Asianet Suvarna News Asianet Suvarna News

Viral Video: ಸೀರೆ ಉಟ್ಟು ಹರಿವ ನೀರಿಗೆ ಡೈವ್‌, ವೈರಲ್‌ ಆಯ್ತು ನಾರಿಯರ ಸಾಹಸ

ಸೀರೆ ಧರಿಸಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವವರು ಈ ನಾರಿಯರ ಸಾಹಸವನ್ನು ವೀಕ್ಷಿಸಬೇಕು. ಸೇತುವೆ ಮೇಲಿನಿಂದ ಹರಿಯುತ್ತಿರುವ ನೀರಿಗೆ ಡೈವ್‌ ಮಾಡಿ, ಈಜುವ ಹಿರಿಯ ಮಹಿಳೆಯರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲೀಗ ವೈರಲ್‌ ಆಗಿದೆ. 
 

Elderly Women Dive Into Tamil Nadus Thamirabarani River, video viral
Author
First Published Feb 8, 2023, 5:13 PM IST

ಸೀರೆ ಧರಿಸಿ ಚಿಕ್ಕಪುಟ್ಟ ಕೆಲಸ ಮಾಡಲಿಕ್ಕೂ ಹಲವು ಮಹಿಳೆಯರು ಬೇಸರಿಸಿಕೊಳ್ಳುತ್ತಾರೆ. ಸಮಾರಂಭಗಳಿಗೆ ಎಷ್ಟು ಬೇಕೋ ಅಷ್ಟೇ ಸಮಯದಲ್ಲಿ ಸೀರೆ ಧರಿಸಿ ಉಳಿದ ಸಮಯದಲ್ಲಿ ತಮಗೆ ಬೇಕಾದ ಆರಾಮದಾಯಕ ಉಡುಪುಗಳನ್ನು ಧರಿಸುವುದು ಈಗಿನ ಸಾಕಷ್ಟು ಮಹಿಳೆಯರ ಅಭ್ಯಾಸ. “ಸೀರೆಯುಟ್ಟು ಕೆಲಸ ಮಾಡಲು ಸಾಧ್ಯವಿಲ್ಲʼ ಎಂದು ಹುಡುಗಿಯರು ಉಲಿಯುವುದು ಸಹ ಸಾಮಾನ್ಯ. ಆದರೆ, ಸೀರೆಯುಟ್ಟು ಎಲ್ಲ ಕೆಲಸಗಳನ್ನೂ ಮಾಡಬಹುದು, ಏನೆಲ್ಲ ಸಾಹಸಗಳನ್ನು ಸಹ ಮಾಡಬಹುದು ಎನ್ನುವುದನ್ನು ಆಗಾಗ ಹಲವರು ನಿರೂಪಿಸುತ್ತಲೇ ಇರುತ್ತಾರೆ. ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡಿದವರೂ ಇದ್ದಾರೆ. ಇದೀಗ, ಸೀರೆ ಧರಿಸಿದ ನಾರಿಯರ ಹೊಸ ಸಾಹಸವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸೀರೆಯುಟ್ಟ ಮಹಿಳೆಯರ ಗುಂಪೊಂದು ತಮಿಳುನಾಡಿನ ಥಮಿರಾಬರಾನಿ ನದಿಗೆ ಧುಮುಕಿ ಈಜುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೀಗ ಹವಾ ಸೃಷ್ಟಿಸಿದೆ. ಸೀರೆ ಧರಿಸಿದ ಮಹಿಳೆಯರು ಮಾಡುತ್ತಿರುವ ಈ ಸಾಹಸ ಎಲ್ಲೆಡೆ ಮೆಚ್ಚುಗೆ ಹಾಗೂ ಅಚ್ಚರಿಗೆ ಪಾತ್ರವಾಗಿದೆ.

ಅಂದು ದೆಹಲಿಯ ಶ್ರೀಮಂತ ಮಹಿಳೆ, ಇಂದು ಬೀದಿಬದಿಯ ಅಜ್ಜಿ: ಇದು ಆಶಾ ದೇವಿ ಕತೆ

ಮಾನಿನಿಯರ ಡೈವ್ (Dive)
ಭಾರತೀಯ ಆಡಳಿತ ಸೇವೆಯ (Indian Administrative Service) ಅಧಿಕಾರಿ (Officer) ಸುಪ್ರಿಯಾ ಸಾಹು (Supriya Sahu) ಎನ್ನುವವರು ಈ ವಿಡಿಯೋವನ್ನು ಟ್ವಿಟರ್‌ ನಲ್ಲಿ (Twitter) ಹಂಚಿಕೊಂಡಿದ್ದಾರೆ. ಈ ವಿಡಿಯೋ 20 ನಿಮಿಷಗಳ ಕ್ಲಿಪ್‌ ಆಗಿದ್ದು, ಟ್ವಿಟರ್‌ ನಲ್ಲಿ ವೈರಲ್‌ (Viral) ಆಗಿದೆ. ಅಷ್ಟಕ್ಕೂ ಸೀರೆ (Saree) ಧರಿಸಿ ನದಿಗೆ ಧುಮುಕಿ (Jump) ಈಜುವವರು (Swimming) ಬಾಲಕಿಯರಲ್ಲ, ಯುವತಿಯರೂ ಅಲ್ಲ, ಹಿರಿಯ ಮಹಿಳೆಯರು (Elder Women) ಎನ್ನುವುದು ವಿಶೇಷ. ಹಿರಿಯ ಮಹಿಳೆಯರ ಈ ಗುಂಪು ಥಮಿರಾಬರಾನಿ (Thamirabarani) ನದಿಯ (River) ಸೇತುವೆಯ ಮೇಲಿನಿಂದ ನದಿ ನೀರಿಗೆ ಅಳುಕಿಲ್ಲದೆ, ಚೂರೇ ಚೂರು ಭಯವಿಲ್ಲದೆ (Fear) ಹಾರುವುದು, ಬಳಿಕ ಈಜುವುದು ಈ ವಿಡಿಯೋದಲ್ಲಿದೆ. ಇವರ ಸಾಹಸ ಸಾಮಾನ್ಯ ಈಜುಗಾರರಲ್ಲೂ ಭಯ ಮೂಡಿಸುವಂತಿದೆ.  

ಸ್ಫೂರ್ತಿದಾಯಕ (Inspiration)
ಈ ವಿಡಿಯೋ ಶೇರ್‌ (Share) ಮಾಡಿರುವ ಸುಪ್ರಿಯಾ ಸಾಹು, “ಸೀರೆ ಧರಿಸಿದ ಹಿರಿಯ ನಾರಿಯರು ಯಾವುದೇ ಭಯ ಇಲ್ಲದೆ ನೀರಿಗೆ ಧುಮುಕಿ ಈಜುವ ಅದ್ಭುತ ದೃಶ್ಯವನ್ನು ಕಂಡೆ. ತಮಿಳುನಾಡಿನ ಕಲ್ಲಿಡೈಕುರಿಚಿ ಎಂಬಲ್ಲಿ ಇದು ನಡೆದಿದ್ದು, ಅವರನ್ನು ಪ್ರಶ್ನಿಸಿದಾಗ, ಆ ಮಹಿಳೆಯರಿಗೆ ಇದು ಸಾಮಾನ್ಯ ಕಾರ್ಯ (Regular) ಎಂಬುದಾಗಿ ತಿಳಿದುಬಂತು. ಅವರು ಪದೇ ಪದೆ ಹೀಗೆ ಇಲ್ಲಿಗೆ ಬಂದು ಈಜುತ್ತಾರಂತೆ. ಇದು ಅಪಾರ ಸ್ಫೂರ್ತಿದಾಯಕʼ ಎಂದು ಹೇಳಿದ್ದಾರೆ. 

ಸೀರೆಯುಟ್ಟರೂ ಸಾಧಿಸಿ ತೋರಿಸಿದ ವೃದ್ಧೆ: ಈ ಅಜ್ಜಿ ಉತ್ಸಾಹ ನಮಗ್ಯಾಕಿಲ್ಲ?

ಹಲವು ಕಾಮೆಂಟ್‌ 
ಈ ವಿಡಿಯೋ ಈಗಾಗಲೇ 62.4 K ವೀಕ್ಷಣೆ (Views) ಕಂಡಿದೆ. ಸಾವಿರಾರು ಬಾರಿ ರಿಟ್ವೀಟ್‌ (Retweet) ಆಗಿದೆ. ಅದ್ಭುತವಾದ ಡೈವಿಂಗ್‌ ಮಾಡುವ ಕೌಶಲವನ್ನು (Skill) ಹಿರಿಯ ಮಹಿಳೆಯರು ಇಲ್ಲಿ ತೋರಿಸುತ್ತಿರುವುದು ಸಾಕಷ್ಟು ಜನರಿಗೆ ರೋಮಾಂಚನವನ್ನು ಉಂಟುಮಾಡಿದೆ. ಹೀಗಾಗಿ, ಸಾಕಷ್ಟು ಕಮೆಂಟ್‌ ಗಳೂ ಬಂದಿವೆ. ಒಬ್ಬರು, “ಸೂಪರ್‌ ಡೈವಿಂಗ್‌ ಅಮ್ಮಾʼ ಎಂದು ಹೇಳಿದರೆ, ಮತ್ತೊಬ್ಬರು, “ಗ್ರಾಮೀಣ ಪ್ರದೇಶದ ಬಾವಿ, ನದಿಗಳಿಗೆ ಅಲ್ಲಿನ ಪುರುಷರು, ಮಹಿಳೆಯರು, ಮಕ್ಕಳು ಹೀಗೆ ಜಂಪ್‌ ಮಾಡುವುದು, ಈಜುವುದು ಸಾಮಾನ್ಯ. ಅವರು ಇದರಲ್ಲಿ ನುರಿತಿರುತ್ತಾರೆ. ಚೆನ್ನಾಗಿ ಡೈವ್‌ ಮಾಡುತ್ತಾರೆ, ಈಜುತ್ತಾರೆʼ ಎಂದು ಹೇಳಿದ್ದಾರೆ.  

ಹಲವರು ಈಜುವ ಬಗ್ಗೆ ಭಯವನ್ನೂ ಪಟ್ಟಿರುವುದು ವಿಶೇಷ. ಮೇಲಿನಿಂದ ಜಂಪ್‌ ಮಾಡುವುದು ಎಷ್ಟು ಸುರಕ್ಷಿತ (Safe) ಎಂದು ಪ್ರಶ್ನಿಸಿದ್ದಾರೆ. “ನೀವು ಭಯಾನಕ, ಆದರೆ ನೀವು ಸೀರೆ ಧರಿಸಿ ಈಜಲು ಸಾಧ್ಯವಿಲ್ಲ ಎಂದು ಯಾರೋ ಅವರಿಗೆ ಹೇಳಿರಬೇಕು, ಹೀಗಾಗಿ, ಅವರು ಸೀರೆ ಧರಿಸಿ ಈಜುತ್ತಿದ್ದಾರೆʼ ಎಂದು ಹೇಳಿದ್ದಾರೆ. “ನೀರು ಹೆಚ್ಚು ಆಳವಾಗಿಲ್ಲ, ಈಜಲು ಸುರಕ್ಷಿತವಾಗಿಲ್ಲʼ ಎಂದೂ ಕಮೆಂಟ್‌ ಮಾಡಿದವರಿದ್ದಾರೆ. ಒಟ್ಟಿನಲ್ಲಿ ಸೀರೆ ಧರಿಸಿದ ಮಾನಿನಿಯರು ಡೈವ್‌ ಮಾಡಿ, ನದಿಗೆ ಧುಮುಕಿ, ಈಜುವ ಮೂಲಕ ಎಲ್ಲರನ್ನೂ ಅಚ್ಚರಿಗೆ ನೂಕಿದ್ದಾರೆ. 

Follow Us:
Download App:
  • android
  • ios