Asianet Suvarna News Asianet Suvarna News

Hair Care: ಮಳೆಗಾಲದಲ್ಲಿ ಕೂದಲ ಬಗ್ಗೆಯೂ ಇರಲಿ ನಿಗಾ!

ಮಳೆಗಾಲ(Mansoon) ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ತಂಪು ವಾತಾವರಣ(Cold Weather), ಹಸಿರ ಸಿರಿ(Greenery), ತುಂತುರು ಮಳೆ(Rain), ಕೈಲೊಂದು ಕೊಡೆ(Umbrella) ಇದ್ದರೆ ಹಾಗೆ ಒಂದು ರೌಂಡ್ ವಾಕಿಂಗ್(Walking) ಆದರೂ ಹೋಗಿ ಬರೋಣ ಎನಿಸುತ್ತದೆ. ಸ್ಮೋಕಿ ವೆಧರ್(Smoky Weather) ಇದ್ದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಕೂದಲು ಬಿಟ್ಕೊಂಡು(Free Hair) ಹೊರಗೆ ಹೋಗೋದು ಸಾಮಾನ್ಯ. ಆದರೆ ಈ ಮಳೆಗಾಲದಲ್ಲಿ ಕೂದಲ ಆರೈಕೆ(Precautions) ಬಹಳ ಮುಖ್ಯ. ಮಳೆಗಾಲದಲ್ಲಿ ಕೂದಲ ಆರೈಕೆ ಹೇಗಿರಬೇಕು ಎಂಬುದರ ಮಾಹಿತಿ ಇಲ್ಲಿದೆ.

Hair Precautions During Mansoon to avoid falling
Author
Bangalore, First Published Jun 22, 2022, 2:30 PM IST

ಮಳೆಗಾಲ(Mansoon) ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ತಂಪು ವಾತಾವರಣ(Cold Weather), ಹಸಿರ ಸಿರಿ(Greenery), ತುಂತುರು ಮಳೆ(Rain), ಕೈಲೊಂದು ಕೊಡೆ(Umbrella) ಇದ್ದರೆ ಹಾಗೆ ಒಂದು ರೌಂಡ್ ವಾಕಿಂಗ್(Walking) ಆದರೂ ಹೋಗಿ ಬರೋಣ ಎನಿಸುತ್ತದೆ. ಸ್ಮೋಕಿ ವೆಧರ್(Smoky Weather) ಇದ್ದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಕೂದಲು ಬಿಟ್ಕೊಂಡು(Free Hair) ಹೊರಗೆ ಹೋಗೋದು ಸಾಮಾನ್ಯ. ಆದರೆ ಈ ಮಳೆಗಾಲದಲ್ಲಿ ಕೂದಲ ಆರೈಕೆ(Precautions) ಬಹಳ ಮುಖ್ಯ. 

ಮಳೆಗಾಲ ಎಲ್ಲರಿಗೂ ಖುಷಿ(Joy) ನೀಡುವ ಸೀಜನ್(Season). ಬಜ್ಜಿ ಬೋಂಡಗಳು ಈ ಟೈಂನಲ್ಲಿ ಹೆಚ್ಚು ತಿನ್ನಬೇಕು ಅನಿಸುತ್ತೆ. ಸ್ಪೆöÊಸಿ(Spicy), ಬಿಸಿ ಬಿಸಿ(Hot), ಖಾರ ಇರುವ ಆಹಾರಗಳು(Food) ವಾತಾವರಣಕ್ಕೆ ತಕ್ಕಂತೆ ನಾಲಿಗೆಗೂ(Tong) ಖುಷಿ ನೀಡುತ್ತದೆ. ಆದರೆ ಮಳೆಗಾಲದಲ್ಲಿ ಕೂದಲಿನ(Hair) ವಿಷಯದಲ್ಲಿ ಸಮಸ್ಯೆಗಳು(Problems) ಹೆಚ್ಚಾಗುತ್ತವೆ. ಆಯುರ್ವೇದ ಡಾಕ್ಟರ್ ಡಾ. ಜೀಲ್ ಗಾಂಧಿ ಈ ಕುರಿತಾಗಿ ಕೆಲ ಸಲಹೆಗಳನ್ನು ನೀಡಿದ್ದಾರೆ. ಮಳೆಗಾಲದಲ್ಲಿ ಕೂದಲ ಆರೈಕೆ ಹೇಗಿರಬೇಕು ಎಂಬುದರ ಮಾಹಿತಿ ಇಲ್ಲಿದೆ.

ಹೇರ್‌ ಕಲರಿಂಗ್ ಮಾಡುವಾಗ ಇವಿಷ್ಟು ಗೊತ್ತಿದ್ರೆ ಒಳ್ಳೇದು

ಮಳೆಗಾಲದಲ್ಲಿ ಕೂದಲು ಉದುರುವುದು ಏಕೆ?
ಆಯುರ್ವೇದದ ಪ್ರಕಾರ ಮನುಷ್ಯನ ದೇಹವು(Body) ವಾತ(Vaatha), ಪಿತ್ತ(Pita), ಕಫ(Kapha) ದೋಷಗಳ ಸಮತೋಲನ(Balanced) ಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಮೂರು ಶಕ್ತಿಗಳು ದೈಹಿಕ ಕಾರ್ಯಚಟುವಟಿಕೆಗಳನ್ನು(Physical activity) ನಿಯಂತ್ರಿಸುತ್ತದೆ. ಇದರಲ್ಲಿ ಯಾವುದಾದರೊಂದರಲ್ಲಿ ಅಸಮತೋಲನ(Imbalance) ಕಂಡಲ್ಲಿ ಕೂದಲಿನ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗುತ್ತದೆ.
ವಾತಾವರಣದಲ್ಲಿನ(Weather) ಆರ್ದ್ರತೆಯ ಹೆಚ್ಚಳವು ದೇಹದಾದ್ಯಂತ ವಾಯು(Vayu) ಅಂದರೆ ಗಾಳಿ ಚಲನೆಯನ್ನು ತಡೆಯುತ್ತದೆ. ಇದರ ಪರಿಣಾಮ ವಾತ(Vaatha) ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ತಂಪಾದ ಹವಾಮಾನ(Moisture) ಪರಿಸ್ಥಿತಿಗಳು ಅದನ್ನು ಹೆಚ್ಚು ಶಕ್ತಿಯುತಗೊಳ್ಳುತ್ತದೆ. ಹಾಗಾಗಿ ಹಿರಿಯರಲ್ಲಿ ಕಾಲು ಸೆಳೆತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದೇ ಸಮಯದಲ್ಲಿ ಪಿತ್ತವೂ(Pitta) ದೇಹದಲ್ಲಿನ ನೀರಿನ(Water) ಅಂಶವನ್ನು ನಿಯಂತ್ರಿಸುತ್ತದೆ. ವಾತ ಹಾಗೂ ಪಿತ್ತದಲ್ಲಿನ ಈ ಅಸಮತೋಲನ ಕಫವನ್ನು(Kapha) ಹೆಚ್ಚಿಸುತ್ತದೆ. ಇದು ನೆತ್ತಿಯ(Scalp) ಮೇಲೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಜಿಡ್ಡಿನ ಕೂದಲು(Oily Hair), ತೀವ್ರವಾದ ತಲೆಹೊಟ್ಟು(Dandruff) ಮತ್ತು ತುರಿಕೆಯೊಂದಿಗೆ(Itching) ಎಣ್ಣೆಯುಕ್ತ ನೆತ್ತಿಯು ಮಳೆಗಾಲದಲ್ಲಿ ಕೂದಲ ವಿಷಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳು. ತಕ್ಷಣ ಕಾಳಜಿ ವಹಿಸದಿದ್ದರೆ ಕಫ ಹೆಚ್ಚಾಗಿ ವಿವಿಧ ಸೂಕ್ಷö್ಮ ಜೀವಿಯ ಸೋಂಕುಗಳಿಗಗೆ ಕಾರಣವಾಗುತ್ತದೆ. ಇದು ಕೂದಲಿನ ಬೇರುಗಳನ್ನು(Root) ದುರ್ಬಲಗೊಳಿಸಬಹುದು ಮತ್ತು ನೆತ್ತಿಯ ಚರ್ಮದ ಸ್ಥಿತಿಗಳೊಂದಿಗೆ ತೀವ್ರ ಕೂದಲು ಉದುರುವಿಕೆಗೆ ಕಾರಣವಾಗಬಹುದು. 

Hair Care: ಕೂದಲ ಆರೈಕೆಗೆ ದಾಸವಾಳದಂಥ ಮದ್ದು ಮತ್ತೊಂದಿಲ್ಲ!

ಮಳೆಗಾಲದಲ್ಲಿ ಕೂದಲ ಆರೈಕೆ ಹೀಗಿರಲಿ
1. ವಾರದಲ್ಲಿ ಎರಡು ಬಾರಿ ಎಣ್ಣೆ ಹಚ್ಚುವುದು
ನೈಸರ್ಗಿಕ ಎಣ್ಣೆಯನ್ನು(Natural Oil) ಬಳಸುವುದು, ಬೆಚ್ಚಗಿನ ಎಣ್ಣೆಯನ್ನು(Warm Oil) ವಾರದಲ್ಲಿ ಎರಡು ಬಾರಿ ಹಚ್ಚಿ ಮಸಾಜ್ ಮಾಡಬೇಕು. ಇದು ಕೂದಲ ಕಿರುಚೀಲಗಳಿಗೆ ರಕ್ತ ಸಂಚಾರ(Blood Supply) ಸುಗಮಗೊಳಿಸುತ್ತದಲ್ಲದೆ, ಆಂತರಿಕವಾಗಿ ಪೋಷಣೆ ಮಾಡುತ್ತದೆ. ಮಳೆಗಾಲದಲ್ಲಿ ಹೀಗೆ ಮಾಡುವುದರಿಂದ ಕೂದಲು ಶಿಸ್ತಿನಿಂದಿರುವAತೆ ನೋಡಿಕೊಳ್ಳುತ್ತದೆ.
ಬೇವಿನೆಣ್ಣೆ(Neem Oil), ಟೀ ಟ್ರೀ(Tea Tree), ಅಲೋವೆರಾದಂತಹ(Aloe vera) ಪದಾರ್ಥಗಳಲ್ಲಿ ಆಂಟಿ ಇನ್‌ಫ್ಲಮೇಷನ್(Anti Inflammation) ಹಾಗೂ ಆಂಟಿ ಮೈಕ್ರೊಬಯಾಲ್(Anti Microbial) ಅಂಶವಿದ್ದು, ಮಳೆಗಾಲದಲ್ಲಿ ತಲೆಯಲ್ಲಾಗುವ ಇನ್ಫೆಕ್ಷನ್‌ಗಳಿಂದ(Infection) ದೂರ ಇಟ್ಟು, ಕೂದಲನ್ನು ಬಲಿಷ್ಟಗೊಳಿಸುತ್ತದೆ(Strong). ನೆಲ್ಲಿ ಎಣ್ಣೆ(Amla), ಬ್ರಾಹ್ಮಿ(Brahmi), ಬೃಂಗರಾಜ್(Brungraj) ಎಣ್ಣೆಗಳು ಕೂದಲನ್ನು ಸ್ಮೂತ್(Smooth)  ಹಾಗೂ ಬೆಳವಣಿಗೆಗೆ(Growth) ಸಹಕರಿಸುತ್ತದೆ. 

2. ತಲೆ ಸ್ನಾನ ಕಡ್ಡಾಯ
ಅಪ್ಪಿತಪ್ಪಿ ಒಂದು ವೇಳೆ ಮಳೆಯಲ್ಲಿ ನೆನೆದರೆ ತಲೆ ಸ್ನಾನ(Bath) ಕಡ್ಡಾಯವಾಗಿ ಮಾಡಲೇಬೇಕು. ಏಕೆಂದರೆ ತಲೆಯಲ್ಲಿನ ಪಿಎಚ್ ಲೆವೆಲ್(PH Level) ಅಸಮತೋಲನಗೊಂಡು ಕಫ ದೋಷ ಹೆಚ್ಚಿಸುವಂತೆ ಮಾಡುತ್ತದೆ. ಇದು ಸೆಬಾಸಿಯಸ್(Sebum) ಗ್ರಂಥಿಗಳನ್ನು ಅತಿಯಾದ ಮೆದೂಗ್ರಂಥಿಗಳ ಸ್ರಾವವನ್ನು ಸ್ರವಿಸುತ್ತದೆ. ನೆತ್ತಿಯನ್ನು ಎಣ್ಣೆಯುಕ್ತ(Scalp) ಮತ್ತು ಜಿಡ್ಡಿನಿಂದ ಕೂಡಿರುವಂತೆ ಮಾಡಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಹಾಗಾಗಿ ತಲೆ ಸ್ನಾನ ಕಡ್ಡಾಯವಾಗಿ ಮಾಡಬೇಕು.

3. ಕೆಮಿಕಲ್ ಫ್ರೀ ಶಾಂಪೂ (Chemical Free Shampoo) 
ಸಲ್ಪೇಟ್(Sulphite) ಹಾಗೂ ಪ್ರಾರಬೆನ್ಸ್ ರಾಸಾಯನಿಕ(Chemical) ಅಂಶಗಳು ಕೂದಲಿನ ಬುಡಕ್ಕೆ ಹಾನಿ ಮಾಡುತ್ತವೆ. ಹಾಗಾಗಿ ಕೆಮಿಕಲ್ ಇಲ್ಲದ ಶಾಂಪೂವನ್ನು(Shampoo) ಬಳಸುವುದು ಒಳ್ಳೆಯದು. ಮಳೆಗಾಲದಲ್ಲಿ ಹೀಗೆ ಮಾಡುವುದರಿಂದ ಕೂದಲು ಜಿಡ್ಡಿನಿಂದ, ತಲೆಹೊಟ್ಟು(Dandruff) ಮತ್ತು ಇತರೆ ಸೂಕ್ಷö್ಮಜೀವಿಯ ಸೋಂಕುಗಳಿAದ ದೂರವಿರಿಸುತ್ತದೆ. ದಾಸವಾಳ(Hibiscus), ಅಲೋವೆರಾ(Aloe Vera), ಶಿಕೆಕಾಯಿ(Shikakai), ರೀತಾ(Retha), ತ್ರಿಫಲ(Tripala) ಮುಂತಾದ ಗಿಡಮೂಲಿಕೆಗಳು(Herbal) ಕೂದಲನ್ನು ನೈಸರ್ಗಿಕವಾಗಿ ಸ್ಮೂತ್ ಇರಿಸುತ್ತದಲ್ಲದೆ, ಹೊಳೆಯುವಂತೆ(Shine) ಮಾಡುತ್ತದೆ.

4. ಕೂದಲು ಒಣಗಿರಲಿ
ಮಳೆಗಾಲದ ವಾತಾವರಣ ತೇವಾಂಶದಿAದ(Moisture) ಕೂಡಿರುತ್ತದೆ. ಹಾಗಾಗಿ ಕೂದಲು ಯಾವಾಗಲು ಡ್ರೆöÊ(Dry) ಇದ್ದರೆ ಒಳ್ಳೆಯದು. ತೇವದಿಂದಿದ್ದರೆ ಕೂದಲು ಬೇಗ ಉದುರಲು ಕಾರಣವಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಹೊರಗೆ ಹೋಗುವಾಗ ಛತ್ರಿ(Umbrella), ಕ್ಯಾಪ್(Cap), ಸ್ಕಾರ್ಫ್ಗಳನ್ನು(Scarf) ಜೊತೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಕೂದಲು ಒದ್ದೆಯಾಗಿದ್ದರೆ ಅದನ್ನು ಕಟ್ಟಿಕೊಳ್ಳಬೇಡಿ(Tie). ಅದನ್ನು ನೈಸರ್ಗಿಕವಾಗಿ ಹಾಗೆಯೇ ಗಾಳಿಗೆ(Air Dry) ಒಣಗಲು ಬಿಡಿ.

5. ಸಮತೋಲನ ಆಹಾರ ಸೇವನೆ
ಮಳೆಗಾಲದ ವಾತಾವರಣ ನಾಲಿಗೆಗೆ ಕರಿದ ಪದಾರ್ಥಗಳು(Frayed), ಸ್ಪೆöÊಸಿ(Spicy), ಖಾರದ ಆಹಾರಗಳನ್ನು ಸೇವಿಸುವಂತೆ ಪ್ರೇರೇಪಿಸುತ್ತದೆ. ಹಾಗೆ ಮಾಡುವುದರಿಂದ ತಲೆಯ ಕೂದಲಿನಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾತ, ಪಿತ್ತ, ಕಫ ಸಮತೋಲನವಾಗಿರಲು ಆಹಾರಗಳ ಬಗ್ಗೆ ಜಾಗೃತಿ ಇರಬೇಕು. ಜಂಕ್ ಫುಡ್‌ಗಳಿಂದ(Jung Food) ದೂರ ಇರುವುದು ಒಳ್ಳೆಯದು.  ವಿಟಮಿನ್ A, B, C, D, E, ಪ್ರೋಟೀನ್(Protein) ಹಾಗೂ ಖನಿಜಾಂಶ(Manganese), ಕಬ್ಬಿಣಾಂಶಗಳು(Iron) ಹೆಚ್ಚಿರುವ ಹಣ್ಣು ತರಕಾರಿಗಳ ಸೇವನೆ ಉತ್ತಮ. ಸಲಾಡ್(Salad), ಬೀಜ(Seeds), ಹಸಿರೆಲೆ(Green Leaves), ತರಕಾರಿ(Vegetables), ಹಣ್ಣುಗಳ(Fruits) ಸೇವನೆ ಉತ್ತಮ. ದೇಹವು ನಿರ್ಜಲೀಕರಣ(Dehydrate) ಆಗದಂತೆ ಆಗಾಗ್ಗೆ ನೀರು ಕುಡಿಯುವುದು ಮರೆಯದಿರಿ.

Cleaning Hacks: ದಿಂಬು ಕೊಳಕಾಗಿದ್ದರೆ ಕೂದಲು. ತ್ವಚೆ ಸೌಂದರ್ಯವೇ ಹಾಳಾಗುತ್ತೆ!

ಮಳೆಗಾಲದಲ್ಲಿ ಸಾಮಾನ್ಯವಾಗಿ ಕೂದಲು ಉದುರುವುದು ಇಷ್ಟು
ದೇಹದಲ್ಲಿ ವಾತ, ಪಿತ್ತ, ಕಫ ಸಮನಾಗಿ ಕಾಯ್ದುಕೊಂಡಿದ್ದರೆ ದಿನದಲ್ಲಿ(Per Day) 50 ರಿಮದ 100ರಷ್ಟು ಕೂದಲು ಉದುರುವುದು ಸಾಮಾನ್ಯ. ಮಳೆಗಾಲದಲ್ಲಿ ದೋಷಗಳ ಏರಿಳಿತಗಳಿಂದಾಗಿ ದಿನದಲ್ಲಿ 200ರಷ್ಟು ಕೂದಲು ಉದುರುವುದನ್ನು ಕಾಣಬಹುದು. ಅಂದರೆ ಅಸಹಜ ಹಾಗೂ ಅತಿಯಾದ ಕೂದಲು ಉದುರುವ ಸಮಸ್ಯೆಗೆ ಕಾರಣ ಎಂದರ್ಥ.

Hair Precautions During Mansoon to avoid falling

 

Follow Us:
Download App:
  • android
  • ios