Asianet Suvarna News Asianet Suvarna News

Ramkripa Ananthan: ಜನಪ್ರಿಯತೆಯ ಉತ್ತುಂಗದಲ್ಲಿರೋ ಮಹೀಂದ್ರ ಥಾರ್‌ ವಿನ್ಯಾಸ ಮಾಡಿರೋದು ಯಾರ್ಗೊತ್ತಾ?

ಮಹೀಂದ್ರ ಥಾರ್‌, ಮಹೀಂದ್ರ ಎಕ್ಸ್‌ ಯುವಿ 700, ಮಹೀಂದ್ರ ಸ್ಕಾರ್ಪಿಯೋಗಳ ವಿನ್ಯಾಸಕ್ಕೆ, ಈ ವಾಹನಗಳ ಅದ್ದೂರಿತನಕ್ಕೆ ಒಮ್ಮೆಯಾದರೂ ಎಲ್ಲರೂ ಬೆರಗಾಗುತ್ತಾರೆ. ವೈಭವದ ವಾಹನಗಳ ಆಯ್ಕೆಗೆ ಹೊರಟರೆ ಖಂಡಿತವಾಗಿ ಮಹೀಂದ್ರ ಸಂಸ್ಥೆಯ ಈ ವಾಹನಗಳು ಗಮನ ಸೆಳೆಯುವುದು ನಿಶ್ಚಿತ. ಇವುಗಳ ವಿನ್ಯಾಸಕಿ ಮಹಿಳೆ ಎನ್ನುವುದು ಹೆಮ್ಮೆಯ ಸಂಗತಿ. ಇವರೇ ರಾಮಕೃಪಾ ಅನಂತನ್. 
 

The woman who designed popular vehicles of Mahindra
Author
First Published Mar 31, 2023, 7:12 PM IST

ನೀವೇನಾದರೂ ಮಹೀಂದ್ರ ಥಾರ್ ಬುಕ್‌ ಮಾಡಿದ್ದರೆ ಅದಕ್ಕಾಗಿ ಕಾದಿರುವ ಅನುಭವ ನಿಮಗಿರುತ್ತದೆ. 2ನೇ ಜನರೇಷನ್‌ ಮಾದರಿಯ ಮಹೀಂದ್ರ ಥಾರ್‌ ಮೇಲ್ಮಧ್ಯಮ ವರ್ಗದ ಫೇವರಿಟ್‌ ವೆಹಿಕಲ್‌ ಆಗಿದೆ. ಈ ಎಸ್‌ ಯುವಿಗೆ ಸದ್ಯ ಭಾರೀ ಬೇಡಿಕೆ ನಿರ್ಮಾಣವಾಗಿದ್ದು, ಹಿಂದೆಂದಿಗಿಂತಲೂ ಹೆಚ್ಚು ಸಮಯ ಕಾಯಬೇಕು. ಈ ಜೀಪ್‌ ಮಾದರಿಯ ವಾಹನ ದೀರ್ಘ ಪರಂಪರೆ ಹೊಂದಿದ್ದು, ಕೆಲವು ಕೊರತೆಗಳು ಹಿಂದಿನ ಮಾದರಿಯಲ್ಲಿದ್ದವು. ಆದರೆ, 2ನೇ ಜನರೇಷನ್‌ ಥಾರ್‌ ನಲ್ಲಿ ಎಲ್ಲವೂ ಪರ್ಫೆಕ್ಟಾಗಿದೆ. ಈ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ. ಇವರಲ್ಲಿ ಪ್ರಮುಖವಾಗಿ ಹೇಳಲೇಬೇಕಾದ ಹೆಸರು ರಾಮಕೃಪಾ ಅನಂತನ್.  ಇವರ ಹೆಸರು ಆಟೊಮೋಬೈಲ್‌ ಉದ್ಯಮದ ವಲಯದಲ್ಲಿ ಚಿರಪರಿಚಿತವಾಗಿದ್ದು, ಮಹೀಂದ್ರ ಕಂಪೆನಿಯ ಎಸ್‌ ಯುವಿ ಕಾರುಗಳ ಜನಪ್ರಿಯತೆ ಹೊಂದುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಓಲಾ ಇಲೆಕ್ಟ್ರಿಕ್‌ ವಿಭಾಗದ ವಿನ್ಯಾಸ ಸೆಕ್ಷನ್‌ ಹೆಡ್‌ ಆಗಿರುವ ರಾಮಕೃಪಾ ಅನಂತನ್‌ ಅವರು ಮಹೀಂದ್ರ ಥಾರ್‌ ವಿನ್ಯಾಸ ಮಾಡುವಾಗ ಏನೆಲ್ಲ ಅದ್ಭುತ ಯೋಚನೆ ಮಾಡಿದ್ದರು ಎಂದರೆ ಅಚ್ಚರಿಯಾಗಬಹುದು.

ಜನಪ್ರಿಯ ಮಾದರಿಗಳ ವಿನ್ಯಾಸಕಿ (Designer):  ಮಹೀಂದ್ರ ಥಾರ್‌ (Mahindra Thar), ಮಹೀಂದ್ರ ಎಕ್ಸ್‌ ಯುವಿ 700 ಮತ್ತು ಮಹೀಂದ್ರ ಸ್ಕಾರ್ಪಿಯೋಗಳ (Scorpio) ವಿನ್ಯಾಸಗಳ ಮಿಶ್ರಣದೊಂದಿಗೆ ನೂತನ ಮಹೀಂದ್ರ ಥಾರ್‌ ಅನ್ನು ವಿನ್ಯಾಸಗೊಳಿಸಿದ ಕೀರ್ತಿ ರಾಮಕೃಪಾ ಅನಂತನ್‌ (Ramkripa Ananthan) ಅವರದ್ದು. ಐಐಟಿ ಬಾಂಬೆಯಿಂದ ವಿನ್ಯಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಮಕೃಪಾ ಅನಂತನ್‌ ಶಿಕ್ಷಣ (Education) ಪೂರೈಸುತ್ತಲೇ ಮಹೀಂದ್ರ and ಮಹೀಂದ್ರ ಲಿಮಿಟೆಡ್‌ ಸೇರಿದರು. ಇದಕ್ಕೂ ಮುನ್ನ, ಬಿರ್ಲಾ ಇನ್‌ ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ನಲ್ಲಿ ಪದವಿ ಪಡೆದಿದ್ದರು.

ಮಹೀಂದ್ರ ಕಂಪೆನಿಯಲ್ಲಿ 1997ರಲ್ಲಿ ಆಂತರಿಕ ವಿನ್ಯಾಸಕಿಯಾಗಿ ವೃತ್ತಿಜೀವನ (Profession) ಆರಂಭಿಸಿದರು. 2005ರಲ್ಲಿ ವಿನ್ಯಾಸ ವಿಭಾಗದ ಮುಖ್ಯಸ್ಥೆಯಾಗಿ ನೇಮಕಗೊಂಡರು. ಆಗ ಅವರು ವಿನ್ಯಾಸ ಮಾಡಿದ್ದೇ ಜನಪ್ರಿಯ ಮಹೀಂದ್ರ ಎಕ್ಸ್‌ಯುವಿ 500 ಎಸ್ ಯುವಿ. ಈ ಹುದ್ದೆಯನ್ನು ಸುಮಾರು 10 ವರ್ಷಗಳ ಕಾಲ ನಿಭಾಯಿಸಿದರು. ಬಳಿಕ, ಮುಖ್ಯ ವಿನ್ಯಾಸಕಿಯಾಗಿ ವಿನ್ಯಾಸಗೊಳಿದ್ದೇ ಅಮೂಲ್ಯವೆಂದೆನಿಸುವ ಥಾರ್‌, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ. 

ಹೊಸ ವಾಹನ ಖರೀದಿಗೆ ಹೊರಟವರಿಗೆ ಶಾಕ್‌: ಏ.1ರಿಂದ ಕಾರು, ಬೈಕ್‌ ಬೆಲೆ ಮತ್ತೆ ಏರಿಕೆ

ಖಾಸಗಿ ವಾಹನವೆಂದು (Personal Vehicle) ಗುರುತಿಸಲ್ಪಡುವ ಮಹೀಂದ್ರ ಎಕ್ಸ್‌ ಯುವಿ 500 ಮತ್ತು ಮರಾಜೊ ಎಂಪಿವಿ ಅನ್ನೂ ವಿನ್ಯಾಸ ಮಾಡಿದ ಕೀರ್ತಿ ಇವರದ್ದು. ಅಂತಾರಾಷ್ಟ್ರೀಯ ಸಂಸ್ಥೆಗಳಾದ ಸ್ಯಾಂಗ್‌ ಯಾಂಗ್‌ ಮತ್ತು ಮನಾ ಜತೆಗೂಡಿ ಈ ವಾಹನಗಳನ್ನು ವಿನ್ಯಾಸ (Design) ಮಾಡಿದ್ದಾರೆ. 2019ರಲ್ಲಿ ಚೀಫ್‌ ಆಫ್‌ ಡಿಸೈನ್‌ ಆಗಿ ನೇಮಕಗೊಂಡ ಎರಡು ವರ್ಷಗಳಲ್ಲಿ ಉದ್ಯೋಗಕ್ಕೆ ರಾಜೀನಾಮೆ (Resign) ನೀಡಿದರು. ತಮ್ಮದೇ ಕ್ರಕ್ಸ್‌ ಸ್ಟುಡಿಯೋ (Crux Studio) ಆರಂಭಿಸಿದರು.

ಸೋಲಾರ್ ಕಾರಾಗಿ ಬದಲಾದ ನ್ಯಾನೋ ಕಾರು: 100 ಕಿಲೋಗೆ ತಗಲುವ ವೆಚ್ಚ ಕೇವಲ 30 ರೂಪಾಯಿ ಮಾತ್ರ

ವಿದ್ಯುತ್‌ ವಾಹನ (Electric Vehicle) ವಿಭಾಗದಲ್ಲಿ ನಿರೀಕ್ಷೆ: ಕ್ರಕ್ಸ್‌ ಸ್ಟುಡಿಯೋ ಮೈಕ್ರೊ ಮೊಬಿಲಿಟಿ (Micro Mobility) ಮಾದರಿಯದ್ದಾಗಿದ್ದು ಟು2 ಎಂದು ಕರೆಲಾಗಿದೆ. ಸದ್ಯಕ್ಕೆ ಇದಿನ್ನೂ ಚಾಲನೆಗೆ ಬಂದಿಲ್ಲ. ಬಳಿಕ, ರಾಮಕೃಪಾ ಓಲಾ ಇಲೆಕ್ಟ್ರಿಕ್‌ ಗೆ ವಿನ್ಯಾಸ ಮುಖ್ಯಸ್ಥೆಯಾಗಿ ನೇಮಕಗೊಂಡು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಓಲಾ (Ola) ಸಂಸ್ಥೆ ಇನ್ನೂ ವಿದ್ಯುತ್‌ ಚಾಲಿತ ವಾಹನಗಳನ್ನು ಆರಂಭಿಸಿಲ್ಲ, ಹೀಗಾಗಿ, ರಾಮಕೃಪಾ ವಿನ್ಯಾಸದ ವಾಹನಗಳು ಈ ವಿಭಾಗದಲ್ಲಿ ಇನ್ನೂ ಕಂಡುಬಂದಿಲ್ಲ. ಮುಂದಿನ ವರ್ಷಗಳಲ್ಲಿ ವಿದ್ಯುತ್‌ ಕಾರು (Car) ಮತ್ತು ಬೈಕ್‌ (Bike) ಗಳನ್ನು ಮಾರುಕಟ್ಟೆಗೆ ಬಿಡುವುದಾಗಿ ಓಲಾ ಈಗಾಗಲೇ ಪ್ರಕಟಿಸಿದೆ. ಮುಂಬರುವ ದಿನಗಳಲ್ಲಿ ಇವರಿಂದ ಜಾದೂ ನಡೆಯಲಿದೆ ಎನ್ನುವ ವಿಶ್ವಾಸ ಆಟೋಮೊಬೈಲ್‌ ಉದ್ಯಮ (Automobile Industry) ವಲಯದಲ್ಲಿದೆ.

Follow Us:
Download App:
  • android
  • ios