ಸೋಲಾರ್ ಕಾರಾಗಿ ಬದಲಾದ ನ್ಯಾನೋ ಕಾರು: 100 ಕಿಲೋಗೆ ತಗಲುವ ವೆಚ್ಚ ಕೇವಲ 30 ರೂಪಾಯಿ ಮಾತ್ರ
ಪ್ರಸ್ತುತ ಜನ ದುಬಾರಿ ಪೆಟ್ರೋಲ್ ಡಿಸೇಲ್ ದರದಿಂದ ಕಂಗೆಟ್ಟಿದ್ದು, ಕಾರನ್ನು ಹೊರತೆಗೆಯಲು ಯೋಚನೆ ಮಾಡುವಂತಾಗಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಉದ್ಯಮಿಯೊಬ್ಬರು ತಮ್ಮ ಟಾಟಾ ನ್ಯಾನೋ ಕಾರನ್ನು ಸೋಲಾರ್ ಕಾರಾಗಿ ಬದಲಾಯಿಸಿದ್ದಾರೆ.
ಕೋಲ್ಕತ್ತಾ: ಪ್ರಸ್ತುತ ಜನ ದುಬಾರಿ ಪೆಟ್ರೋಲ್ ಡಿಸೇಲ್ ದರದಿಂದ ಕಂಗೆಟ್ಟಿದ್ದು, ಕಾರನ್ನು ಹೊರತೆಗೆಯಲು ಯೋಚನೆ ಮಾಡುವಂತಾಗಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಉದ್ಯಮಿಯೊಬ್ಬರು ತಮ್ಮ ಟಾಟಾ ನ್ಯಾನೋ ಕಾರನ್ನು ಸೋಲಾರ್ ಕಾರಾಗಿ ಬದಲಾಯಿಸಿದ್ದಾರೆ. ಇದು ಕೇವಲ 30 ರೂಪಾಯಿ ವೆಚ್ಚದಲ್ಲಿ 100 ಕಿಲೋ ಮೀಟರ್ ಮೈಲೇಜ್ ನೀಡುತ್ತಿದೆ.
ಬಂಕುರಾದ (Bankura) ಕಟ್ಜುರಿದಂಗ (Katjuridanga) ನಿವಾಸಿಯಾಗಿರುವ ಮನೋಜಿತ್ ಮೊಂಡಲ್ (Manojit Mondal) ಎಂಬುವವರೇ ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ ವ್ಯಕ್ತಿ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರಾಗಿ ಪರಿವರ್ತಿಸಿ ಬಂಕುರಾದ ಬೀದಿಗಳಲ್ಲಿ ಆ ಕಾರಲ್ಲಿ ಸಂಚರಿಸುತ್ತಾರೆ. ಈ ಕಾರಿಗೆ ಯಾವುದೇ ಪೆಟ್ರೋಲ್ ಅಗತ್ಯವಿಲ್ಲ. ಅಲ್ಲದೆ, ಇದು ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಕಾರಿನ ನಿರ್ವಹಣಾ ವೆಚ್ಚ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಈ ಪೆಟ್ರೋಲ್-ಮುಕ್ತ ಸೋಲಾರ್ ಕಾರ್ ಕೇವಲ 30 ರಿಂದ 35 ರೂಗಳಲ್ಲಿ 100 ಕಿಲೋಮೀಟರ್ ಓಡುತ್ತದೆ. ಹೀಗಾಗಿ ಇದು ಈಗ ಬಂಕುರಾದ ಮೆಕಾನಿಕಲ್ ಐಕಾನ್ ಆಗಿ ಬದಲಾಗಿದೆ.
3 ಕೋಟಿ ಮೊತ್ತದ ಮರ್ಸಿಡಿಸ್ ಮೆಬ್ಯಾಕ್ ಖರೀದಿಸಿದ ನಟಿ ನೀತೂ ಕಪೂರ್, ಪುತ್ರ ರಣಬೀರ್ ಬಳಿ ಇಲ್ಲ ಈ ಕಾರು!
ಪ್ರತಿ ಕಿಲೋಮೀಟರ್‌ಗೆ ಈ ಕಾರಿನಲ್ಲಿ ತಗಲುವ ವೆಚ್ಚ 80 ಪೈಸೆ. ಎಂಜಿನ್ ಇಲ್ಲದ ಕಾರಣ ಕಾರು ಸ್ಟಾರ್ಟ್ ಮಾಡಿದರೂ ಸದ್ದು ಬರುವುದಿಲ್ಲ. ಆದರೆ, ಗೇರ್ ವ್ಯವಸ್ಥೆ ಇದೆ. ಈ ಅದ್ಭುತ ಕಾರು ನಾಲ್ಕನೇ ಗೇರ್‌ನಲ್ಲಿ ಬಹುತೇಕ ಸದ್ದಿಲ್ಲದೇ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ. ಹೀಗೆ ಟಾಟಾ ನ್ಯಾನೋ ಕಾರನ್ನು ಸೋಲಾರ್ ಕಾರಾಗಿ ಪರಿವರ್ತಿಸಿದ ಮನೋಜಿತ್ ಮಂಡಲ್ ಬಾಲ್ಯದಿಂದಲೂ ಏನಾದರೂ ಹೊಸದನ್ನು ಮಾಡಬೇಕೆಂದು ಅಂದುಕೊಂಡಿದ್ದರು. ಅದರಂತೆ ಈ ಪ್ರಯೋಗ ಮಾಡುವ ವೇಳೆ ಹಲವು ಸವಾಲನ್ನು ಎದುರಿಸಿದರು. ಅವರ ಈ ಹೊಸ ಐಡಿಯಾಗೆ ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಆದರೂ ಧೃತಿಗೆಡದೇ ಈ ಸೋಲಾರ್ ಕಾರು ನಿರ್ಮಿಸಿದ್ದು, ಇಂಧನ ದರ ಏರಿಕೆ ಮಧ್ಯೆ ಜನರ ಅಶಾಕಿರಣವಾಗಿದ್ದಾರೆ.
ಈ ಕಾರಿಗೆ ಯಾವುದೇ ಪೆಟ್ರೋಲ್ ಅಗತ್ಯವಿಲ್ಲ. ಕಾರಿನ ನಿರ್ವಹಣಾ ವೆಚ್ಚ ಸಹ ಬಹಳ ಕಡಿಮೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಈ ಪೆಟ್ರೋಲ್ ರಹಿತ ಸೋಲಾರ್ ಕಾರ್ ಕೇವಲ 30 ರಿಂದ 35 ರೂ.ಗೆ 100 ಕಿಲೋಮೀಟರ್ ದೂರ ಓಡುತ್ತದೆ ಎಂದು ಈ ಕಾರನ್ನು ಅಭಿವೃದ್ಧಿಪಡಿಸಿದ ಮನೋಜಿತ್ ಅವರು ತಿಳಿಸಿದ್ದಾರೆ. ಅಲ್ಲದೇ, ಪ್ರತಿ ಕಿಲೋ ಮೀಟರ್ಗೆ ಈ ಕಾರಿಗೆ ತಗಲುವ ವೆಚ್ಚ 80 ಪೈಸೆ ಮಾತ್ರ. ಅದೇನೆ ಇರಲಿ ದುಬಾರಿಯಾಗಿರುವ ಪೆಟ್ರೋಲ್ ಡಿಸೇಲ್ ದರದ ನಡುವೆ ಈ ಸೋಲಾರ್ ಕಾರು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕಾರಿನ ದಾಖಲೆ ಕೇಳಿದ್ದಕ್ಕೆ ಯುವತಿ ಹೈಡ್ರಾಮಾ: ನಡು ರಸ್ತೆಯಲ್ಲಿ ಬಿದ್ದು ಅತ್ತು ಗೋಳಾಡಿದ ಹುಡುಗಿ