Asianet Suvarna News Asianet Suvarna News

ಜೈಪುರದಲ್ಲಿ ಜನವರಿ 19ರಿಂದ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ

ಈ ವರ್ಷದ ಜೈಪುರ ಸಾಹಿತ್ಯ ಉತ್ಸವದಲ್ಲಿ ಸಮಾಜಸೇವಕಿ ಮತ್ತು ಖ್ಯಾತ ಬರಹಗಾರ್ತಿಯಾಗಿರುವ ಸುಧಾಮೂರ್ತಿ ಅವರು ಭಾಗವಹಿಸಲಿದ್ದಾರೆ. ಇಷ್ಟಕ್ಕೂ ಈ ಸಾಹಿತ್ಯ ಉತ್ಸವ ನಡೆಯೋದ್ಯಾವಾಗ, ಉತ್ಸವದ ವಿಶೇಷತೆಯೇನು ತಿಳಿಯೋಣ.

Sudhamurthy at the Sahitya Utsav to be held in Jaipur from January 19 Vin
Author
First Published Jan 7, 2023, 12:03 PM IST

ಬೆಂಗಳೂರು: ಜನವರಿ 19ರಿಂದ 23ರ ವರೆಗೆ ನಡೆಯಲಿರುವ ಜೈಪುರ ಸಾಹಿತ್ಯ ಉತ್ಸವದಲ್ಲಿ ಕನ್ನಡದ ಖ್ಯಾತ ಬರಹಗಾರ್ತಿ (Author) ಮತ್ತು ಸಮಾಜ ಸೇವಕಿಯಾಗಿರುವ ಸುಧಾ ಮೂರ್ತಿ ಸೇರಿದಂತೆ ಹಲವಾರು ಮಹಿಳಾ ಲೇಖಕರು (Woman writers) ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. 16ನೇ ಈ ಸಾಹಿತ್ಯ ಉತ್ಸವದಲ್ಲಿ ಒಬ್ಬ ಮಹಿಳೆಯ ಜೀವನವನ್ನು ಬರವಣಿಗೆಯ ಮೂಲಕ ಹೇಗೆ ಸೆರೆ ಹಿಡಿಯಬಹುದು ಎಂಬುದರ ಬಗ್ಗೆ ವಿಶೇಷವಾಗಿ ಚರ್ಚಿಸಲಾಗುತ್ತಿದೆ. ಈ ಚರ್ಚಾಗೋಷ್ಠಿಯಲ್ಲಿ ಎಮಿಲಿ ಪರ್ಕಿನ್ಸ್, ಯುಜಿನಿಯಾ ಕುಜ್ನೆಟ್ಸೊವಾ, ಅನಾ ಫಿಲೋಮಿನಾ ಅಮರಲ್ ಮತ್ತು ತಾಥ್ಲ್ ಮ್ಯಾಕ್ ಧೋನ್ನಗೈನ್ ಅವರೊಂದಿಗೆ ಸಾಸ್ಕ್ಯಾ ಜೈನ್ ಅವರು ಪಾಲ್ಗೊಳ್ಳಲಿದ್ದಾರೆ. ಈ ಸಂವಾದಕಾರರು ಮಹಿಳಾ ನೋಟದಿಂದ ಬರವಣಿಗೆಯ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ (Political) ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಸಮಾಜಸೇವಕಿ ಮತ್ತು ಖ್ಯಾತ ಬರಹಗಾರ್ತಿಯಾಗಿರುವ ಸುಧಾಮೂರ್ತಿ ಅವರು ಸಾಂಸ್ಕೃತಿಕವಾಗಿ ಆಧಾರಿತ ಮಕ್ಕಳ ಸಾಹಿತ್ಯವನ್ನು ಚರ್ಚೆಯ ಕೇಂದ್ರ ಸ್ಥಾನಕ್ಕೆ ತಂದವರು ಮತ್ತು ಅವರೊಬ್ಬ ಸ್ಫೂರ್ತಿದಾಯಕ ವ್ಯಕ್ತಿ ಎನಿಸಿದ್ದಾರೆ. ಈ ಸಾಹಿತ್ಯ ಉತ್ಸವದಲ್ಲಿ ಅವರು ಪೆಂಗ್ವಿನ್ ರಾಂಡಂ ಹೌಸ್ ಇಂಡಿಯಾದ ಮಾಜಿ ಸಂಪಾದಕ- ಮುಖ್ಯಸ್ಥ ಮೇರು ಗೋಖಲೆ ಅವರೊಂಧಿಗೆ ಸಂವಾದ (Conversation) ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಸುಧಾಮೂರ್ತಿ ಅವರು ಸಹಾನುಭೂತಿಯ ಆಧಾರದ ಮೇಲೆ ಪ್ರಾಯೋಗಿಕವಾಗಿರುವ ವಿಶ್ವ ದೃಷ್ಟಿಕೋನದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.

ಇನ್ಫೋಸಿಸ್‌ಗೆ 40ನೇ ವರ್ಷದ ಸಂಭ್ರಮ: ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಮ್ಮ

ಮತ್ತೊಂದು ಸಾಹಿತ್ಯ ಸಂವಾದದಲ್ಲಿ ಲೇಖಕಿ, ಪ್ರಕಾಶಕಿ ಮತ್ತು ಉತ್ಸವದ ಸಹ-ನಿರ್ದೇಶಕಿ ನಮಿತಾ ಗೋಖಲೆ ಅವರು ಪತ್ರಕರ್ತೆ ಮಂದಿರಾ ನಾಯರ್ ಅವರೊಂದಿಗೆ ಪಾಲ್ಗೊಳ್ಳಲಿರುವ ಸಂವಾದದಲ್ಲಿ ಗೋಖಲೆ ಅವರ ಜೀವನದ ಬಗೆಗೆ ಬೆಳಕು ಚೆಲ್ಲಲಿದ್ದಾರೆ. ಈ ಚರ್ಚೆ ನಮಿತಾ ಗೋಖಲೆ ಅವರು ಗೋಖಲೆ ಅವರ ಬಗ್ಗೆ ಬರೆದಿರುವ ಮತ್ತು ಇತರರು ಬರೆದಿರುವ ಕೃತಿಗಳಲ್ಲಿನ ಒಳನೋಟಗಳನ್ನು ಬಿಚ್ಚಿಡಲಿದ್ದಾರೆ.

ಬೂಕರ್ ಪ್ರಶಸ್ತಿ ವಿಜೇತ ಬರ್ನಾರ್ಡಿನ್ ಎವಾರಿಸ್ಟೋ ಅವರ ಆತ್ಮಚರಿತ್ರೆ- ಮ್ಯಾನಿಫೆಸ್ಟೋ: ಆನ್ ನೆವರ್ ಗಿವಿಂಗ್ ಅಪ್ ಬಗ್ಗೆ ಸಂವಾದ ಇರಲಿದೆ. ಆಕೆಯ ಜೀವನ ಮತ್ತು ವೃತ್ತಿಜೀವನದ ಸ್ಫೂರ್ತಿದಾಯಕತೆ, ಅವರು ಮುಖ್ಯವಾಹಿನಿ ವಿರುದ್ಧ ಬಂಡಾಯವೆದ್ದದ್ದು ಮತ್ತು ಅವರ ಸೃಜನಶೀಲ ಕಾರ್ಯವನ್ನು ಜಗತ್ತಿಗೆ ತೋರಿಸಲು ದಶಕಗಳಿಂದ ಹೋರಾಟ ನಡೆಸಿದ ಬಗ್ಗೆ ಚರ್ಚೆಗಳು ನಡೆಯಲಿವೆ.

ಸೇವಿಂಗ್ಸ್ ಮಾಡೋದು ಹೇಗೆ ? ಸುಧಾಮೂರ್ತಿ ಏನ್‌ ಹೇಳ್ತಾರೆ ತಿಳ್ಕೊಳ್ಳಿ

ಯಾರನ್ನೋ ಮೆಚ್ಚಿಸಲು ಬದಲಾಗಬೇಡಿ, ನೀವು ನೀವಾಗಿರಿ-ಸುಧಾಮೂರ್ತಿ
ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ಎನ್‌.ಆರ್ ನಾರಾಯಣ ಮೂರ್ತಿ ಅವರನ್ನು ವಿವಾಹವಾದ ಸುಧಾ ಅವರು 2006 ರಲ್ಲಿ ಭಾರತ ಸರ್ಕಾರದಿಂದ ಸಾಮಾಜಿಕ ಕಾರ್ಯಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಅವರು ಸ್ಫೂರ್ತಿ ಪಡೆಯಲು ಪರಿಪೂರ್ಣ ವ್ಯಕ್ತಿಯಾಗಿದ್ದಾರೆ. ಸುಧಾಮೂರ್ತಿಯವರು ಹೇಳಿಕೊಟ್ಟಿರೋ ಐದು ಜೀವನ ಪಾಠಗಳು ಇಲ್ಲಿವೆ. 

ವ್ಯಕ್ತಿತ್ವ ನೈಜವಾಗಿರಲಿ: ಇವತ್ತಿನ ದಿನಗಳಲ್ಲಿ ಯಾರೂ ಸಹ ನೈಜವಾಗಿ ಇರುವುದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸಲು, ಮತ್ತೊಬ್ಬರ ಮೆಚ್ಚುಗೆ ಗಳಿಸಲು ತಮ್ಮ ವ್ಯಕ್ತಿತ್ವ (Personality) ವನ್ನು ನಕಲಿಯಾಗಿಸಿಕೊಳ್ಳುತ್ತಾರೆ. ಆದರೆ ನಾವು ಅಸಲಿಯಾಗೇ ಇರದೇ ಇರುವ ಮೂಲಕ ನಾವು ನಮ್ಮತನವನ್ನು ಕಳೆದುಕೊಳ್ಲುತ್ತೇವೆ. ಹೀಗಾಗಿ ಎಂಥಾ ಸಂದರ್ಭದಲ್ಲೂ ನೈಜವಾಗಿರುವಂತೆ ಸುಧಾಮೂರ್ತಿಯವರು ಸಲಹೆ ನೀಡುತ್ತಾರೆ. ಸುಧಾ ಮೂರ್ತಿ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ (Woman)ಯರಲ್ಲಿ ಒಬ್ಬರಾಗಿದ್ದಾರೆ. ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಯಾಕೆಂದರೆ ಅವರು ಅತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ಧೈರ್ಯವಾಗಿ ಮಾತನಾಡಬೇಕು: ಸರಿಯೆನಿಸಿದ್ದನ್ನು ಯಾವಾಗಲೂ ಧೈರ್ಯದಿಂದ ಮಾತನಾಡಬೇಕು ಎಂದು ಸುಧಾಮೂರ್ತಿ ಹೇಳುತ್ತಾರೆ. ನಾನು ಯಾವತ್ತೂ ಬೇರೆಯವರ ಮಾತಿಗೆ ಸೊಪ್ಪು ಹಾಕದೆ ತನ್ನ ಮನಸಿನ ಮಾತನ್ನು ಹೇಳುತ್ತಿದ್ದೆ ಎಂದು ಅವರು ತಿಳಿಸುತ್ತಾರೆ. ವರದಿಗಳ ಪ್ರಕಾರ,  ಸುಧಾಮೂರ್ತಿ ಅವರು TELCO ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ, ಯಾವುದೇ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಡಿಟಿಪ್ಪಣಿ ನೀಡಲಾಗಿತ್ತು. ಇದಕ್ಕೆ ಅವರು ಜೆಆರ್‌ಡಿ ಟಾಟಾ ಅವರಿಗೆ ಪತ್ರ ಬರೆದು ಲಿಂಗ ಪಕ್ಷಪಾತದ ಸಮಸ್ಯೆಯನ್ನು ಎತ್ತಿದರು.

Follow Us:
Download App:
  • android
  • ios