ್ಜಿ ಹೊಂದಿರುತ್ತಾರೆ. ಕೂದಲ ಆರೋಗ್ಯ (Health) ಚೆನ್ನಾಗಿರಬೇಕೆಂದು ಆರ್ಯುವೇದಿಕ್, ಅಲೋಪತಿ ಎಂದು ಹಲವು ರೀತಿಯ ಚಿಕಿತ್ಸಾ ವಿಧಾನವನ್ನು ಅನುಸರಿಸುತ್ತಾರೆ. ಕೂದಲಿಗೆ ಸರಿಯಾಗಿ ಎಣ್ಣೆ ಹಾಕಿ ಮಸಾಜ್ ಮಾಡುವುದು, ಶ್ಯಾಂಪು ಬಳಸಿ ಕೂದಲನ್ನು ತೊಳೆಯುವುದು ಬಹಳ ಮುಖ್ಯ. ಆರೋಗ್ಯಕರ ಅಭ್ಯಾಸಗಳನ್ನು ಹೊಂದಿರುತ್ತಾರೆ. ನಾವು ಎಚ್ಚರವಾಗಿದ್ದಾಗ ಕೂದಲಿನ ಬಗ್ಗೆ ಇಷ್ಟೆಲ್ಲಾ ಕಾಳಜಿ ವಹಿಸುತ್ತೇವೆ ನಿಜ. ಇದೇ ರೀತಿಯ ಕಾಳಜಿ ಮಲಗಿದ್ದಾಗಲೂ ಇರಬೇಕಲ್ವಾ? 

ಸಾಮಾನ್ಯವಾಗಿ ಹುಡುಗಿಯರಲ್ಲಿ ರಾತ್ರಿ ಕೂದಲಿಗೆ ಕಟ್ಟಿಕೊಂಡು ಮಲಗಬೇಕೋ ಅಥವಾ ತೆರೆದು ಮಲಗಬೇಕೋ ಎಂಬ ಗೊಂದಲ ಇರುತ್ತದೆ. ಹಾಗಾಗಿ ನಾವಿಂದು ರಾತ್ರಿ ಮಲಗುವಾಗ ಕೂದಲು ಕಟ್ಟಿ ಮಲಗುವುದು ಒಳ್ಳೆಯದೋ ಅಥವಾ ಕೂದಲು ಬಿಚ್ಚಿ ಮಲಗುವುದು ಒಳ್ಳೆಯದೋ ಎಂದು ತಿಳಿಸಿಕೊಡಲಿದ್ದೇವೆ.

ಕೂದಲು ಉದುರೋ ಸಮಸ್ಯೆನಾ, ನೀವು ಸರಿಯಾದ ಬಾಚಣಿಗೆ ಬಳಸ್ತಿದ್ದೀರಾ ಮೊದ್ಲು ನೋಡಿ

ದಿಂಬಿನ ಆಯ್ಕೆ ಸರಿಯಾಗಿರಲಿ: ನೀವು ಬಳಸುವ ದಿಂಬು ಕೂದಲಿನ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಹತ್ತಿಯು ಕೂದಲಿನಿಂದ ತೇವಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲನ್ನು ಸುಕ್ಕುಗಟ್ಟಿದಂತೆ ಮಾಡುತ್ತದೆ ಎಂದು ಪ್ರಸಿದ್ಧ ಕೇಶ ವಿನ್ಯಾಸಕಿ ಆಶ್ಲೇ ವಾಹ್ಲರ್ ಹೇಳುತ್ತಾರೆ. ಹೀಗಾಗಿ ಕೂದಲು ಒಡೆಯುವುದನ್ನು ತಡೆಯಲು ಮತ್ತು ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಹತ್ತಿಯ ದಿಂಬಿನ ಬದಲು ರೇಷ್ಮೆಯ ದಿಂಬನ್ನು ಬಳಸುವಂತೆ ಸಲಹೆ ನೀಡಲಾಗುತ್ತದೆ.

ಕೂದಲನ್ನು ಕಟ್ಟಿಕೊಳ್ಳಿ: ಕೂದಲನ್ನು ಬಿಚ್ಚಿ ಹಾಕಿ ಮಲಗುವುದು ಅತ್ಯಂತ ನೈಸರ್ಗಿಕ ಮಾರ್ಗವೆಂದು ತೋರುತ್ತದೆ. ಆದರೆ ವಾಸ್ತವವಾಗಿ ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ವಿಶೇಷವಾಗಿ ನೀವು ಉದ್ದನೆಯ ಕೂದಲನ್ನು ಹೊಂದಿದ್ದರೆ, ಕೂದಲನ್ನು ಕಟ್ಟದೆ (ಉದ್ದ ಕೂದಲಿಗೆ ಎಂದಿಗೂ ಮಲಗಬೇಡಿ, ಏಕೆಂದರೆ ಸಡಿಲವಾದ ಕೂದಲು ಸಿಕ್ಕು ಬೀಳಬಹುದು. ನಂತರ ಸಿಕ್ಕುಗಳನ್ನು ತೆಗೆದುಹಾಕುವುದರಿಂದ ಒಡೆಯಬಹುದು ಎಂದು ಪ್ರಸಿದ್ಧ ಕೇಶ ವಿನ್ಯಾಸಕಿ ಫಾಲನ್ ಟೋನಿ ಚಾವೆಜ್ ಹೇಳುತ್ತಾರೆ. ಸಡಿಲವಾದ ಬನ್‌ನಲ್ಲಿ ನಿಮ್ಮ ಕೂದಲನ್ನು ಕಟ್ಟುವುದು ಉತ್ತಮವಾಗಿದೆ.

ರಬ್ಬರ್ ಹೇರ್ ಟೈ ಒಳ್ಳೇದಲ್ಲ: ರಾತ್ರಿಯಲ್ಲಿ ಕೂದಲುಗಳನ್ನು ಕಟ್ಟುವಾಗ, ಅದನ್ನು ಕಟ್ಟಲು ನೀವು ಏನು ಬಳಸುತ್ತೀರಿ ಎಂಬುದು ಕೂದಲಿನ ಆರೋಗ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಲೋಹ ಅಥವಾ ರಬ್ಬರ್‌ನಿಂದ ತಯಾರಿಸಿ ಹೇರ್‌ ಟೈಗಳನ್ನು ಬಳಸದಿರಿ. ಬ್ಯಾಂಡ್ ಕೂದಲನ್ನು ಎಳೆಯುವ ಕಾರಣ ಇದು ಹೆಚ್ಚು ಕೂದಲು ಹೋಗಲು ಕಾರಣವಾಗಬಹುದು.

Hair Care: ಮಳೆಗಾಲದಲ್ಲಿ ಕೂದಲ ಬಗ್ಗೆಯೂ ಇರಲಿ ನಿಗಾ!

ಒದ್ದೆಯಾದ ಕೂದಲಿನ ಮೇಲೆ ಮಲಗ್ಬೇಡಿ: ಹೆಚ್ಚಿನವರು ತಲೆಸ್ನಾನ ಮಾಡಿದ ಬಳಿಕ ಕೂದಲು ಸ್ವಚ್ಛವಾಯಿತು ಇನ್ನು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಕೂದಲ ಕಾಳಜಿ ವಹಿಸಬೇಕಾಗಿರುವುದು ಆಗಲೇ. ಕೂದಲು ಒದ್ದೆಯಾಗಿದ್ದಾಗ ದುರ್ಬಲವಾಗಿರುತ್ತದೆ. ಹೀಗಾಗಿ ಬೇಗನೇ ಕಟ್ ಆಗುತ್ತದೆ. ಮಾತ್ರವಲ್ಲ ಧೂಳನ್ನು ಸಹ ಸುಲಭವಾಗಿ ಸೆಳೆಯುತ್ತದೆ. ಹೀಗಾಗಿ ಯಾವಾಗಲೂ ಕೂದಲು ಒದ್ದೆಯಾಗಿದ್ದಾಗ ಬಾಚುವುದು, ಮಲಗುವುದು ಮಾಡಬೇಡಿ. ಮಲಗುವ ಮೊದಲು ಕೂದಲನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳಿ. ಹೀಗೆ ಮಾಡುವದರಿಂದ ಕೂದಲು ಹಾಳಾಗುವ ಭಯವಿಲ್ಲ. 

ಒಣ ಕೋಣೆಯಲ್ಲಿ ಮಲಗೋದು ಒಳ್ಳೇಯದಲ್ಲ: ಶುಷ್ಕ ವಾತಾವರಣವು ಚರ್ಮ, ಕೂದಲನ್ನು ಹಾಳು ಮಾಡುತ್ತದೆ. ನಿಮ್ಮ ಮಲಗುವ ಕೋಣೆ ಸಾಮಾನ್ಯವಾಗಿ ಶುಷ್ಕವಾಗಿದ್ದರೆ ಅಥವಾ ನೀವು ಹೀಟರ್ ಹೊಂದಿದ್ದರೆ, ನಿಮ್ಮ ಕೂದಲು ಶುಷ್ಕ ಗಾಳಿಯಿಂದ ಬಳಲುತ್ತದೆ. ಹೀಗಾಗಿ ಇಂಥಾ ತಪ್ಪನ್ನು ಮಾಡದಿರಿ. ಸಾಮಾನ್ಯ ತಾಪಮಾನದ ಕೋಣೆಯಲ್ಲಿ ಮಲಗುವುದು ಕೂದಲ ಆರೋಗ್ಯಕ್ಕೆ ಒಳ್ಳೆಯದು.

ಕೂದಲನ್ನು ಸಡಿಲವಾಗಿ ಕಟ್ಟಿ: ಕೆಲವರ ಕೂದಲು ತುಂಬಾ ದಪ್ಪಗಿರುತ್ತದೆ. ಅಂತಹವರು ಕೂದಲು ಕಟ್ಟಿ ಮಲಗಿದರೆ ತಲೆನೋವು ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರು ಕೂದಲನ್ನು ಕಟ್ಟುವ ಬದಲು ಬಿಚ್ಚಿ ಮಲಗಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಕೂದಲು ಬಿಚ್ಚಿ ಮಲಗಿದರೆ ಕೂದಲು ಉದುರುತ್ತದೆ ಎನ್ನುವ ಕಾರಣಕ್ಕೆ ತಮಗೆ ಇಷ್ಟವಿಲ್ಲದಿದ್ದರೂ ಕೂಲದನ್ನು ಕಟ್ಟಿ ಮಲಗುತ್ತಾರೆ. ಕೂದಲನ್ನು ಕಟ್ಟುವುದೆಂದರೆ ತುಂಬಾ ಬಿಗಿಯಾಗಿ ಕಟ್ಟಬಾರದು. ಕೂದಲು ಸಡಿಲವಾಗಿ ಕಟ್ಟಿದರೆ ಸಾಕು. ಬಿಗಿಯಾಗಿ ಕೂದಲನ್ನು ಕಟ್ಟುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆಗಳಿವೆ.

Follow Us:
Download App:
  • android
  • ios