34ನೇ ವಯಸ್ಸಿನಲ್ಲೇ ಅಜ್ಜಿಯಾದ ಮಹಿಳೆ, ಮಗಳು ಬಸುರಾಗಿದ್ದಕ್ಕೆ ಅಮ್ಮನ ಕೇರ್‌ಲೇಸ್ ಅಂತಿದ್ದಾರೆ ನೆಟ್ಟಿಗರು!
ಮದುವೆಯಾಗಲು, ಮಕ್ಕಳನ್ನು ಪಡೆಯಲು ಒಂದು ವಯಸ್ಸಿದೆ. ಆ ವಯಸ್ಸಿಗಿಂತ ಮೊದಲೇ ಮಕ್ಕಳಾದ್ರೆ ಅವರನ್ನು ನೋಡಿಕೊಳ್ಳೋದು ಕಷ್ಟ. ಈ ಮಹಿಳೆಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಆಗಿದ್ದಲ್ಲದೆ ಚಿಕ್ಕ ವಯಸ್ಸಿನಲ್ಲೇ ಮೊಮ್ಮಗುವನ್ನು ಪಡೆದಿದ್ದಾಳೆ. ಇದು ನೆಟ್ಟಿಗರ ಕಣ್ಣು ಕೆಂಪು ಮಾಡಿದೆ.
ನಮ್ಮ ಅಜ್ಜಿ – ಮುತ್ತಜ್ಜಿಗೆ ಬಹು ಬೇಗ ಮದುವೆ ಆಗ್ತಿತ್ತು. ಹತ್ತನೇ ವಯಸ್ಸಿಗೆ ಮದುವೆಯಾಗಿ ಹದಿನೈದು – ಹದಿನಾರೊಳಗೆ ಮಕ್ಕಳನ್ನು ಹಡೆಯಲು ಶುರು ಮಾಡ್ತಿದ್ದರು. ಆ ಮಕ್ಕಳಿಗೂ ಹದಿನೈದು, ಹದಿನಾರಕ್ಕೆ ಮದುವೆ ಆಗ್ತಿದ್ದ ಕಾರಣ, ಈ ಮಹಿಳೆಯರು ಬೇಗ ಅಜ್ಜಿಯಂದಿರಾಗ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಸರ್ಕಾರ ಕೂಡ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿದೆ. ಹಾಗಾಗಿ ಇಪ್ಪತ್ತು – ಇಪ್ಪತ್ತೊಂದಕ್ಕೆ ಮದುವೆಯಾಗುವ ಮಹಿಳೆಯರು ನಾಲವತ್ತೈದು, ಐವತ್ತು ವರ್ಷಕ್ಕೆ ಮೊಮ್ಮಕ್ಕಳನ್ನು ಪಡೆಯುತ್ತಾರೆ. ಇದು ಸರಿಯಾದ ವಯಸ್ಸು ಕೂಡ ಹೌದು. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಮೂವತ್ತ್ನಾಲ್ಕನೇ ವಯಸ್ಸಿನಲ್ಲೇ ಅಜ್ಜಿಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅಜ್ಜಿಯಾದ ವಿಷ್ಯವನ್ನು ಆಕೆ ಹಂಚಿಕೊಳ್ತಿದ್ದಂತೆ ಜನರು ತಲೆಗೊಂದು ಬುಡಕ್ಕೊಂದು ಮಾತನಾಡಲು ಶುರು ಮಾಡಿದ್ದಾರೆ. ಕೆಲವರು ಮಹಿಳೆ ಮಕ್ಕಳನ್ನು ಸರಿಯಾಗಿ ಸಾಕಿಲ್ಲ ಎಂದು ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಬುದ್ಧಿವಂತಿಕೆ ಹೆಜ್ಜೆ ಇಟ್ಟಿದ್ದಾಳೆ ಎನ್ನುತ್ತಿದ್ದಾರೆ.
ಸಿಂಗಾಪುರ (Singapore) ದ ಪ್ರಭಾವಿ ಶೆರ್ಲಿ ಲಿಂಗ್, ತನ್ನ ಮೂವತ್ತ್ನಾಲ್ಕನೇ ವಯಸ್ಸಿನಲ್ಲಿ ಅಜ್ಜಿ (Grandma) ಯಾದ ಮಹಿಳೆ. ಶೆರ್ಲಿ ಲಿಂಗ್ ನ 17 ವರ್ಷದ ಮಗನಿಗೆ ಮಗು ಜನಿಸಿದೆ. ಶೆರ್ಲಿ ಲಿಂಗ್, ಚಿಕನ್ ಹಾಟ್‌ಪಾಟ್ (Chicken Hotpot) ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾಳೆ. ಆಕೆಗೆ ಹದಿನೇಳನೇ ವಯಸ್ಸಿನಲ್ಲಿಯೇ ಮದುವೆ ಆಗಿತ್ತು. ಶೆರ್ಲಿ ಲಿಂಗ್ ಗೆ ಮೂರು ಮದುವೆ ಆಗಿದೆ. ಆಕೆ ಐದು ಮಕ್ಕಳಿಗೆ ತಾಯಿಯಾಗಿದ್ದಾಳೆ. ಅದ್ರಲ್ಲಿ ಒಬ್ಬ ಮಗನಿಗೆ ಹದಿನೇಳು ವರ್ಷ ವಯಸ್ಸು. ಆಗ್ಲೇ ಆತ ಮಗುವನ್ನು ಹೊಂದಿದ್ದಾನೆ. shirli_ling ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೆರ್ಲಿ ಲಿಂಗ್ ತನಗೆ ಮೊಮ್ಮಗು ಹುಟ್ಟಿದ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ತಾನು ಅಜ್ಜಿಯಾಗಿರೋದಾಗಿ ಹೇಳಿದ್ದಾಳೆ.
ಶೂಟಿಂಗ್ ಟೈಮಲ್ಲಿ ನೋವು ತಡೆಯಕ್ಕಾಗೋಲ್ಲ, ರಜೆ ಸಿಕ್ಕಿದ್ರೆ ಎಷ್ಟು ನೆಮ್ಮದಿ ಇರ್ತಿತ್ತು ಎಂದ ಕಿರುತೆರೆ ನಟಿ
ನನ್ನ 17 ವರ್ಷದ ಮಗ ತಂದೆಯಾಗ್ತಿದ್ದಾನೆ ಎಂಬ ವಿಷ್ಯ ಗೊತ್ತಾದಾಗ ನಾನು ಸ್ವಲ್ಪವೂ ಬೇಸರಪಟ್ಟುಕೊಳ್ಳಲಿಲ್ಲ. ನನ್ನ ಮಗ ಹಾಗೂ ಆತನ ಗರ್ಲ್ ಫ್ರೆಂಡ್ ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿದೆ. ಅವರಿಬ್ಬರೇ ಮುಂದಿನ ಜವಾಬ್ದಾರಿ ನೋಡಿಕೊಳ್ಳಬೇಕೆಂದು ಸಲಹೆ ನೀಡಿದೆ ಎಂದು ಶೆರ್ಲಿ ಲಿಂಗ್ ಹೇಳಿದ್ದಾಳೆ. ಹಾಗಂತ, ಚಿಕ್ಕ ವಯಸ್ಸಿನಲ್ಲಿ ಪಾಲಕರಾಗೋದನ್ನು ಶೆರ್ಲಿ ಲಿಂಗ್ ಸ್ವಾಗತಿಸಲಿಲ್ಲ. ಪ್ರೋತ್ಸಾಹ ಕೂಡ ನೀಡಲಿಲ್ಲ. ಬುದ್ಧಿವಂತಿಕೆಯಿಂದ ವರ್ತಿಸುವಂತೆ ಮಕ್ಕಳಿಗೆ ಸೂಚನೆ ನೀಡಿದ್ದಾಳೆ. ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದರೂ ಅದು ಆಗ್ಲಿಲ್ಲ. ಆಗ ಮಕ್ಕಳಿಗೆ ಬೈದು, ಹೊಡೆದು ಪ್ರಯೋಜನವಿಲ್ಲ. ಪ್ರೀತಿಯಿಂದ ಅವರನ್ನು ನೋಡಿಕೊಳ್ಳಬೇಕು. ಅವರಿಗೆ ಬೆಂಬಲ, ಮಾರ್ಗದರ್ಶನ ನೀಡಬೇಕು ಎನ್ನುತ್ತಾಳೆ ಶೆರ್ಲಿ ಲಿಂಗ್.
ಶೆರ್ಲಿ, ತಾಯಂದಿರ ದಿನದ ಶುಭಕೋರಿದ ಶೆರ್ಲಿ, ತಾಯಿಯಾಗಿ ನಾವು ಯಾವಾಗಲೂ ಸರಿಯಿರೋದಿಲ್ಲ. ದಾರಿಯುದ್ಧಕ್ಕೂ ಕಲಿಯುತ್ತೇವೆ. ನೀವು ಎಂದೂ ನಾನು ಒಳ್ಳೆ ತಾಯಿಯಲ್ಲ ಎಂದು ಭಾವಿಸಬೇಡಿ. ಪ್ರತಿಯೊಂದು ತಾಯಿ, ತನ್ನ ಮಕ್ಕಳ ಸ್ವಭಾವವನ್ನು ಆಧರಿಸಿ ಅವರನ್ನು ಬೆಳೆಸುತ್ತಾಳೆ. ಮಕ್ಕಳನ್ನು ನೋಡಿಕೊಳ್ಳೋದು ಹೇಗೆ ಎಂಬ ಪ್ರಶ್ನೆಯನ್ನು ಬೇರೆಯವರ ಬಳಿ ಕೇಳಬೇಡಿ. ಇಂಥ ಸಲಹೆಯನ್ನು ನೀವು ಕೊಡಬೇಡಿ. ನಿಮ್ಮ ಮಕ್ಕಳು ನೀವು ಮಾಡಬೇಡಿ ಎಂದಿದ್ದನ್ನೇ ಮಾಡ್ಬಹುದು. ಆಗ ಕೋಪಗೊಳ್ಳದೆ, ಶಾಂತಿಯಿಂದ ವರ್ತಿಸಿ ಎಂದು ಶೆರ್ಲಿ ಬರೆದಿದ್ದಾಳೆ.
ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿದೆ 8 ಕಾರಣಗಳು
ಶೆರ್ಲಿ ಲಿಂಗ್ ಇನ್ಸ್ಟಾಗ್ರಾಮ್ ಖಾತೆ ನೋಡಿದ ಜನರು, ಶೆರ್ಲಿ ನಿರ್ಲಕ್ಷ್ಯ ಮಾಡಿದ್ದಾಳೆ ಎಂಬ ಆರೋಪ ಮಾಡಿದ್ದಾರೆ. ಕೇರ್ ಲೆಸ್ ತಾಯಿ ಎಂದಿದ್ದಾರೆ. ಶೆರ್ಲಿಗೆ ತನ್ನ ಮಕ್ಕಳ ಮೇಲೆ ನಿಯಂತ್ರಣವಿಲ್ಲ ಎಂದು ಕೆಲ ಬಳಕೆದಾರರು ಹೇಳಿದ್ದಾರೆ. ಶೆರ್ಲಿಗೂ ಹದಿನೇಳನೇ ವಯಸ್ಸಿಗೆ ಮದುವೆ ಆಗಿತ್ತು, ಆಕೆ ಮಗನಿಗೂ ಹದಿನೇಳನೇ ವಯಸ್ಸಿಗೆ ಮಗು ಜನಿಸಿದೆ. ತಾಯಿಯಾಗಿ ಶೆರ್ಲಿ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲ ನೆಟ್ಟಿಗರು ಶೆರ್ಲಿ ಕ್ರಮವನ್ನು ಮೆಚ್ಚಿದ್ದಾರೆ. ಮಕ್ಕಳಿಗೆ ಶೆರ್ಲಿ ಬೆಂಬಲ ನೀಡ್ತಿದ್ದು, ಎಲ್ಲರಿಗೂ ಇಂಥ ತಾಯಿ ಸಿಗೋದಿಲ್ಲ ಎಂದಿದ್ದಾರೆ.