ಗಾಡಿಗಳಿಗೆ ಪಂಕ್ಚರ್ ಹಾಕುವ ಗಟ್ಟಿಗಿತ್ತಿ: ಪುರುಷ ಪ್ರಾಬಲ್ಯಕ್ಕೆ ಸವಾಲ್‌ ಈ ಆದಿಲಕ್ಷ್ಮಿ

  • ಗಾಡಿಗಳಿಗೆ ಪಂಕ್ಚರ್ ಹಾಕುವ ಮಹಿಳೆ
  • ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ಮಹಿಳೆ ದಾಪುಗಾಲು
  • ತೆಲಂಗಾಣದ ಆದಿಲಕ್ಷ್ಮಿ ಈ ಸಾಹಸಿ ಹೆಣ್ಣು ಮಗಳು
Telangana Woman Breaks Gender Stereotypes Fixes Flat Tyres of Cars, Trucks akb

ಹೈದರಾಬಾದ್: ಇಂದು ಮಹಿಳೆ ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ದಾಪುಗಾಲಿಟ್ಟಿದ್ದಾಳೆ. ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲೂ ತಾನು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಇಂತಹ ಸಾಧಕರ ಸಾಲಿಗೆ ಸೇರುವ ಮತ್ತೊಬ್ಬ ಮಹಿಳೆ ಎಂದರೆ ತೆಲಂಗಾಣದ ಯೆಡಲಪಲ್ಲಿ ಆದಿಲಕ್ಷ್ಮಿ(Yedalapally Adilaxmi). ದೂರದ ಭದ್ರಾದ್ರಿ ಕೊತಗುಡೆಂ (Bhadradri Kothagudem) ಗ್ರಾಮದ 31ರ ಹರೆಯದ ಇವರು ಮಹಿಳೆಯರು ಇಚ್ಛಾಶಕ್ತಿ, ದೃಢಸಂಕಲ್ಪ ಹಾಗೂ ಕಠಿಣ ಪರಿಶ್ರಮದಿಂದ ಯಾವುದೇ ಕೆಲಸವನ್ನು ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕೊತಗುಡೆಮ್ ಪಟ್ಟಣದ ( Kothagudem town) ಸಮೀಪವಿರುವ ಸುಜಾತಾ ನಗರದಲ್ಲಿರುವ (Sujatha Nagar) ಸಣ್ಣ ಗ್ಯಾರೇಜ್‌ನಲ್ಲಿ, ಅವರು ಮೋಟಾರ್ ಸೈಕಲ್‌ಗಳಷ್ಟೇ ಅಲ್ಲದೆ ಕಾರುಗಳು, ಟ್ರ್ಯಾಕ್ಟರ್‌ಗಳು ಮತ್ತು ಟ್ರಕ್‌ಗಳ  ಟೈರ್‌ಗಳನ್ನು ಸರಿಪಡಿಸುತ್ತಾರೆ. ಎರಡು ಮಕ್ಕಳ ತಾಯಿಯು ಆಗಿರುವ ಆದಿಲಕ್ಷ್ಮಿ ತನ್ನ ಪತಿ ಭದ್ರಮ್‌ಗೆ (Bhadram) ಆಟೋಮೊಬೈಲ್ ರಿಪೇರಿ ಅಂಗಡಿಯನ್ನು ನಡೆಸಲು ಸಹಾಯ ಮಾಡುತ್ತಾರೆ ಮತ್ತು ಕಳೆದ ಐದು ವರ್ಷಗಳಿಂದ ಪಂಕ್ಚರ್‌ಗಳನ್ನು ಸರಿಪಡಿಸುವಲ್ಲಿ ಮತ್ತು ಟೈರ್‌ಗಳನ್ನು ಬದಲಾಯಿಸುವಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ.

ಸಮಾಜಕ್ಕೆ ಸೂರ್ತಿಯಾಗಿರುವ ಆಸಿಡ್ ದಾಳಿಯಿಂದ ಬದುಕುಳಿದವರು!

ಅವರ ಮಾತಿನಲ್ಲೇ ಹೇಳುವುದಾದರೆ, ಅಂಗಡಿಗೆ ಬರುವ ಜನರು ಆರಂಭದಲ್ಲಿ ಹಿಂಜರಿಯುತ್ತಿದ್ದರು. ಮಹಿಳೆ ಗಾಳಿ ಹೋದ ಟೈರ್ ಅನ್ನು ಸರಿಪಡಿಸಬಹುದು ಎಂಬುದನ್ನು ಅವರು ನಂಬಲಿಲ್ಲ. ಆದರೆ ನಂತರದಲ್ಲಿ ಮಹಿಳೆಯೊಬ್ಬರು ಭಾರವಾದ ಟೈರ್‌ಗಳನ್ನು ಎತ್ತುವ ಮತ್ತು ಸಾಂಪ್ರದಾಯಿಕವಾಗಿ ಪುರುಷರ ಕೆಲಸ ಎಂದು ಗ್ರಹಿಸುವ  ಈ ಕೆಲಸವನ್ನು ಮಾಡುವುದನ್ನು ನೋಡಿ  ಆಘಾತಕ್ಕೊಳಗಾದರು ಎಂದರು.

ಆದಾಗ್ಯೂ, ಆದಿಲಕ್ಷ್ಮಿ ಅವರು ತನ್ನ ಕಠಿಣ ಪರಿಶ್ರಮದಿಂದ ವರ್ಷಗಳಲ್ಲಿ ಗಳಿಸಿದ ಪರಿಣತಿಯು ಇಂದು ಫ್ಲಾಟ್ ಟೈರ್ ಅನ್ನು ಸರಿಪಡಿಸಲು ಯಾರನ್ನಾದರೂ ಹುಡುಕುತ್ತಿರುವವರಿಗೆ ಇವರು ಪರಿಹಾರ ಎಂಬಂತಾಗಿದೆ. ಅದಾಗ್ಯೂ ತೆಲಂಗಾಣದ ಮೊದಲ ಮಹಿಳಾ ಮೆಕ್ಯಾನಿಕ್ ಆಗಿರುವ ಆದಿಲಕ್ಷ್ಮಿ ಅವರಿಗೆ ಇದು ಸುಲಭದ ಪ್ರಯಾಣವಾಗಿರಲಿಲ್ಲ. ಪ್ರಾರಂಭದಲ್ಲಿ ಅವರು ಪಂಕ್ಚರ್‌ಗಳನ್ನು ಸರಿಪಡಿಸುವ ಅನುಭವವಿರುವ ತನ್ನ ಪತಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಅಲ್ಲದೇ ತನ್ನ ಪತಿಗೆ ಬೇರೆ ಕಡೆ ಹೋಗಲು ಕರೆ ಬಂದಾಗಲೆಲ್ಲಾ ಆದಿಲಕ್ಷ್ಮಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು.

Work From Home: ಗಂಡಸರು ಸೋಮಾರಿಗಳು, ಹೆಣ್ಮಕ್ಳೇ ಸ್ಟ್ರಾಂಗ್ ಗುರೂ !

ಪತಿಯ ಅನುಪಸ್ಥಿತಿಯಲ್ಲಿ ಗ್ರಾಹಕರು ಅಂಗಡಿಗೆ ಬಂದಾಗ ನಾನು ನಾನು ಪಂಕ್ಚರ್‌ಗಳನ್ನು ಸರಿಪಡಿಸಲು ಸಾಧ್ಯವಾಗದೆ ಯಾವಾಗಲೂ ಅಸಹಾಯಕತೆ ಮತ್ತು ನಿರಾಶೆಯನ್ನು ಅನುಭವಿಸುತ್ತಿದೆ. ಆದಾಯ ಕಳೆದುಕೊಳ್ಳುವುದರ ಜೊತೆಗೆ ಮನೆ ಬಾಗಿಲಿಗೆ ಬರುವ ಕೆಲಸಗಳನ್ನು ಮಾಡಲಾಗದೇ ಬೇಜಾರಾಗಿದೆ ಎಂದು ಆದಿಲಕ್ಷ್ಮಿ ಹೇಳಿದರು.

ಮಹಿಳೆಯು ಈ ಕಠಿಣ ಕೆಲಸವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯರ ಗ್ರಹಿಕೆಯೇ ಈ ಕೆಲಸವನ್ನು ಮಾಡಲು ಅವರನ್ನು ಪ್ರೇರೆಪಿಸಿತು. ನಾನು ಅದನ್ನು ಏಕೆ ಮಾಡಬಾರದು ಎಂದು ಯೋಚಿಸಲು ಪ್ರಾರಂಭಿಸಿದೆ. ನಾನು ಟೈರ್‌ಗಳಿಗೆ ಗಾಳಿ ತುಂಬುವಂತಹ ಸಣ್ಣ ವಿಚಾರಗಳನ್ನು ಮಾಡಲು ಆರಂಭಿಸಿದೆ. ನನ್ನ ಆಸಕ್ತಿ ಹೆಚ್ಚಾದಂತೆ ಮತ್ತು ನಾನು ಆತ್ಮವಿಶ್ವಾಸವನ್ನು ಗಳಿಸಿದಂತೆ, ಹಿಂತಿರುಗಿ ನೋಡಲೇ ಇಲ್ಲ ಎಂದು ಹೇಳಿದರು. ಪ್ರಾರಂಭದಲ್ಲಿ ಪತಿ ಫ್ಲಾಟ್ ಟೈರ್ ಅನ್ನು ಸರಿಪಡಿಸುವುದನ್ನು ಸೂಕ್ಷ್ಮವಾಗಿ ಗಮನಿಸಿದ ಅವರು ಆರಂಭದಲ್ಲಿ ದಿನಕ್ಕೆ ನಾಲ್ಕು ಪಂಕ್ಚರ್ ರಿಪೇರಿ ಮಾಡಿ ಸುಸ್ತಾಗುತ್ತಿದ್ದರು. ಈಗ ಎಷ್ಟೇ ಕೆಲಸವಾದರೂ ನಿಭಾಯಿಸುವ ವಿಶ್ವಾಸವಿದೆ ಎನ್ನುತ್ತಾರೆ ಆದಿಲಕ್ಷ್ಮಿ. 

ಮಹಿಳೆಯರು ಮಾಡಲಾಗದ ಕೆಲಸವಿಲ್ಲ ಎಂದು  ನಂಬುವ ಆದಿಲಕ್ಷ್ಮಿ, ಇದಕ್ಕೆ ಧನಾತ್ಮಕ ಚಿಂತನೆ ಮತ್ತು ಧೈರ್ಯ ಮಾತ್ರ ಬೇಕು. ಇದನ್ನು ಸವಾಲಾಗಿ ಸ್ವೀಕರಿಸಬೇಕು. ಇತರ ಮಹಿಳೆಯರು ನನಗಿಂತ ಉತ್ತಮವಾಗಿ ಕೆಲಸ ಮಾಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. ಆದಿಲಕ್ಷ್ಮಿ ಅವರ ಕಾರ್ಯದಿಂದ ಪ್ರಭಾವಿತರಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕಿ ಮತ್ತು ಶಾಸಕಿ ಕೆ.ಕವಿತಾ, ಆದಿಲಕ್ಷ್ಮಿ ಅವರಿಗೆ ಸಹಾಯ ಹಸ್ತ ನೀಡಲು ಮುಂದೆ ಬಂದರು. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ, ಆದಿಲಕ್ಷ್ಮಿ ಅವರನ್ನು ಕಳೆದ ವರ್ಷ ಹೈದರಾಬಾದ್‌ಗೆ ಆಹ್ವಾನಿಸಿ, ಅವರ ಸಂಕಲ್ಪ ಮತ್ತು ಕುಟುಂಬವನ್ನು ಪೋಷಿಸಲು ಅವರು ಪಟ್ಟ ಶ್ರಮವನ್ನು ಶ್ಲಾಘಿಸಿದರು. ಕವಿತಾ ಅವರಿಗೆ ಟೈರ್ ಬದಲಾಯಿಸುವ ಯಂತ್ರವನ್ನೂ ನೀಡಿದ್ದರು.

ಆದಿಲಕ್ಷ್ಮಿ ಅವರ ಕೆಲಸವನ್ನು ಸುಲಭಗೊಳಿಸಲು ಇತರ ಕೆಲವು ಸಂಸ್ಥೆಗಳು ಆಕೆಗೆ ಯಂತ್ರಗಳನ್ನು ದಾನ ಮಾಡಿದವು. ಆದರೆ ಅಂಗಡಿಗೆ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕವಿರುವುದರಿಂದ ಯಂತ್ರಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೋಗುವ ಇಬ್ಬರು ಹೆಣ್ಣು ಮಕ್ಕಳಿರುವ ಆದಿಲಕ್ಷ್ಮಿ ಕುಟುಂಬಕ್ಕೆ ಪಡಿತರ ಚೀಟಿ ನೀಡಬೇಕು ಮತ್ತು ಬಡವರಿಗೆ ನೀಡುವ ಎರಡು ಕೋಣೆ ವಸತಿ ಯೋಜನೆಯಡಿ ಮನೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಾನು ಅನುಭವಿಸುವುದನ್ನು ನನ್ನ ಮಕ್ಕಳು ಅನುಭವಿಸುವುದು ಬೇಡ.. ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡಲು ನಾನು ಬಯಸುತ್ತೇನೆ ಎಂದು ಆದಿಲಕ್ಷ್ಮಿ ಹೇಳಿದರು.

Latest Videos
Follow Us:
Download App:
  • android
  • ios