ಐಶಾರಾಮಿ ಜೀವನನಡೆಸಿದರೂ(Luxury Life) ಒತ್ತಡ(Stress), ಆತಂಕ(Anxiety), ಜಂಜಾಟ, ಒಂಟಿತನ(Loneliness), ಅಸಮಾಧಾನ ಮನುಷ್ಯನ ಬೆನ್ನ ಮೇಲೆ ಕೂತಿರುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಂತ ಇದರಿಂದ ಪಾರಾಗಲು ಸ್ವಪ್ರಯತ್ನಗಳೂ ನಡೆಯುತ್ತಿರಬೇಕು. ಮಾನಸಿಕವಾಗಿ(Mentally) ಇದಕ್ಕೆ ಸಿದ್ಧರಾಗಲು ಹಲವು ದಾರಿಗಳಿವೆ. ಅದು ಹೇಗೆ ಈ ಬಗ್ಗೆ ಮಾಹಿತಿ ಇಲ್ಲಿದೆ.
ಹಲವು ಸೌಕರ್ಯಗಳು ಹೊಂದಿರುವ ಐಶಾರಾಮಿ(Luxury) ಜೀವನ ಎಲ್ಲೆಡೆ ಕಾಮನ್ ಆಗಿದೆ. ಆದರೆ ಎಷ್ಟೇ ಅದ್ಧೂರಿ ಜೀವನ ನಡೆಸಿದರೂ ಒತ್ತಡ(Stress), ಆತಂಕ(Anxiety), ಜಂಜಾಟ, ಒಂಟಿತನ(Loneliness), ಅಸಮಾಧಾನ ಮನುಷ್ಯನ ಬೆನ್ನ ಮೇಲೆ ಕೂತಿರುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇರುವವರೆಗೂ ಅನುಭವಿಸಿಯೇ ಹೋಗಬೇಕು. ಹಾಗಂತ ಇದರಿಂದ ಪಾರಾಗಲು ಸ್ವಪ್ರಯತ್ನಗಳೂ(Self motivation) ನಡೆಯುತ್ತಿರಬೇಕು. ಮಾನಸಿಕವಾಗಿ(Mentally) ಇದಕ್ಕೆ ಸಿದ್ಧರಾಗಲು ಹಲವು ದಾರಿಗಳಿವೆ. ಅದು ಹೇಗೆ ಈ ಬಗ್ಗೆ ಮಾಹಿತಿ ಇಲ್ಲಿದೆ.
ಮನುಷ್ಯವೆಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ಹಾಗಂತ ಅದರಿಂದ ದೂರ ಸರಿಯಲು ಆಗುವುದಿಲ್ಲ. ಅನುಭವಿಸಿಯೇ ತೀರಬೇಕು. ಮಾನಸಿಕವಾಗಿ ಇದಕ್ಕೆ ಸಿದ್ಧರಿದ್ದರೆ ಮಾತ್ರ ಎಲ್ಲವನ್ನೂ ಮೆಟ್ಟಿನಿಂತು ಮುನ್ನಡೆಯಲು ಸಾಧ್ಯ. ವಂಯಕ್ತಿಕ ಬದ್ಧತೆಗಳು(Personal commitment), ಪಟ್ಟುಬಿಡದ ಡೆಡ್‌ಲೈನ್‌ಗಳು(Deadline) ಹೀಗೆ ಹಲವು ನಮ್ಮ ಸ್ವಂತದ್ದಾಗಿರುತ್ತೆ. ಈ ಎಲ್ಲಾ ಸಮಸ್ಯೆಗಳ ನಡುವೆ ನಮಗೆ ನಾವು ಟೈಂ(Time) ಎಷ್ಟರಮಟ್ಟಿಗೆ ಕೊಟ್ಟುಕೊಳ್ಳುತ್ತಿದ್ದೇವೆ ಎಂಬುದು ಮುಖ್ಯವಾಗುತ್ತೆ. ನಮಗೆ ನಾವು ಟೈಂ ಕೊಟ್ಟುಕೊಳ್ಳುವುದು ಅಷ್ಟು ಮುಖ್ಯವಾ ಎಂದು ಪ್ರಶ್ನೆಗಳು ಬಂದಾಗ ಅದಕ್ಕೆ ಉತ್ತರ ಹೌದು. ಹಾಗೆ ಮಾಡಿಲ್ಲವೆಂದರೆ ನಮಗೆ ನಾವು ಕುತ್ತು ತಂದುಕೊಂಡಂತೆ ಲೆಕ್ಕ. ಅಸಂತೋಷ(Unhappy), ಆಯಸ ನಡುವೆ ನಮ್ಮ ಜೀವನದಲ್ಲಿ ನಮ್ಮ ಆದ್ಯತೆ(Priority) ಎಷ್ಟು ಮುಖ್ಯ ಎಂಬುದೇ ಆಗಿದೆ. ಈ ಬಗ್ಗೆ ಕೆಲ ಟಿಪ್ಸ್ ಇಲ್ಲಿದೆ.
Quit Smoking: ಧಮ್ ಎಳೆಯೋದು ಬಿಡ್ಬೇಕೆಂದ್ರೆ ಈ ಯೋಗ ಮಾಡಿ
ದೇಹಕ್ಕೆ ಟೈಂ ಕೊಡಿ
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ದೇಹ ದುಡಿದಿರುತ್ತೆ. ಒಂದಲ್ಲ ಒಂದು ವಿಷಯಕ್ಕೆ ಒತ್ತಡ(Stress) ಇದ್ದೇ ಇರುತ್ತೆ. ಕೈ ಕಾಲುಗಳು ಸುಮ್ಮನಿರುವುದಿಲ್ಲ ಅದು ಇದು ಎಂದು ಕೆಲಸ ಮಾಡುತ್ತಿರುತ್ತೇವೆ. ಮನಸ್ಸು ಕೂಡ ಏನಾದರೊಂದು ಯೋಚನೆಯಲ್ಲಿ ತೊಡಗಿರುತ್ತೆ. ಮಾನಸಿಕವಾಗಿ(Mentally) ಹಾಗೂ ದೈಹಿಕವಾಗಿ(Physically) ಬ್ಯುಸಿಯಾದಲ್ಲಿ ರೆಸ್ಟ್(Rest) ಎಂಬುದು ಎಲ್ಲಿಯ ಮಾತು. ನಮಗೆ ನಾವು ಟೈಂ ಕೊಟ್ಟುಕೊಳ್ಳುವುದು ಯಾವಾಗ. ರಾತ್ರಿಯಾದರೆ ಉಸ್! ಎಂದು ಮಲಗಿದರೆ ಮಾರನೇ ದಿನ ಅದೇ ರಾಗ ಅದೇ ಹಾಡು. ಹೀಗಾದರೆ ನಮ್ಮ ಬಗ್ಗೆ ಯೋಚಿಸುವುದು ಯಾವಾಗ? ಹಾಗಾಗಿ ಇರುವ ಸಮಯದಲ್ಲಿ ಸ್ವತಃ ಟೈಂ ನೀಡುವುದು ಬಹಳ ಮುಖ್ಯ. ನಮಗಿಷ್ಟವಾದ ದೈಹಿಕ ಚಟುವಟಿಕೆಗಳು(Physical activities), ಆಟವಾಡುವುದು(Sports), ಸಂಗೀತ(Music) ಕೇಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಫಿಟ್(Fit) ಆಗಿರಲು ಸಾಧ್ಯ. ಉತ್ತಮ ರೀತಿಯ ಆಹಾರ ಸೇವನೆ, ಆರೋಗ್ಯಕರ ಜೀವನ ಶೈಲಿ, 6 ರಿಂದ 9ಗಂಟೆಗಳ ಕಾಲ ರಾತ್ರಿ ಮಲಗುವುದು, ಬೇಡದ ವಿಷಯಗಳಿಂದ ದೂರ ಇರುವುದು ಸೂಕ್ತ. ಯಾಕೆಂದರೆ ಅವು ನಮ್ಮ ಆರೋಗ್ಯ(Health) ಹಾಗೂ ಮನಸ್ಥತಿಗಳ ಮೇಲೆ ಭಾರಿ ಪರಿಣಾಮ ಬೀರುತ್ತವೆ.
ಕಾಲಕ್ಕೆ ತಕ್ಕಂತೆ ಬದಲಾಗುವುದು
ಕೆಲವರು ಅಜ್ಜಿಯಾಗಿದ್ದರೂ ಈಗಿನ ಕಾಲಕ್ಕೆ ತಕ್ಕಂತೆ ಇರುತ್ತಾರೆ. ಅದು ಔಟರ್ ಲುಕ್(Outer Look) ಇರಲಿ ಇನ್ನರ್ ಲುಕ್(Inner Look) ಇರಲಿ. ಇದು ತಪ್ಪಲ್ಲ ವಯಕ್ತಿಕವಾಗಿ ಕಾಲಕ್ಕೆ ತಕ್ಕಂತೆ ಬದಲಾಗುವುದು ಅವಶ್ಯಕ. ಆಗ ನಮ್ಮಲ್ಲಿನ ಆತ್ಮವಿಶ್ವಾಸ(Self confidence) ವೃದ್ಧಿಸುತ್ತೆ ಹಾಗೂ ಸಮಸ್ಯೆಗಳನ್ನು(Problems) ಎದುರಿಸುವ ಶಕ್ತಿ ನಮ್ಮೊಳಗೆ ಬೆಳೆಯುತ್ತವೆ. ಇದರಿಂದ ದೈನಂದಿನ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದಲ್ಲದೆ, ಚೆನ್ನಾಗಿ ನಿದ್ರೆಯೂ ಬರುತ್ತದೆ.
ವಿಶ್ರಾಂತಿ ಮಾಡುವುದು
ಕೆಲಸಗಳಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳುವುದರ ಹೊರತಾಗಿ ವಿಶ್ರಾಂತಿ(Rest & Relaxation) ಮಾಡುವುದು ಅಷ್ಟೇ ಮುಖ್ಯ. ಪ್ರತೀ ಬಾರಿಯೂ ಕೆಲಸ ಮಾಡಿದ ನಂತರ ಬ್ರೇಕ್(Break) ಬೇಕಾಗುತ್ತದೆ. ದೇಹ ನಿರಂತರ ಕೆಲಸ ಮಾಡಿದರೆ ಆರೋಗ್ಯ ಹದಗೆಡುತ್ತದೆ. ಹಾಗಾಗಿ 45 ನಿಮಿಷಗಳ ಕಾಲ ಕೆಲಸದ ನಂತರ ರೆಸ್ಟ್ ಮಾಡುವುದು ಮುಖ್ಯ. ಅಷ್ಟೇ ಅಲ್ಲದೆ ಬ್ರೇಕ್‌ನ ನಂತರ ಆ ಕೆಲಸ ಮುಂದುವರಿಸಲು ಬ್ಯಾಲೆನ್ಸ್(Balance) ಮಾಡುವುದೂ ಗೊತ್ತಿರಬೇಕು. ಇದರಿಂದ ಹುರುಪಿನಲ್ಲಿ ಉಳಿದ ಕೆಲಸ ಮಾಡಬಹುದು.
ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !
ಸೃಜನಶೀಲರಾಗುವುದು
ನಿರಂತರ ಚಟುವಟಿಕೆಯಿಂದ ಇರುವಾಗ ಮನರಂಜನೆಗೆ(Entertainment) ಅವಕಾಶ ಸಿಗುವುದು ಬಹಳ ಕಡಿಮೆ. ಸುತ್ತಮುತ್ತಲಿನ ಜನರ ಇಷ್ಟಕಷ್ಟಗಳನ್ನರಿತು ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅಷ್ಟೇ ಮುಖ್ಯ. ಆಗಾಗ್ಗೆ ಪೇಯಿಂಟಿಂಗ್(Painting), ಸಂಗೀತ(Music), ಡ್ಯಾನ್ಸ್(Dance) ಹೀಗೆ ಮಾಡುವುದರಿಂದ ಸೃಜನಶೀಲರಾಗುವಿರಿ(Creative).
ಧನ್ಯವಾದ ಹೇಳುವುದು
ಜಗತ್ತನ್ನು(World) ನಾವು ಹೇಗೆ ಗ್ರಹಿಸುತ್ತೇವೆ(Perceive) ಎಂಬುದು ನಮ್ಮ ಯೊಗಕ್ಷೇಮ ಮೇಲೆ ಪರಿಣಾಮ ಬೀರುತ್ತದೆ. ಧನಾತ್ಮಕ ದೃಷ್ಟಿಕೋನ(Positive Thinking), ಬೇಳವಣಿಗೆ ಆಧಾರಿತ ಮನಸ್ಥಿತಿಯನ್ನು ಹೇಗೆ ರೂಢಿಸಿಕೊಳ್ಳುತ್ತೇವೆಯೋ ಹಾಗೆ ನಮ್ಮ ಆರೋಗ್ಯ ನಿಂತಿರುತ್ತದೆ. ಕೃತಜ್ಞತಾ ಭಾವದಿಂದ ವರ್ತೀಸುವುದನ್ನು ಕಲಿತಲ್ಲಿ ಎಂಥಹ ಸಂದರ್ಭವನ್ನು ಧೈರ್ಯದಿಂದ ಎದುರಿಸಬಹುದು.
ಪತಿ Rishi Kapoor ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದ Neetu Kapoor
ಬೆಂಬಲಿಸುವುದು
ಅತೀಯಾದ ಒತ್ತಡದಲ್ಲಿದ್ದಾಗ ಅಥವಾ ಜವಾಬ್ದಾರಿಯಿಂದ(Responsibility) ಹಿಂದೆಸರಿಯುವುದು ಸಹಜ. ಅದು ಸ್ನೇಹಿತರಿರಲಿ(Friends) ಅಥವಾ ಕುಟುಂಬದವರಿರಲಿ(Family) ಅವರಿಂದ ದೂರ ಸರಿಯುತ್ತೇವೆ. ನಮ್ಮ ಬಳಿ ಟೈಂ ಇಲ್ಲವೆಂದೋ ನಾವು ಅವರಿಗೆ ಭಾರವಾಗಬಾರದೆಂದು ಹಿಂದೆ ಸರಿಯುತ್ತೇವೆ. ಇದಕ್ಕೆ ಕಾರಣ ನಮಗೆ ಸಾಮಾಜಿಕವಾಗಿ(Socially) ಯಾರ ಬೆಂಬಲ(Support) ಸಿಗಲಿಲ್ಲವೆಂದಾಗಿದೆ. ಇನ್ನೊಬ್ಬರ ಬೆಂಬಲವನ್ನು ಅಪೇಕ್ಷಿಸುವುದಕ್ಕಿಂತ ನಮ್ಮೊಳಗೆ ಅದನ್ನು ತಂದುಕೊAಡಲ್ಲಿ ಸ್ವಯಂ ರಕ್ಷಣೆ(Self protection) ಮಾಡಿಕೊಳ್ಳಲು ಸಾಧ್ಯ. ಇನ್ನೊಬ್ಬರ ಸಹಾಯ(Help) ಕೇಳುವುದಕ್ಕೆ ಹಿಂಜರಿಕೆ ಮಾಡಿಕೊಳ್ಳದೆ ಮುಕ್ತವಾಗಿ ಕೇಳಬೇಕು. ಆಗ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಎರಡಕ್ಕೂ ಟೈಂ ಕೊಟ್ಟಿಕೊಂಡು ಸಂಬAಧವನ್ನು ಗಟ್ಟಿಗೊಳಿಸಿಕೊಳ್ಳಬಹುದು. ಜೊತೆಗೆ ನಾವು ಯಾವಾಗಲು ಕ್ಷಮೆ(forgiving) ಹಾಗೂ ನಮ್ಮ ಮೇಲೆ ನಮಗೆ ಅನುಕಂಪ ಹೊಂದಿರುವುದು ಅಷ್ಟೇ ಮುಖ್ಯ.
