Asianet Suvarna News Asianet Suvarna News

Work From Home: ಗಂಡಸರು ಸೋಮಾರಿಗಳು, ಹೆಣ್ಮಕ್ಳೇ ಸ್ಟ್ರಾಂಗ್ ಗುರೂ !

ಹೆಣ್ಮಕ್ಳು (Women) ಅಂದ್ರೆ ಏನು ಸುಮ್ನೇನಾ. ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿಭಾಯಿಸಿಬಿಡುತ್ತಾರೆ. ಅದೇ ರೀತಿ ವರ್ಕ್‌ ಫ್ರಂ ಹೋಂ (Work From Home) ಕೆಲಸದಲ್ಲೂ ಸಿಂಹಪಾಲು ಮಹಿಳೆಯರದ್ದೇ. ಗಂಡಸರು ಸೋಮಾರಿಗಳು, ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ ಅಂತಿದೆ ಅಧ್ಯಯನ.

Working From Home Easier For Men Than Women
Author
Bengaluru, First Published Mar 10, 2022, 7:33 PM IST | Last Updated Mar 10, 2022, 7:33 PM IST

ಕೊರೋನಾ (Corona) ಸಾಂಕ್ರಾಮಿಕ ಮನುಷ್ಯನ ಜೀವನವನ್ನು ಅಕ್ಷರಶಃ ಬದಲಾಯಿಸಿದೆ. ಆದ್ಯತೆಗಳು, ಅವಕಾಶಗಳು, ನಿರೀಕ್ಷೆಗಳು ಎಲ್ಲವೂ ಬದಲಾಗಿದೆ. ವರ್ಕ್‌ ಫ್ರಂ ಹೋಮ್‌ (Work From Home), ಆನ್‌ಲೈನ್ ಕ್ಲಾಸ್‌ಗಳು ಒಂದೆಡೆ ಈಝಿ ಎನಿಸಿದರೂ ಮತ್ತೊಂದೆಡೆ ಒತ್ತಡಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ವರ್ಕ್‌ ಫ್ರಂ ಹೋಮ್‌ನಿಂದ ಅದೆಷ್ಟೋ ಮಂದಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಾರೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ ವರ್ಕ್‌ ಫ್ರಂ ಹೋಮ್‌ನಿಂದ ಖುಷಿಪಟ್ಟವರು ಸಹ ಅದೆಷ್ಟೋ ಮಂದಿ. ನಗರ ಬಿಟ್ಟು ಮನೆ ಸೇರಿದವರು ಖುಷಿಯಿಂದ ಸಮಯ ಕಳೆಯುತ್ತಿದ್ದಾರೆ. ಬೆಳಗ್ಗೆ ಗಡಿಬಿಡಿಯಲ್ಲಿ ಎದ್ದು ತಿಂಡಿ ತಿನ್ನದೆ ಆಫೀಸಿಗೆ ಓಡುವ ಧಾವಂತವಿಲ್ಲ. ಲ್ಯಾಪ್‌ಟ್ಯಾಪ್‌ (Laptop) ಹಿಡಿದು ಕೆಲಸ ಮಾಡಿದರಾಯಿತು. ಮನೆ ಮಂದಿ ರುಚಿರುಚಿಯಾದ ಅಡುಗೆಯನ್ನು ಮಾಡಿ ಬಡಿಸುತ್ತಾರೆ.

ಗಂಡಸರ ಪಾಲಿಗೇನೂ ವರ್ಕ್‌ ಫ್ರಂ ಹೋಮ್‌ ಈಜಿಯೆಸ್ಟ್ ಟಾಸ್ಕ್‌ ಆಗಿಬಿಟ್ಟಿದೆ. ಆದರೆ ಮನೆಯಿಂದಲೇ ಕೆಲಸ ಎಂಬ ಕಾನ್ಸೆಪ್ಟ್‌ನಿಂದ ಅತಿ ಹೆಚ್ಚು ತೊಂದರೆಯಾಗಿರೋದು ಮಹಿಳೆ (Women)ಯರಿಗೇ ಅಂತೆ. ವರ್ಕ್‌ ಫ್ರಂ ಹೋಮ್‌ನಲ್ಲಿ ಗಂಡಸರೆಲ್ಲಾ ಸೋಮಾರಿಗಳು, ಹೈಯೆಸ್ಟ್ ಕೆಲಸ ಮಾಡಿದ್ದು ಮಹಿಳೆಯರೇ ಅಂತಿದೆ ಅಧ್ಯಯನ. ಹೌದು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಮನೆಕೆಲಸದಲ್ಲಿ ಮಹಿಳೆಯರು ಸಿಂಹಪಾಲು ಕೆಲಸ ಮಾಡಿದ್ದು, ಗಂಡಸರು ಆರಾಮವಾಗಿ ಸಮಯವನ್ನು ಕಳೆದಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

Keeping Employees Happy: ಸಂಬಳ ಹೆಚ್ಚಿಸದೇ ಉದ್ಯೋಗಿಗಳನ್ನು ಖುಷಿಯಾಗಿಡುವುದು ಹೇಗೆ ?

ಮನೆಯಿಂದ ಕೆಲಸ ಮಾಡಲು ಸಾಧ್ಯವಾಗುವುದು ಒಂದು ಅವಕಾಶವಾಗಿದೆ. ನ್ಯೂಜಿಲೆಂಡ್ ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡಲು ಇಷ್ಟಪಟ್ಟರೂ, ಮಹಿಳೆಯರಿಗೆ ಇದರ ಬಗ್ಗೆ ಹೆಚ್ಚು ಅಸಮಾಧಾನವಿತ್ತು. ಯಾಕೆಂದರೆ ಈ ವರ್ಕ್‌ ಫ್ರಂ ಹೋಮ್ ಆಪ್ಶನ್‌ನಿಂದ ಅತಿ ಹೆಚ್ಚು ತೊಂದರೆಗೊಳಗಾದವರು ಮಹಿಳೆಯರೇ. ಮಹಿಳೆಯರು ವರ್ಕ್‌ ಫ್ರಂ ಹೋಮ್‌ ಜತೆಗೆ ಮನೆಕೆಲಸಗಳ ಜವಾಬ್ದಾರಿಯನ್ನು ನಿಭಾಯಿಸಬೇಕಾಯಿತು. ಇದರಿಂದಾಗಿ ಮಾನಸಿಕವಾಗಿ ಒತ್ತಡವನ್ನು ಅನುಭವಿಸಬೇಕಾಯಿತು.

ಸಾಂಕ್ರಾಮಿಕ ರೋಗದ ಮೊದಲು ನ್ಯೂಜಿಲೆಂಡ್ ಈಗಾಗಲೇ ಹೆಚ್ಚು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದೆ, ಇದರಲ್ಲಿ ಕಡಿಮೆ ಕೆಲಸದ ವಾರಗಳ ಬಗ್ಗೆ ಚರ್ಚೆಗಳು ಸೇರಿವೆ, ಆದರೆ 2020ರಲ್ಲಿ ಕಟ್ಟುನಿಟ್ಟಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ (Lockdown) ಮನೆಯಿಂದ ಕೆಲಸ ಮಾಡುವ ಪ್ರವೃತ್ತಿಯನ್ನು ವೇಗಗೊಳಿಸಿತು. ದೇಶದ ಹೆಚ್ಚುತ್ತಿರುವ ಓಮಿಕ್ರಾನ್ ಏಕಾಏಕಿ ಹಿಡಿದಿಟ್ಟುಕೊಳ್ಳುವುದರಿಂದ, ಹೆಚ್ಚಿನ ಉದ್ಯೋಗದಾತರು ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿರಲು ಪ್ರೋತ್ಸಾಹಿಸುತ್ತಿದ್ದಾರೆ.

Job Interview Tips: ಇಂಟರ್‌ವ್ಯೂನಲ್ಲಿ 'ನಿಮ್ಮ ಬಗ್ಗೆ ಹೇಳಿ?' ಎಂದರೆ ಏನು ಹೇಳ್ತೀರಿ?

ನ್ಯೂಜಿಲೆಂಡ್ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ರಿಸರ್ಚ್ ನಡೆಸಿದ ಅಧ್ಯಯನವು ಸಮೀಕ್ಷೆಗೆ ಒಳಗಾದವರಲ್ಲಿ 60% ಕ್ಕಿಂತ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುವುದು ಸಕಾರಾತ್ಮಕವಾಗಿದೆ ಎಂದು ಹೇಳುತ್ತಾರೆ. ಆದರೆ ಮಹಿಳೆಯರು ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಇಷ್ಟಪಡುತ್ತಿಲ್ಲ. ಮನೆ, ಗಂಡ-ಮಕ್ಕಳನ್ನು ನಿಭಾಯಿಸಿಕೊಂಡು ಮನೆಯಿಂದಲೇ ಕೆಲಸ ಮಾಡುವುದು ಕಷ್ಟ ಎನ್ನುತ್ತಾರೆ ಮಹಿಳೆಯರು.

ಲಾಕ್‌ಡೌನ್‌, ಕರ್ಫ್ಯೂ ಮೊದಲಾದ ನಿರ್ಬಂಧಗಳ ಸಮಯದಲ್ಲಿ ವರ್ಕ್‌ ಫ್ರಂ ಹೋಂ ಆಪ್ಶನ್‌ ಆರಂಭವಾಗಿದ್ದು ಪುರುಷರ ಜೀವನ ಮತ್ತಷ್ಟು ಸುಲಭವಾಗಿದೆ. ಪುರುಷರು ಸೋಮಾರಿಗಳಂತೆಯೇ ಕೆಲಸ ಮಾಡಿದ್ದಾರೆ. ಆದರೆ ಮಹಿಳೆಯರು ಮನೆಯನ್ನು ಸಹ ನಿಭಾಯಿಸಿಕೊಂಡು ಉದ್ಯೋಗದಲ್ಲೂ ಹೆಚ್ಚು ಕೆಲಸ ಮಾಡಿದ್ದಾರೆ. ಮನೆಕೆಲಸ ಮತ್ತು ಮಗುವಿನ ಆರೈಕೆ ಮನೆಯ ಜವಾಬ್ದಾರಿಗಳೊಂದಿಗೆ ಕುಶಲತೆಯಿಂದ ಕಚೇರಿಯ ಕೆಲಸವನ್ನೂ ಮಾಡಿದ್ದಾರೆ. 

ಹೀಗಾಗಿಯೇ ವರ್ಕ್‌ ಫ್ರಂ ಹೋಮ್ ವ್ಯವಸ್ಥೆಯಲ್ಲಿ ಸಂಸ್ಥೆಗೆ ಹೆಚ್ಚು ಲಾಭ ತಂದು ಕೊಟ್ಟ ಹೆಗ್ಗಳಿಕೆ ಹೆಣ್ಣು ಮಕ್ಕಳಿಗೇ ಇದೆ. ಮನೆಯಿಂದಲೇ ಕೆಲಸ ಎಂಬ ಆಪ್ಶನ್‌ ಹೆಣ್ಣು ಮಕ್ಕಳಿಗೆ ಹೆಚ್ಚು ಒತ್ತಡ ಹಾಕಿದ್ರೂ ಅವರು ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

Latest Videos
Follow Us:
Download App:
  • android
  • ios