Asianet Suvarna News Asianet Suvarna News

ಮದುವೆ ಎಂದ್ರೆ ಇದಾ? ಬಾಲಕಿಯ ಉತ್ತರಕ್ಕೆ ಟೀಚರ್​ ಶಾಕ್​: ಇದು ನಿಜನೇ ಅಂತಿದ್ದಾರೆ 'ಸಂತ್ರಸ್ತರು'!

ಮದುವೆ ಎಂದರೇನು ಎನ್ನುವ ಪ್ರಶ್ನೆಗೆ ವಿದ್ಯಾರ್ಥಿನಿಯೊಬ್ಬಳು ಬರೆದಿರುವ ಉತ್ತರ ಸಕತ್​ ವೈರಲ್​ ಆಗುತ್ತಿದ್ದು, ಕೆಲವರು ಇದು ಶಾಕಿಂಗ್​ ಎನ್ನುತ್ತಿದ್ದಾರೆ.
 

The answer written by a student to the question of what is marriage is going viral suc
Author
First Published Oct 2, 2023, 1:32 PM IST

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಅದರದ್ದೇ ಆದ ವಿಶೇಷತೆಗಳಿವೆ, ವೈಶಿಷ್ಠ್ಯಗಳಿವೆ. ಮದುವೆ ಎನ್ನುವುದು ಜನ್ಮ ಜನ್ಮದ ಅನುಬಂಧ ಎನ್ನಲಾಗುತ್ತದೆ. ದಂಪತಿ ನಡುವೆ ಏನೋ ಕಷ್ಟಗಳು ಬಂದರೂ ಸಹಿಸಿಕೊಂಡು ಸಹಬಾಳ್ವೆ ನಡೆಸಿದರೆ ದಾಂಪತ್ಯ ಸುಗಮವಾಗಿ ನಡೆಯುತ್ತದೆ ಎನ್ನುವುದು ಹಿರಿಯರ ಮಾತು. ಆದರೆ ಇಂದು ಬಹುತೇಕ ಮದುವೆಗಳು ಫ್ಯಾಷನ್​ ಆಗಿವೆ. ಲವ್​ ಮ್ಯಾರೇಜ್​ ಆಗಲೀ, ಅರೇಂಜ್ಡ್​ ಮ್ಯಾರೇಜ್​ ಆಗಲಿ, ಬಹುತೇಕ ಮದುವೆಗಳು ಇಂದು ಮುರಿದು ಬೀಳುತ್ತಿವೆ. ಅಪಾರ ಪ್ರಮಾಣದಲ್ಲಿ ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಇಂದು ಕೌಟುಂಬಿಕ ಕೋರ್ಟ್​ಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಚಿಕ್ಕಪುಟ್ಟ ವಿಷಯಗಳಿಗೂ ಮದುವೆ ಮುರಿದು ಬೀಳುವುದು ಕಾಮನ್​ ಆಗಿವೆ. ಮನೆಯಲ್ಲಿ ಜಗಳದ ವಾತಾವರಣ ನಿರ್ಮಾಣವಾದರೆ ಅದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನುವ ಮಾತು ಸುಳ್ಳಲ್ಲ.

ಮದುವೆ ಎನ್ನುವ ಪವಿತ್ರ ಬಂಧನ  ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮದುವೆಯ ಬಗ್ಗೆ ಮಕ್ಕಳ ಮೇಲೆ ಏನು ಪರಿಣಾಮ ಬೀರುತ್ತದೆ ಎನ್ನುವುದು ಈ ವೈರಲ್​ ಫೋಟೋದಿಂದ ತಿಳಿದುಬರುತ್ತಿದೆ. ಮದುವೆ ಎಂದರೇನು ಎಂದು ಕೇಳಿರುವ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ಇದಾಗಿದೆ. ಹಳೆಯ ಉತ್ತರ ಪತ್ರಿಕೆ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಮಗುವಿನ ಮನಸ್ಸಿನ ಮೇಲೆ ಮದುವೆ ಎನ್ನುವ ಬಂಧ ಹೇಗೆಲ್ಲಾ ಕೆಟ್ಟದ್ದು ಎನ್ನುವ ಅರ್ಥದಲ್ಲಿ ತಲೆಗೆ ಹೊಕ್ಕಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ಈ ಉತ್ತರ ನೋಡಿದರೆ ಬಹುಶಃ ಎಲ್ಲರೂ ನಗಬಹುದು. ಆದರೆ ನಿಜವಾದ ಅರ್ಥದಲ್ಲಿ ಯೋಚನೆ ಮಾಡಿದರೆ, ಮಗುವಿನ ಮೇಲೆ ಮದುವೆಯ ಬಗ್ಗೆ ಇರುವ ಅನಿಸಿಕೆ ಪ್ರಕಟಗೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ. ಇದೇ ಕಾರಣಕ್ಕೆ ಇಂದು ಹಲವು ಯುವತಿಯರು ಮದುವೆಯೇ ಬೇಡ ಎಂದು ಹೇಳುತ್ತಿರುವುದುಂಟು. ತಮ್ಮ ಸ್ವತಂತ್ರಕ್ಕೆ ಅಡ್ಡಿಯಾಗುವ ಬಂಧನ ನಮಗೆ ಬೇಡವೇ ಬೇಡ ಎಂದು ಯುವತಿಯರು ಮದುವೆಯಾಗದೇ ಒಂಟಿಯಾಗಿಯೇ ಇರಲು ಇಷ್ಟಪಡುತ್ತಿದ್ದಾರೆ.

ಮನೇಲಿದ್ದ ತಟ್ಟೆ, ಚಂಬು, ಬಟ್ಲು ಕದೀತಿದ್ದೆ, 2ನೇ ಕ್ಲಾಸ್​ನಲ್ಲೇ ಪೊಲೀಸ್ ಠಾಣೆಗೂ ಹೋಗಿದ್ದೆ ಎಂದ ಸರ್‌ದೇಶಪಾಂಡೆ

ಅಷ್ಟಕ್ಕೂ ಈ ಬಾಲಕಿ, ಮದುವೆಯೆಂದರೇನು ಎನ್ನುವುದಕ್ಕೆ ಬರೆದ ಉತ್ತರ ಹೀಗಿದೆ: ಮದುವೆ ಎಂದರೆ ಹುಡುಗಿಯ ಹೆತ್ತವರು ಆಕೆಗೆ, ಈಗ ನೀನು ದೊಡ್ಡವಳಾಗಿದ್ದೀಯ, ಇಷ್ಟು ವರ್ಷ ನಿನ್ನನ್ನು ಪೋಷಿಸಿದ್ದೆವು. ಇನ್ನು ನಿನ್ನ ಪೋಷಣೆಯ ಕೆಲಸ ನಮ್ಮದಲ್ಲ. ಅದನ್ನು ನೋಡಿಕೊಳ್ಳುವುದು ನಿನ್ನನ್ನು ಮದುವೆಯಾಗುವ ಹುಡುಗನದ್ದು ಎನ್ನುತ್ತಾರೆ. ನಂತರ ಹುಡುಗನನ್ನು ಆಯ್ಕೆಮಾಡುವ  ಪ್ರಕ್ರಿಯೆ ಆರಂಭಿಸುತ್ತಾರೆ.  ಹುಡುಗಿಯ ಪೋಷಕರು ತಮ್ಮ ಮಗಳ ಮದುವೆಗಾಗಿ ತಮ್ಮ ಮಗಳನ್ನು ಸಾಕುವ ಪುರುಷನನ್ನು ಹುಡುಕಲು ಶುರು ಮಾಡುತ್ತಾರೆ.  ನಂತರ ಹುಡುಗಿ ಮತ್ತು ಹುಡುಗ ಭೇಟಿಯಾಗುತ್ತಾರೆ. ತಂದೆ-ತಾಯಿ ನಿಶ್ಚಯಿಸಿದವರನ್ನೇ ಮಗಳು ಮದುವೆಯಾಗುತ್ತಾಳೆ. ಇದೇ ಹುಡುಗಿಯನ್ನು ಮದುವೆಯಾಗು ಎಂದು ಗಲಾಟೆ ಮಾಡುವ ಹುಡುಗನ ಪೋಷಕರ ಮಾತಿಗೆ ಕಟ್ಟುಬಿದ್ದು ಆ ಹುಡುಗ ಈಕೆಯನ್ನು ಮದುವೆಯಾಗುತ್ತಾನೆ. ನಂತರ ಮಕ್ಕಳನ್ನು ಪಡೆಯಲು ಬೇಡದ್ದನ್ನು ಮಾಡುವುದೇ ಮದುವೆ ಎಂದಿದ್ದಾಳೆ.

ಇದನ್ನು ನೋಡಿ ಶಿಕ್ಷಕರು ಶಾಕ್​ ಆಗಿದ್ದು, ಆಕೆಗೆ 10ಕ್ಕೆ ಜೀರೋ ಅಂಕ ನೀಡಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲಿ ಬಾಲಕಿಗೆ ಮದುವೆಯ ಬಗ್ಗೆ ಇಷ್ಟು ಕೆಟ್ಟ ಅನುಭವವೇ ಎಂದು ಕೆಲವರು ಪ್ರಶ್ನಿಸಿದ್ದರೆ, ಇನ್ನು ಕೆಲವರು ಅರೇಂಜ್ಡ್​ ಮ್ಯಾರೇಜ್​ ಎಂದರೆ ಹೀಗೆಯೇ ಆಗುತ್ತಿರುವುದು ಶೋಚನೀಯ ಎಂದಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಕೆಲವೊಂದು ಮದುವೆಗಳ ಬಗ್ಗೆ ತಿಳಿಸಿರುವ ಅವರು, ಇದೇ ಅನುಭವ ಶೇರ್​ ಮಾಡಿಕೊಂಡಿದ್ದಾರೆ. ಇನ್ನು ಕೆಲವರು  ನಾನೂ ಇಂಥದರ ಸಂತ್ರಸ್ತ/ಸಂತ್ರಸ್ತೆ ಎಂದಿದ್ದಾರೆ. ಹಲವು ಕಡೆಗಳಲ್ಲಿ ಪೋಷಕರು ಹೆಣ್ಣುಮಗು ತಮ್ಮ ಹೊರೆ, ಅದನ್ನು ನೋಡಿಕೊಳ್ಳುವ ಜವಾಬ್ದಾರಿ ಇನ್ನೊಂದು ಗಂಡಸಿನದ್ದು ಎನ್ನುವ ಮನಸ್ಥಿತಿಯಿಂದ ಹೊರಕ್ಕೆ ಬಂದಿಲ್ಲ. ಈ ಮಗುವಿಗೂ ಕುಟುಂಬದಲ್ಲಿ ಅಂಥದ್ದೇ ಏನೋ ಅನುಭವ ಆಗಿದೆ, ಇದೇ ಕಾರಣಕ್ಕೆ ಈಕೆ ಹೀಗೆ ಬರೆದಿರಬಹುದು ಎಂದಿದ್ದಾರೆ. ಇನ್ನು ಹಲವರು ನಗುವಿನ ಇಮೋಜಿ ಹಾಕಿದ್ದಾರೆ. 

ಅಮೆರಿಕದಲ್ಲಿ ಅಡುಗೆ ಮಾಡ್ತಿರೋ ಮಾಧುರಿ ಪುತ್ರ: ವಿಡಿಯೋ ನೋಡಿ ವ್ಹಾರೆವ್ಹಾ ಎಂದ ಫ್ಯಾನ್ಸ್​!
 

Follow Us:
Download App:
  • android
  • ios