Asianet Suvarna News Asianet Suvarna News

ಇವುಗಳನ್ನು ತಿಂದ್ರೆ 50ರ ಹರೆಯದ ಮಹಿಳೆ, 20ರ ಯುವತಿಯಂತೆ ಸ್ಟ್ರಾಂಗ್ ಆಗ್ತಾರೆ!

50 ವಯಸ್ಸು ದಾಟಿದ ಮಹಿಳೆಯರ ಆಹಾರದಲ್ಲಿ ಈ ಕೆಳಗಿನ ಪದಾರ್ಥ ಇರಬೇಕು. ಈ ಆಹಾರ ಸೇವನೆ ಮಾಡೋದರಿಂದ 20ರ ವಯಸ್ಸಿನ ಯುವತಿಯರಂತೆ ಆಕ್ಟಿವ್ ಆಗಿರಬಹುದು.

These three best foods-for-woman-after-50 mrq
Author
First Published Jun 22, 2024, 8:41 PM IST

ಸಾಮಾನ್ಯವಾಗಿ 30 ವಯಸ್ಸು ಆಗುತ್ತಲೇ ಸಣ್ಣ ಪುಟ್ಟ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತಾರೆ. ಮಕ್ಕಳಾದ ಮೇಲೆ ಮಹಿಳೆಯರ ಆರೋಗ್ಯದಲ್ಲಿ (Woman Health) ಹಲವು ಏರುಪೇರು ಉಂಟಾಗುತ್ತದೆ. ವಯಸ್ಸು ಹೆಚ್ಚಾದಂತೆ ದೈಹಿಕ ಶಕ್ತಿಯೂ (Physical Strength) ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಗುಣಮಟ್ಟದ ಆಹಾರದ (Quality Food) ಜೊತೆಯಲ್ಲಿ ಹಣ್ಣು ಹಂಪಲು ಸೇವಿಸಬೇಕು ಎಂದು ಆರೋಗ್ಯ ತಜ್ಞರು (Health Experts) ಹೇಳುತ್ತಾರೆ. ವಯಸ್ಸಾದಂತೆ ದಣಿವು, ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಬೇಸರ ಅಥವಾ ಉದಾಸೀನತೆ ಉಂಟಾಗುತ್ತದೆ. ಈ ಪದಾರ್ಥ ಅಥವಾ ಆಹಾರವನ್ನು ಹಂತ ಹಂತವಾಗಿ ನಿಯಮಿತವಾಗಿ ಸೇವನೆ ಮಾಡೋದರಿಂದ 50ರ ಹರೆಯದ ಮಹಿಳೆ, 20ರ ಯುವತಿಯಂತೆ ಸ್ಟ್ರಾಂಗ್ ಆಗ್ತಾರೆ.

ವಯಸ್ಸು ಹೆಚ್ಚಾದಂತೆ ಆರೋಗ್ಯದ ಕಡೆ ಗಮನ ನೀಡಬೇಕು. ಬಹುತೇಕರು ಕೆಲಸದ ಒತ್ತಡದಿಂದ ಕೆಟ್ಟ ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತಾರೆ. ಇಂತಜ ಜೀವನಶೈಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯಲ್ಲಿ ವಯಸ್ಸಾದವರು ಇದ್ರೆ, ನೀವು ಬೆಳೆಯುವ ಮಕ್ಕಳು ಚೆನ್ನಾಗಿ ತಿನ್ನಬೇಕು ಎಂದು ಹೇಳುತ್ತಿರುತ್ತಾರೆ. ಆದ್ರೆ ತಾವೇ ಸರಿಯಾಗಿ ಆಹಾರ ಸೇವಿಸಲ್ಲ. 

ಒಮ್ಮೆ 50 ವಯಸ್ಸು ಕ್ರಾಸ್ ಆಗುತ್ತಿದ್ದಂತೆ ಮಧುಮೇಹ, ರಕ್ತದೊತ್ತಡ, ಮಂಡಿ-ಮೊಣಕಾಲು ನೋವು ಅಂತಹ ಸಮಸ್ಯೆಗಳು ದೇಹವನ್ನು ಪ್ರವೇಶಿಸುತ್ತವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಜೀವನ ಪರ್ಯಂತ ಔಷಧ ತೆಗೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗುತ್ತದೆ. ಅದಕ್ಕೆ ಮೊದಲೇ ಒಳ್ಳೆಯ ಆಹಾರ, ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಜಿಮ್‌ಗೆ ಬಂದ್ರೂ ಹರಟೆ ಹೊಡೆಯೋ ಮಹಿಳೆಯರು! ನೀವು ಬರ್ಲೇ ಬೇಡಿ ಅಂದಿದ್ದಕ್ಕೆ ಗಲಾಟೆ!

ವಯಸ್ಸು 50 ದಾಟಿದ ನಂತರ ಮಹಿಳೆಯರು ನಾವು ಏನು ಸೇವಿಸುತ್ತಿದೆ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ದಿನನಿತ್ಯ ಊಟದ ಜೊತೆಯಲ್ಲಿ ಕೆಲವೊಂದು ವಿಶೇಷ, ಪ್ರೋಟಿನ್‌ ವುಳ್ಳ ಆಹಾರವನ್ನು ಸೇರಿಸಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಗಾಗಿ ಆರೋಗ್ಯಕರ ಆಹಾರ ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ. 50 ವಯಸ್ಸು ದಾಟಿದ ಮಹಿಳೆಯರ ಆಹಾರದಲ್ಲಿ ಈ ಕೆಳಗಿನ ಪದಾರ್ಥ ಇರಬೇಕು. ಈ ಆಹಾರ ಸೇವನೆ ಮಾಡೋದರಿಂದ 20ರ ವಯಸ್ಸಿನ ಯುವತಿಯರಂತೆ ಆಕ್ಟಿವ್ ಆಗಿರಬಹುದು.

1.ಅಗಸೆಬೀಜಗಳು 
ಮಹಿಳೆಯರ ಆರೋಗ್ಯಕ್ಕೆ ಅಗಸೆಬೀಜ ಸೇವನೆ ಒಳ್ಳೆಯದು. ಅಗಸೆಬೀಜಗಳಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ದೇಹದಲ್ಲಿನ ರಕ್ತದ ಕೊರತೆ ಸಮಸ್ಯೆಯನ್ನು ನಿವಾರಿಸುತ್ತದೆ. ದೇಹದಲ್ಲಿ ಹೆಚ್ಚಾದ ಕೊಬ್ಬನ್ನು ಇಳಿಕೆ ಮಾಡುವಲ್ಲಿ ಅಗಸೆಬೀಜಗಳು ಪ್ರಮುಖ ಪಾತ್ರವಹಿಸುತ್ತವೆ. ಇದೆಲ್ಲದರೊಂದಿಗೆ ಚರ್ಮದ ಕಾಂತಿ ಹೆಚ್ಚಿಸೋದರ ಜೊತೆಗೆ ಕೂದಲನ್ನು ರಕ್ಷಣೆ ಮಾಡುತ್ತವೆ. 

2.ಎಳ್ಳು
ಎಳ್ಳು  ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಮೂಳೆಗಳನ್ನು ಸದೃಢಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಅಗಸೆಬೀಜದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ನಿಯಮಿತ ಎಳ್ಳು ಸೇವನೆ ಸಂಧಿವಾದಂತಹ ಸಮಸ್ಯೆಗಳನ್ನು ದೂರ ಮಾಡುತ್ತವೆ. 

3.ಮೆಂತ್ಯೆ
50 ವರ್ಷ ಮೇಲ್ಪಟ್ಟ ಮಹಿಳೆಯರು ವಿಶೇಷವಾಗಿ ತಮ್ಮ ಆಹಾರದಲ್ಲಿ ಮೆಂತ್ಯೆ ಸೇರಿಸಿಕೊಳ್ಳಬೇಕು. ಮೆಂತ್ಯೆ ನಿಮ್ಮ ಇನ್ಸುಲಿನ್ ಪ್ರತಿರೋಧ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ತಿನ್ನೋದು ಉತ್ತಮ. ಅಡುಗೆಯಲ್ಲಿಯೂ ಮೆಂತ್ಯೆ ಬಳಸಬಹುದು.

ಪಾನೀಪುರಿ ಆಮೇಲೆ ತಿನ್ನು ತಾಯಿ... ನಮ್ಗೆ ಫುಲ್​ ಟೆನ್ಷನ್​ ಆಗ್ತಿದೆ... ಬೇಗ ಮನೆಗೆ ಹೋಗು

Latest Videos
Follow Us:
Download App:
  • android
  • ios