Asianet Suvarna News Asianet Suvarna News

ಹೊಸ ವಾಹನ ಖರೀದಿಗೆ ಹೊರಟವರಿಗೆ ಶಾಕ್‌: ಏ.1ರಿಂದ ಕಾರು, ಬೈಕ್‌ ಬೆಲೆ ಮತ್ತೆ ಏರಿಕೆ

ಏ.1ರಿಂದ ಜಾರಿಯಾಗುವಂತೆ ಶೇ.2- ಶೇ.ರವರೆಗೆ ಬೆಲೆ ಏರಿಕೆ ಮಾಡುವುದಾಗಿ ಹಲವು ಕಾರು ಮತ್ತು ಬೈಕ್‌ ತಯಾರಿಕಾ ಕಂಪನಿಗಳು ಪ್ರಕಟಿಸಿವೆ. ಹೀಗಾಗಿ ಹಬ್ಬದ ವೇಳೆ ಕಾರು ಖರೀದಿಗೆ ನಿರ್ಧರಿಸಿದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

Car and bike prices have increased again since April 1st akb
Author
First Published Mar 24, 2023, 10:22 AM IST

ನವದೆಹಲಿ: ಏ.1ರಿಂದ ಜಾರಿಯಾಗುವಂತೆ ಶೇ.2- ಶೇ.ರವರೆಗೆ ಬೆಲೆ ಏರಿಕೆ ಮಾಡುವುದಾಗಿ ಹಲವು ಕಾರು ಮತ್ತು ಬೈಕ್‌ ತಯಾರಿಕಾ ಕಂಪನಿಗಳು ಪ್ರಕಟಿಸಿವೆ. ಹೀಗಾಗಿ ಹಬ್ಬದ ವೇಳೆ ಕಾರು ಖರೀದಿಗೆ ನಿರ್ಧರಿಸಿದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಹೀರೊ ಕಂಪನಿಯು ತನ್ನ ಎಲ್ಲಾ ಮಾದರಿಯ ವಾಹನಗಳ ಮೇಲೆ ಶೇ.2ರಷ್ಟುದರವನ್ನು ಏರಿಕೆ ಮಾಡುವುದಾಗಿ ಹೇಳಿದೆ. ಹೋಂಡಾ ತನ್ನ ಅಮೇಜ್‌ ಕಾರಿನ ದರವನ್ನು 12,000 ಬೆಲೆಗೆ ಏರಿಕೆ ಮಾಡಲಿದೆ. ಟಾಟಾ ಮೋಟ​ರ್ಸ್‌ (tata motors) ತನ್ನ ವಾಣಿಜ್ಯ ವಾಹನಗಳ (commercial vehicles) ಬೆಲೆಯನ್ನು ಶೇ.5ರಷ್ಟು ಏರಿಕೆ ಮಾಡಲಿದೆ. ಇದಲ್ಲದೇ ಮರ್ಸಿಡಿಸ್‌ ಬೆನ್ಜ್‌ (Mercedes Benz) ತನ್ನ ವಾಹನಗಳ ಬೆಲೆಯಲ್ಲಿ ಶೇ.5ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಸರ್ಕಾರದ ನೂತನ ಮಾಲಿನ್ಯ ನೀತಿಯ (pollution policy) ಅನ್ವಯ ಕಂಪನಿಗಳು ತಮ್ಮ ವಾಹನದಲ್ಲಿ ಬಿಎಸ್‌ 6ನ 2ನೇ ಹಂತವನ್ನು ಅಳವಡಿಸಿರಬೇಕು. ಏ.1ರ ಒಳಗೆ ತಮ್ಮ ವಾಹನಗಳಲ್ಲಿ ತತ್‌ಕ್ಷಣದ ಮಾಲಿನ್ಯ ಪ್ರಮಾಣವನ್ನು ಅಳೆಯಲು ಸ್ವಯಂ ಅಳತೆ ಯಂತ್ರವನ್ನು ಅಳವಡಿಸಿರಬೇಕು. ಇದು ಕಂಪನಿಗಳ ಹೊರೆ ಹೆಚ್ಚಿಸಿದೆ. ಮತ್ತೊಂದೆಡೆ ಏರುತ್ತಿರುವ ಹಣದುಬ್ಬರ ಹಾಗೂ ಉತ್ಪಾದನ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಗಳು ಹೇಳಿವೆ.

ಪಾಕ್‌ನಲ್ಲಿ ಇಡೀ ತಿಂಗಳು ಖರೀದಿಸುವ ವಾಹನಕ್ಕಿಂತ ಭಾರತದಲ್ಲಿ ಪ್ರತಿ ದಿನ ಖರೀದಿಸುವ ಕಾರು ದುಪ್ಪಟ್ಟು!

 

Follow Us:
Download App:
  • android
  • ios