Asianet Suvarna News Asianet Suvarna News

ಕೋಪ ಮಕ್ಕಳ ಮೊದಲ ಅಸ್ತ್ರ: ಹದಿಹರೆಯದ ವಯಸ್ಸಿನಲ್ಲಿ ಹೀಗೇಕೆ?

ಕೋಪವು ಸಾಮಾನ್ಯವಾಗಿ ಮನುಷ್ಯನ ಭಾವನೆಯಾಗಿದೆ. ಅದರಲ್ಲಿಯೂ ಮಕ್ಕಳಲ್ಲಿ ಕೋಪ ತುಂಬಾ ಜಾಸ್ತಿ ಇರುತ್ತದೆ. ಅದಕ್ಕೆ ಹಲವು ರೀತಿ ಕಾರಣಗಳಿವೆ. ಅವುಗಳ ಡಿಟೇಲ್ಸ್ ಇಲ್ಲಿದೆ.

What Causes Anger Issues In Children
Author
First Published Oct 1, 2022, 12:32 PM IST

ಮಕ್ಕಳು ಎಂದರೆ ತುಂಟಾಟ, ಕಿರಿಕಿರಿ ಸಾಮಾನ್ಯ. ಅದರಲ್ಲಿಯೂ ಕೆಲ ಮಕ್ಕಳಲ್ಲಿ ತುಂಬಾ ಮೊಂಡುತನವಿರುತ್ತದೆ. ಅತಿಯಾದ ಕೋಪವಿರುತ್ತದೆ. ಪ್ರತಿಯೊಂದು ವಿಚಾರಗಳಿಗೂ ಕೋಪ ಮಾಡಿಕೊಳ್ಳುತ್ತಾರೆ. ಮಕ್ಕಳು ಸಾಮಾನ್ಯವಾಗಿ ಚಿಕ್ಕ ಚಿಕ್ಕ ವಿಚಾರಕ್ಕೆ ಪದೇ ಪದೇ ಕೋಪಿಸಿಕೊಳ್ಳುತ್ತಾರೆ. ಏಕೆಂದರೆ ಮಕ್ಕಳಿಗೆ ತಮ್ಮ ಸಮಸ್ಯೆ ಹಾಗೂ ಭಾವನೆಗಳನ್ನು ವಿವರಿಸಲು ಬರುವುದಿಲ್ಲ. ಇನ್ನು ಮಕ್ಕಳು ಪ್ರೌಢಾವಸ‌್ಥೆಗೆ ತಲುಪುವ ಹಂತದಲ್ಲಿ ಈ ಸಮಸ್ಯೆ ಜಾಸ್ತಿ ಕಾಡುತ್ತದೆ. ಹೀಗಾಗಿ ಪಾಲಕರು ಮಕ್ಕಳ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅತಿ ಮುಖ್ಯವಾಗಿ ಕೆಲವೊಂದು ವಿಷಯಗಳು ತಮ್ಮ ಪ್ರಕಾರ ನಡೆಯದೇ ಇದ್ದಾಗ ಮಕ್ಕಳು ಹೆಚ್ಚು ಕೋಪಿಸಿಕೊಳ್ಳುತ್ತಾರೆ. ಕೋಪ ಎನ್ನುವುದು ಮಕ್ಕಳ ಮೊದಲ ಅಸ್ತ್ರವಾಗಿದೆ. ಕೋಪ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಕೋಪ ಮಾಡಿಕೊಳ್ಳಲು ಕಾರಣವಾದ ಹಲವು ಅಂಶಗಳಿವೆ. ಅವುಗಳ ಮಾಹಿತಿ ಇಲ್ಲಿದೆ.

ನಿಯಂತ್ರಣ:

ನಿಮ್ಮ ಮಗು ಇತರ ಮಕ್ಕಳಿಗಿಂತ ಹೆಚ್ಚು ಕೋಪ (anger) ಮಾಡಿಕೊಳ್ಳಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ನಿಯಂತ್ರಣ (Control). ಮಕ್ಕಳನ್ನು ನಿಯಂತ್ರಣ ಇಡಲು ಶುರುವಾದಾಗ ಅದು ಮಗುವಿನ ಒತ್ತಡ ಹೇರುತ್ತದೆ. ಇದರಿಂದ ಕೋಪ ಉಂಟಾಗುವುದು ಸಹಜ. ಯಾಕೆಂದ್ರೆ ಹದಿಹರೆಯದವರು (Teenagers)ಸ್ವಾವಲಂಬನೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚು ಬಯಸುತ್ತಾರೆ. ಆದ ಕಾರಣ ಮಕ್ಕಳನ್ನು ಫ್ರೀ ಆಗಿ ಇರಲು ಬಿಡಿ. ಅದು ಮಾಡಬೇಡ, ಅಲ್ಲಿಗೆ ಹೋಗಬೇಡ ಎಂದು ನಿಯಂತ್ರಣ ಮಾಡದಿರಿ. ಆದರೆ ಅವರ ಮೇಲೆ ಗಮನವಿರಲಿ. ಇನ್ನು ಮಕ್ಕಳು ಹದಿಹರಿಯದ ಮಯಸ್ಸಿಗೆ ಕಾಲಿಟ್ಟಾಗ ಅವರಲ್ಲಿ ಹೊಸ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಈ ವೇಳೆ ಮಕ್ಕಳನ್ನು ನೀವು ನಿಯಂತ್ರಿಸಿದರೆ ಅವರಿಗೆ ಅತಿಯಾದ ಕೋಪ ಬರುತ್ತದೆ. ಆದ್ದರಿಂದ ಅವರನ್ನು ಸ್ನೇಹಿತರಂತೆ ಕಾಣಬೇಕು.

ಒತ್ತಡ:

ಮಕ್ಕಳಿಗೆ ಕೋಪ ಬರಲು ಮುಖ್ಯ ಕಾರಣ ಒತ್ತಡ (stress). ಸಾಮಾಜಿಕ ಸನ್ನಿವೇಶಗಳು, ಶಾಲೆಯ ಒತ್ತಡಗಳು ಮತ್ತು ಶಾಲಾ ಚಟುವಟಿಕೆಗಳ ನಂತರದ ಒತ್ತಡಗಳು ಮಗುವಿನಲ್ಲಿ ಕೋಪದ (anger)ಲಕ್ಷಣಗಳನ್ನು ಉಂಟು ಮಾಡುತ್ತವೆ. ಇದು ಆಗಾಗ ಹದಿಹರೆಯದವರನ್ನು ಆವರಿಸುವುದು ಸಾಮಾನ್ಯ. ಹದಿಹರೆಯದವರು ಕುಟುಂಬ, ಶಾಲೆ ಮತ್ತು ಪರಿಸರದ ಒತ್ತಡಗಳನ್ನು ಬಿಕ್ಕಟ್ಟಿನ ಸಂದರ್ಭಗಳಿಗೆ ಕಾರಣವಾಗುವ ಅನೇಕ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಅವರಲ್ಲಿ ಕೋಪ ಬರುವುದು ಸಾಮಾನ್ಯ. ಇನ್ನು ಅವರ ಮನಸ್ಸಿನ ಮೇಲೆ ಆಘಾತ ಬೀರುವ ಘಟನೆಗಳು ನಡೆದರೆ ಅದು ಕೋಪವಾಗಿ ಮಾರ್ಪಾಡಾಗುತ್ತದೆ. ತಂದೆ-ತಾಯಿಯರ ವಿಚ್ಛೇದನ ಪ್ರಕರಣಗಳು, ಆತ್ಮೀಯರ ನಷ್ಟ, ಕ್ರೂರ ಅಪಘಾತಗಳು, ಮತ್ತು ಮರಗಟ್ಟುವಿಕೆ ಅಥವಾ ಭಯದ ಭಾವನೆಗೆ ಕಾರಣವಾಗುವ ಆಘಾತಕಾರಿ ಘಟನೆಗಳು ಮಕ್ಕಳಲ್ಲಿ ಕೋಪವನ್ನು ಉಂಟಾಗುತ್ತದೆ.

ನಿಮ್ಮ ಲಿವರ್ ಜೋಪಾನ: ಕಲ್ಮಶರಹಿತ ಯಕೃತ್’ಗಾಗಿ ಈ ಆಹಾರ ಸೇವನೆ ಅತಿ ಮುಖ್ಯ.

ವೈದ್ಯಕೀಯ ಸ್ಥಿತಿಗಳು:

ಹದಿಹರೆಯದವರಲ್ಲಿ ಖಿನ್ನತೆ (depression)ಸಾಮಾನ್ಯವಾಗಿ ಇರುತ್ತದೆ. ಇದು ಕೂಡ ಕೋಪಕ್ಕೆ ಕಾರಣವಾಗಬಹುದು. ನಿಗ್ರಹಿಸಿದ ಭಾವನೆಗಳು ಕೋಪವಾಗಿ ಮಾರ್ಪಡುತ್ತವೆ. ಇದು ಆತಂಕ, ಪ್ಯಾನಿಕ್ ಅಟ್ಯಾಕ್, ಖಿನ್ನತೆಯಿಂದ ಆತ್ಮಹತ್ಯಾ (suicide) ಪ್ರವೃತ್ತಿಗಳಿಗೆ ಕಾರಣವಾಗಬಹುದು. ಹದಿಹರಯ ಅತಿ ಹೆಚ್ಚು ದೈಹಿಕ ಬದಲಾವಣೆ, ಭಾವನಾತ್ಮಕ ವ್ಯತ್ಯಯಗಳು ಹಾಗೂ ಸಾಕಷ್ಟು ಒತ್ತಡಗಳನ್ನು ಒಳಗೊಂಡಿರುವ ಪರಿವರ್ತನೆಯ ಕಾಲ. ಈ ಹಂತದಲ್ಲಿ ಭಾವನೆ, ಚಿತ್ತದಲ್ಲಿ ಏರುಪೇರುಗಳು ಸಾಮಾನ್ಯ. ಇಂತಹ ವೇಳೆ ಅವರು ತಮ್ಮ ಭಾವನೆಗಳ ನಿಗ್ರಹ ಸಾಧ್ಯವಾಗದೇ ಕೋಪಗೊಳ್ಳುವುದು ಸಾಮಾನ್ಯ.

ಪೋಷಕರು ಮೊದಲು ತಪ್ಪನ್ನು ಒಪ್ಕೊಳ್ಳಿ, ಆಗ ಮಕ್ಕಳೂ ತಮ್ಮನ್ನು ತಿದ್ದಿಕೊಳ್ಳುತ್ತವೆ!

ಮಾದಕವಸ್ತು:

ಇನ್ನು ಕೆಲ ಮಕ್ಕಳು ಹದಿಹರಿಯದ ವಯಸ್ಸಿನಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಶಾಲಾ ಹಂತದಲ್ಲಿಯೇ ಮದ್ಯಪಾನ, ಡ್ರಗ್ಸ್  (drugs)ಮತ್ತು ಧೂಮಪಾನಗಳ ದಾಸರಾಗುತ್ತಾರೆ. ಇವುಗಳು ಮಕ್ಕಳಿಗೆ ಸ್ಪಷ್ಟವಾಗಿ ಯೋಚಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಕಳಪೆ ಆಲೋಚನೆ, ಗಮನ ಕೊರತೆ, ಪ್ರತಿಬಂಧಕಗಳ ಕೊರತೆ, ಆಕ್ರಮಣಶೀಲತೆ ಸುಮಾರು 60 ಪ್ರತಿಶತದಷ್ಟು ಹಿಂಸಾತ್ಮಕ ನಡವಳಿಕೆ ಮತ್ತು ಅಪರಾಧಗಳಿಗೆ ಕಾರಣವಾಗುತ್ತದೆ. ಈ ವೇಳೆ ಕೋಪ ಅವರಲ್ಲಿ ಆಳವಾಗಿ ಬೇರುರಿರುತ್ತದೆ.

Follow Us:
Download App:
  • android
  • ios