ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಲೀಸಾಗಿ 50 ಕೆಜಿ ಎತ್ತಿ 'ನನಗೇನು ತುಂಬಾ ವಯಸ್ಸಾಗಿಲ್ಲ' ಎಂದ 82ರ ಅಜ್ಜಿ!

30 ವರ್ಷದೊಳಗಿನವರೇ ಇದ್ದ ಡೆಡ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲೇ ಸಲೀಸಾಗಿ 50 ಕೆಜಿ ತಟ್ಟೆಗಳನ್ನು ಎತ್ತಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ 82 ವರ್ಷದ ಈ ಅಜ್ಜಿ. 

Tamil Nadu 82 yr old woman lifts 50kg in her maiden deadlifting contest skr

ಪೊಲ್ಲಾಚಿಯ 82 ವರ್ಷದ ಕಿತ್ತಮ್ಮಾಳ್ ತನ್ನ ಮೊದಲ ಡೆಡ್‌ಲಿಫ್ಟಿಂಗ್ ಸ್ಪರ್ಧೆಯಲ್ಲೇ 50 ಕೆಜಿ ತೂಕವನ್ನು ಕತರತಲಾಮಲಕವಾಗಿ ಎತ್ತಿ ಎಲ್ಲರ ಹುಬ್ಬೇರಿಸಿದ್ದಾರೆ.

30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಇದ್ದ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಜ್ಜಿ ಈ ಸಾಧನೆ ಮಾಡಿದ್ದು, 18 ಸ್ಪರ್ಧಿಗಳ ನಡುವೆ  ಸ್ಪರ್ಧಿಸಿದ ಅಜ್ಜಿ ಲೀಲಾಜಾಲವಾಗಿ 50 ಕೆಜಿ ತೂಕದ ತಟ್ಟೆಗಳನ್ನು ಎತ್ತಿ ಐದನೇ ಸ್ಥಾನ ಪಡೆದರು.

ತಮಿಳುನಾಡಿನ ಕೊಯಮತ್ತೂರಿನ  ಪೊಲ್ಲಾಚಿಯ 82 ವರ್ಷದ ಕಿತ್ತಮ್ಮಲ್ ತನ್ನ ಮೊಮ್ಮಕ್ಕಳು ಎತ್ತುವ 50 ಕೆಜಿ ತಟ್ಟೆಗಳನ್ನು ಸುಲಭವಾಗಿ ಎತ್ತುತ್ತಾರೆ.ತನ್ನ ವೇಟ್‌ಲಿಫ್ಟರ್ ಮೊಮ್ಮಕ್ಕಳಾದ 16ರ ರೋಹಿತ್ ಮತ್ತು 23ರ ಹೃತಿಕ್ ವ್ಯಾಯಾಮ ಮಾಡುವುದನ್ನು ನೋಡಿದ ಕಿತ್ತಮಲ್ ಸ್ವತಃ ವ್ಯಾಯಾಮ ಮಾಡಲು ಬಯಸಿದ್ದರು. ಮೊಮ್ಮಕ್ಕಳ ನೆರವಿನಿಂದ ಅಜ್ಜಿ ಪ್ರತಿ ಶನಿವಾರ ಮತ್ತು ಭಾನುವಾರ ಜಿಮ್ ಹೋಗಿ ವ್ಯಾಯಾಮ ಮಾಡುತ್ತಿದ್ದು, 25 ದಿನಗಳ ಕಾಲ ಭಾರ ಎತ್ತುವ ತರಬೇತಿ ಪಡೆದಿದ್ದಾರೆ.

ಸಂಬಂಧದಲ್ಲಿ ಈ ಚಿಹ್ನೆಗಳು ಶುರುವಾಗಿವೆ ಎಂದ್ರೆ ಎಲ್ಲ ಮುಗಿದುಹೋಗ್ತಿದೆ ಎಂದರ್ಥ!
 

ಅಜ್ಜಿಯ ಆಸಕ್ತಿಯನ್ನು ಕಂಡು ವ್ಯಾಯಾಮ ತರಬೇತುದಾರ ಸತೀಶ್ ಅವರು ಮೇ 1 ರಂದು ಕೊಯಮತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದರು.
ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದ ಪ್ಯಾಟಿ ಕಿತ್ತಮ್ಮಾಳ್ 50 ಕೆ.ಜಿ ಭಾರ ಎತ್ತಿ ಮೊದಲ ಪ್ರಯತ್ನದಲ್ಲೇ ಐದನೇ ಸ್ಥಾನ ಪಡೆದರು. 

ಕಿತ್ತಮ್ಮಾಳ್ ತನ್ನ ಪತಿ ವೆಂಕಟ್ರಮಣನೊಂದಿಗೆ ವಾಸಿಸುತ್ತಿದ್ದಾರೆ. ತಮ್ಮ ಈ ಸಾಧನೆ ಬಗ್ಗೆ ಮಾತಾಡಿದ ಅಜ್ಜಿ, 'ಮಹಿಳೆಯರು ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡಬೇಕು. ನನ್ನ ಆಹಾರವು ನನ್ನ ಉತ್ಸಾಹ ಮತ್ತು ಆರೋಗ್ಯಕ್ಕೆ ಕಾರಣವಾಗಿದೆ' ಎಂದಿದ್ದಾರೆ.

‘ನನ್ನ ಪತಿ ನನಗೆ ಪೌಷ್ಟಿಕ ಆಹಾರ ಖರೀದಿಸಿ, ಯಶಸ್ವಿಯಾಗಲು ಪ್ರೋತ್ಸಾಹಿಸಿದರು’ ಎಂದು ಖುಷಿಯಿಂದ ಹೇಳಿದ್ದಾರೆ ಅಜ್ಜಿ. 
ತಮ್ಮ ಸಾಧನೆಯ ಮೂಲಕ ಅಜ್ಜಿ, ವಯಸ್ಸಿನ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಅವರು ನಿಯಮಿತವಾಗಿ 25 ಕೆಜಿ ಅಕ್ಕಿ ಚೀಲಗಳನ್ನು ಎತ್ತುತ್ತಾರೆ ಮತ್ತು ಕನಿಷ್ಠ 25 ಮಡಕೆ ಕುಡಿಯುವ ನೀರನ್ನು ತರುತ್ತಾರಂತೆ. 'ನಾನು ತುಂಬಾ ಸಕ್ರಿಯವಾಗಿದ್ದೇನೆ ಮತ್ತು ನನಗೆ ತುಂಬಾ ವಯಸ್ಸಾಗಿಲ್ಲ' ಎಂದಿದ್ದಾರೆ ಕಿತ್ತಮ್ಮಾಲ್. 

12ನೇ ತರಗತಿ ಪರೀಕ್ಷೆಯಲ್ಲಿ ರಜನೀಕಾಂತ್ ಮೊಮ್ಮಗನ ಅದ್ಬುತ ಸಾಧನೆ; ಧನುಷ್ ಮಗನಿಗೆ ಬಂದ ಮಾರ್ಕ್ಸ್ ನೋಡಿ..
 

ಎನರ್ಜಿ ಸೀಕ್ರೆಟ್
ಕಿತ್ತಮ್ಮಾಳ್ ಚಿಕ್ಕ ವಯಸ್ಸಿಂದಲೂ ಮಿಲಿಟ್ ಗಂಜಿ, ರಾಗಿ ಗಂಜಿ, ಮೊಟ್ಟೆಗಳು, ಬೇಯಿಸಿದ ತರಕಾರಿಗಳು, ಸೊಪ್ಪಿನ ಸೂಪ್ ಹೆಚ್ಚಾಗಿ ಸೇವಿಸುತ್ತಾ ಬಂದಿದ್ದಾರೆ. ಈ ಆಹಾರವೇ ಅವರ ಈ ಎನರ್ಜಿಯ ಗುಟ್ಟು ಎನ್ನುತ್ತಾರೆ. 

ಇನ್ನು ನಾನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಡಲ್ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಅಜ್ಜಿ ಹೇಳುವುದನ್ನು ಕೇಳಿದರೆ ರೋಮಾಂಚನವಾಗದಿರದು. 


 

Latest Videos
Follow Us:
Download App:
  • android
  • ios