26 ವಾರಗಳ ಅವಧಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್
26 ವಾರಗಳ ಅವಧಿಯ ಗರ್ಭಪಾತಕ್ಕೆ ಅನುಮತಿ ನೀಡುವಂತೆ ವಿವಾಹಿತ ಮಹಿಳೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಾವು ಜೀವವೊಂದರ ಹೃದಯ ಬಡಿತ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಕೋರ್ಟ್ ಆದೇಶ ನೀಡಲಾಗುವುದಿಲ್ಲ ಎಂದು ಹೇಳಿದೆ.
ನವದೆಹಲಿ: 26 ವಾರಗಳ ಅವಧಿಯ ಗರ್ಭಪಾತಕ್ಕೆ ಅನುಮತಿ ನೀಡುವಂತೆ ವಿವಾಹಿತ ಮಹಿಳೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಾವು ಜೀವವೊಂದರ ಹೃದಯ ಬಡಿತ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಕೋರ್ಟ್ ಆದೇಶ ನೀಡಲಾಗುವುದಿಲ್ಲ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು, ಮಹಿಳೆಯು ಗರ್ಭ ಧರಿಸಿ 26 ವಾರ ಮತ್ತು 5 ದಿನ ಆಗಿದೆ. ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸುವುದು ತಪ್ಪಾಗುತ್ತದೆ. ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯ ಸೆಕ್ಷನ್ 3 ಮತ್ತು 5ರ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.
ಎರಡನೇ ಮಗುವಿನ (Baby) ಜನನಾನಂತರ ತಾವು ಮನೋರೋಗವೊಂದಕ್ಕೆ ತುತ್ತಾಗಿದ್ದರಿಂದ ತಮ್ಮ ಗರ್ಭದಲ್ಲಿರುವ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಗರ್ಭಪಾತಕ್ಕೆ (Abortion) ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಮ್ಮತಿಯ ಲೈಂಗಿಕತೆ, ಗರ್ಭಪಾತ ಮಾಡಲು ವೈದ್ಯರು ಅಪ್ರಾಪ್ತ ವಯಸ್ಕರ ಹೆಸರು ಬಹಿರಂಗಪಡಿಸಬೇಕಿಲ್ಲ; ಹೈಕೋರ್ಟ್
ಮುಖ್ಯ ನ್ಯಾ। ಚಂದ್ರಚೂಡ್ ನೇತೃತ್ವದ ಪೀಠ ನೀಡಿದ ತೀರ್ಪಿನಲ್ಲಿ ‘ಏಮ್ಸ್ ವರದಿಯಲ್ಲಿ ಮಗು ಆರೋಗ್ಯಕರ ಬೆಳವಣಿಗೆಯನ್ನು ಹೊಂದುತ್ತಿದೆ ಎಂಬ ಅಂಶವನ್ನು ಪರಿಗಣಿಸಿದಾಗ ಮಗುವನ್ನು ಗರ್ಭಪಾತ ಮಾಡಲು ವಿಶೇಷ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ ಗರ್ಭಪಾತ ಕಾನೂನಿನ ನಿಯಮದಂತೆ 24 ವಾರಗಳ ಮಿತಿಯನ್ನೂ ಮೀರಿರುವುದರಿಂದ ಗರ್ಭಪಾತಕ್ಕೆ ಅನುಮತಿ (Permission) ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಮಹಿಳೆ ತನ್ನ ಗರ್ಭಪಾತಕ್ಕೆ ಆದೇಶ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಎಂಟಿಪಿ ಕಾಯ್ದೆಯಲ್ಲಿ ಅತ್ಯಾಚಾರಕ್ಕೆ ಒಳಪಟ್ಟವರು, ಅಂಗವಿಕಲರು, ಅಪ್ರಾಪ್ತ ವಯಸ್ಕರು ಮತ್ತು ವಿವಾಹಿತ ಮಹಿಳೆಯರಿಗೆ ಗರ್ಭಪಾತದ ಗರಿಷ್ಠ ಮಿತಿ 24 ವಾರಗಳಾಗಿವೆ. ಅ.9 ರಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು ಈ ಹಿಂದೆ ಇದೇ ವಿಚಾರವಾಗಿ ವಿಭಿನ್ನ ತೀರ್ಪನ್ನು ನೀಡಿತ್ತು. ಆದ್ದರಿಂದ ಈ ಪ್ರಕರಣ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಬಂದಿತ್ತು. ಈ ಹಿಂದೆಯೇ ಮಹಿಳೆ ಗರ್ಭಪಾತಕ್ಕೆ ಏಕೆ ಅನುಮತಿ ಪಡೆಯಲಿಲ್ಲ ಎಂದು ಕೋರ್ಟ್ ಪ್ರಶ್ನಿಸಿತ್ತು.
ಒಪ್ಪಿಗೆಯ ಸೆಕ್ಸ್ : 17ರ ಬಾಲೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್