Asianet Suvarna News Asianet Suvarna News

Work And Menopause: ಅಮ್ಮನಿಗೆ ಗೊತ್ತಿರಲ್ಲ..ನೀವೇ ಹೇಳಿ ಕೊಡ್ಬೇಕು !

ಮಹಿಳೆ (Women)ಯ ದೇಹದಲ್ಲಿ ಪ್ರತಿ ಹಂತದಲ್ಲೂ ಬದಲಾವಣೆ ಕಾಣಬಹುದು. ಪ್ರೌಢಾವಸ್ಥೆಯಲ್ಲಿ ಮುಟ್ಟು ಸೇರಿದಂತೆ ಮದುವೆ, ಗರ್ಭಧಾರಣೆ,ಹೆರಿಗೆ ಹೀಗೆ ಪ್ರತಿಯೊಂದು ಹಂತದಲ್ಲೂ ಹಾರ್ಮೋನ್ (Harmone) ಬದಲಾಗುತ್ತದೆ. ಮುಟ್ಟಿನ ಹಾಗೆ ಋತುಬಂಧ (Menopause)ಕೂಡಾ ಸಹಜ. ಇತ್ತೀಚಿನ ದಿನಗಳಲ್ಲಿ ಬಹುಬೇಗ ಮುಟ್ಟು ನಿಲ್ಲುತ್ತಿಲ್ಲ. ಇದಕ್ಕೆ ಮಹಿಳೆಯರು ಮಾಡ್ತಿರೋ ಶಿಫ್ಟ್ ವರ್ಕ್ (Shift Work) ಕೂಡಾ ಕಾರಣವಾಗ್ತಿದೆ. 

Shift Work May Affect Timing Of Menopause Onset Vin
Author
Bengaluru, First Published Mar 23, 2022, 4:36 PM IST

ಬದಲಾಗಿರುವ ಜೀವನಶೈಲಿ (Lifestyle), ಆಹಾರಪದ್ಧತಿ ಎಲ್ಲರ ಆರೋಗ್ಯ ಹದಗೆಡಲು ಕಾರಣವಾಗುತ್ತಿದೆ. ಅದರಲ್ಲೂ ಮಹಿಳೆಯರು ಋತುಚಕ್ರ, ಹೆರಿಗೆ, ಪಿಸಿಒಎಸ್, ಪಿಸಿಒಡಿ, ಋತುಬಂಧ ಎಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತೊದ್ದಾರೆ. ವೈರಸ್‌ನಿಂದ ಬದಲಾಗುತ್ತಿರುವ ಕೆಲಸದ ರೀತಿಯೂ ಸಹ ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ.  

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಸಾಮಾನ್ಯವಾಗಿ 46ರ ಗಡಿ ದಾಟುತ್ತಿದ್ದಂತೆ ಮಹಿಳೆಯರು ಋತುಬಂಧ (Menopause)ಕ್ಕೊಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮುಟ್ಟು ನಿಲ್ಲುವ ವರ್ಷ ಹೆಚ್ಚಾಗುತ್ತಿದೆ. 45 ವರ್ಷ ಕಳೆದರೂ ಕೆಲ ಮಹಿಳೆಯರಲ್ಲಿ ಮುಟ್ಟು ನಿಲ್ಲುತ್ತಿಲ್ಲ. ಇದಕ್ಕೆ ಮಹಿಳೆಯರು ಮಾಡುತ್ತಿರುವ ಶಿಫ್ಟ್ ಬದಲಾವಣೆಯ ಕೆಲಸ ಸಹ ಕಾರಣವಾಗುತ್ತಿದೆ. 

ಕಡಿಮೆ ವಯಸ್ಸಿನಲ್ಲಿ ಮುಟ್ಟು ನಿಲ್ಲುವುದನ್ನು ಅಕಾಲಿಕ ಅಂಡಾಶಯ ಕೊರತೆ ಅಥವಾ ಅಕಾಲಿಕ ಋತುಬಂಧವೆಂದು ಕರೆಯಲಾಗುತ್ತದೆ. ವಿಶ್ವದ ಶೇಕಡಾ ಐದರಷ್ಟು ಮಹಿಳೆಯರು ಆರಂಭಿಕ ಋತುಬಂಧ ಅನುಭವಿಸುತ್ತಾರೆ. ಬದಲಾದ ಜೀವನ ಶೈಲಿ,ಕೆಲವು ಔಷಧಿಗಳ ನಿರಂತರ ಬಳಕೆ,ಐವಿಎಫ್ ಸೇರಿದಂತೆ ಅನೇಕ ಕಾರಣಗಳಿಗೆ ಅಕಾಲಿಕ ಋತುಬಂಧಕ್ಕೆ ಕಾರಣವಾಗ್ತಿದೆ. ಇದಲ್ಲದೆ ಇನ್ನೂ ಕೆಲ ಕಾರಣಗಳಿವೆ.

Menopause Effects: ಮಿದುಳಿಗೆ ಮಂಕು ಬೂದಿ ಎರಚುವ ಮೆನೋಪಾಸ್

ಅಕಾಲಿಕ ಋತುಬಂಧಕ್ಕೆ ಕುಟುಂಬದ ಹಿನ್ನಲೆ ಕೂಡ ಕಾರಣವಾಗುತ್ತದೆ. ತಾಯಿ ಸೇರಿದಂತೆ ರಕ್ತ ಸಂಬಂಧಿಕರು ಅಕಾಲಿಕ ಋತು ಬಂಧಕ್ಕೊಳಗಾಗಿದ್ದರೆ ಅದು ಮುಂದಿನ ತಲೆಮಾರಿನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಧೂಮಪಾನ ಮಾಡದ ಮಹಿಳೆಯರಿಗಿಂತ ಧೂಮಪಾನ ಮಾಡುವ ಮಹಿಳೆಯರು 2 ವರ್ಷಗಳ ಮೊದಲೇ ಋತುಬಂಧಕ್ಕೊಳಗಾಗ್ತಾರೆ. ಋತುಬಂಧದ ವೇಳೆ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿರುವುದೇನೆಂದರೆ ಮಹಿಳೆಯರು ಬೇರೆ ಬೇರೆ ಶಿಫ್ಟ್‌ನಲ್ಲಿ ಒತ್ತಡದಿಂದ ಕೆಲಸ ಮಾಡುವುದು ವಿಳಂಬದ ಋತುಬಂಧಕ್ಕೆ ಕಾರಣವಾಗುತ್ತಿದೆ.

ಶಿಫ್ಟ್ ಕೆಲಸವು ಮಹಿಳಾ ಕಾರ್ಮಿಕರ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಪ್ರಾಯಶಃ ಸಿರ್ಕಾಡಿಯನ್ ಲಯದಲ್ಲಿನ ಅಡಚಣೆಗಳಿಂದಾಗಿ ನೈಸರ್ಗಿಕ ಋತುಬಂಧದ ಆಕ್ರಮಣವನ್ನು ವಿಳಂಬಗೊಳಿಸಬಹುದು ಎಂದು ಹೊಸ ಅಧ್ಯಯನವು ಸೂಚಿಸುತ್ತದೆ. ನಾರ್ತ್ ಅಮೇರಿಕನ್ ಮೆನೋಪಾಸ್ ಸೊಸೈಟಿ (NAMS) ನ ಜರ್ನಲ್ ಮೆನೋಪಾಸ್‌ನಲ್ಲಿ ಆನ್‌ಲೈನ್‌ನಲ್ಲಿ ಅಧ್ಯಯನದ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

ಮಹಿಳೆರನ್ನು ಮಾತ್ರವಲ್ಲ ಪುರುಷರನ್ನು ಕಾಡುತ್ತದೆ ಋತುಬಂಧ... ಏನಿದು ಸಮಸ್ಯೆ, ಪರಿಹಾರ ?

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಶಿಫ್ಟ್ ಕೆಲಸವು ಹೆಚ್ಚಿದೆ, ಉತ್ತರ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಆರ್ಥಿಕವಾಗಿ ಸಕ್ರಿಯವಾಗಿರುವ ಜನಸಂಖ್ಯೆಯ ಅಂದಾಜು 20% ಮಂದಿ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರಕು ಮತ್ತು ಸೇವೆಗಳ ಹೆಚ್ಚಿದ ಬೇಡಿಕೆಯನ್ನು ಉಳಿಸಿಕೊಳ್ಳಲು ಶಿಫ್ಟ್ ಕೆಲಸವು ಆರ್ಥಿಕ ಅಗತ್ಯವಾಗಿ ಮಾರ್ಪಟ್ಟಿದ್ದರೂ, ಇದು ಮಹಿಳೆಯರಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಜಠರ ಹುಣ್ಣುಗಳು, ಟೈಪ್ 2 ಮಧುಮೇಹ, ಸ್ತನಕ್ಯಾನ್ಸರ್‌ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ..

ಹಿಂದಿನ ಅಧ್ಯಯನಗಳು ಕೆಲಸ ಮಾಡುವ ವಯಸ್ಕರ ಮೇಲೆ ಶಿಫ್ಟ್ ಕೆಲಸದ ವಿವಿಧ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ತೋರಿಸಿದ್ದರೂ, ಮಧ್ಯವಯಸ್ಕ ಮತ್ತು ಹಿರಿಯ ವಯಸ್ಕರ ಮೇಲೆ ಶಿಫ್ಟ್ ಕೆಲಸದ ಪರಿಣಾಮದ ಬಗ್ಗೆ ಕಡಿಮೆ ಸಂಶೋಧನೆ ಕಂಡುಬಂದಿದೆ. ನೈಸರ್ಗಿಕ ಋತುಬಂಧದಲ್ಲಿ ವಯಸ್ಸು ಮಧ್ಯವಯಸ್ಕ ಮತ್ತು ವಯಸ್ಸಾದ ಮಹಿಳೆಯರಿಗೆ ಕಾಳಜಿಯ ವಿಷಯವಾಗಿದೆ, ಏಕೆಂದರೆ ಆರಂಭಿಕ ಅಥವಾ ತಡವಾದ ಋತುಬಂಧ ಎರಡೂ ಸಹ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳೂ ಇವೆ. 

ಋತುಬಂಧದಲ್ಲಿ ವಯಸ್ಸಿನ ಮೇಲೆ ಪರಿಣಾಮ ಬೀರುವ ಅಂಶವೆಂದರೆ ಶಿಫ್ಟ್ ಕೆಲಸ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ. ಹೆಚ್ಚುವರಿಯಾಗಿ, ನೈಟ್ ಶಿಫ್ಟ್‌ನಲ್ಲಿ ಕತ್ತಲೆಯ ಸಮಯದಲ್ಲಿ ಕೃತಕ ಬೆಳಕಿಗೆ ಅತಿಯಾದ ಒಡ್ಡಿಕೊಳ್ಳುವಿಕೆಯು ಮೆಲಟೋನಿನ್ ನಿಗ್ರಹವನ್ನು ಉಂಟುಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದು ಅಂಡಾಶಯದ ಚಟುವಟಿಕೆಯ ಅಡ್ಡಿಗೆ ಕಾರಣವಾಗುತ್ತದೆ.

Follow Us:
Download App:
  • android
  • ios