Asianet Suvarna News Asianet Suvarna News

ಸಿಸೇರಿಯನ್ ಬೇಡ, ನಾರ್ಮಲ್ ಡೆಲಿವರಿ ಆಗಲಿ; ಈ ಟಿಪ್ಸ್ ಫಾಲೋ ಮಾಡಿ, ಸುಲಭ ಹೆರಿಗೆ ಮಾಡಿಕೊಳ್ಳಿ.

ಹೆಚ್ಚಿನ ಮಹಿಳೆಯರು ಸುಲಭವಾಗಿ ನಾರ್ಮಲ್‌ ಡೆಲಿವರಿ ಆಗಬೇಕು ಎಂದು ಅಂದುಕೊಂಡಿರುತ್ತಾರೆ. ತುರ್ತು ಪರಿಸ್ಥಿಯನ್ನು ಹೊರತುಪಡಿಸಿದರೆ, ಸಹಜ ಹೆರಿಗೆಯೇ ಹೆಚ್ಚು ಒಳ್ಳೆಯದು. ಸಹಜ ಹೆರಿಗೆ ಆಗಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Some tips for Normal delivery
Author
First Published Oct 1, 2022, 1:30 PM IST

ಹೆರಿಗೆ ನೋವು ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಆದ್ದರಿಂದ ಹೆರಿಗೆಯ ಸಂದರ್ಭದಲ್ಲಿ ಹೆಂಗಸರು ಆರೋಗ್ಯವನ್ನು ಬಹಳಷ್ಟು ಚೆನ್ನಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ವೇಳೆ ಯೋಗ್ಯವಾದ ಆಹಾರದ ಜೊತೆಯಲ್ಲಿ ಯೋಗ, ವ್ಯಾಯಾಮ ಮಾಡುವುದು ಮುಖ್ಯವಾಗುತ್ತದೆ. ಹೆಚ್ಚಿನ ಮಹಿಳೆಯರು ಸುಲಭವಾಗಿ ನಾರ್ಮಲ್‌ ಡೆಲಿವರಿ ಆಗಬೇಕೆಂದು ಅಂದುಕೊಂಡಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿದ್ದು, ನಾರ್ಮಲ್ ಹೆರಿಗೆ ಅಪರೂಪ ಎನ್ನುವಂತಾಗಿದೆ. ನಾರ್ಮಲ್ ಡೆಲಿವರಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಸಾಮಾನ್ಯ ಹೆರಿಗೆಯು ತಾಯಿ ಮತ್ತು ಮಗುವಿಗೆ ಅನೇಕ ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ತಾಯಿಯು ಶೀಘ್ರವಾಗಿ ಗುಣಮುಖವಾಗಲು ಸಹಾಯ ಮಾಡುತ್ತದೆ. ನಾರ್ಮಲ್‌ ಡೆಲಿವರಿ ಆಗಲು ಇಲ್ಲಿವೆ ಕೆಲವು ಟಿಪ್ಸ್.

ಮನಸ್ಥೈರ್ಯದ ಜೊತೆ ದೇಹದ ಮೇಲೆ ನಂಬಿಕೆಯಿರಲಿ:

ನಾರ್ಮಲ್ ಡೆಲಿವರಿ (Normal delivery)ಬಯಸುವ ಗರ್ಭಿಣಿಗೆ ಮೊದಲು ತನ್ನ ದೇಹ ಒಂದು ಮಗುವನ್ನು ಹೊತ್ತು, ಹೆರುವುದಕ್ಕೆ ಸಶಕ್ತವಾಗಿದೆ ಎಂಬ ನಂಬಿಕೆಯಿರಬೇಕು. ನಾರ್ಮಲ್ ಡೆಲಿವರಿ ಸಂದರ್ಭದಲ್ಲಿ ಉಂಟಾಗುವ ನೋವನ್ನು ತಡೆದುಕೊಳ್ಳಲು ಆ ಸಂದರ್ಭದಲ್ಲಿ ಮೆದುಳು (Mind) ಒಂದು ನೋವು ನಿವಾರಕವನ್ನು ಬಿಡುಗಡೆಗೊಳಿಸುತ್ತದೆ. ಹಾಗಾಗಿ ನಾರ್ಮಲ್ ಡೆಲಿವರಿಗೆ ಮಾನಸಿಕವಾಗಿ ಸಿದ್ಧರಾಗಿ. ಯಾಕೆಂದ್ರೆ ನಾರ್ಮಲ್‌ ಡೆಲಿವರಿಯಾಗಲು ಮುಖ್ಯವಾಗಿ ಮಹಿಳೆಯರಿಗೆ ಮನಸ್ಥೈರ್ಯ ಇರಬೇಕು. ನಾರ್ಮಲ್‌ ಡೆಲಿವರಿಯಾಗುವುದು ಹಾಗೂ ಸಿಸೇರಿಯನ್ ಆಗೋದು ಆ ಮಹಿಳೆಯ‌ ಧೈರ್ಯದ ಮೇಲೆ ಅವಲಂಬಿಸಿರುತ್ತದೆ. ಗರ್ಭಿಣಿಯಾಗಿದ್ದಾಗ ಕೆಲವು ಸುಲಭದ ವ್ಯಾಯಾಮಗಳು, ಮನಸ್ಸು ಗಟ್ಟಿಗೊಳಿಸುವಂತಹ ಉಸಿರಾಟದ ಟೆಕ್ನಿಕ್’ಗಳನ್ನು ಮಾಡುತ್ತಿರಿ. ಒತ್ತಡ ನಿವಾರಿಸಲು ಸಂಗೀತ (music)ಕೇಳುವುದು ಹಾಗೂ ಇನ್ನಿತರ ನಿಮ್ಮ ಇಷ್ಟದ ಕೆಲಸಗಳನ್ನು ಮಾಡುತ್ತಿರಿ. ಇದು ನಾರ್ಮಲ್ ಡೆಲಿವರಿ ಆಗಲು ಸಹಕಾರಿಯಾಗುತ್ತದೆ.

ಕೋಪ ಮಕ್ಕಳ ಮೊದಲ ಅಸ್ತ್ರ: ಹದಿಹರೆಯದ ವಯಸ್ಸಿನಲ್ಲಿ ಹೀಗೇಕೆ?

ವ್ಯಾಯಾಮ ಮಾಡುವುದು:

ಅತಿ ಮುಖ್ಯ ನಾರ್ಮಲ್ ಡೆಲಿವರಿ ಆಗಲು ಮುಖ್ಯವಾಗಿ ಮಾಡಬೇಕಾದದ್ದು ವ್ಯಾಯಾಮ (exercise). ವ್ಯಾಯಾಮಗಳನ್ನು ಪ್ರತಿದಿನ ಮಾಡುವುದರಿಂದ ನಾರ್ಮಲ್ ಡೆಲಿವರಿ ಆಗಲು ಸಹಾಯವಾಗುತ್ತದೆ. ಮಗುವಿಗೆ ಜನ್ಮ ಕೊಡುವವರೆಗೂ ವ್ಯಾಯಾಮ ಮಾಡಿದರೆ ಅದು ನಿಮಗೆ ಉತ್ತಮ ಸಾಮರ್ಥ್ಯ ನೀಡುತ್ತದೆ. ನಿಯಮಿತ ವ್ಯಾಯಾಮ ದೇಹದ ಸ್ನಾಯುಗಳಿಗೆ ಹೆರಿಗೆ ನೋವಿನ (Labor pains) ಒತ್ತಡ ಎದುರಿಸಲು ಸಹಾಯ ಮಾಡುತ್ತದೆ. ಮತ್ತು ಮುಖ್ಯವಾಗಿ ಸೊಂಟದ ಸ್ನಾಯುಗಳ ಮೇಲೆ ಕೆಲಸ ಮಾಡುವ ವ್ಯಾಯಾಮಗಳು ಸಾಮಾನ್ಯ ಹೆರಿಗೆಗೆ ಸಹಾಯ ಮಾಡುತ್ತವೆ. ಜೊತೆಗೆ ಪ್ರಸವಪೂರ್ವ ತರಗತಿಗಳು (Antenatal classes) ಗರ್ಭಿಣಿ ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತವೆ. ಇವುಗಳೊಂದಿಗೆ ಸುಲಭವಾಗಿ ಮಾಡುವಂತಹ ಕೆಲವು ವ್ಯಾಯಾಮಗಳನ್ನು ಹೇಳಿಕೊಡಲಾಗುತ್ತದೆ.

ಪ್ರಸವಾ ನಂತರ ಕಾಡುವ ಗ್ಯಾಸ್ಟಿಕ್ ಸಮಸ್ಯೆ! ಸರಳ ಪರಿಹಾರ ಮಾಡಿ ನೋಡಿ!

ಒತ್ತಡದಿಂದ ದೂರವಿದ್ದು ಬಿಡಿ:

ನಾರ್ಮಲ್ ಡೆಲಿವರಿ ಬಯಸುವವರು ಮುಖ್ಯವಾಗಿ ಒತ್ತಡದಿಂದ (stress) ದೂರವಿರಬೇಕು. ಮಗುವನ್ನು ಹೆರುವ ಸಮಯದಲ್ಲಿ ಗರ್ಭಿಣಿಯರು ಭಯಪಟ್ಟುಕೊಳ್ಳುವುದು ಸಹಜ. ಅದು ನಾರ್ಮಲ್ ಡೆಲಿವರಿ ಆಗಿರಬಹುದು ಅಥವಾ ಸಿಸೇರಿನ್ (C section Delivery) ಇರಬಹುದು ಬಹಳ ಬೇಗ ಉದ್ವಿಗ್ನರಾಗುತ್ತಾರೆ. ಆದ್ದರಿಂದ ಈ ರೀತಿಯ ಒತ್ತಡದಿಂದ ದೂರವಿರಲು ಗರ್ಭಿಣಿಯರು ಗರ್ಭಾವಸ್ಥೆಯುದ್ದಕ್ಕೂ ಮಾನಸಿಕವಾಗಿ ಸಿದ್ಧರಾಗಿರಬೇಕು. ಅವರ ಗಂಡ ಮತ್ತು ಕುಟುಂಬದ ಸದಸ್ಯರು ಅವರನ್ನು ಪ್ರೋತ್ಸಾಹಿಸಬೇಕು. ಇದು ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ (During pregnancy) ಒತ್ತಡ ಮುಕ್ತವಾಗಿರಲು ನೀವು ಆದಷ್ಟು ಪ್ರಯತ್ನಿಸಬೇಕು. ಇದು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಉತ್ಪಾದನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮನ್ನು ಆತಂಕಕ್ಕೀಡು ಮಾಡುವ ವಿಷಯಗಳಿಂದ ಮತ್ತು ಜನರಿಂದ ದೂರವಿರಿ. ಉತ್ತಮ ಪುಸ್ತಕಗಳನ್ನು ಓದಿ ಮತ್ತು ಸ್ನೇಹಪರ ಜನರೊಂದಿಗೆ ಸಮಯ ಕಳೆಯಿರಿ. ಇದರಿಂದ ಡೆಲಿವರಿ ಸರಾಗವಾಗಿ ನಡೆದು, ನಾರ್ಮಲ್ ಡೆಲಿವರಿ ಆಗುತ್ತದೆ.

Follow Us:
Download App:
  • android
  • ios