ಶೂಟಿಂಗ್ ಟೈಮಲ್ಲಿ ನೋವು ತಡೆಯಕ್ಕಾಗೋಲ್ಲ, ರಜೆ ಸಿಕ್ಕಿದ್ರೆ ಎಷ್ಟು ನೆಮ್ಮದಿ ಇರ್ತಿತ್ತು ಎಂದ ಕಿರುತೆರೆ ನಟಿ
ಪಿರಿಯಡ್ಸ್ ನೋವು ಅಸಹನೀಯವಾಗಿರುತ್ತದೆ. ಆ ದಿನಗಳಲ್ಲಿ ಕೆಲಸ ಮಾಡಲು ಶಕ್ತಿ ಬೇಕು. ಎಲ್ಲ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿಯೇ ಪಿರಿಯಡ್ಸ್ ಲೀವ್ ಕೂಗು ಕೇಳಿ ಬರ್ತಿದೆ. ಈಗ ನಟಿ ಹೀನಾ ಖಾನ್ ಈ ಬಗ್ಗೆ ಮಾತನಾಡಿದ್ದಾರೆ.
ಪಿರಿಯಡ್ಸ್ ನೋವು ಮಹಿಳೆಯನ್ನು ಬಿಟ್ಟಿದ್ದಲ್ಲ. ಆಕೆ ಸಾಮಾನ್ಯ ಮಹಿಳೆ ಆಗಿರಲಿ ಇಲ್ಲ ಸೆಲೆಬ್ರಿಟಿ ಆಗಿರಲಿ ಮೂರು ದಿನ ಪಿರಿಯಡ್ಸ್ ನೋವು, ಕಿರಿಕಿರಿಯನ್ನು ಸಹಿಸಿಕೊಳ್ಳಲೇಬೇಕು. ಮಹಿಳೆಯರು ಎಷ್ಟೇ ಶ್ರೀಮಂತರಾಗಿರಲಿ, ಎಷ್ಟೇ ಪ್ರಸಿದ್ಧಿ ಪಡೆದಿರಲಿ, ಪಿರಿಯಡ್ಸ್ ಸಮಸ್ಯೆಯಿಂದ ತಪ್ಪಿಸಿಕೊಳ್ಳೋದು ಅಸಾಧ್ಯ. ಅನೇಕರು ಮಾತ್ರೆ ಸೇವನೆ ಮಾಡಿ ನೋವು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಕಿರಿಕಿರಿ, ಬ್ಲೀಡಿಂಗ್ ನಿಂದ ತಪ್ಪಿಸಿಕೊಳ್ಳೋದು ಕಷ್ಟ. ಈಗ ಪಿರಿಯಡ್ಸ್ ಸಮಸ್ಯೆಗೆ ಕೆಲ ಪರಿಹಾರವಿದೆಯಾದ್ರೂ ಈ ನೈಸರ್ಗಿಕ ಕ್ರಿಯೆಯಿಂದ ಸಂಪೂರ್ಣ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವ ಮಹಿಳೆಯರಿಗೆ ಈ ಮೂರು ದಿನ ಸಹಿಸೋದು ಕಷ್ಟ. ತಿಂಗಳ ಮೂರು ದಿನ ಸ್ಕಿಪ್ ಆಗಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಲೋಚನೆ ಮಾಡ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಮಹಿಳೆಯರಿಗಿಂತ ಕೆಲಸ ಮೇಲೆ ಊರೂರು ಸುತ್ತುವ, ಶೂಟಿಂಗ್, ಕಾರ್ಯಕ್ರಮ ಅಂತ ಓಡಾಡುತ್ತಿರುವ ಮಹಿಳೆಯರಿಗೆ ಪಿರಿಯಡ್ಸ್ ಭೂತದಂತೆ ಕಾಡುತ್ತದೆ. ಈಗಾಗಲೇ ಅನೇಕ ನಟಿಯರು ಈ ಪಿರಿಯಡ್ಸ್ ನೋವು, ರಜೆ ಬಗ್ಗೆ ಮಾತನಾಡಿದ್ದಾರೆ. ಈಗ ನಟಿ ಹೀನಾ ಖಾನ್ ಪಿರಿಯಡ್ಸ್ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ (Instagram ) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೀನಾ ಖಾನ್ (Hina Khan) , ಪಿರಿಯಡ್ಸ್ (Periods) ನ ಆರಂಭದ ಎರಡು ದಿನ ರಜೆ ಸಿಕ್ಕಿದ್ರೆ ಎಷ್ಟು ಒಳ್ಳೆಯದಿತ್ತು. ಅದ್ರಲ್ಲೂ ಓಡುವ ದೃಶ್ಯಗಳಿಗೆ ವಿರಾಮ ಸಿಕ್ಕಿದ್ರೆ ಚೆನ್ನಾಗಿತ್ತು ಎಂದು ಹೀನಾ ಬರೆದಿದ್ದಾರೆ.
ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಡುವ ಟಾಪ್-10 ನಟಿಯರು ಇಲ್ಲಿದ್ದಾರೆ ನೋಡಿ...
ಪಿರಿಯಡ್ಸ್ ಸಮಯದಲ್ಲಿ ನಾವು ನೋ ಎನ್ನುವಂತಿದ್ರೆ..ನನ್ನ ಪಿರಿಯಡ್ಸ್ ನಲ್ಲಿ ಎರಡು ದಿನ ಶೂಟಿಂಗ್ ಗೆ ರಜೆ ಪಡೆಯುವ ಅವಕಾಶವಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು. ಆದ್ರೆ ಹೊರಗೆ ಶೂಟಿಂಗ್ ಮಾಡ್ಬೇಕು. ಅದೂ ನಲವತ್ತು ಡಿಗ್ರಿ ತಾಪಮಾನದಲ್ಲಿ.. ಪಿರಿಯಡ್ ಪೇನ್, ಮೂಡ್ ಸ್ವಿಂಗ್ಸ್ (Mood Swings), ಡಿಹೈಡ್ರೇಶನ್ (Dehydration), ಹೀಟ್, ಲೋ ಬಿಪಿ (Low BP), ಬಿಸಿಲಿನಲ್ಲಿ ಹೆಚ್ಚು ಓಡಬೇಕಾದ ಪರಿಸ್ಥಿತಿಯಲ್ಲಿ ಶೂಟಿಂಗ್... ಅದು ಸುಲಭವಲ್ಲ ಎಂದು ಹೀನಾ ಖಾನ್ ಇನ್ಸ್ಟಾಗ್ರಾಮ್ (Instagram)ನಲ್ಲಿ ಬರೆದಿದ್ದಾರೆ.
ಹೀನಾ ಖಾನ್, ಟಿವಿ ಉದ್ಯಮದಲ್ಲಿ ಛಾಪು ಮೂಡಿಸಿದ ನಟಿ. ಈಗ ಹೀನಾ ಖಾನ್ ಸಿನಿಮಾಕ್ಕೆ ಪದಾರ್ಪಣೆ ಮಾಡಿದ್ದಾರೆ. ಸ್ಟಾರ್ ಪ್ಲಸ್ ಶೋ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮೂಲಕ ಹೀನಾ ಕಿರುತೆರೆಗೆ ಎಂಟ್ರಿಯಾಗಿದ್ದರು. ಈ ಶೋನಲ್ಲಿ ಅಕ್ಷರಾ ಹೆಸರಿನ ಮೂಲಕ ಹೀನಾ ಮನೆ ಮನೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.
ಸದ್ಯ ಹೀನಾ ತನ್ನ ಮೊದಲ ಪಂಜಾಬಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿಂದಾ ಶಿಂದಾ ನೋ ಪಾಪಾ ಈ ಚಿತ್ರದ ಮೂಲಕ ನಟಿ ಪಂಜಾಬಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ, ಆಗಾಗ ಸುದ್ದಿಯಲ್ಲಿರುತ್ತಾರೆ. ಈಗ ಪಿರಿಯಡ್ಸ್ ಬಗ್ಗೆ ಹೀನಾ ತಮ್ಮ ನೋವು ತೋಡಿಕೊಂಡಿದ್ದಾರೆ.
ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿದೆ 8 ಕಾರಣಗಳು
ಈ ಹಿಂದೆ ಕೆಲ ನಟಿಯರು ಪಿರಿಯಡ್ಸ್ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದರು. ಕರೀನಾ ಕಪೂರ್ ಕೂಡ, ಪಿರಿಯಡ್ಸ್ ಸಮಯದಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದರು. ಈಗಿನ ದಿನಗಳಲ್ಲಿ ಮುಟ್ಟಿನ ನೋವು, ಸೆಳೆತವನ್ನು (Muscle Cramp) ಮಹಿಳೆಯರು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಕೆಲಸಕ್ಕೆ ವಿಶ್ರಾಂತಿ ಬೇಕು ಎಂಬುದು ಅವರ ಆರೋಗ್ಯ ಸ್ಥಿತಿ ಅವಲಂಭಿಸಿದೆ ಎಂದಿದ್ದರು. ಪಿರಿಯಡ್ಸ್ ಸಮಯದಲ್ಲಿ ರಜೆ ನೀಡ್ಬೇಕು ಎಂಬ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿದೆ. ಕೆಲ ಕಂಪನಿಗಳು ಈಗಾಗಲೇ ಪಿರಿಯಡ್ಸ್ ಸಮಯದಲ್ಲಿ ಒಂದು ದಿನ ರಜೆ ತೆಗೆದುಕೊಳ್ಳಲು ಅನುಮತಿ ನೀಡಿವೆ.