ಪತಿ Rishi Kapoor ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದ Neetu Kapoor
ಬಾಲಿವುಡ್ ನಟ ರಿಷಿ ಕಪೂರ್ (Rishi Kapoor) 30 ಏಪ್ರಿಲ್ 2020 ರಂದು ನಿಧನರಾದ ನಂತರ, ಅವರ ಪತ್ನಿ ಮತ್ತು ಹಿರಿಯ ನಟಿ ನೀತು ಕಪೂರ್ (Neetu Kapoor) ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಬರುತ್ತಿದ್ದಾರೆ. ಅವರ 'ಜಗ್ ಜಗ್ ಜಿಯೋ' ಚಿತ್ರ ಜೂನ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಿಷಿ ಕಪೂರ್ ನಿಧನದ ನಂತರ ತಾನು ಖಿನ್ನತೆಗೆ ಒಳಗಾಗಿದ್ದೆ ಎಂದು ನೀತು ಕಪೂರ್ ಬಹಿರಂಗಪಡಿಸಿದ್ದಾರೆ.

ತನ್ನ ಪತಿ ರಿಷಿ ಕಪೂರ್ ಸಾವಿನ ನಂತರ ನೀತು ಕಪೂರ್ ಅವರು ಖಿನ್ನತೆಗೆ ಒಳಗಾಗಿದ್ದರು. ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಅವರು ಮುಂಬರುವ ಚಿತ್ರ 'ಜಗ್ ಜಗ್ ಜಿಯೋ' ಗೆ ಸಂಬಂಧಿಸಿದ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಖಿನ್ನತೆಯಿಂದ ಹೊರಬರಲು ಈ ಚಿತ್ರ ಸಹಕಾರಿಯಾಗಿದೆ ಎಂದರು.
'ಕೆಲಸಕ್ಕೆ ಮರಳುವ ಹಂತವು ಖಿನ್ನತೆಯಿಂದ ಹೊರಬರಲು ನನಗೆ ಸಹಾಯ ಮಾಡಿದೆ. 'ಜಗ್ ಜಗ್ ಜಿಯೋ' ನಲ್ಲಿ ಕೆಲಸ ಮಾಡುವುದು ಉತ್ತಮ ಅನುಭವವಾಗಿದೆ. ಇದಲ್ಲದೆ, ನಾನು ಎರಡು ರಿಯಾಲಿಟಿ ಶೋಗಳು ಮಾಡುತ್ತಿದ್ದೇನೆ. ಇದು ಪ್ರೇಕ್ಷಕರ ಮುಂದೆ ಬರಲು ಮತ್ತು ಅವರೊಂದಿಗೆ ಸಂವಹನ ನಡೆಸಲು ನನಗೆ ಸಹಾಯ ಮಾಡಿತು. ನಾನು ನನ್ನ ಸಮಯವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ' ಎಂದು ಚಲನಚಿತ್ರ ಅನುಭವದ ಬಗ್ಗೆ ಮಾತನಾಡುತ್ತಾ, 63 ವರ್ಷದ ನೀತು ಹೇಳಿದ್ದಾರೆ.
ಈ ಸಂದರ್ಶನದಲ್ಲಿ ನೀತು ಅವರು ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರವಿರಲು ಕಾರಣವನ್ನು ಬಹಿರಂಗಪಡಿಸಿದರು. ಈ ಹಿಂದೆಯೂ ನನಗೆ ಸಾಕಷ್ಟು ಆಫರ್‌ಗಳು ಬಂದಿದ್ದವು. ಆದರೆ ನಾನು ಅವುಗಳನ್ನು ಸ್ವೀಕರಿಸಲಿಲ್ಲ. ಏಕೆಂದರೆ ನನ್ನ ಪ್ರಪಂಚದಲ್ಲಿ ಬ್ಯುಸಿಯಾಗಿದೆ.
ರಿಷಿ ಜಿ ನನ್ನನ್ನು ಯಾವಾಗಲೂ ಬ್ಯುಸಿಯಾಗಿರಿಸಿದ್ದರು. ಕೆಲವೊಮ್ಮೆ ಪ್ರಯಾಣದಲ್ಲಿ ಮತ್ತು ಕೆಲವೊಮ್ಮೆ ಮನೆಯಲ್ಲಿ. ಅವನ ನಿಧನದ ನಂತರ ನಾನು ಮನೆಯಲ್ಲಿ ಸುಮ್ಮನೆ ಕೂರುವುದು ಇಷ್ಟವಿಲ್ಲದ ನನ್ನ ಮಕ್ಕಳು ಏನಾದರೂ ಮಾಡುವಂತೆ ಹೇಳಿದರು. ಕರಣ್ ಜೋಹರ್ ನನಗೆ ಈ ಚಿತ್ರದ ಆಫರ್ ಮಾಡಿದಾಗ ನಾನು ಸ್ಕ್ರಿಪ್ಟ್ ಅನ್ನು ಕೇಳಿದೆ. ಅವರು ಚಿತ್ರದ ನಿರ್ದೇಶಕ ರಾಜ್ ಮೆಹ್ತಾ ಅವರನ್ನು ಕಾಲ್ ಮಾಡಿ ನಾನು ಸ್ಕ್ರಿಪ್ಟ್ ಕೇಳಿದಾಗ, ನಾನು ಪಾತ್ರವನ್ನು ತುಂಬಾ ಇಷ್ಟಪಟ್ಟೆ ಮತ್ತು ನಾನು ತಕ್ಷಣ ಒಪ್ಪಿಕೊಂಡೆ ಎಂದಿದ್ದಾರೆ.
'ರಿಷಿ ಜಿ ನಿಧನರಾದ ಸುಮಾರು 6 ತಿಂಗಳ ನಂತರ ನಾನು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದಾಗ, ನನ್ನ ಆತ್ಮವಿಶ್ವಾಸದ ಮಟ್ಟವು ಶೂನ್ಯವಾಗಿತ್ತು. ನಾನು ಚಿತ್ರೀಕರಣಕ್ಕಾಗಿ ಚಂಡೀಗಢವನ್ನು ತಲುಪಿದಾಗ, ನನ್ನ ಪಾತ್ರವನ್ನು ಪ್ರವೇಶಿಸಲು ನಾನು ಸಾಕಷ್ಟು ಧೈರ್ಯವನ್ನು ಸಂಗ್ರಹಿಸಬೇಕಾಗಿತ್ತು. ಪ್ರತಿ ಶಾಟ್ ಮೊದಲು ನಾನು ಎಡವಿ ಬೀಳುತ್ತೇನೆ, 100 ಪರ್ಸೆಂಟ್ ಕೊಡಲು ಸಾಧ್ಯವಾಗುವುದಿಲ್ಲ, ಏನಾದರೂ ತಪ್ಪಾಗುತ್ತದೆ ಎಂದು ನಾನು ಭಾವಿಸುತ್ತಿದ್ದೆ' ಎಂದು ಅವರು ಹೇಳುತ್ತಾರೆ.
ನೀತು ಕಪೂರ್ 70 ಮತ್ತು 80 ರ ದಶಕದ ದೊಡ್ಡ ನಟಿ. ಆ ಅವಧಿಯಲ್ಲಿ, ಅವರು 'ಯಾದೋನ್ ಕಿ ಬಾರಾತ್', 'ದೀವಾರ್', 'ಅಮರ್ ಅಕ್ಬರ್ ಆಂಥೋನಿ', 'ಜಾನಿ ದುಷ್ಮನ್', 'ಗಂಗಾ ಮೇರಿ ಮಾ' ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು ಮತ್ತು ನಂತರ ರಿಷಿ ಕಪೂರ್ ಅವರನ್ನು ಮದುವೆಯಾದ ನಂತರ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು.
ಅವರು 2009 ರಲ್ಲಿ 'ಲವ್ ಆಜ್ ಕಲ್' ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು ಮತ್ತು 2013 ರಲ್ಲಿ 'ಬೇಷರಮ್' ಚಿತ್ರದಲ್ಲಿ ನೀತು ಕೊನೆಯದಾಗಿ ಕಾಣಿಸಿಕೊಂಡಿದ್ದರು .ಅವರು 'ಜಗ್ ಜಗ್ ಜಿಯೋ' ಮೂಲಕ ಮೂರನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಜೂನ್ 24 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅನಿಲ್ ಕಪೂರ್, ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.