ಸ್ಪೇನ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಿಗೆ ಮೂರು ದಿನ ಮುಟ್ಟಿನ ರಜೆ
ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಮಾನಸಿಕವಾಗಿ ದೈಹಿಕವಾಗಿ ನೆಮ್ಮದಿಯಾಗಿರಲು ಸಾಧ್ಯವಾಗುವುದಿಲ್ಲ. ಈ ಮಧ್ಯೆ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ (Woman) ಇನ್ನೂ ತೊಂದರೆ. ಕೆಲಸ ಮಾಡುತ್ತಲೇ ಕಿರಿಕಿರಿಯನ್ನು ಸಹಿಸಿಕೊಳ್ಳಬೇಕು. ಈ ಸಮಯಲ್ಲಿ ವಿಶ್ರಾಂತಿ (Rest) ಬೇಕೆನಿಸಿದರೂ ಏನೂ ಮಾಡುವಂತಿಲ್ಲ. ಹೆಣ್ಮಕ್ಕಳ ಕಷ್ಟ ಗಂಡಸರಿಗೆಲ್ಲಿ ಅರ್ಥವಾಗುತ್ತೆ ಅಂತ ಸುಮ್ಮನಿರಬೇಕಷ್ಟೆ. ಹೀಗಿರುವಾಗ್ಲೇ. ಸ್ಪೇನ್‌ನಲ್ಲಿ (Spain) ಮಹಿಳೆಯರಿಗೆ ತಿಂಗಳಿಗೆ ಮೂರು ದಿನಗಳ ಋತುಚಕ್ರದ ರಜೆಯನ್ನು ನಿಗದಿಪಡಿಸಲಾಗಿದೆ.
ಮುಟ್ಟು (Menstruation) ಎಂದರೆ ಹಲವರಿಗೆ ದುಃಸ್ವಪ್ನ. ಪ್ರತಿ ತಿಂಗಳು ಇದೊಂದು ಕಿರಿಕಿರಿ (Irritation) ಅನುಭವಿಸಬೇಕಲ್ಲ ಎನ್ನುವ ನೋವು. ಮಾಸಿಕ ಋತುಸ್ರಾವ (Monthly Cycle)ಬಹಳಷ್ಟು ಮಹಿಳೆ (Women)ಯರಿಗೆ ಹೊಟ್ಟೆನೋವು (Pain), ಕಿಬ್ಬೊಟ್ಟೆ, ಸೊಂಟ, ಬೆನ್ನು ನೋವು (Back Pain), ಕೈಕಾಲು ಸೆಳೆತ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಉಂಟು ಮಾಡುತ್ತದೆ. ನೋವು ಹಾಗೂ ಋತುಸ್ರಾವ ಅತಿಯಾದರೆ ವೈದ್ಯರ ಬಳಿಗೆ ಹೋಗುವುದೂ ಇದೆ. ಸಾಮಾನ್ಯವಾಗಿ ನೋವಂತೂ ಇದ್ದೇ ಇರುತ್ತದೆ. ಆ ಸಮಯದಲ್ಲಿ ಮಾನಸಿಕವಾಗಿ ದೈಹಿಕವಾಗಿ ನೆಮ್ಮದಿಯಾಗಿರಲು ಸಾಧ್ಯವಾಗುವುದಿಲ್ಲ. ಈ ಮಧ್ಯೆ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಇನ್ನೂ ತೊಂದರೆ. ಕೆಲಸ ಮಾಡುತ್ತಲೇ ಕಿರಿಕಿರಿಯನ್ನು ಸಹಿಸಿಕೊಳ್ಳಬೇಕು. ಈ ಸಮಯಲ್ಲಿ ವಿಶ್ರಾಂತಿ ಬೇಕೆನಿಸಿದರೂ ಏನೂ ಮಾಡುವಂತಿಲ್ಲ. ಹೆಣ್ಮಕ್ಕಳ ಕಷ್ಟ ಗಂಡಸರಿಗೆಲ್ಲಿ ಅರ್ಥವಾಗುತ್ತೆ ಅಂತ ಸುಮ್ಮನಿರಬೇಕಷ್ಟೆ.
ಆದರೆ, ಸ್ಪೇನ್‌ನಲ್ಲಿ (Spain) ಮಹಿಳೆಯರಿಗೆ ತಿಂಗಳಿಗೆ ಮೂರು ದಿನಗಳ ಋತುಚಕ್ರದ ರಜೆಯನ್ನು ನಿಗದಿಪಡಿಸಲಾಗಿದೆ. ಆಫೀಸಿಗೆ ಹೋಗುವ ಶೇ.65ರಷ್ಟು ಮಹಿಳೆಯರು ತಮ್ಮ ಋತುಚಕ್ರದ ಸಂದರ್ಭದಲ್ಲಿ ಕಚೇರಿಯಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಾರೆ. ಹಾಗಂತ ಮನೆಯಲ್ಲಿರುವವರಿಗೆ ಈ ಮೂರ್ನಾಲ್ಕು ದಿನಗಳ ಕಾಲ ಕಿರಿಕಿರಿ ಆಗುವುದಿಲ್ಲ ಎಂದು ಅರ್ಥವಲ್ಲ. ಮನೆಯಲ್ಲಿದ್ದರೆ ವಿಶ್ರಾಂತಿ ಪಡೆಯಲು ಅವಕಾಶ ಇರುತ್ತದೆ. ಆದರೆ, ಕಚೇರಿಯಲ್ಲಿ ಆ ಆಯ್ಕೆ ಇಲ್ಲದ ಕಾರಣದಿಂದ ಮಹಿಳೆಯರು ತಮ್ಮ ಪಿರಿಯಡ್ನ (menstrual) ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತಾಗುತ್ತಾರೆ.
Zomatoಗಿಂತ 28 ವರ್ಷದ ಮೊದಲೇ ಮುಟ್ಟಿನ ರಜೆ ಆರಂಭಿಸಿದ್ದ ಬಿಹಾರ ಸರ್ಕಾರ!
ಇದೇ ಕಾರಣಕ್ಕೆ ಸ್ಪೇನ್‌ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ‘ಪಿರಿಯಡ್ ರಜೆ’ (Menstrual Leave) ನೀಡಲು ನಿರ್ಧರಿಸಲಾಗಿದೆ. ಈ ಮೂಲದ ಋತುಚಕ್ರದ ರಜೆ ನೀಡುತ್ತಿರುವ ಮೊದಲ ಪಾಶ್ಚಿಮಾತ್ಯ ದೇಶವೆಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಗಿದೆ. ಸ್ಪೇನ್‌ನಲ್ಲಿ ಮಹಿಳೆಯರಿಗೆ ತಿಂಗಳಿಗೆ ಮೂರು ದಿನಗಳ ವಿಶೇಷ ರಜೆಯನ್ನು ನಿಗದಿಪಡಿಸಲಾಗಿದೆ. ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ಜಾಂಬಿಯಾ ಸೇರಿದಂತೆ ವಿಶ್ವದ ಇತರ ದೇಶಗಳು ಈಗಾಗಲೇ ಮುಟ್ಟಿನ ರಜೆಯನ್ನು ನೀಡುತ್ತಿವೆ.
ಈ ಋತುಚಕ್ರದ ರಜೆ ವಿಶೇಷವಾಗಿ ಮುಟ್ಟಿನ ನೋವಿನಿಂದ ಬಳಲುತ್ತಿರುವ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಮುಟ್ಟಿನ ಸಂದರ್ಭದಲ್ಲಿ ಅನೇಕ ಮಹಿಳೆಯರು ಡಿಸ್ಮೆನೊರಿಯಾ ಎಂದು ಕರೆಯಲ್ಪಡುವ ತೀವ್ರವಾದ ನೋವಿನಿಂದ ಬಳಲುತ್ತಾರೆ. ಕೆಲವೊಮ್ಮೆ ಈ ನೋವು ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಋತುಚಕ್ರದ ಸಂದರ್ಭದಲ್ಲಿ ಕೆಲವು ಮಹಿಳೆಯರಿಗೆ ತಲೆ ಸುತ್ತುವರಿಕೆ, ಹೊಟ್ಟೆ ನೋವು, ವಾಂತಿ, ಭೇದಿ, ತೀವ್ರವಾದ ತಲೆನೋವು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ, ಋತುಚಕ್ರದ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಸ್ಪೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಟ್ಟು ಬರದಂತೆ ತಡೆಯಲು ಹೋಗಿ ಸಾವಿನ ಅಪಾಯ ತಂದುಕೊಳ್ತಿದ್ದಾರೆ ಮಹಿಳೆಯರು !
ಸ್ಪ್ಯಾನಿಷ್ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ ಸೊಸೈಟಿಯು ಮುಟ್ಟಿನ ಸಂದರ್ಭದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಹಿಳೆಯರು ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. ಈ ನೋವನ್ನು ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ. ಡಿಸ್ಮೆನೊರಿಯಾದ ಲಕ್ಷಣಗಳು ತೀವ್ರವಾದ ಹೊಟ್ಟೆ ನೋವು, ತಲೆನೋವು, ಅತಿಸಾರ ಮತ್ತು ಜ್ವರವನ್ನು ಒಳಗೊಂಡಿರುತ್ತದೆ. ಹೊಸ ಯೋಜನೆಯ ಪ್ರಕಾರ, ಸ್ಪೇನ್‌ನ ಶಾಲೆಗಳು ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುತ್ತವೆ.
ಸ್ಪ್ಯಾನಿಷ್ ಸರ್ಕಾರವು ಮುಂದಿನ ವಾರ ಈ ನಿಯಮವನ್ನು ಅನುಮೋದಿಸಲಿದೆ ಎಂದು ಕ್ಯಾಡೆನಾ ಸೆರ್ ರೇಡಿಯೊ ಸ್ಟೇಷನ್ ಘೋಷಿಸಿದೆ. ಸ್ಪೇನ್‌ನ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಜಾರಿಗೆ ಬರಲಿರುವ ಸುಧಾರಣಾ ಪ್ಯಾಕೇಜ್ ಅಡಿಯಲ್ಲಿ ಶಾಲೆಗಳು ಅಗತ್ಯವಿರುವ ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ಸೂಚಿಸಲಾಗಿದೆ.
ಈ ಹಿಂದೆ ಗುಜರಾತ್ ರಾಜ್ಯದ ಸೂರತ್ ಮೂಲದ ಡಿಜಿಟಲ್ ಮಾರುಕಟ್ಟೆ ಕಂಪೆನಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ದಿನ ಋತುಚಕ್ರ ರಜೆ ನೀಡಲು ನಿರ್ಧರಿಸಿತ್ತು.