Asianet Suvarna News Asianet Suvarna News

ಇನ್ಫೋಸಿಸ್‌ಗೆ 40ನೇ ವರ್ಷದ ಸಂಭ್ರಮ: ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಮ್ಮ

ಇತ್ತೀಚೆಗೆ ಇನ್ಫೋಸಿಸ್‌ನ ಸಂಸ್ಥೆಯ 40ನೇ ವರ್ಷದ ಸಂಭ್ರಮಾಚರಣೆ ನಡೆದಿದ್ದು, ಈ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಶ್ರೇಯಾ ಘೋಷಾಲ್ ಅವರ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Infosys 40 year celebration in Bangalore Sudha Murthy dancer in program for shreya ghoshal song akb
Author
First Published Dec 15, 2022, 7:56 PM IST

ಬೆಂಗಳೂರು: ಇತ್ತೀಚೆಗೆ ಇನ್ಫೋಸಿಸ್‌ನ ಸಂಸ್ಥೆಯ 40ನೇ ವರ್ಷದ ಸಂಭ್ರಮಾಚರಣೆ ನಡೆದಿದ್ದು, ಈ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಶ್ರೇಯಾ ಘೋಷಾಲ್ ಅವರ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯ 40 ನೇ ವರ್ಷದ ಸಂಭ್ರಮಾಚರಣೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಉದ್ಯೋಗಿಗಳು ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಬಹಳ ಉತ್ಸಾಹದಿಂದ ಹೆಜ್ಜೆ ಹಾಕಿದರು. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಇನ್ಫೋಸಿಸ್‌ನ ಮುಖ್ಯ ಕಚೇರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಧಾಮೂರ್ತಿ ಪತಿ ನಾರಾಯಣ ಮೂರ್ತಿ ಹಾಗೂ ಇತರ ಆರು ಜನ ಸೇರಿ ಸ್ಥಾಪಿಸಿದ ಐಟಿ ದೈತ್ಯ ಇನ್ಫೋಸಿಸ್‌ಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಗಾಯಕಿ ಶ್ರೇಯಾ ಘೋಷಲ್ (Shreya Ghoshal) ಅವರ ಫ್ಯಾನ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇಬ್ಬರು ಸಾಧಕರು ಒಂದೇ ಕಡೆ ಬರ್ಸೊರೆ ಮೆಗಾ ಹಾಡಿಗೆ ಸುಧಾಮೂರ್ತಿ ಶ್ರೇಯಾ ಘೋಷಾಲ್ ಹಾಗೂ ಇತರರೊಂದಿಗೆ ಸೇರಿಕೊಂಡು ಮನದುಂಬಿ ಹಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ ವಿಡಿಯೋದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಗೂ ಇನ್ನು ಕೆಲವರು ಜೊತೆಯಾಗಿ ಮಣಿರತ್ನಂ (Maniratnam) ನಿರ್ದೇಶನದ ಗುರು (guru) ಸಿನಿಮಾದ ಜನಪ್ರಿಯ ಗೀತೆ ಬರಸೊರೆ ಮೇಘ ಬರಸೊ  ಹಾಡನ್ನು ಹಾಡುತ್ತಿದ್ದರೆ ಸುಧಾಮೂರ್ತಿಯವರು ಬಹಳ ಉತ್ಸಾಹದಿಂದ ಈ ಹಾಡಿಗೆ ಕಾಲು ಕುಣಿಸುತ್ತಾರೆ. 51 ಸೆಕೆಂಡ್‌ಗಳ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಆದ ಸ್ವಲ್ಪ ಹೊತ್ತಿನಲ್ಲೇ ಸಾವಿರಾರು ಜನ ವೀಕ್ಷಿಸಿದ್ದಾರೆ. 

ಎರಡನೇ ತಲೆಮಾರಿಗೆ ಅವಕಾಶ ನೀಡದಿರುವ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಬೇಸರ

ಇನ್‌ಫೋಸಿಸ್ ತಳಮಟ್ಟದಿಂದ ಬೆಳೆದು ಬಂದು ಇಂದು ಬೃಹದಾಕಾರವಾಗಿ ಬೆಳೆದು ನಿಂತ ಐಟಿ ಸಂಸ್ಥೆ. 1981ರಲ್ಲಿ ನಾರಾಯಣ ಮೂರ್ತಿಯವರು ತಮ್ಮ ಪತ್ನಿ ಶ್ರೀಮತಿ ಸುಧಾಮೂರ್ತಿಯವರಿಂದ (Sudhamurthy) 10 ಸಾವಿರ ರೂಪಾಯಿ ಬಂಡವಾಳ ಸಾಲ ಪಡೆದು ಒಂದು ಬೆಡ್ ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈಗ ಈ ಸಂಸ್ಥೆ 17 ಶತಕೋಟಿ ಡಾಲರ್ ಮೊತ್ತದ ಆದಾಯದೊಂದಿಗೆ 78 ಶತಕೋಟಿ ಡಾಲರ್ ವ್ಯವಹಾರವನ್ನು ನಡೆಸುತ್ತಿದೆ. ಕಳೆದ ವರ್ಷವಷ್ಟೇ ಇನ್ಫೋಸಿಸ್ ಮಾರುಕಟ್ಟೆ ಬಂಡವಾಳದಲ್ಲಿ 100 ಬಿಲಿಯನ್ ಡಾಲರ್ ವ್ಯವಹಾರ ತಲುಪಿದ ನಾಲ್ಕನೇ ಭಾರತೀಯ ಕಂಪನಿಯಾಗಿದೆ. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಫೋಸಿಸ್ (Infosys) ನಾರಾಯಣ ಮೂರ್ತಿ ತಮ್ಮ ದೀರ್ಘ ಕಾಲದ ಚಿಂತನೆಯಾಗಿದ್ದ ಸಂಸ್ಥೆಯ ಸ್ಥಾಪಕರುಗಳ ಮಕ್ಕಳು ಅಥವಾ ಮುಂದಿನ ತಲೆಮಾರು ಯಾವುದೇ ಕಾರಣಕ್ಕೂ ಸಂಸ್ಥೆಯ ವ್ಯವಹಾರದಲ್ಲಿ ಭಾಗಿಯಾಗುವಂತಿಲ್ಲ ಎಂಬ ತಮ್ಮ ದೀರ್ಘಕಾಲದ ಚಿಂತನೆಯ ಬಗ್ಗೆ ಬೇಸರವಿದೆ ಎಂದು ಹೇಳಿದ್ದರು. ಇನ್ಫೋಸಿಸ್ ವೃತ್ತಪರತೆಯ (professionalism) ಮೇಲೆ ನಡೆಯುವ ಸಂಸ್ಥೆಯಾಗಿದ್ದು, ಸಂಸ್ಥೆಯ ಪ್ರವರ್ತಕರ ಅಥವಾ ಸಂಸ್ಥಾಪಕರ ಮಕ್ಕಳನ್ನು ಸಂಸ್ಥೆಯ ಯಾವುದೇ ನಿರ್ವಹಣಾ (management) ಹುದ್ದೆಗಳಿಂದ ದೂರ ಇಡಬೇಕು ಎಂದು ಮೂರ್ತಿ ನಂಬಿದ್ದರು. ನನ್ನ ಈ ನಿರ್ಧಾರ ಸಂಪೂರ್ಣ ತಪ್ಪಾಗಿತ್ತು. ಈ ನಂಬಿಕೆಯಿಂದಾಗಿ ಈ ಸಂಸ್ಥೆಯನ್ನು ನಾನು ಕಾನೂನುಬದ್ಧ ಪ್ರತಿಭೆಗಳಿಗೆ ಅವಕಾಶ ನೀಡದೇ ವಂಚಿಸುತ್ತಿದೆ. ಹೀಗಾಗಿ ನಾನು ಈ ನನ್ನ ಈ ನಂಬಿಕೆ ನಿರ್ಧಾರಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ಅವನು ಅಥವಾ ಅವಳು ಯಾರೇ ಆಗಿರಬಹುದು ಹುದ್ದೆಯೊಂದಕ್ಕೆ ಸಮರ್ಥರು ಎನಿಸಿದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು ಎಂದು ಇನ್ಫಿ ನಾರಾಯಣ ಮೂರ್ತಿ (Narayana Murthy) ಹೇಳಿದ್ದರು.

Bengaluru Tech Summit: ಇನ್ಫೋಸಿಸ್‌, ಇಂಟೆಲ್‌ಗೆ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿ ಪ್ರದಾನ


 

Follow Us:
Download App:
  • android
  • ios