ಸ್ತನ ಕ್ಯಾನ್ಸರ್‌ನಿಂದ ದೂರ ಇರ್ಬೇಕೆಂದ್ರೆ ಋತುಬಂಧದ ವೇಳೆ ಆಕ್ಟಿವ್ ಆಗಿರಿ!

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಹೆಚ್ಚಾಗಿದೆ. ಮಹಿಳೆಯರನ್ನು ಅತಿ ಹೆಚ್ಚು ಕಾಡ್ತಿರುವ ಕ್ಯಾನ್ಸರ್ ನಲ್ಲಿ ಇದು ಒಂದು. ಋತುಬಂಧದ ನಂತ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್ ಹತ್ತಿರ ಬರಬಾರದು ಅಂದ್ರೆ ಅದ್ರ ಬಗ್ಗೆ ಮಹಿಳೆ ಸಂಪೂರ್ಣ ತಿಳಿದಿರಬೇಕು. 
 

Stay Active In Menopause To Reduce The Risk Of Breast Cancer roo

ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗ್ತಿದೆ. ಆರೋಗ್ಯದ ಬಗ್ಗೆ ಮಹಿಳೆಯರು ಜಾಗೃತಿವಹಿಸುವ ಅವಶ್ಯಕತೆ ಇದೆ. ಸ್ತನ ಕ್ಯಾನ್ಸರ್ ಅನೇಕ ಕಾರಣಗಳಿಂದ ಮಹಿಳೆಯನ್ನು ಕಾಡುತ್ತದೆ. ಕೆಲ ಕಾರಣಗಳಿಂದ ನೀವು ತಪ್ಪಿಸಿಕೊಳ್ಳೋದು ಕಷ್ಟ. ಆದ್ರೆ ಮತ್ತೆ ಕೆಲ ಕಾರಣಕ್ಕೆ ನೀವೇ ಕಾರಣವಾಗಿರುತ್ತೀರಿ. ನಿತ್ಯ ಜೀವನದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ಮೂಲಕ ನೀವು ಸ್ತನ ಕ್ಯಾನ್ಸರ್ ಬರದಂತೆ ತಡೆಯಬಹುದು.

ಪ್ರತಿಯೊಬ್ಬ ಮಹಿಳೆ ಪಿರಿಯಡ್ಸ್ (Periods)  ಗೆ ಒಳಗಾಗ್ತಾಳೆ. ಒಂದು ಅವಧಿ ನಂತ್ರ ಮುಟ್ಟು ನಿಲ್ಲುತ್ತದೆ. ನಲವತ್ತೈದರಿಂದ ಐವತ್ತು ವರ್ಷದ ಒಳಗೆ ಬಹುತೇಕ ಎಲ್ಲ ಮಹಿಳೆಯರು ಋತುಬಂಧಕ್ಕೆ ಒಳಗಾಗ್ತಾರೆ. ಈ ಸಮಯದಲ್ಲಿ ಮಹಿಳೆ ದೇಹದಲ್ಲಿ ಅನೇಕ ಬದಲಾವಣೆಗಳು ಆಗ್ತಿರುತ್ತವೆ. ಹಾರ್ಮೋನ್ (Hormone) ಏರುಪೇರು ನಾನಾ ರೋಗಕ್ಕೆ ದಾರಿಯಾಗುತ್ತದೆ. ಋತುಬಂಧ (Menopause) ದ ಸಮಯದಲ್ಲಿ ಮಹಿಳೆ ಫಿಟ್ ಆಗಿರುವುದು ಬಹಳ ಮುಖ್ಯ. ಈ ಸಮಯದಲ್ಲಿ ದೈಹಿಕ ವ್ಯಾಯಾಮ ಮಾಡುವ ಅಥವಾ ದೈಹಿಕವಾಗಿ ಸಕ್ರಿಯವಾಗಿರುವ ಮಹಿಳೆಗೆ ಸ್ತನ ಕ್ಯಾನ್ಸರ್ (Breast Cancer) ಕಾಡುವ ಅಪಾಯ ಕಡಿಮೆ ಎನ್ನುತ್ತಾರೆ ತಜ್ಞರು. ಮಹಿಳೆ ಸ್ತನ ಕ್ಯಾನ್ಸರ್ ಗೆ ಬೇರೆ ಏನೆಲ್ಲ ಕಾರಣವಿದೆ, ಅದ್ರಲ್ಲಿ ಯಾವುದರ ನಿಯಂತ್ರಣ ನಿಮ್ಮ ಕೈನಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಬೆಳಗ್ಗೆದ್ದ ಕೂಡ್ಲೇ ನೆನೆಸಿದ ಒಣದ್ರಾಕ್ಷಿ ಸೇವಿಸೋ 10 ಪ್ರಯೋಜನಗಳು..

ಸ್ತನ ಕ್ಯಾನ್ಸರ್ ಗೆ ಕಾರಣ : ಭಾರತದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಹಲವಾರು ಅಂಶಗಳ ಸಂಯೋಜನೆಯಿಂದ ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ಹೆಚ್ಚಿನ ಸ್ತನ ಕ್ಯಾನ್ಸರ್ 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಕಾಡುತ್ತದೆ. ಸ್ತನ ಕ್ಯಾನ್ಸರ್ ನ ಯಾವುದೇ ಲಕ್ಷಣ ಕಂಡು ಬಂದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಅದಕ್ಕೆ ತಕ್ಕ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು.

ವಯಸ್ಸು : ಸ್ತನ ಕ್ಯಾನ್ಸರ್ ಅಪಾಯವು ವಯಸ್ಸಾದಂತೆ ಹೆಚ್ಚಾಗುತ್ತದೆ. 50 ವರ್ಷಗಳ ನಂತರ ಹೆಚ್ಚಿನ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಬೊಜ್ಜು (Obesity) : ಋತುಬಂಧದ ನಂತ್ರ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಮಹಿಳೆಯರು ಆರೋಗ್ಯಕರ ತೂಕದ ಮಹಿಳೆಯರಿಗಿಂತ ಸ್ತನ ಕ್ಯಾನ್ಸರ್ ಅಪಾಯವನ್ನು (Cancer Risk) ಹೆಚ್ಚು ಎದುರಿಸುತ್ತಾರೆ.  

ಹಾರ್ಮೋನ್ ಚಿಕಿತ್ಸೆ (Harmonal Treatment) : ಋತುಬಂಧದ ಸಮಯದಲ್ಲಿ ತೆಗೆದುಕೊಳ್ಳಲಾದ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಯ ಕೆಲವು ರೂಪಗಳು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎರಡನ್ನೂ ಒಳಗೊಂಡಿರುತ್ತವೆ. ಐದು ವರ್ಷಗಳಿಗಿಂತ ಹೆಚ್ಚು ಕಾಲ ಇವುಗಳನ್ನು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. 

ಗರ್ಭಧಾರಣೆ (Pregnancy) : ಮೂವತ್ತು ವರ್ಷದ ನಂತ್ರ ಮೊದಲ ಬಾರಿ ಗರ್ಭ ಧರಿಸುವ ಮಹಿಳೆಯರಲ್ಲಿ ಹಾಗೂ ಮೊದಲ ಬಾರಿ ಸ್ತನಪಾನ ಮಾಡುವ ಮಹಿಳೆಯರಲ್ಲಿ ಕೂಡ ಈ ಅಪಾಯ ಹೆಚ್ಚಾಗುತ್ತದೆ. 

ಅತಿಯಾದ ಪ್ರೋಟೀನ್ ಸೇವನೆಯಿಂದ ಹೆಚ್ಚುತ್ತೆ ಹೃದ್ರೋಗದ ಅಪಾಯ; ಅಧ್ಯಯನ

ಆಲ್ಕೋಹಾಲ್ ಸೇವನೆ (Consuming Alchohol) : ಕೆಲವು ಅಧ್ಯಯನಗಳ ಪ್ರಕಾರ,  ಆಲ್ಕೊಹಾಲ್ ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ. ಮದ್ಯಪಾನ ಹಾಗೂ ಧೂಮಪಾನ,   ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಹಾರ್ಮೋನ್ ಬದಲಾವಣೆಯಾಗುವುದಲ್ಲದೆ ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಇಂಥವರಿಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು : 

ಜೆನೆಟಿಕ್ ರೂಪಾಂತರಗಳು (Genetic Variants) : BRCA1 ಮತ್ತು BRCA2 ನಂತಹ ಕೆಲವು ಜೀನ್‌ಗಳಲ್ಲಿ ಆನುವಂಶಿಕ ರೂಪಾಂತರಗಳನ್ನು ಪಡೆದ ಮಹಿಳೆಯರು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಮಹಿಳೆಯ ತಾಯಿ, ಸಹೋದರಿ ಅಥವಾ ಕುಟುಂಬದ ಸದಸ್ಯರಿಗೆ ಸ್ತನ ಅಥವಾ ಗರ್ಭಕಂಠದ ಕ್ಯಾನ್ಸರ್ ಇದ್ದರೆ, ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚು.

ಪಿರಿಯಡ್ಸ್ (Periods) : 12 ವರ್ಷಕ್ಕಿಂತ ಮುಂಚೆಯೇ ಪಿರಿಯಡ್ಸ್ ಆರಂಭವಾಗುವ ಹಾಗೂ 55 ವರ್ಷ ವಯಸ್ಸಿನ ನಂತರ ಋತುಬಂಧಕ್ಕೆ ಒಳಗಾಗುವ ಮಹಿಳೆಯರು ದೀರ್ಘಕಾಲದವರೆಗೆ ಹಾರ್ಮೋನುಗಳಿಗೆ ಒಡ್ಡಿಕೊಳ್ಳುತ್ತಾರೆ. ಇದು ಅವರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ.

Latest Videos
Follow Us:
Download App:
  • android
  • ios