ಮೆನೋಪಾಸ್ ಅವಧಿಯಲ್ಲಿ ಮೂರನೇ ಎರಡಷ್ಟು ಮಹಿಳೆಯರ ನೆನಪಿನ ಶಕ್ತಿಯಲ್ಲಿ ಬದಲಾವಣೆಯಾಗುವುದು ಅಧ್ಯಯನದಿಂದ ಸಾಬೀತಾಗಿದೆ. ಯೋಚನಾಕ್ರಮದಲ್ಲಿ ಸಮಸ್ಯೆ, ತರ್ಕಬದ್ಧವಾಗಿ ಚಿಂತನೆ ಮಾಡಲು ಸಾಧ್ಯವಾಗದಿರುವುದು ಹಾಗೂ ಹಳೆಯ ನೆನಪುಗಳು ಮರೆತುಹೋಗುವುದು ಸಾಮಾನ್ಯ. 

ತಿಂಗಳ ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಮ್ಮೆಯಾದರೂ ಬೈದುಕೊಳ್ಳದೆ ಇರುವುದಿಲ್ಲ. “ಇದೊಂದು ಕರ್ಮ ಯಾಕಿದೆಯೋ’ ಎನ್ನುವ ಧಾಟಿಯಲ್ಲೇ ಅವರ ಚಿಂತನೆಯಿರುತ್ತದೆ. ನಾಲ್ಕಾರು ಮಹಿಳೆಯರು ಸೇರಿದರೆಂದರೆ ಮುಚ್ಚುಮರೆಯಿಲ್ಲದೆ ಆ ದಿನಗಳ ಅನುಭವಗಳನ್ನು ಹಂಚಿಕೊಳ್ಳುವ ಜತೆಗೆ, “ಮುಟ್ಟಾಗುವುದು ಬಿಟ್ಟ ಬಳಿಕ ಅದೆಷ್ಟು ಆರಾಮಾಗಿರಬಹುದು’ ಎಂದೆಲ್ಲ ಮಾತನಾಡಿಕೊಳ್ಳುವುದು ಸಹಜ. ಆದರೆ, ಮುಟ್ಟು (Monthly Period) ಬಿಡುವುದಕ್ಕೂ ಮುನ್ನ ಮೆನೋಪಾಸ್ (Menopause) ಹಂತ ದಾಟುವುದಿದೆಯಲ್ಲ, ಅದು ನಿಜಕ್ಕೂ ಸಂಕಟಮಯ. 

ಮೆನೋಪಾಸ್ ನಿಂದಾಗುವ ವಿವಿಧ ಸಮಸ್ಯೆಗಳ ಕುರಿತು ಬಹುತೇಕ ಎಲ್ಲರಿಗೂ ಅರಿವಿದೆ. ಮೆನೋಪಾಸ್ ಕೇವಲ ಶಾರೀರಿಕ ಆರೋಗ್ಯದ ಮೇಲಷ್ಟೇ ಅಲ್ಲ, ಪ್ರಜ್ಞೆ(Cognitive)ಯ ಮೇಲೂ ಪರಿಣಾಮ ಬೀರುತ್ತದೆ. ಮಿದುಳಿನಲ್ಲಿ ಮಂಕು ಕವಿದಂತಾಗುವುದು (Brain Fog), ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗದಿರುವ ಸ್ಥಿತಿ ಉಂಟಾಗಬಹುದು.

ವಯಸ್ಸಾದಂತೆ ಚಿಂತನಾ ಕ್ರಮ(Thought Process)ದ ಮೇಲೆ ಪರಿಣಾಮವುಂಟಾಗುವುದು ಸಹಜ. ಆದರೆ, ಮೆನೋಪಾಸ್ ಸಮಯದಲ್ಲಿ ಪ್ರಜ್ಞಾಶಕ್ತಿಗೆ ನಿಜವಾಗಿಯೂ ಮಂಕು ಕವಿಯುವುದಲ್ಲದೆ, ಪ್ರಜ್ಞೆಯಲ್ಲಿ ಏರಿಳಿತವಾಗುತ್ತದೆ. ಈ ಸಮಯದಲ್ಲಿ ಗರ್ಭಕೋಶದ ಹಾರ್ಮೋನ್ (Ovarian Harmone) ಬಿಡುಗಡೆಯಲ್ಲಿ ವ್ಯತ್ಯಾಸವಾಗುವುದು ಇದಕ್ಕೆ ಕಾರಣ.

ಈಸ್ಟ್ರೋಜನ್ (Estrogen) ಹಾರ್ಮೋನ್ ನ ಒಂದು ವಿಧವಾದ ಈಸ್ಟ್ರಾಡಿಯೊಲ್ (Estradiol) ಎನ್ನುವ ಗರ್ಭಕೋಶದ ಹಾರ್ಮೋನ್ ಮತ್ತು ಪ್ರೊಜೆಸ್ಟಿರಾನ್ (Progesterone) ಹಾರ್ಮೋನುಗಳು ಮಹಿಳೆಯರ ಯೋಚನಾಕ್ರಮ ಹಾಗೂ ನೆನಪಿನ ಶಕ್ತಿಯನ್ನು ಉತ್ತೇಜಿಸುತ್ತವೆ. ಆದರೆ, ಈ ಸಮಯದಲ್ಲಿ ತೀವ್ರ ಹಾರ್ಮೋನ್ ವ್ಯತ್ಯಾಸವಾಗುವುದರಿಂದ ನೆನಪಿನ ಶಕ್ತಿ ಹಾಗೂ ಚಿಂತನಾಕ್ರಮ ಚುರುಕು ಕಳೆದುಕೊಳ್ಳುತ್ತವೆ. ಕೆಲವೊಮ್ಮೆ ಈಸ್ಟ್ರಾಡಿಯೊಲ್ ಹಾರ್ಮೋನ್ ತೀವ್ರವಾಗಿ ಕುಸಿತವಾದರೆ ಅದು ಭಾರೀ ಸಂಕಷ್ಟವನ್ನು ತರಬಲ್ಲದು. ಪ್ರಜ್ಞಾಶಕ್ತಿ ಸಂಪೂರ್ಣವಾಗಿ ನಾಶವಾಗಿಬಿಡುವ ಅಪಾಯವೂ ಇರುತ್ತದೆ. ಆಗ ಮಹಿಳೆಯರು ಬುದ್ಧಿಭ್ರಮಣೆಗೆ ಒಳಗಾದಂತೆ ವರ್ತಿಸಬಹುದು. ಮರೆವು ಹೆಚ್ಚಾಗಿ ಮರೆವಿನ ಕಾಯಿಲೆ ಆರಂಭವಾಯಿತೇನೋ ಎನ್ನುವಷ್ಟರ ಮಟ್ಟಿಗೆ ವರ್ತನೆಯಲ್ಲಿ ವ್ಯತ್ಯಾಸವಾಗಬಹುದು. 

ಮೆನೋಪಾಸ್ ಸಮಯದಲ್ಲಿ ಪ್ರಜ್ಞಾಶಕ್ತಿಗೆ ಧಕ್ಕೆಯಾದರೂ ಕೆಲವೊಮ್ಮೆ ಇತರ ಲಕ್ಷಣಗಳು ಕಾಣಿಸದೇ ಇರಬಹುದು. ಅಂದರೆ, ಇತರ ಮೆನೋಪಾಸ್ ಲಕ್ಷಣಗಳು ಪ್ರಜ್ಞಾಶಕ್ತಿ ಕುಂದುವುದಕ್ಕೆ ಕಾರಣವಾಗುವುದಿಲ್ಲ. ಆದರೆ, ಮೆನೋಪಾಸ್ ಸಂಬಂಧಿತ ಖಿನ್ನತೆ (Depression) ಮತ್ತು ಉದ್ವೇಗ, ನಿದ್ರಾಹೀನತೆ, ವಾಸೊಮೊಟಾರ್ ಅಂದರೆ ರಕ್ತನಾಳಗಳಲ್ಲಾಗುವ ವ್ಯತ್ಯಾಸದ ಸಮಸ್ಯೆಗಳಿಂದ ಪ್ರಜ್ಞಾಹೀನತೆಯ ತೊಂದರೆ ಹೆಚ್ಚಬಹುದು. 
ಮೆನೋಪಾಸ್ ಸಮಯದಲ್ಲಿ ನೆನಪಿನ ಶಕ್ತಿಯಲ್ಲಿ ಬದಲಾವಣೆ, ಯೋಚನಾಕ್ರಮದಲ್ಲಿ ಸಮಸ್ಯೆ, ತರ್ಕಬದ್ಧವಾಗಿ ಚಿಂತನೆ ಮಾಡಲು ಸಾಧ್ಯವಾಗದಿರುವುದು ಹಾಗೂ ಮರೆತು(Forget)ಹೋಗುವುದು ಸಾಮಾನ್ಯ. ಆದರೆ, ಇವೆಲ್ಲವೂ ತಾತ್ಕಾಲಿಕ. ಮೆನೋಪಾಸ್ ಮುಗಿದ ತಕ್ಷಣ ಸಮಸ್ಯೆಗಳೂ ಮುಗಿದುಹೋಗುತ್ತವೆ. ಆದರೆ, ಕೆಲವು ಮಹಿಳೆಯರಿಗೆ ಮಾತ್ರ ಗಂಭೀರ ಪರಿಣಾಮಗಳುಂಟಾಗುತ್ತವೆ. ಅವರ ಉತ್ಪಾದತೆ ಕುಸಿದು ಕ್ರಮೇಣ ಡೆಮೆನ್ಷಿಯಾ ಅಂದರೆ ಮರೆವಿನ ರೋಗ ಆರಂಭವಾಗಬಹುದು. 

Health Tips : ಬಹಳ ಆರೋಗ್ಯಕಾರಿ ಎಂದುಕೊಂಡ ಕ್ಯಾರೆಟ್‌ನಲ್ಲೂ ಇದೆ ಕೆಟ್ಟ ಗುಣ

ಉದ್ಯೋಗಸ್ಥೆಯರಿಗೆ (Working Women) ಸಮಸ್ಯೆ
ಆಸ್ಟ್ರೇಲಿಯಾದ ಮೊನಾಶ್ (Monash) ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಈ ಪರಿವರ್ತನೆಯ ಹಂತದಲ್ಲಿ ಶೇ.60ಕ್ಕಿಂತ ಅಧಿಕ ಮಹಿಳೆಯರು ಪ್ರಜ್ಞಾಶಕ್ತಿಯಲ್ಲಿ ತೊಂದರೆ ಎದುರಿಸುತ್ತಾರೆ. ಜನರ ಹೆಸರು ಮರೆತುಹೋಗುವುದು, ಮಾತುಕತೆ ನಡೆಸುವಾಗ ಸೂಕ್ತ ಶಬ್ದ ನೆನಪಾಗದಿರುವುದು ಇವೆಲ್ಲ ಅತ್ಯಂತ ಸಹಜ. ನಿರ್ಧಾರ ತೆಗೆದುಕೊಳ್ಳಲೂ ಸಾಧ್ಯವಾಗದೆ ಚಡಪಡಿಸುತ್ತಾರೆ. ಈ ವಯೋಮಾನದ ಮಹಿಳೆಯರು ಹೊಸ ಶಬ್ದ ಕಲಿತುಕೊಳ್ಳಲು ಒದ್ದಾಡುತ್ತಾರೆ. 

Valentine Day : ಕೊಡುಕೊಳ್ಳುವ ಮುನ್ನ ಯಾವ ಬಣ್ಣದ ಗುಲಾಬಿಗೆ ಏನರ್ಥ ತಿಳಿಯಿರಿ

ಕಚೇರಿಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳೆಯರಿಗೂ ಮೆನೋಪಾಸ್ ಹಂತ ಸಮಸ್ಯೆಯಾಗಿ ಪರಿಣಮಿಸುತ್ತದೆ. ಅವರ ಕೆಲಸಕಾರ್ಯಗಳ ಮೇಲೆ, ಕೆಲಸದ ಶೈಲಿಯ ಮೇಲೆ, ಉತ್ಪಾದಕತೆಯ (Productivity) ಮೇಲೆ ಪರಿಣಾಮ ಬೀರುತ್ತದೆ. ವೃತ್ತಿಯಲ್ಲಿ ಸಮಾಧಾನ ಸಿಗದೆ ಅತೃಪ್ತಿ ಮನೆ ಮಾಡುತ್ತದೆ. ಏಕಾಗ್ರತೆಯ ಕೊರತೆ ಹಾಗೂ ನೆನಪಿನ ಶಕ್ತಿಯ ಕುಸಿತದಿಂದಾಗಿ ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಂದಿನ ಕ್ಷಮತೆ ಕಳೆದುಕೊಂಡಂತೆ ಭಾಸವಾಗುತ್ತದೆ. ಜತೆಗೆ, ಅಲ್ಜೀಮರ್ಸ್ (Alzheimer's ) ರೋಗದ ಅಪಾಯವೂ ಇದ್ದೇ ಇದೆ. 

ಪರಿಹಾರವೇನು?
ನೈಸರ್ಗಿಕ ಆಹಾರ (Natural Food), ಹಸಿರು (Green) ಆಹಾರ, ಸಂಸ್ಕರಿಸದ ಹಾಗೂ ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳ ಸೇವನೆ, ಸಾಮಾಜಿಕ ಬಾಂಧವ್ಯ, ಕುಟುಂಬದೊಂದಿಗೆ ಒಡನಾಟ, ಸೂಕ್ತ ದೈಹಿಕ ಚಟುವಟಿಕೆ ಹಾಗೂ ಧ್ಯಾನ, ಪ್ರಾಣಾಯಮಗಳಿಂದ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದು.