Asianet Suvarna News Asianet Suvarna News

ಈ ಸುಂದರ ಹುಡುಗಿಗಾಯ್ತು ಮಹಾ ಮೋಸ… ಡೇಟ್ ನಲ್ಲಿ ಕೈಕೊಟ್ಟ ಪ್ಲಂಬರ್

ಮೊದಲ ಡೇಟಿಂಗ್ ವಿಶೇಷವಾಗಿರುತ್ತದೆ. ಪರಸ್ಪರರ ಬಗ್ಗೆ ಮಾಹಿತಿ ಇಲ್ಲದ ಕಾರಣ ಭಯ, ಕನ್ಫ್ಯೂಸ್ ಕೂಡ ಇರುತ್ತೆ. ಕೆಲವರು ಫಸ್ಟ್ ಡೇಟಿಂಗ್ ನಲ್ಲೇ ಮೋಸ ಹೋಗ್ತಾರೆ. ಈ ಸುಂದರ ಹುಡುಗಿ ಕೂಡ ಡೇಟ್ ಗೆ ಹೋಗಿ ಪರ್ಸ್ ಖಾಲಿಮಾಡಿಕೊಂಡು ಬಂದಿದ್ದಾಳೆ.  
 

Scandal With This Beautiful Model Plumber Run In Middle Of Date roo
Author
First Published Feb 1, 2024, 4:25 PM IST

ಸಂಬಂಧ ಮುಂದುವರೆಸುವ ಮುನ್ನ ಈಗಿನ ಯುವಜನತೆ ಡೇಟ್ ಗೆ ಹೋಗಲು ಇಷ್ಟಪಡ್ತಾರೆ. ಅಲ್ಲಿ ಒಬ್ಬರನ್ನೊಬ್ಬರು ಅರಿಯಬಹುದು. ಸಂಬಂಧ ಮುಂದುವರೆಸಬೇಕೆ, ಬೇಡ್ವೇ ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ಕಾರಣಕ್ಕೆ ಡೇಟಿಂಗ್ ಗೆ ಫುಲ್ ಮಾರ್ಕ್ಸ್ ಕೊಡೋರ ಸಂಖ್ಯೆ ಹೆಚ್ಚಿದೆ. ಚೆಂದದ ಹುಡುಗಿಯೊಬ್ಬಳು ಮೊದಲ ಬಾರಿಗೆ ಡೇಟ್ ಗೆ ಬಂದಿದ್ದಾಳೆ ಅಂದ್ರೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗಿರುತ್ತದೆ. ಆಕೆಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಅವರು ಮಾಡುವ ಸಣ್ಣ ಸಣ್ಣ ವಿಷ್ಯವೂ ಇಲ್ಲಿ ಮುಖ್ಯವಾಗುವ ಕಾರಣ ಆಕೆಗಾಗಿ ಏನು ಮಾಡಲೂ ಸಿದ್ಧರಿರ್ತಾರೆ. ನಾನು ಫರ್ಫೆಕ್ಟ್ ಎಂಬುದನ್ನು ತೋರಿಸೋದು ಅವರ ಮುಖ್ಯ ಉದ್ದೇಶವಾಗಿರುತ್ತದೆ. ಮೊದಲ ಡೇಟ್ ನಲ್ಲಿ ಪಾಸ್ ಆದ್ರೆ ಅರ್ಥ ಪಾಸ್ ಆದಂತೆ. ಸಂಬಂಧ ಒಂದು ಹೆಜ್ಜೆ ಮುಂದೆ ಹೋಗೋದಲ್ಲದೆ ಇನ್ನೊಂದೆರಡು ಬಾರಿಯಾದ್ರೂ ಆಕೆಯನ್ನು ಭೇಟಿಯಾಗೋ ಅವಕಾಶ ಸಿಗುತ್ತೆ. ಎಲ್ಲರ ಮೊದಲ ಡೇಟ್ ಅದ್ಭುತವಾಗಿರಬೇಕು ಎಂದೇನಿಲ್ಲ. ಕೆಲವರು ಅತ್ಯಂತ ಕೆಟ್ಟ ಅನುಭವ ಹೊಂದಿರುತ್ತಾರೆ. ಅದ್ರಲ್ಲಿ ಈ ಮಾಡೆಲ್ ಕೂಡ ಸೇರಿದ್ದಾಳೆ. ವ್ಯಕ್ತಿಯೊಬ್ಬನ ಜೊತೆ ಡೇಟ್ ಗೆ ಹೋಗಿದ್ದ ಆಕೆ ಆತನ ವರ್ತನೆ ನೋಡಿ ದಂಗಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳೆ.

ಆಕೆ ಹೆಸರು ದಶಾ ಡೇಲಿ. ಆಸ್ಟ್ರೇಲಿಯಾ (Australia) ದ ಪರ್ತ್ ನಿವಾಸಿ. ದಶಾ ಡೇಲಿಗೆ 28 ವರ್ಷ ವಯಸ್ಸು. ದಶಾ ಡೇಲಿ ಓನ್ಲಿ ಫ್ಯಾನ್ಸ್ನ (Faonly Fans)ಲ್ಲಿ ಖಾತೆ ಹೊಂದಿದ್ದಾಳೆ. ಅಲ್ಲಿ ತನ್ನ ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾಳೆ. ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿರುವ ದಶಾ ಡೇಲಿ, ಫೋಟೋ ಅಪ್ಲೋಡ್ ಮಾಡಿ ಹಣ ಸಂಪಾದನೆ ಮಾಡ್ತಿದ್ದಾಳೆ. ಕೆಲ ದಿನಗಳ ಹಿಂದೆ ದಶಾ ಡೇಲಿ, 22 ವರ್ಷದ ಪ್ಲಂಬರ್ ಜೊತೆ ಡೇಟಿಂಗ್ ಗೆ ಹೋಗಿದ್ದಳು. ಇದು ಆತನ ಜೊತೆ ಮೊದಲ ಡೇಟ್. 

ಸ್ಪೇಸ್‌ನಿಂದ ಭಾರತಕ್ಕೆ ಕಲ್ಪನಾ ಚಾವ್ಲಾರ ಕಡೆಯ ಸಂದೇಶ; ಇಲ್ಲಿದೆ ವಿಡಿಯೋ

ಇಬ್ಬರ ಆರಂಭ ಚೆನ್ನಾಗಿಯೇ ಇತ್ತು. ರೆಸ್ಟೋರೆಂಟ್ ನಲ್ಲಿ ಇಷ್ಟದ ಆಹಾರ ಆರ್ಡರ್ ಮಾಡಿ ಖುಷಿಯಾಗಿ ತಿಂದಿದ್ದಾಯ್ತು. ಆಮೇಲೆ ಬಾತ್ ರೂಮ್ ಗೆ ಹೋಗಿ ಬರ್ತೇನೆ ಎಂದು ಹೋದ ಪ್ಲಂಬರ್ ಪತ್ತೆಯೇ ಇಲ್ಲ. ಹತ್ತು, ಹದಿನೈದು ನಿಮಿಷ ದಶಾ ಡೇಲಿ ಅಲ್ಲಿಯೇ ಕಾದಿದ್ದಾಳೆ. ಆದ್ರೆ ಹುಡುಗ ಬರಲಿಲ್ಲ. ಕೊನೆಯಲ್ಲಿ ಆತ ಕೈಕೊಟ್ಟ ಎಂಬುದನ್ನು ದಶಾ ಅರಿತಿದ್ದಾಳೆ. ಅಲ್ಲಿಯೇ ವಿಡಿಯೋ ಮಾಡಲು ಮುಂದಾಗಿದ್ದಾಳೆ. ತಿಂದಿಟ್ಟ ಪ್ಲೇಟ್ ಗಳನ್ನು ತೋರಿಸಿದ ದಶಾ, ಬಾತ್ ರೂಮಿಗೆ ಹೋದವನು ಬಂದಿಲ್ಲ. ನಾನೇ ಬಿಲ್ ಪಾವತಿ ಮಾಡ್ತಿದ್ದೇನೆ ಎಂದಿದ್ದಾಳೆ.

ಈ ವಿಡಿಯೋವನ್ನು ಆಕೆ ಟಿಕ್ ಟಾಕ್ (Tik Tok) ನಲ್ಲಿ ಕೂಡ ಪೋಸ್ಟ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ಘಟನೆ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಾಳೆ. ಇಂಥ ಕೆಟ್ಟ ಡೇಟ್ ಇದೇ ಮೊದಲು. ಆತ ಈಗ್ಲೂ ನನ್ನನ್ನು ಸಂಪರ್ಕಿಸಿಲ್ಲ. ಸಂಪೂರ್ಣವಾಗಿ ನಾಪತ್ತೆಯಾಗಿದ್ದಾನೆ. ನನಗೆ ಈಗ್ಲೂ ಕೋಪ ಬರ್ತಿದೆ. ಬಿಲ್ ಕಡಿಮೆ ಏನೂ ಇರಲಿಲ್ಲ. 16 ಸಾವಿರದ 6 ನೂರಕ್ಕೂ ಹೆಚ್ಚು ಬಿಲ್ ಪಾವತಿಸಿ ಬಂದಿದ್ದೇನೆ ಎಂದು ದಶಾ ಡೇಲಿ ಹೇಳಿದ್ದಾಳೆ. 

ವರನೇ ಇಲ್ಲದೆ 568 ಹೆಣ್ಣುಮಕ್ಕಳ ವಿವಾಹ! ಅಬ್ಬಬ್ಬಾ, ಹಣಕ್ಕಾಗಿ ಏನೇನ್ ನೌಟಂಕಿ ನಾಟ್ಕ ಮಾಡ್ತಾರಪ್ಪಾ?!

ಟಿಕ್ ಟಾಕ್ (Tik Tok) ನಲ್ಲಿ ದಶಾ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಡೇಟ್ ನಲ್ಲಿ ಪುರುಷರೇ ಬಿಲ್ ಪಾವತಿ ಮಾಡ್ಬೇಕು ಎಂದು ಏಕೆ ನಿರೀಕ್ಷಿಸುತ್ತೀರಿ ಎಂದು ಕೇಳಿದ್ದಾರೆ. ಮತ್ತೆ ಕೆಲವರು ಡೇಟ್ ಗೆ ಬಂದ ಪ್ಲಂಬರ್ ಮಾಡಿದ ಕೆಲಸವನ್ನು ಖಂಡಿಸಿದ್ದಾರೆ. ಬಿಲ್ ಇಬ್ಬರೂ ಹಂಚಿಕೊಳ್ಳೋದು ಉತ್ತಮವಾಗಿತ್ತು ಎಂದಿದ್ದಾರೆ. 

Follow Us:
Download App:
  • android
  • ios