ಮನೇಲಿದ್ದ ತಟ್ಟೆ, ಚಂಬು, ಬಟ್ಲು ಕದೀತಿದ್ದೆ, 2ನೇ ಕ್ಲಾಸ್​ನಲ್ಲೇ ಪೊಲೀಸ್ ಠಾಣೆಗೂ ಹೋಗಿದ್ದೆ ಎಂದ ಸರ್‌ದೇಶಪಾಂಡೆ

ರಂಗಭೂಮಿ ಕಲಾವಿದ ಯಶವಂತ್​ ಸರದೇಶಪಾಂಡೆ ಅವರು ಬಾಲ್ಯದಲ್ಲಿಯೇ ಮನೆಯಲ್ಲಿ ಸಾಮಾನು ಕದಿಯುತ್ತಿದ್ದರಂತೆ, ಪೊಲೀಸ್ ಠಾಣೆಗೂ ಹೋಗಿದ್ರಂತೆ. ಜೋಡಿ ನಂ.1ರಲ್ಲಿ ರೋಚಕ ಅನುಭವ ಬಿಚ್ಚಿಟ್ಟಿದ್ದಾರೆ.
 

Yashwant Sardeshpande in Jodi No says about  steal  at home even went to the police station suc

ಚಿಕ್ಕವನಿರುವಾಗ್ಲೇ ಸಿನಿಮಾ ಹುಚ್ಚು. ಪ್ರೈಮರಿ ಓದುವಾಗ್ಲೇ ಏನಿಲ್ಲ ಅಂದರೂ ವರ್ಷಕ್ಕೆ 250 ಸಿನಿಮಾ ನೋಡ್ತಿದ್ದೆ. ರೊಕ್ಕ ಬೇಕಲ್ರೀ... ಏನ್​ ಮಾಡೋದು? ಅದಕ್ಕೆ ಮನೆಯಲ್ಲಿರೋ ಲೋಟ, ಪಾತ್ರೆ ಎಲ್ಲಾನೂ ಮಾರ್ತಿದ್ದೆ. ದುಡ್ಡು ಕೊಡ್ತಿದ್ರು. ಅದನ್ನು ತಗೊಂಡ್​ ಹೋಗಿ ಸಿನಿಮಾ ನೋಡೋ ಚಟ ತೀರಿಸಿಕೊಳ್ತಿದ್ದೆ. ಅಷ್ಟು ಹುಚ್ಚಿತ್ತು ಸಿನಿಮಾದ ಬಗ್ಗೆ. ಮನೆಲಿರೋ ತಟ್ಟೆ, ಚಂಬು, ಬಟ್ಟಲುಗಳನ್ನು ಹಳೆ ಪಾತ್ರೆ ಸಾಮಾನು ಅಂಗಡಿಗೆ ಹೋಗಿ ಮಾರಿ ಬರುತ್ತಿದ್ದೆ. ಅದರಿಂದ ಒಂದು ರೂಪಾಯಿ, 15 ಪೈಸೆ ಸಿಕ್ಕರೆ ಸಾಕಾಗಿತ್ತು. ಗಾಂಧಿ ಕ್ಲಾಸ್‌ನಲ್ಲಿ ಕುಳಿತು ಅಣ್ಣಾವ್ರ ಸಿನಿಮಾ ನೋಡಿ ಬರುತ್ತಿದ್ದೆ. ಶಾಲೆಯ ಪುಸ್ತಕ, ಬ್ಯಾಗು, ಪೆನ್ನು ಏನನ್ನೂ ಉಳಿಸಿರಲಿಲ್ಲ. ಅವುಗಳನ್ನೂ ಮಾರಿ ಬಸ್‌ ಹತ್ತಿಕೊಂಡು ಬೆಂಗಳೂರು, ಮೈಸೂರಿಗೆ ಬಂದು ಬಿಡುತ್ತಿದ್ದೆ. ಮನೆಯಲ್ಲಿ ಕೇಳಿದ್ರೆ, ಕಳೆದ್ವು ಅಂತ ಹೇಳುತ್ತಿದ್ದೆ. ಈಗ್ಲೂ ಬೇಕಾದ್ರೆ ಹೇಳಿ... ಮನೆಲಿರೋ ಸಾಮಾನು ಮಾರಿ ತೋರಿಸ್ತೇನೆ...
 
ಹೀಗಂತ ಬಾಲ್ಯದ ನೆನಪು ಮಾಡಿಕೊಂಡೋರು ಯಶವಂತ್‌ ಸರ್‌ದೇಶಪಾಂಡೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಈ ವಾರಾಂತ್ಯದಲ್ಲಿ ಸ್ಪರ್ಧಿಗಳು ಶಾಲಾ ಸಮವಸ್ತ್ರದಲ್ಲಿ ಮಿಂಚುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಸರ್​ದೇಶಪಾಂಡೆ ಅವರು ನೆನಪಿಸಿಕೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಸರ್​ದೇಶಪಾಂಡೆ ಅವರು,  ನಾಟಕ, ಸಿನಿಮಾ, ಸೀರಿಯಲ್‌ನಲ್ಲಿಯೂ ಮಿಂಚು ಹರಿಸಿ ನಗು ಉಕ್ಕಿಸುವವರು. ಇವರು, ಸತ್ಯ ಧಾರಾವಾಹಿಯಲ್ಲಿ  ಸತ್ಯಳ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಸೀತಮ್ಮ ಅಂದ್ರೆ  ಮಾಲತಿ ಅವರ ಪತಿ. ಈ ಜೋಡಿ ಇದಾಗಲೇ ತಮ್ಮ ಹಲವು ರೋಚಕ ಘಟನೆಗಳನ್ನು ಈ ಷೋನದಲ್ಲಿ ತಿಳಿಸಿದ್ದು, ಇದೀಗ ಬಾಲ್ಯದಲ್ಲಿಯೇ ಕಳುವು ಮಾಡುತ್ತಿದ್ದ ಬಗ್ಗೆ ಯಶವಂತ್​ ಅವರು ಹಾಸ್ಯದ ಲೇಪ ಕೊಟ್ಟು ಹೇಳಿದ್ದಾರೆ.

ಒಂದೇ ಬ್ಲೌಸ್‌ಗೆ ಮೂರ್ನಾಲ್ಕು ಸೀರೆಯುಟ್ಟುಕೊಂಡಿದ್ದೆ, ಮೆಹೆಂದಿ ಇಲ್ಲವೇ ಇಲ್ಲ: ಪತಿ ಮಾಡಿದ ಅರ್ಜೆಂಟ್‌ಗೆ ಮಾಲತಿ ಬೇಸರ
 
ಇದೇ ವೇಳೆ, 2ನೇ ಕ್ಲಾಸ್​​ನಲ್ಲಿಯೂ ಪೊಲೀಸ್​ ಠಾಣೆ ಮೆಟ್ಟಿಲೇರಿದ ರೋಚಕ ಘಟನೆಯನ್ನು ಅವರು ಬಿಚ್ಚಿಟ್ಟಿದ್ದಾರೆ. ನಮ್ದು ಹುಬ್ಳಿ. ಎರಡನೇ ಕ್ಲಾಸ್‌ ಓದ್ತಿದ್ದೆ.   ಅಲ್ಲಿರೋ ಗಾಜಿನ ಅರಮನೆ ಮುಂದೆ ಜಾರುಬಂಡಿ ಇತ್ತು. ಆ ಜಾರು ಬಂಡಿ ಮೇಲೆ ಜಾರಿ ಜಾರಿ ಚಡ್ಡಿಯೂ ತೂತು ಬೀಳ್ತಿತ್ತು, ಸಂಜೆ ಗಾರ್ಡನ್‌ ಕ್ಲೋಸ್‌ ಆದ್ರೂ ನನ್ನ ಆಟ ಮುಗೀತಿರಲಿಲ್ಲ. ಒಂದ್​ ದಿನ ವಾಚ್‌ಮನ್‌ ಬಂದು ನನಗೆ ಬೈದಿದ್ದಲ್ಲದೆ,  ನನ್ನ ಸ್ಕೂಲ್​ ಬ್ಯಾಗ್‌, ವಾಟರ್‌ ಬಾಟಲ್‌, ಟಿಫನ್‌ ಬಾಕ್ಸ್‌ ಎಲ್ಲ ತೆಗೆದುಕೊಂಡ ಹೋದ. ಖಾಲಿ ಕೈಲಿ ಮನೆಗೆ ಹೋದ್ರೆ  ಬ್ಯಾಗ್‌ ಎಲ್ಲಿ ಅಂತ ಕೇಳಿದ್ರು.  ತಲೆ ಕೆಡಿಸಿಕೊಳ್ಳಬೇಡಿ. ಪೊಲೀಸ್‌ ಸ್ಟೇಷನ್‌ಗೆ ಕಂಪ್ಲೇಂಟ್‌ ಕೊಟ್ಟಿದ್ದೇನೆ. ಅವರೇ ತಂದು ಕೊಡ್ತಾರೆ ಅಂತ ಹೇಳಿದ್ದೆ. ಯಾಕೆಂದ್ರೆ, ಆವಾಗ್ಲೇ ಪೊಲೀಸ್​ ಸ್ಟೇಷನ್​ಗೆ ಹೋಗೋ ಬುದ್ಧಿ ನಂಗಿತ್ತು. ಪೊಲೀಸರಲ್ಲಿ ಹೋಗಿ ದೂರು ಕೊಟ್​ಬಂದಿದ್ದೆ. ನಾನು ಅಂದ್ಕೊಂಡಂತೆ ಪೊಲೀಸರು ನನ್ನ ಸಾಮಾನೆಲ್ಲಾ ವಾಪಸ್​ ತಂದುಕೊಟ್ರು ಎಂದಿದ್ದಾರೆ. 

 ಶಾಲೆಯಲ್ಲಿದ್ದಾಗಲೇ ಮನ್ಮಥ ರಾಜ ಆಗಿದ್ರಂತೆ, ತುಂಬಾ ಮಂದಿಗೆ ಪ್ರಪೋಸ್​ ಮಾಡ್ತಿದ್ರಂತೆ  ಎಂದು ನಿರೂಪಕ  ಕುರಿ ಪ್ರತಾಪ್‌ ಕೇಳಿದಾಗ, ಸರ್​ದೇಶಪಾಂಡೆ ಅವರು,  ಪ್ರಪೋಸ್‌ ಅಲ್ಲ,  ಟ್ರೈ ಮಾಡುತ್ತಿದ್ವಿ ಎಂದು ಹಾಸ್ಯ ಮಾಡಿದ್ದಾರೆ. ಅದೇ ವೇಳೆ ಶಾಲಾ ಯೂನಿಫಾರ್ಮ್​ನಲ್ಲಿ ಬಂದಿರೋ ಇತರ ಮಹಿಳಾ ಸ್ಪರ್ಧಿಗಳಿಗೆ ರೋಸ್ ಕೊಟ್ಟು ವಿಭಿನ್ನ ರೀತಿಯಲ್ಲಿ ಪ್ರಪೋಸ್​  ಮಾಡಿ ಸಕತ್​ ಎಂಟರ್​ಟೇನ್​ಮೆಂಟ್​ ನೀಡಿದ್ದಾರೆ. ಅವರಿಗೆ ಪ್ರಪೋಸ್​ ಮಾಡುವಾಗ ನಿಮಗೆ ಇಷ್ಟವಾದ ಯಾವುದಾದ್ರೂ ಹೆಸರು ಹೇಳಿ ಪ್ರಪೋಸ್​ ಮಾಡಿ ಎಂದುದಕ್ಕೆ ಎಲ್ಲರಿಗೂ ಮಾಲತಿ 1, ಮಾಲತಿ 2, ಮಾಲತಿ 3 ಎಂದು ಕರೆದು ಮತ್ತಷ್ಟು ನಗು ಉಕ್ಕಿಸಿದ್ದಾರೆ. ಮಾಲತಿ ಸರ್‌ದೇಶಪಾಂಡೆ-ಯಶವಂತ್ ಸರ್‌ದೇಶಪಾಂಡೆ, ಸುನೇತ್ರಾ ಪಂಡಿತ್- ರಮೇಶ್‌ ಪಂಡಿತ್‌, ಸಿಲ್ಲಿ ಲಲ್ಲಿಆನಂದ್‌-ಚೈತ್ರಾ, ಸಂಜುಬಸಯ್ಯ-ಪಲ್ಲವಿ, ಮಂಜುನಾಥ್-ಅನುಷಾ, ಗಣೇಶ್ ಕಾರಂತ್-ವಿದ್ಯಾ, ನೇತ್ರಾವತಿ-ಸದಾನಂದ, ಲಾವಣ್ಯ ಶಶಿ ಹೆಗಡೆ ಸೇರಿ ಒಟ್ಟು ಎಂಟು ಜೋಡಿಗಳು ಜೋಡಿ ನಂಬರ್​ 1ನಲ್ಲಿ ಕಾಣಿಸಿಕೊಳ್ಳುತ್ತಿವೆ.
 
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios