ಇದು ಹ್ಯೂಮನ್ಸ್ ಆಫ್ ಬಾಂಬೇ ಎಂಬ ಫೇಸ್‌ಬುಕ್‌ ಪೇಜ್‌ನ ಒಡತಿಯ ಗ್ರ್ಯಾಂಡ್ ಸಕ್ಸಸ್‌ನ ಕತೆ.

ಆಕೆಯ ಹೆಸರು ಕರಿಷ್ಮಾ ಮೆಹ್ತಾ. ವಯಸ್ಸು ಇಪ್ಪತ್ತಮೂರು. ಈ ಸಣ್ಣ ವಯಸ್ಸಿನಲ್ಲೇ ಹ್ಯೂಮನ್ಸ್ ಆಫ್ ಬಾಂಬೇ ಎಂಬ ಸಕ್ಸಸ್‌ಫುಲ್ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿ, ಅದಕ್ಕೆ ಲಕ್ಷಾಂತರ ಫಾಲೋವರುಗಳನ್ನೂ ಸಂಪಾದಿಸಿ, ಅದರಲ್ಲಿನ ಹಲವು ಸ್ಟೋರಿಗಳು ವೈರಲ್ ಆಗುವಂತೆ ಮಾಡಿದಾಕೆ.

ಈಕೆ ಯಾವತ್ತೂ ಕತೆಗಳ ಬೆನ್ನು ಹತ್ತಿ ಹೋದವಳು. ಕತೆಗಳೇ ಈಕೆಯನ್ನು ಕಾಪಾಡಿದವು. ಈಕೆಯೇ ಕತೆಯಾದವಳು.

ಇಂದಿಗೂ ಮುಂಬಯಿಯ ಇಂಡಿಯಾ ಗೇಟ್ ಬಳಿ ಆಕೆಯನ್ನು ನಿಲ್ಲಿಸಿ ಫೋಟೋ ತೆಗೆಯಲು ಹೋದರೆ ಅವಳಿಗೆ ಅನ್‌ಈಸಿ ಎಂಬಂತೆ ಫೀಲಾಗುತ್ತದೆ. ಕಾರಣ ಬೇರೇನೂ ಅಲ್ಲ, ಹಿಂದೊಮ್ಮೆ ಆಕೆ ಅಲ್ಲಿ ಇನ್ಯಾರೋ ಅಪರಿಚಿತ ವ್ಯಕ್ತಿಯನ್ನು ನಿಲ್ಲಿಸಿ ಫೋಟೋ ತೆಗೆಯುತ್ತ ಶೂಟಿಂಗ್ ಮಾಡುತ್ತಿದ್ದಳು. ಅದನ್ನು ನೋಡಲು ನೂರಾರು ಜನರು ಸೇರಿಬಿಟ್ಟಿದ್ದರು. ಟ್ರಾಫಿಕ್ ಅಡಚಣೆಯಾಗಿ ನಿಂತು ಕೋಲಾಹಲವೇ ಆಗಿತ್ತು. ಪೊಲೀಸರು ಆಕೆಯನ್ನು ಬಂಧಿಸಲು ಮುಂದಾಗಿದ್ದರು. ಕಡೆಗೆ ಚಂದದ ಸ್ಮೈಲ್ ಕೊಟ್ಟು, ಪೊಲೀಸರನ್ನು ಕನ್‌ವಿನ್ಸ್ ಮಾಡಬೇಕಾದರೆ ಆಕೆಗೆ ಸಾಕುಬೇಕಾಗಿತ್ತು. ಹೀಗಾಗಿ ಆಕೆ ಇಂಡಿಯಾ ಗೇಟ್ ಎಂದರೆ ಇಂದಿಗೂ ಬೆಚ್ಚಿ ಬೀಳುತ್ತಾಳೆ.
ಇರಲಿ. ಆಕೆಯ ಹ್ಯೂಮನ್ಸ್ ಆಫ್ ಬಾಂಬೇ ಫೇಸ್‌ಬುಕ್ ಪೇಜ್ ಬಗ್ಗೆ ಗೊತ್ತಿಲ್ಲದವರಿಗೆ ಇಲ್ಲೊಂದು ಮಾಹಿತಿ: ಇದು ಒಂದು ಫೇಸ್‌ಬುಕ್ ಪೇಜ್. ಕರಿಷ್ಮಾ ಮೆಹ್ತಾ ಒಬ್ಬಾಕೆ ಮಾತ್ರವೇ ಇದನ್ನು ಹ್ಯಾಂಡಲ್ ಮಾಡುವವಳು. ಪ್ರತಿದಿನ ಈಕೆ ಹತ್ತಾರು ಅಪರಿಚಿತರನ್ನು ಮುಂಬಯಿಯ ಬೀದಿಗಳಲ್ಲಿ ಭೇಟಿ ಆಗುತ್ತಾಳೆ. ಅವರನ್ನು ಮಾತಾಡಿಸುತ್ತಾಳೆ. ಕೆಲವರಾದರೂ ತಮ್ಮ ಕತೆ ಹೇಳುತ್ತಾರೆ. ಅದನ್ನು ಈಕೆ ಬರೆದು ಅವರ ಫೋಟೋ ಸಮೇತ ಫೆಸ್‌ಬುಕ್ ಪೇಜ್‌ನಲ್ಲಿ ಹಾಕುತ್ತಾಳೆ. ಇದನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ.

ಸ್ಫೂರ್ತಿಯ ಸೆಲೆ: ಕೋಚಿಂಗ್ ಪಡೆಯದೇ IAS ರ್ಯಾಂಕ್ ಗಳಿಸಿದ ಧೀರೆ ...

ಹ್ಯೂಮನ್ಸ್ ಆಫ್ ಬಾಂಬೇಯ ಇಪೆಕ್ಟ್ ಬಹು ದೊಡ್ಡದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನ ಇದನ್ನು ನೋಡುತ್ತಾರೆ. ಇತ್ತೀಚೆಗೆ ಒಬ್ಬಾಕೆಯ ಮಗನ ಶಸ್ತ್ರಚಿಕಿತ್ಸೆಗೆ 5 ಲಕ್ಷ ರೂಪಾಯಿ ಹಣ ಬೇಕಾಗಿತ್ತು. ಈಕೆ ಅವಳ ಫೋಟೋ ಹಾಕಿ ಆ ಕತೆಯನ್ನು ಬರೆದಳು. ಒಂದೇ ದಿನದಲ್ಲಿ, ಆರೂವರೆ ಲಕ್ಷ ರೂಪಾಯಿ ಹಣ ಜಮೆಯಾಯಿತಂತೆ. ಕಡೆಗೆ ಪ್ರತಿಕ್ರಿಯೆ ತಡೆಯಲಾಗದೆ ಆ ಪೋಸ್ಟನ್ನೇ ಆಕೆ ಡಿಲೀಟ್ ಮಾಡಬೇಕಾಗಿ ಬಂತು. ಇಂಥ ಹಲವು ಘಟನೆಗಳಾಗಿವೆ. ಇವು ತನ್ನ ಜೀವನದ ಅತ್ಯಂತ ಉಲ್ಲಾಸದ ಕ್ಷಣಗಳು ಎನ್ನುತ್ತಾಳೆ ಕರಿಷ್ಮಾ. 

ಇಲ್ಲಿ ಸ್ಪೂರ್ತಿಯ ಕತೆಗಳಿವೆ, ಕಣ್ಣೀರಿನ ಕತೆಗಳಿವೆ. ದಿಟ್ಟತನ, ಮುಜುಗರ, ಕಸಿವಿಸಿ, ಸಂತೋಷ, ಆನಂದ, ಕಹಿ- ಸಿಹಿ, ಹೀಗೆ ಎಲ್ಲ ಬಗೆಯ ಕತೆಗಳಿವೆ. ಪ್ರತಿಯೊಬ್ಬ ಮನುಷ್ಯನೂ ತನ್ನೊಳಗೊಂದು ಕತೆಯನ್ನು ಹೊತ್ತುಕೊಂಡು ಓಡಾಡುತ್ತಿರುತ್ತಾನೆ, ಕೆಲವರು ಹೇಳುತ್ತಾರೆ, ಕೆಲವರು ಹೇಳುವುದಿಲ್ಲ. ಕರಿಷ್ಮಾ ತನ್ನ ಕ್ಯಾಮೆರಾದ ಮುಂದೆ ಅವರನ್ನು ನಿಲ್ಲಿಸಿ ಸ್ವೀಟ್ ಸ್ಮೈಲ್ ನೀಡಿ, 'ನಿಮ್ಮ ಬದುಕಿನ ಅತ್ಯಂತ ಸವಿಯಾದ ಕ್ಷಣ ಯಾವುದು ಹೇಳಿ?' ಎಂದು ಕೇಳುತ್ತಾಳೆ. ಎದುರಿಗೆ ಇರುವಾತನ ಮುಖ ಅರಳುತ್ತದೆ. ಆತ ತನ್ನ ಕತೆ ಆರಂಭಿಸುತ್ತಾನೆ. ಕರಿಷ್ಮಾ ಬಳಸುವ ಬಲು ಸುಲಭವಾದ ತಂತ್ರ ಇದು. ಇದನ್ನೆಲ್ಲ ಆಕೆ ಅನುಭವದ ಮೂಲಕವೇ ಕಲಿತುಕೊಂಡವಳು.   
 

ಕರಿಷ್ಮಾಳ ಈ ಕನಸಿಗೆ ಮೂಲ ಹ್ಯೂಮನ್ಸ್ ಆಫ್ ನ್ಯೂಯಾರ್ಕ್ ಎಂಬ ಫೇಸ್‌ಬುಕ್ ಪುಟ. ಇದು ಅಮೆರಿಕ ನ್ಯೂಯಾರ್ಕ್ ನಗರದಲ್ಲಿ ಸ್ಟಾಂಟನ್ ಬ್ರಾಂಡನ್ ಎಂಬ ವೃತ್ತಿಪರ ಛಾಯಾಗ್ರಾಹಕ ಆರಂಭಿಸಿದ ಪುಟ. ಅದಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕರಿಷ್ಮಾ ಈ ಪುಟವನ್ನು ಫಾಲೋ ಮಾಡುತ್ತಿದ್ದಳು. ಆಗ ಕರಿಷ್ಮಾ ಇಂಗ್ಲೆಂಡ್‌ನಲ್ಲಿ ಪದವಿ ಮಾಡುತ್ತಿದ್ದಳು. ಪದವಿ ಮುಗಿಸಿ ತಾಯ್ನೆಲ ಬಾಂಬೇಗೆ ಬಂದಾಗ, ಮುಂದೇನು ಮಾಡುವುದು ಎಂದು ಆಕೆಗೆ ಗೊತ್ತಿರಲೇ ಇಲ್ಲ. ಹ್ಯೂಮನ್ಸ್ ಆಫ್‌ ನ್ಯೂಯಾರ್ಕ್‌ನ ಸ್ಫೂರ್ತಿ ತಲೆಯಲ್ಲಿತ್ತು. ಅದೇ ಸ್ಫೂರ್ತಿಯಿಂದ ತನ್ನ ಆರ್ಡಿನರಿ ಕ್ಯಾಮೆರಾ ತೆಗೆದುಕೊಂಡು  ಬೀದಿಗೆ ಇಳಿದಳು ಕರಿಷ್ಮಾ.

 

ನಟಿ ದಿಶಾ ಪಠಾನಿಯ ಅಕ್ಕ ಆರ್ಮಿ ಆಫೀಸರ್: ಇವ್ರೇ ನೋಡಿ ಖುಷ್ಬೂ ಪಠಾನಿ ...

ಹಾಗೆಂದು ಆಕೆಯ ಮೊದಲ ಹ್ಯೂಮನ್ ಕತೆ ಸಕ್ಸಸ್‌ಫುಲ್ ಆಗಲಿಲ್ಲ. ಅದು 2014ರ ಒಂದು ಮುಂಜಾನೆ. ಹ್ಯೂಮನ್ಸ್ ಆಫ್ ಬಾಂಬೇ ಎಂಬ ಹೆಸರಿಟ್ಟು ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿದ ಕರಿಷ್ಮಾ ದಾದರ್ನಲ್ಲಿ ಬೀದಿಗೆ ಇಳಿದಳು. ಮೊದಲಿಗೆ ಪಿಂಕ್ ಡ್ರೆಸ್ ಧರಿಸಿದ ಒಬ್ಬ ಚಂದದ ಹುಡುಗಿಯನ್ನು ಭೇಟಿಯಾದಳು. ಆದರೆ ಆಕೆಯ ಫೋಟೋಗ್ರಾಫಿ ಮಾಡಲು ಮುಂದಾದಾಗ ಆಕೆಯ ತಂದೆತಾಯಿ ಕಠಿಣವಾಗಿ 'ನೋ' ಎಂದುಬಿಟ್ಟರು. ಇದು ಮೊದಲ ಕತೆ! 
ಅದಾಗಿ ಎರಡುವರೆ ವರ್ಷಗಳು ಕಳೆದಿವೆ. ಈಗ ಆಕೆಯ ಪೇಜ್‌ನಲ್ಲಿ ಸಾವಿರಕ್ಕೂ ಮಿಕ್ಕಿ ಕತೆಗಳಿವೆ. ಫೋಟೋಗಳಿವೆ. ಲಕ್ಷಾಮತರ ಫಾಲೋರ್‌ಗಳಿದ್ದಾರೆ. ಯಾರಿಗಾದರೂ ಸಹಾಯ ಬೇಕೆಂದು ಕೇಳಿದರೆ ದಿನ‌ದಲ್ಲೇ ಲಕ್ಷಾಂತರ ಸಂಗ್ರಹಿಸಬಹುದು. ಆದರೆ ಕರಿಷ್ಮಾ ಆ ತನ್ನ ಪುಟದಿಂದ ಒಂದು ಪೈಸೆ ಲಾಭವನ್ನೂ ಮಾಡಿಕೊಂಡಿಲ್ಲ. ಬದಲಾಗಿ ಆಕೆಯ ಆದಾಯವೆಲ್ಲ ಬೇರೆ ಕಡೆ ಮಾಡುವ ಫ್ರೀಲಾನ್ಸ್ ಜರ್ನಲಿಸಂನಿಂದ ಬರುತ್ತದೆ. ಇತ್ತೀಚೆಗೆ ಆಕೆ ಹ್ಯೂಮನ್ಸ್ ಆಫ್ ಬಾಂಬೇಯ ನೂರಾರು ಕತೆಗಳನ್ನು ಆಯ್ದು ಅದೇ ಹೆಸರಿನಲ್ಲಿ ಒಂದು ಪುಸ್ತಕ ತಂದಿದ್ದಾಳೆ. ಬಹುಶಃ ಈ ಪುಸ್ತಕದಿಂದ ಬರಬಹುದಾದ ಆದಾಯವೇ ಇದರಿಂದ ಆಕೆಗೆ ಸಿಗುವ ಮೊದಲ ಲಾಭ.

ಈ ಪುಟದಲ್ಲಿ ಮಿಲಿಂದ್ ಸೋಮನ್‌ರಂಥ ಸೆಲೆಬ್ರಿಟಿಗಳೂ ಕಾಣಿಸಿಕೊಂಡಿದ್ದಾರೆ; ಅಪ್ಪಟ ಸಾಮಾನ್ಯ ಮನುಷ್ಯರೂ ಇದ್ದಾರೆ. ಎಲ್ಲರ ಕತೆಗಳೂ ಮನೋಹರವಾಗಿವೆ. ಸ್ಫೂರ್ತಿ ತುಂಬುವಂತಿವೆ, ಕಣ್ಣೀರು ಬರಿಸುವಂತಿವೆ, ಎಂದರೆ ಸಾಲದು. ನಮ್ಮ ನಿಮ್ಮ ಕತೆಗಳೇ ಅಲ್ಲಿ ಜೀವ ತಾಳಿ ಬಂದಂತಿವೆ. ನಿಮ್ಮೊಳಗಿನ ಒಂದು ತಂತಿಯನ್ನು ಅವು ಮೀಟುವುದು ಖಂಡಿತ.   

ಮನೆ ಮನೆ ಮುಸುರೆ ತಿಕ್ಕುತ್ತಿದ್ದವಳು ಈಗ ಮಿಸ್ ಇಂಡಿಯಾ ರನ್ನರ್ ಅಪ್ ...