Asianet Suvarna News Asianet Suvarna News

ಸೇವಿಂಗ್ಸ್ ಮಾಡೋದು ಹೇಗೆ ? ಸುಧಾಮೂರ್ತಿ ಏನ್‌ ಹೇಳ್ತಾರೆ ತಿಳ್ಕೊಳ್ಳಿ

ಸುಧಾ ಮೂರ್ತಿಯವರು ಇಂದಿನ ಪೀಳಿಗೆಗೆ ಉಲ್ಲೇಖ ಪುಸ್ತಕ. ಅದು ಪೋಷಕರ ಸಲಹೆಯಾಗಿರಲಿ ಅಥವಾ ಜೀವನದ ಸಮಸ್ಯೆಗಳಿಗೆ ಉತ್ತರವಾಗಿರಲಿ. ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದನ್ನು ವಿವರಿಸುವ ವಿಶಿಷ್ಟ ವಿಧಾನವನ್ನು ಸುಧಾ ಮೂರ್ತಿ ಹೊಂದಿದ್ದಾರೆ. ಹಾಗಿದ್ರೆ ಸೇವಿಂಗ್ಸ್ ಮಾಡೋದು ಹೇಗೆ ? ದುಡ್ಡನ್ನು ಹೇಗೆ ಉಳಿಸ್ಬೇಕು ಅನ್ನೋ ಬಗ್ಗೆ ಸುಧಾಮೂರ್ತಿಯವರು ಏನ್ ಹೇಳ್ತಾರೆ ತಿಳಿಯೋಣ.

Sudha Murthys Lessons On Money And Monetary Values Vin
Author
First Published Oct 5, 2022, 12:59 PM IST

ಸುಧಾಮೂರ್ತಿಯವರ ಜೀವನ ಕಥೆ, ಜೀವಾನುಭವ ಜೀವನದೆಡೆಗಿನ ದೃಷ್ಟಿಕೋನವನ್ನು ಬದಲಾಯಿಸುತ್ತದೆ. 1950ರಲ್ಲಿ ಜನಿಸಿದ ಸುಧಾಮೂರ್ತಿಯವರು, ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿಯವರ ಪತ್ನಿ. ಇಂಜಿನಿಯರ್, ಸಮಾಜ ಸೇವಕರು, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ಪಡೆದಿದ್ದಾರೆ. ಜೀವನದೆಡೆಗಿನ ಸುಧಾಮೂರ್ತಿಯವರ ದೃಷ್ಟಿಕೋನ ವಿಭಿನ್ನವಾದುದು. ಅವರು ಮಕ್ಕಳು, ಪೋಷಕರು ಹೇಗಿರಬೇಕು ಎಂಬುದಕ್ಕೆ ನಿರ್ಧಿಷ್ಟ ಮಾರ್ಗಸೂಚಿಗಳನ್ನು ನೀಡುತ್ತಾರೆ. ಹಣವನ್ನು ಹೇಗೆ ಉಳಿಸಬೇಕು ಎಂಬ ಬಗ್ಗೆಯೂ ಅವರು ಹಲವು ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಸರಳ ಜೀವನ ನಡೆಸುವ ಸುಧಾಮೂರ್ತಿ
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರೂ ಸಹ ಸುಧಾಮೂರ್ತಿಯವರು ಸರಳ ಜೀವನಶೈಲಿ (Lifestyle)ಯನ್ನು ಅಳವಡಿಸಿಕೊಂಡಿದ್ದಾರೆ. ಸದಾ ಸರಳ (Simple)ವಾದ ಸೀರೆಯನ್ನುಟು, ಮಲ್ಲಿಗೆ ಮುಡಿದು ಹಸನ್ಮುಖರಾಗಿ ಕಾಣಿಸಿಕೊಳ್ಳುತ್ತಾರೆ. ಶ್ರೀಮಂತಿಕೆಯಿದ್ದರೂ ಆಡಂಬರವಿಲ್ಲದೆ ಸರಳ ಜೀವನ ನಡೆಸುವ ಸುಧಾಮೂರ್ತಿ ಜೀವನ ಕ್ರಮ ಎಲ್ಲರಿಗೂ ಮಾದರಿಯಾಗುವಂಥದ್ದು.

ಮಕ್ಕಳ ಕೈಯಲ್ಲಿ ಮೊಬೈಲ್‌, ಸುಧಾಮೂರ್ತಿಯವರು ಪೋಷಕರಿಗೆ ಹೇಳುವ ಕಿವಿಮಾತೇನು ?

ಸುಧಾಮೂರ್ತಿ ಹೇಳಿದ ಹುಟ್ಟುಹಬ್ಬದ ಕಥೆ
ಶಾಲೆಯ ಕಾರ್ಯಕ್ರಮವೊಂದರಲ್ಲಿ, ಸುಧಾ ಮೂರ್ತಿ ತಮ್ಮ ಮಗನ ಬಗ್ಗೆ ಆಸಕ್ತಿದಾಯಕ ಕಥೆಯೊಂದನ್ನು ಹೇಳಿಕೊಂಡರು. ಈ ಕಥೆಯು ಪ್ರೇಕ್ಷಕರನ್ನು ಬೆರಗುಗೊಳಿಸಿತು. ಪೋಷಕರು (Parents) ಮತ್ತು ಮಕ್ಕಳು (Children) ಈ ಕಥೆಯಿಂದ ಪ್ರೇರಿತರಾಗಬಹುದಾಗಿದೆ. ಶಾಲೆಗೆ ಹೋಗುವ ಸಮಯದಲ್ಲಿ ಸುಧಾಮೂರ್ತಿಯವರ ಮಗ ಅದ್ದೂರಿ ಹುಟ್ಟುಹಬ್ಬವನ್ನು (Birthday) ಆಯೋಜಿಸುವಂತೆ ಕೇಳಿಕೊಂಡನು. ಆತ ಫ್ರೆಂಡ್ಸ್‌ನ್ನೆಲ್ಲಾ ಕರೆಸಿ ದೊಡ್ಡ ಪಾರ್ಟಿ ಮಾಡಲು ಬಯಸಿದ್ದನು. ಆದರೆ ಸುಧಾಮೂರ್ತಿಯವರು, ತನ್ನ ಮಗನಿಗೆ ಸಣ್ಣ ಪಾರ್ಟಿ ಮಾಡಿ ದೊಡ್ಡ ಪಾರ್ಟಿಗೆ ಬಳಸಬಹುದಾದ ಹಣವನ್ನು (Money) ಅವರ ಕುಟುಂಬದ ಡ್ರೈವರ್‌ಗೆ ನೀಡುವಂತೆ ಸೂಚಿಸಿದರು. ಇದರಿಂದ ಅವರ ಮಕ್ಕಳು ಶಿಕ್ಷಣ (Education) ಪಡೆಯುತ್ತಾರೆ ಎಂಬುದುನ್ನು ತಿಳಿಸಿದರು. 50,000 ರೂಪಾಯಿ ವೆಚ್ಚವಾಗಬಹುದಾದ ಕಾರ್ಯಕ್ರಮ 5,000 ರೂಪಾಯಿಗಳಿಂದ ನಿರ್ವಹಿಸಲಾಯಿತು ಮತ್ತು ಉಳಿದ ಹಣವನ್ನು ನಿಜವಾದ, ಉತ್ತಮ ಉದ್ದೇಶಕ್ಕಾಗಿ ಬಳಸಲಾಯಿತು.

ಪಾಠವು ಮಗನಿಗೆ ಹೇಗೆ ಸಹಾಯ ಮಾಡಿತು ?
ಈ ಪಾಲನೆಯ ಪಾಠವು ತನ್ನ ಮಗನೊಂದಿಗೆ ಉಳಿಯಿತು ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳ ನಂತರ ಜನ್ಮದಿನದಂದು ತನ್ನ ಮಗ ವಿದ್ಯಾರ್ಥಿವೇತನದ ಹಣವನ್ನು  2001ರಲ್ಲಿ ಭಾರತದಲ್ಲಿ ನಡೆದ ಸಂಸತ್ತಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ನೀಡಿರುವ ಬಗ್ಗೆ ಹೇಳಿದರು. ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ಪೋಷಕರು ಮಾಡಬೇಕಾದ ಕೆಲಸವಾಗಿದೆ. ಮಕ್ಕಳು ಹಣದ ಮೇಲೆ ಸ್ವಾರ್ಥವನ್ನು ಬೆಳೆಸಲು ಬಿಡಬಾರದು ಎಂದು ಸುಧಾಮೂರ್ತಿ ಹೇಳುತ್ತಾರೆ.

Parenting Tips: ಮಕ್ಕಳನ್ನು ಹೇಗೆ ಬೆಳೆಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ

ಮಕ್ಕಳಿಗೆ ಹಣದ ಬಗ್ಗೆ ಯಾಕೆ ಕಲಿಸಬೇಕು?
ಹಣವು ತುಂಬಾ ಗೊಂದಲಮಯವಾದ ಅಂಶವಾಗಿದೆ. ಒಂದು ಕಡೆ ದುರಹಂಕಾರ ಮತ್ತು ದುರಾಸೆ ವ್ಯಕ್ತಿಯನ್ನು ಕುರುಡನನ್ನಾಗಿ ಮಾಡಬಹುದು. ಮತ್ತೊಂದೆಡೆ ಅದು ತನಗಿಂತ ಹೆಚ್ಚು ಹೊಂದಿರುವವರ ಬಗ್ಗೆ ದ್ವೇಷ (Hate)ವನ್ನು ಹುಟ್ಟು ಹಾಕುವಂತೆ ಮಾಡುತ್ತದೆ. ಅನೇಕ ಬಾರಿ ಮಕ್ಕಳು ತಮ್ಮ ಮತ್ತು ಅವರ ಸ್ನೇಹಿತರ ನಡುವಿನ ಸ್ಟೇಟಸ್‌ನ್ನು ಇಲ್ಲವಾಗಿಸಲು ಒಲವು ತೋರುತ್ತಾರೆ. ಹೀಗಿರುವಾಗ ತಮ್ಮ ಪೋಷಕರ ಬಳಿ ಹೆಚ್ಚು ಹಣವಿಲ್ಲದಿದ್ದರೂ ದುಂದುವೆಚ್ಚ ಮಾಡಲು ಮುಂದಾಗುತ್ತಾರೆ. ಆದ್ದರಿಂದ ಮಗುವಿನಲ್ಲಿ ಈ ವಿಷಯಗಳನ್ನು ಪರಿಶೀಲಿಸುವುದು ಅತ್ಯಗತ್ಯ ಮತ್ತು ನಿಮ್ಮ ಮಗುವಿಗೆ ಹಣದ ಬಗ್ಗೆ ಸರಿಯಾದ ಜ್ಞಾನವಿದೆ (Knowledge) ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಸುಧಾಮೂರ್ತಿ ಸಲಹೆ ನೀಡುತ್ತಾರೆ.

ಹಣ ವ್ಯಕ್ತಿಯನ್ನು ಅಸಾಮಾನ್ಯರನ್ನಾಗಿ ಮಾಡುವುದಿಲ್ಲ
ಮೂರ್ತಿಯವರ ಮಾರ್ಗದರ್ಶಿ ಪುಸ್ತಕದ ಮತ್ತೊಂದು ಸುವರ್ಣ ಸಲಹೆಯೆಂದರೆ ಹಣವು ಯಾರನ್ನಾದರೂ ಅಸಾಮಾನ್ಯರನ್ನಾಗಿ ಮಾಡುವುದಿಲ್ಲ. ಹಣ ಹೊಂದುವುದು ಅಥವಾ ಇಲ್ಲದಿರುವುದು ಒಬ್ಬರು ಚಿಂತಿಸಬೇಕಾದ ವಿಷಯವಲ್ಲ. ಒಬ್ಬ ವ್ಯಕ್ತಿಗೆ ಹೆಚ್ಚು ಮುಖ್ಯವಾಗಬೇಕಾದದ್ದು ಮಾನವೀಯ ಮೌಲ್ಯಗಳಾದ ಸಹಾನುಭೂತಿ, ದಯೆ, ಪ್ರೀತಿ, ಯಾವುದೇ ತಾರತಮ್ಯವಿಲ್ಲದೆ ಇತರರ ಪಕ್ಕದಲ್ಲಿ ನಿಲ್ಲುವುದು ಮೊದಲಾದವು. ಹಣ ಇದ್ಯಾವುದಕ್ಕಿಂತಲೂ ಮಿಗಿಲಾಗಿಲ್ಲ ಎಂದು ಸುಧಾಮೂರ್ತಿ ತಿಳಿಸುತ್ತಾರೆ.

Follow Us:
Download App:
  • android
  • ios