Asianet Suvarna News Asianet Suvarna News

ಒಪ್ಪಿಗೆಯ ಸೆಕ್ಸ್ : 17ರ ಬಾಲೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್

ಗರ್ಭಪಾತಕ್ಕೆ ಅನುಮತಿ ಕೋರಿ 17 ವರ್ಷದ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.

Consensual sex Court denied permission for abortion to minor pragnent akb
Author
First Published Aug 1, 2023, 9:56 AM IST

ಔರಂಗಾಬಾದ್‌: ಗರ್ಭಪಾತಕ್ಕೆ ಅನುಮತಿ ಕೋರಿ 17 ವರ್ಷದ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಬಾಲಕಿ ತನ್ನ ಸಂಬಂಧಿಯ ಜೊತೆಗೆ ಸಹಮತಿಯ ಲೈಂಗಿಕ ಕ್ರಿಯೆ ನಡೆಸಿ ಗರ್ಭ ಧರಿಸಿದ್ದಾಳೆ. ಹೀಗಾಗಿ ಇದನ್ನು ಬಲಾತ್ಕಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜೊತೆಗೆ ಗರ್ಭಧಾರಣೆ ಖಾತ್ರಿಗೆ ಗರ್ಭ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಒಂದು ವೇಳೆ ಮಗುವಿನ ಬೆಳವಣಿಗೆ ತಾಯಿಯ ಆರೋಗ್ಯಕ್ಕೆ ತೊಂದರೆಯಾಗುವುದಿದ್ದರೆ ಮಾತ್ರ ಅವರು 20 ವಾರದೊಳಗೆ ಮನವಿ ಸಲ್ಲಿಸಬೇಕಿತ್ತು. ಈಗ ಮಗುವನ್ನು ತೆಗೆದರೆ ವಿಕಲಚೇತನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಅರ್ಜಿ ಪೋಕ್ಸೋ ಕಾಯ್ದೆ ಅಡಿ ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಮಗುವನ್ನು ತೆಗೆಸುವ ಅನುಮತಿಗೆ ನಿರಾಕರಿಸಿತು.

ಲವ್ ಮ್ಯಾರೇಜ್‌ಗೆ ಪೋಷಕರ ಒಪ್ಪಿಗೆ ಕಡ್ಡಾಯ; ಅಧ್ಯಯನಕ್ಕೆ ಗುಜರಾತ್ ಸರ್ಕಾರ ನಿರ್ಧಾರ!

ಪ್ರೀತಿಸಿ ಮದುವೆಯಾಗುವುದು ಹೊಸ ವಿಚಾರವಲ್ಲ. ಪ್ರೀತಿಗೆ ಪೋಷಕರ ವಿರೋಧ ಸೇರಿದಂತೆ ಹಲವು ಅಡೆತಡೆಗಳು ಇದ್ದೇ ಇವೆ. ಮಕ್ಕಳನ್ನು ಬೆಳೆಸಿ ಕೊನೆಗೆ ದಿಢೀರ್ ಆಗಿ ಪ್ರೀತಿ ಹೆಸರಲ್ಲಿ ನಾಪತ್ತೆಯಾಗುವು ಪ್ರಕರಣಗಳು ನಡೆಯುತ್ತಲೇ ಇದೆ. ಇತ್ತ ಪೋಷಕರ ದೂರು ಆಕ್ರಂದನ, ಬಳಿಕ ಹಲವು ಆರೋಪಗಳು ಸಾಮಾನ್ಯವಾಗುತ್ತಿದೆ. ಪ್ರೇಮ ವಿವಾಹದಿಂದ ಸೃಷ್ಟಿಯಾಗುತ್ತಿರುವ ಅನಗತ್ಯ ವಿವಾದ, ಆರೋಪಗಳನ್ನು ತಪ್ಪಿಸಲು ಗುಜರಾತ್ ಸರ್ಕಾರ ಹೊಸ ಆಲೋಚನೆಯನ್ನು ಮುಂದಿಟ್ಟಿದೆ. ಪ್ರೇಮ ವಿವಾಹಗಳಲ್ಲಿ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸುವ ಸಾಧ್ಯತೆಗಳ ಕುರಿತು ಅಧ್ಯಯನ ಮಾಡಲು ಗುಜರಾತ್ ಮುಂದಾಗಿದೆ. ಈ ಕುರಿಕು ಸ್ವತಃ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಕೋವಿಡ್ ವೇಳೆ ಅಪ್ರಾಪ್ತೆ ನಾದಿನಿಯ ಮೇಲೆ ಅತ್ಯಾಚಾರವೆಸಗಿದ ಭಾವನಿಗೆ 20 ವರ್ಷ ಶಿಕ್ಷೆ

ಮೆಹ್ಸಾನಾದಲ್ಲಿ ಪಾಟಿದಾಸ್ ಸಮುದಾಯದ ಸರ್ದಾರ್ ಪಟೇಲ್ ಗ್ರೂಪ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೂಪೇಂದ್ರ ಪಟೇಲ್, ಪ್ರೇಮ ವಿವಾಹದ ಕುರಿತು ಹೊಸ ಆಲೋಚನೆಯನ್ನು ಬಿಚ್ಚಿಟ್ಟಿದ್ದಾರೆ. ಹೆಣ್ಣುಮಕ್ಕಳು ಮದುವೆಗಾಗಿ ಓಡಿ ಹೋಗುವ ಘಟನೆಗಳು ಹೆಚ್ಚಾಗುತ್ತದೆ. ಪ್ರೀತಿಸಿ ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿ. ಓಡಿ ಹೋಗುವ ಸಂಪ್ರದಾಯದಿಂದ ಅಪಾಯ ಹಾಗೂ ಸಂಕಷ್ಟಗಳು ಹೆಚ್ಚು. ಕುಟುಂಬದ ನೆರವು ಇರುವುದಿಲ್ಲ. ಹೀಗಾಗಿ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕುರಿತ ಸಾಧ್ಯತೆಗಳು, ಕಾನೂನು ಪರಿಮಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದು ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಪೋಷಕರ ವಿಚ್ಛೇದನದಿಂದ ಖಿನ್ನತೆ : 7ನೇ ತರಗತಿ ಬಾಲಕ ಸಾವಿಗೆ ಶರಣು

Follow Us:
Download App:
  • android
  • ios