Asianet Suvarna News Asianet Suvarna News

ಮಗ ನೋಡಿಕೊಳ್ಳುತ್ತಿಲ್ಲ, ತಡ ರಾತ್ರಿವರೆಗೆ ಆಟೋ ಓಡಿಸುತ್ತಿರುವ ಮಹಿಳೆಯ ಮನಕಲುಕಿದ ಮಾತು!

55 ವರ್ಷದ ತಾಯಿಯನ್ನು ವಯಸ್ಸಿಗೆ ಬಂದ ಮಗ ನೋಡಿಕೊಳ್ಳುತ್ತಿಲ್ಲ. ಇತ್ತ ಪತಿ ನಿಧನದ ಬಳಿಕ ಜೀವನ ಮತ್ತಷ್ಟು ಹದಗೆಟ್ಟಿದೆ. ತಡರಾತ್ರಿ 1.30ರ ವರೆಗೆ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಿಳೆಯ ಮನಕಲುಕುವ ಮಾತುಗಳು ಹಲವರ ಮನಸ್ಸಿಗೆ ನಾಟಿದೆ.

Son doesnt do any work 55 year old Mumbai mother drives auto for life till late night ckm
Author
First Published Sep 5, 2024, 4:15 PM IST | Last Updated Sep 5, 2024, 4:15 PM IST

ಮುಂಬೈ(ಸೆ.05) ಸುತ್ತಮುತ್ತಲಿನವರ ಜೀವನ, ಕಷ್ಟಗಳು, ಎದುರಿಸುತ್ತಿರುವ ರೀತಿ ನೋಡಿದಾಗಲೇ ಬದುಕಿನ ಗಂಭೀರತ ಅರ್ಥವಾಗುತ್ತದೆ. ಇದೀಗ 55 ವರ್ಷದ ಮಹಿಳೆ ಹಲವು ಸವಾಲುಗಳನ್ನು ಎದುರಿಸಿ ಮಗನ ಸಾಕಿ ಸಲಹಿದ್ದಾಳೆ. ಮಗನಿಗೆ 2 ವರ್ಷವಿರುವಾಗಲೇ ಪತಿಯ ನಿಧನದಿಂದ ಕಂಗೆಟ್ಟ ಮಹಿಳೆ ಕೊನೆಗೆ ಆಟೋ ರಿಕ್ಷಾ ಓಡಿಸಿ ಮಗನ ಸಾಕಿದ್ದಾಳೆ. ಇದೀಗ ಮಗ ದೊಡ್ಡವನಾದರೂ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.ಇದೀಗ ಮಗ ನೋಡಿಕೊಳ್ಳುತ್ತಿಲ್ಲ, ಆಕೆಗೆ ಗೌರವ ನೀಡುತ್ತಿಲ್ಲ. ಆದರೆ ಬದುಕು ಸಾಗಬೇಕಲ್ಲ. ಹೀಗಾಗಿ ತಡ ರಾತ್ರಿ 1 ರಿಂದ 1.30ರ ವರೆಗೆ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಈ ಮಹಿಳೆಯ ಮಾತುಗಳು ಹಲವರ ಕಣ್ಣಾಲಿ ತೇವಗೊಳಿಸಿದೆ.

ಈ ಮಹಿಳೆಯ ವಯಸ್ಸು 55. ವಯಸ್ಸಿಗೆ ಬಂದ ಮಗ ಮನೆಯಲ್ಲಿದ್ದಾನೆ. ಮಗ ಕೆಲಸಕ್ಕೆ ಹೋಗುತ್ತಿಲ್ಲ, ಉಂಡಾಡಿ ಗುಂಡನ ರೀತಿ ಅಲ್ಲಿ ಇಲ್ಲಿ ತಿರುಗಾಟ, ತಾಯಿ ಆಟೋ ಓಡಿಸಿದ ದುಡ್ಡನ್ನೇ ತಾಕೀತು ಮಾಡಿ ಪಡೆದುಕೊಂಡು ಮಸ್ತಿ ಮಾಡುತ್ತಾನೆ. ಈ ಮಹಿಳೆಯ ಸಂಕಷ್ಟ ಇಂದ ನಿನ್ನೆಯದಲ್ಲ. ಮದುವೆಯಾದ ಕೆಲ ವರ್ಷ ಎಲ್ಲವೂ ಸರಿಯಾಗಿತ್ತು. ಆದರೆ ಮಗನಿಗೆ 2 ವರ್ಷವಾಗುತ್ತಿದ್ದಂತೆ ಪತಿ ನಿಧನ ಎಲ್ಲವನ್ನು ಬುಡಮೇಲು ಮಾಡಿತ್ತು. ಗೃಹಣಿಯಾಗಿದ್ದ ಮಹಿಳೆಗೆ ದಿಕ್ಕೇ ತೋಚದಂತಾಯಿತು.

ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ ರೌಡಿಗಳನ್ನು ಕಲ್ಲಿನಿಂದ ಓಡಿಸಿದ ತಾಯಿ, ವಿಡಿಯೋ ಸೆರೆ!

ಗಟ್ಟಿ ನಿರ್ಧಾರ ಮಾಡಿದ ಮಹಿಳೆ ಆಟೋ ಓಡಿಸಿ ಜೀವನ ಸಾಗಿಸಲು ಆರಂಭಿಸಿದ್ದಾಳೆ. 2 ವರ್ಷದ ಮಗನ ಸಾಕಿ ಸಲಹಿದ್ದಾಳೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಗನನ್ನು ಖಾಸಗಿ ಶಾಲೆಗ ಕಳುಹಿಸಿದ್ದಾಳೆ. ಓದಿಸಿದ್ದಾಳೆ. ಆದರೆ ಮಗ ಮಾತ್ರ ಸರಿಯಾದ ದಾರಿ ಹಿಡಿಯಲಿಲ್ಲ. ಶಾಲೆ ಕಾಲೇಜಿಗೆ ಚಕ್ಕರ್ ಹಾಕಿ ತಿರುಗಾಟ ಆರಂಭಿಸಿದ್ದ. ಇದೀಗ ಮಗನನ ವಯಸ್ಸು 25 ದಾಟಿದರೂ ಕೆಲಸಕ್ಕೆ ಹೋಗುತ್ತಿಲ್ಲ.

ಏನೇ ಹೇಳಿದರೂ ಕಿರುಚಾಟ, ಹೊಡೆದಾಟ. ಹೀಗಾಗಿ ಮಗನಲ್ಲಿ ಮಾತನಾಡುವುದನ್ನೇ ಈಕೆ ನಿಲ್ಲಿಸಿದ್ದಾಳೆ. ಆದರೆ ಬದುಕು ಸಾಗಬೇಕು. ಮಗ ಕೆಲಸಕ್ಕೆ ಹೋಗುತ್ತಿಲ್ಲ ಎಂದರೆ ಊಟ ಬಟ್ಟೆ ಕತೆ ಏನು? ಹೀಗಾಗಿ ಇದೀಗ ತಡರಾತ್ರಿ 1  ರಿಂದ 1.30ರ ವರೆಗೆ ಆಟೋ ಓಡಿಸುತ್ತಾರೆ. ಇದರಿಂದ ಜೀವನ ಸಾಗುತ್ತಿದೆ. ಈ ಕುರಿತು ಮಹಿಳೆ ನೋವಿನಿಂದ ಹೇಳಿಕೊಂಡಿದ್ದಾರೆ.

 

 

ಪ್ರತಿಯೊಬ್ಬರಿಗೆ ಅವರದ್ದೆ ಸಮಸ್ಯೆ ಇದೆ. ಮನೆಯಲ್ಲಿ ಸಮಸ್ಯೆ ಇದರೆ ಎಂದರೆ ಬೀದಿಗೆ ಬರಲೇಬೇಕು, ಮಧ್ಯರಾತ್ರಿ ಕೆಲಸ ಮಾಡಲೇಬೇಕು. ಏನು ಮಾಡಲು ಸಾಧ್ಯ. ನಾನು ರಾತ್ರಿ 1 ರಿಂದ 1.30ಕ್ಕೆ ಮನೆಗೆ ತೆರಳುತ್ತೇನೆ. ಅಲ್ಲೀವರೆಗೆ ಆಟೋ ಓಡಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಮಕ್ಕಳ ಕುರಿತು ಕೇಳಿದ ಪ್ರಶ್ನೆಗೆ, ನನಗೆ ಒಬ್ಬನೇ ಮಗ. ಆತ 2 ವರ್ಷವಿರುವಾಗ ಪತಿ ನಿಧನರಾದರು. ಈಗ ಮಗ ದೊಡ್ಡವನಾಗಿದ್ದಾನೆ. ಆದರೆ ನನಗೆ ಗೌರವ ನೀಡುವುದಿಲ್ಲ. ಕೆಲಸಕ್ಕೂ ಹೋಗುತ್ತಿಲ್ಲ. ನಾನು ದುಡಿದ ಹಣವನ್ನೂ ಕಿತ್ತುಕೊಳ್ಳುತ್ತಾನೆ. ಮಾತನಾಡಿದರೆ ಕಿರುಚಾಡುತ್ತಾನೆ ಎಂದು ಅಳಲು ತೋಡಿಕೊಂಡಿದ್ದಾರೆ. ಭಿಕ್ಷೆ ಬೇಡುವುದಕ್ಕಿಂತ ದುಡಿದು ತಿನ್ನುವುದೇ ವಾಸಿ. ಕೆಲಸಕ್ಕೆ ಬರವಿಲ್ಲ, ಆದರೆ ನಾವು ಮನಸ್ಸು ಮಾಡಿ ಕೆಲಸ ಮಾಡಬೇಕು ಅಷ್ಟೇ ಎಂದು ಮಹಿಳೆ ಹೇಳಿದ್ದಾಳೆ.  

ಆಟವಾಡುತ್ತಿದ್ದ ವೇಳೆ ಆಟಿಕೆ ಎಂದು ಹಾವನ್ನೇ ಕಚ್ಚಿದ 1 ವರ್ಷದ ಮಗು, ನಡೆಯಿತು ಮಹಾ ಅಚ್ಚರಿ!
 

Latest Videos
Follow Us:
Download App:
  • android
  • ios