Women Health : ಮುಟ್ಟು ನಿಂತ್ಮೆಲೂ ಹೆಣ್ಣಿಗೆ ಲೈಂಗಿಕಾಸಕ್ತಿ ಇರೋದು ಮಾತ್ರವಲ್ಲ, ಹೆಚ್ಚಾಗುತ್ತೆ!
ವರ್ಷ 45 ಆಗ್ತಿದ್ದಂತೆ ಮಹಿಳೆಯರು ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ನಿಧಾನವಾಗಿ ಅವರ ಸೆಕ್ಸ್ ಲೈಫ್ ಸಾಯ್ತಾ ಬರುತ್ತೆ ಅಂತಾ ನಾವೆಲ್ಲ ನಂಬಿದ್ದೇವೆ. ಆದ್ರೆ ಎಲ್ಲ ಮಹಿಳೆಯರೂ ಈ ಸಾಲಿಗೆ ಸೇರೋದಿಲ್ಲ. ಕೆಲ ಮಹಿಳೆಯರು ಋತುಬಂಧವಾದ್ಮೇಲೆ ಉಲ್ಟಾ ಅನುಭವ ಪಡೀತಾರೆ.
ಪುರುಷರಿಗೆ ಹೋಲಿಕೆ ಮಾಡಿದ್ರೆ ಸೆಕ್ಸ್ ವಿಷ್ಯದಲ್ಲಿ ಮಹಿಳೆಯರಿಗೆ ಆಸಕ್ತಿ ಕಡಿಮೆ ಎನ್ನುವ ನಂಬಿಕೆ ಬಹುತೇಕರಿಗಿದೆ. ಆದ್ರೆ ಇದು ಸುಳ್ಳು. ಮಹಿಳೆಯರೂ ಲೈಂಗಿಕ ಸಂಬಂಧ ಬೆಳೆಸಲು ಆಸಕ್ತಿ ಹೊಂದಿರುತ್ತಾರೆ. ಕೆಲ ಮಹಿಳೆಯರಿಗೆ ಸಂಭೋಗದಲ್ಲಿ ಅತಿಯಾದ ಆಸಕ್ತಿಯಿರುತ್ತದೆ. ಲೈಂಗಿಕವಾಗಿ ಸ್ವಲ್ಪ ಹೆಚ್ಚೇ ಅವರು ಪ್ರಚೋದನೆಗೊಳಗಾಗ್ತಾರೆ. ಇದ್ರಿಂದ ಕೆಲ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಗುತ್ತದೆ. ಅತಿಯಾದ ಲೈಂಗಿಕ ಪ್ರಚೋದನೆಗೆ ನಾನಾ ಕಾರಣವಿದೆ.
ಲೈಂಗಿಕ (Sexual) ಆಸಕ್ತಿ ಅತಿಯಾಗಲು ಇವು ಕಾರಣ :
ಮೊದಲ ಸಂಬಂಧ (Relationship) ಅಥವಾ ಮದುವೆ : ಯಾವಾಗ್ಲೂ ಹೊಸತು ತುಂಬಾ ರೋಮಾಂಚನವಾಗಿರುತ್ತದೆ. ದೈಹಿಕ ಸಂಬಂಧಕ್ಕೆ ಒಳಗಾದ ವ್ಯಕ್ತಿಯಲ್ಲಿ ಹಾರ್ಮೋನ್ (Hormone) ಬದಲಾವಣೆಯಾಗುತ್ತದೆ. ಮದುವೆ (Marriage) ಯಾದ ಆರಂಭದಲ್ಲಿ ಅಥವಾ ಸಂಗಾತಿ ಜೊತೆ ಮೊದಲ ಬಾರಿ ಲೈಂಗಿಕ ಸಂಬಂಧ ಬೆಳೆಸಿದ ನಂತ್ರ ಅದ್ರ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಇಬ್ಬರ ಮಧ್ಯೆ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುವ ಕಾರಣ, ಆ ಸಮಯದಲ್ಲಿ ಲೈಂಗಿಕ ಉತ್ಸಾಹ ಹೆಚ್ಚಿರುತ್ತದೆ.
ಪ್ರೀತಿಯಲ್ಲಿ ಬಿದ್ದ ಹುಡುಗರು ಹೀಗೆಲ್ಲಾ ಮಾಡ್ತಾರಂತೆ
ಬಿಸಿ ಆಹಾರ (Hot Food) : ಅಧ್ಯಯನವೊಂದರ ಪ್ರಕಾರ, ನಿಮ್ಮ ಆಹಾರ ಕೂಡ ನಿಮ್ಮ ಲೈಂಗಿಕ ಬಯಕೆಯ ಮೇಲೆ ಪ್ರಭಾವ ಬೀರುತ್ತದೆ. ಕಾಮಾಸಕ್ತಿ ಕಡಿಮೆ ಮಾಡಲು ಹೇಗೆ ಆಹಾರವಿದ್ಯೋ ಅದೇ ರೀತಿ ಕಾಮಾಸಕ್ತಿ ಹೆಚ್ಚಿಸುವ ಆಹಾರ ಕೂಡ ಇದೆ. ಆವಕಾಡೊ, ಮಾವಿನಹಣ್ಣು, ಬಾದಾಮಿ ಸೇರಿದಂತೆ ಕೆಲ ಆಹಾರ ನಿಮ್ಮ ದೇಹದ ಬಿಸಿಯನ್ನು ಹೆಚ್ಚಿಸುತ್ತದೆ. ಇದ್ರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ.
ಫರ್ಟಿಲಿಟಿ ಸಮಯ (Fertility TIme) : ಮಹಿಳೆಯರ ದೇಹದಲ್ಲಿ ತಿಂಗಳು ಪೂರ್ತಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬಹಳಷ್ಟು ಬದಲಾವಣೆಗಳು ನಡೆಯುತ್ತವೆ. ತಿಂಗಳ ಕೆಲ ದಿನಗಳು ಮಹಿಳೆಯಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ. ಮಗುವಿಗೆ ಪ್ಲಾನ್ ಮಾಡ್ತಿದ್ದರೆ ಆ ಸಮಯ ಸೂಕ್ತ ಸಮಯವಾಗಿರುತ್ತದೆ. ಮಗು ಬಯಸದ ಮಹಿಳೆಯರು ಕೂಡ ಆ ದಿನಗಳಲ್ಲಿ ಹೆಚ್ಚು ಪ್ರಚೋದನೆಗೆ ಒಳಗಾಗ್ತಾರೆ. ಲೈಂಗಿಕ ಆಸಕ್ತಿ ಅವರಲ್ಲಿ ಹೆಚ್ಚಾಗಿರುತ್ತದೆ.
ಆಲ್ಕೋಹಾಲ್, ಡ್ರಗ್ಸ್ ಸೇವನೆ (Alchohol and Drug Addiction) : ಆಲ್ಕೋಹಾಲ್ ನಿಮ್ಮ ಲೈಂಗಿಕ ಬಯಕೆ, ಪ್ರಚೋದನೆ ಮತ್ತು ಸುಖದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಕೆಲ ಅಧ್ಯಯನ ಹೇಳಿದೆ. ಮದ್ಯಪಾನ ಮಾಡಿದವರಲ್ಲಿ ಲೈಂಗಿಕ ಬಯಕೆ ಹೆಚ್ಚಿರುತ್ತದೆ. ಆದ್ರೆ ಅತಿಯಾಗಿ ಮದ್ಯಪಾನ ಮಾಡುವವರ ಲೈಂಗಿಕ ಜೀವನ ನಿಧಾನವಾಗಿ ಹಾಳಾಗುತ್ತದೆ.
ಈಗಿನ ಕಾಲದಲ್ಲೂ ಕನ್ಯತ್ವ ಪರೀಕ್ಷೆ ಬೇಕಾ? ಮದ್ವೆ ಅಂದ್ರೆ ಹೇಗಿರಬೇಕು?
ಮುಟ್ಟು ನಿಂತಮೇಲೆ (After Menopasue) : ಮುಟ್ಟಿನ ನಂತ್ರ ಲೈಂಗಿಕತೆ ಬಗ್ಗೆ ಅನೇಕ ಮಹಿಳೆಯರಲ್ಲಿ ಗೊಂದಲವಿದೆ. ಆ ಸಮಯದಲ್ಲಿ ಕಾಮಾಸಕ್ತಿ ಕಡಿಮೆಯಾಗುತ್ತದೆ ಎಂದು ಬಹುತೇಕರು ನಂಬಿದ್ದಾರೆ. ಯೋನಿ ಶುಷ್ಕವಾಗುವುದೇ ಇದಕ್ಕೆ ಕಾರಣ. ಆದ್ರೆ ಮುಟ್ಟು ನಿಂತ ಮೇಲೂ ಸಂಭೋಗದಲ್ಲಿ ಆಸಕ್ತಿ ಹೆಚ್ಚಾಗುವ ಮಹಿಳೆಯರಿದ್ದಾರೆ. ಪಿರಿಯಡ್ಸ್ ನಿಂತ ನೆಮ್ಮದಿ ಹಾಗೂ ಗರ್ಭಧಾರಣೆ ಭಯವಿಲ್ಲದ ಕಾರಣ ಕೆಲ ಮಹಿಳೆಯರ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ. ಅದು ಸಂಬಂಧ ಬೆಳೆಸಲು ಪ್ರಚೋದಿಸುತ್ತದೆ. ಈ ಸಮಯದಲ್ಲಿ ಹಾರ್ಮೋನ್ ಬದಲಾವಣೆ ಕೂಡ ನಿಮ್ಮಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ.
ಋತುಬಂಧದ ಸಮಯದಲ್ಲಿ ಆರಾಮವಾಗಿರುವ ಅಥವಾ ಬೇರೆ ಯಾವುದೋ ಮಾತ್ರೆಗಳನ್ನು ಸೇವಿಸುವ ಮಹಿಳೆಯರಲ್ಲಿ ಕೂಡ ಬದಲಾವಣೆ ಕಾಣಬಹುದಾಗಿದೆ. ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ತೋರುವುದು ಅಪರಾಧವಲ್ಲ. ಆದ್ರೆ ಅದ್ರ ಮೇಲೆ ನಿಯಂತ್ರಣ ಮುಖ್ಯವಾಗುತ್ತದೆ. ಹೆಚ್ಚಿನ ಕಾಮಾಸಕ್ತಿ (Libido) ತೊಂದರೆ ತರಬಹುದು. ದೈಹಿಕ ವ್ಯಾಯಾಮ (Physical Exercise), ಮಾನಸಿಕ ವ್ಯಾಯಾಮ (Mental Workout) ಸೇರಿದಂತೆ ನಾನಾ ವಿಧಗಳ ಮೂಲಕ ನೀವು ನಿಮ್ಮ ಆಸಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಸಂಭೋಗ (Sexual Intercourse) ಆರೋಗ್ಯಕ್ಕೆ ಒಳ್ಳೆಯದು. ಅತಿಯಾದ್ರೆ ಅಪಾಯ ಎಂಬುದನ್ನು ಮರೆಯಬಾರದು.