ಅಮೆರಿಕದಲ್ಲಿ ಅಡುಗೆ ಮಾಡ್ತಿರೋ ಮಾಧುರಿ ಪುತ್ರ: ವಿಡಿಯೋ ನೋಡಿ ವ್ಹಾರೆವ್ಹಾ ಎಂದ ಫ್ಯಾನ್ಸ್!
ಅಮೆರಿಕದಲ್ಲಿ ಕಲಿಯುತ್ತಿರುವ ಮಾಧುರಿ ದೀಕ್ಷಿತ್ ಪುತ್ರ ಅರಿನ್ ಅಡುಗೆ ಮಾಡೋದ್ರಲ್ಲಿ ಎಕ್ಸ್ಪರ್ಟ್, ತಮ್ಮ ಅಡುಗೆ ತಾವೇ ಮಾಡಿಕೊಳ್ಳುತ್ತಿದ್ದಾರೆ.
ಮಾಧುರಿ ದೀಕ್ಷಿತ್ (Madhuri Dixit) ಮತ್ತು ಡಾ. ಶ್ರೀರಾಮ್ ನೆನೆ ಅವರ ಪುತ್ರ ಅರಿನ್ ಎರಡು ವರ್ಷಗಳಿಂದ ಅಮೆರಿಕದಲ್ಲಿ ಓದುತ್ತಿದ್ದಾರೆ. ಇವರು ಆಗಾಗ್ಗೆ ತಮ್ಮ ತಂದೆ ಡಾ. ಶ್ರೀರಾಮ್ ನೆನೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಕೆಲ ತಿಂಗಳ ಹಿಂದಷ್ಟೇ ರಿಯಾನ್ ತಲೆ ಕೂದಲು ಕ್ಷೌರ ಮಾಡುತ್ತಿರುವ ವೀಡಿಯೋವನ್ನು ತಾಯಿ ಮಾಧುರಿ ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಕೂದನ್ನು ರಿಯಾನ್ ಅವರು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದರು. ತಲೆ ಕೂದಲನ್ನು ದಾನ ಮಾಡಲು 2 ವರ್ಷಗಳಿಂದ ತಮ್ಮ ಮಗ ರಾಯನ್ ತಲೆ ಕೂದಲು ಕತ್ತರಿಸಿರಲಿಲ್ಲ ಎಂದು ಮಾಧುರಿ ಹೇಳಿದ್ದರು. ಇದಕ್ಕೆ ಸಹಸ್ರಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೀಗ ಅರಿಯನ್ ಕುರಿತು ಇನ್ನೊಂದು ಹೊಸ ಅಪ್ಡೇಟ್ ಹೊರಬಂದಿದೆ.
ಅದೇನೆಂದರೆ ಇದಾಗಲೇ ಅರಿನ್ ಅಮೆರಿಕದಲ್ಲಿ ಇದ್ದರೂ ಅಲ್ಲಿಯ ಆಹಾರಕ್ಕೆ ಮೊರೆ ಹೋಗದೇ ಕೆಲವು ದೇಸಿ ಪಾಕವಿಧಾನಗಳನ್ನು ಬೇಯಿಸಲು ಕಲಿತಿದ್ದಾರೆ. ಈ ಹಿಂದೆಯೇ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅರಿನ್ ಕಿಚಡಿ ಮಾಡಲು ಕಲಿತಿರುವುದಾಗಿ ಮಾಧುರಿ ಹೇಳಿಕೊಂಡಿದ್ದಾರೆ. ಇದನ್ನು ಮಾಧುರಿ ಅವರು "ಆರಾಮ ಆಹಾರ" ಎಂದು ವಿವರಿಸಿದ್ದರೆ ತಂದೆ ಡಾ. ನೆನೆ "ಇಂಡಿಯನ್ ಪೇಲಾ" ಎಂದು ಹೇಳಿದ್ದಾರೆ. ತಮ್ಮ ಪುತ್ರನ ಅಡುಗೆ ಕೌಶಲದ ಕುರಿತು ಮಾತನಾಡಿರುವ ಮಾಧುರಿ, ಅರಿನ್ ಕೆಲವು ವರ್ಷಗಳಿಂದ ಅಡುಗೆ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದಾನೆ. ಪ್ರತಿ ಬಾರಿ ಆತ ಮನೆಗೆ ಭೇಟಿ ನೀಡಿದಾಗ, ಅಮೆರಿಕದಲ್ಲಿ ಪ್ರಯತ್ನಿಸಲು ಕೆಲವು ಹೊಸ ಭಕ್ಷ್ಯಗಳನ್ನು ಕಲಿಯುತ್ತಾನೆ. ಸ್ನೇಹಿತರು ಮತ್ತು ರೂಮ್‌ಮೇಟ್‌ಗಳಿಗೆ ನೀವು ಅದನ್ನು ತಯಾರಿಸಿದಾಗ ತುಂಬಾ ಸಂತೋಷಪಡುತ್ತಾರೆ ಎಂದಿದ್ದಾರೆ.
ಮನೇಲಿದ್ದ ತಟ್ಟೆ, ಚಂಬು, ಬಟ್ಲು ಕದೀತಿದ್ದೆ, 2ನೇ ಕ್ಲಾಸ್ನಲ್ಲೇ ಪೊಲೀಸ್ ಠಾಣೆಗೂ ಹೋಗಿದ್ದೆ ಎಂದ ಸರ್‌ದೇಶಪಾಂಡೆ
ಅಂದಹಾಗೆ, ಅರಿನ್ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ಕೆಲವು ಸ್ನೇಹಿತರ ಜೊತೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ತಂದೆಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದಿನ ಚಾಟ್‌ನಲ್ಲಿ, ಅರಿನ್ ತನ್ನ ಅಪಾರ್ಟ್ಮೆಂಟ್ ಚಿಕ್ಕದಿದೆ ಎಂದು ಹೇಳಿಕೊಂಡಿದ್ದರು. ಸ್ನೇಹಿತರ ಜೊತೆ ತಿನ್ನುವುದು ಎಂದರೆ ತಮಗೆ ಇಷ್ಟ ಎಂದಿದ್ದ ಅವರು, ತಮ್ಮ ಆಹಾರವನ್ನು ತಾವೇ ಬೇಯಿಸಿಕೊಳ್ಳುವುದಾಗಿ ತಿಳಿಸಿದ್ದರು. 'ನನಗಾಗಿ ಅಡುಗೆ ಮಾಡಲು ನನಗೆ ಸಾಕಷ್ಟು ಸಮಯವಿಲ್ಲ. ಆದ್ದರಿಂದ ಕೆಲವು ವೇಳೆ ಮಾತ್ರ ನಾನು ಆರ್ಡರ್ ಮಾಡುತ್ತೇನೆ. ಆದರೆ ಆರ್ಡರ್ ಮಾಡುವುದು ಉತ್ತಮ ಕ್ರಮವಲ್ಲ' ಎಂದಿರುವ ಅರಿನ್, ನನಗಾಗಿ ನಾನೇ ಅಡುಗೆ ಮಾಡಿಕೊಳ್ಳುವುದು ಸಕತ್ ಟೇಸ್ಟಿಯಾಗಿರುತ್ತದೆ. ನಮ್ಮದೇ ಅಡುಗೆಯನ್ನು ಆನಂದಿಸುವ ಖುಷಿಯೇ ಬೇರೆ ಎಂದಿದ್ದಾರೆ.
ತಮಗೆ ಬೇಕಾದ ಮಸಾಲೆ ಪೆಟ್ಟಿಗೆಯನ್ನು ಹೊಂದಿರುವ ಅರಿನ್, ಇದನ್ನು ತಮ್ಮ ತಾಯಿ ಕಳುಹಿಸಿಕೊಟ್ಟಿರುವುದಾಗಿ ಹೇಳಿದ್ದಾರೆ. ಅಮೆರಿಕದಲ್ಲಿ ವಾಸಿಸುತ್ತಿರುವ ನೇನೆ ಅವರ ತಾಯಿ, ಹಿತ್ತಲಿನಲ್ಲಿ ಗಿಡಮೂಲಿಕೆಗಳ ಉದ್ಯಾನವನ್ನು ಹೊಂದಿದ್ದಾರೆ, ಆದ್ದರಿಂದ ಅವರು ಯಾವಾಗಲೂ ಗಿಡಮೂಲಿಕೆಗಳನ್ನು ಎರವಲು ಪಡೆಯಬಹುದು ಎಂದು ಅವರು ಹೇಳಿದರು.
GHOST: ಸಾಮಾನ್ಯವಾಗಿ ಯಾರ್ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್ ಪಂಚ್