ವಿಶ್ವ ಅಮ್ಮಂದಿರ ದಿನದಂದು ಸೌದಿ ಅರೇಬಿಯಾದಲ್ಲಿ ಮಹಿಳೆಯರ ಸಾಧನೆ ಬೆಳಕಿಗೆ ಬಂದಿದೆ. ವಸತಿ ಮತ್ತು ಆಹಾರ ಸೇವಾ ವಲಯದ ಅರ್ಧದಷ್ಟು ಸಂಸ್ಥೆಗಳು ಮಹಿಳೆಯರ ಒಡೆತನದಲ್ಲಿವೆ. 59,800 ಮಹಿಳಾ ಒಡೆತನದ ಉದ್ಯಮಗಳು ಈ ವಲಯದ ಶೇ.49.7 ರಷ್ಟಿದೆ. ಒಟ್ಟಾರೆ ವಾಣಿಜ್ಯ ನೋಂದಣಿಯೂ ಶೇ.48 ರಷ್ಟು ಏರಿಕೆಯಾಗಿದೆ. ಸೌದಿ ಮಹಿಳೆಯರ ಆರ್ಥಿಕ ಸಬಲೀಕರಣ ಗಮನಾರ್ಹ.

 ಇಂದು ವಿಶ್ವ ಅಮ್ಮಂದಿರ ದಿನ. ಮನೆಯಲ್ಲಿ ಗೃಹಿಣಿಯಾಗಿರುವ ಅಮ್ಮಂದಿರು, ಗೃಹಿಣಿಯಾಗಿರುವ ಜೊತೆಜೊತೆಗೇನೇ ಹೊರಗಡೆ ದುಡಿದು ಸಂಸಾರ ನಿಭಾಯಿಸುವ ಅಮ್ಮಂದಿರು ಎಲ್ಲರಿಗೂ ಇಂದು ವಿಶ್ವಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಮ್ಮ ಎಂದರೆ ಅಷ್ಟೇ ಸಾಕೆ...? ಎನ್ನುವ ಮಾತುಗಳು ವರ್ಷದಲ್ಲಿ ಒಮ್ಮೆಯಾದರೂ ಕೇಳುವ ದಿನವಿದು. ಅಷ್ಟಕ್ಕೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಮ್ಮಂದಿರಿಗೇನೂ ಕೊರತೆ ಇಲ್ಲ. ಇದು ಇಂದು-ನಿನ್ನೆಯ ಮಾತಂತೂ ಅಲ್ಲವೇ ಅಲ್ಲ. ನಮ್ಮ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲಿ ಅಮ್ಮಂದಿರು ಮಾಡಿರುವ ಸಾಧನೆ, ದೇಶಕ್ಕಾಗಿ ಮಾಡಿರುವ ಪ್ರಾಣತ್ಯಾಗದ ಮುಂದೆ ಇಂದು ಹೊರಗೆ ಹೋಗಿ ದುಡಿಯುವ ಅಮ್ಮಂದಿರ ಕೆಲಸವೂ ಒಮ್ಮೊಮ್ಮೆ ಗೌಣ ಎನ್ನಿಸಿಬಿಡುತ್ತದೆ. ಇದೀಗ ನಮ್ಮ ಭಾರತೀಯ ಸೇನೆಯಲ್ಲಿಯೂ ಮಹಿಳೆಯರು ಮುಂದಾಗಿ ದೇಶವೇ ಮೊದಲು ಎನ್ನುವುದನ್ನು ಸಾರುತ್ತಿದ್ದಾರೆ. ಆದರೆ ಸಿನಿಮಾಗಳೇ ಜೀವಾಳ, ಅಲ್ಲಿ ಇರುವವರೇ ದೇವತೆಗಳು ಎಂದು ಬಿಂಬಿತವಾಗಿರುವ ಈ ಕಾಲಘಟ್ಟದಲ್ಲಿ ಇಂಥ ಮಹಾನ್​ ಸಾಧಕಿಯರು ಕಾಣಿಸುವುದೇ ಇಲ್ಲ ಎನ್ನುವುದೂ ಅಷ್ಟೇ ಸತ್ಯದ ಮಾತು ಬಿಡಿ! 

ಅವುಗಳ ನಡುವೆಯೇ ಇದೀಗ, ಸೌದಿ ಅರೇಬಿಯಾದ ಅಮ್ಮಂದಿರ ಕುತೂಹಲದ ವಿಷಯವೊಂದು ಇಂದು ರಿವೀಲ್​ ಆಗಿದೆ. ಮುಸ್ಲಿಂ ಮಹಿಳೆಯರಿಗೆ ಅಷ್ಟೊಂದು ಅವಕಾಶಗಳು ಇರುವುದಿಲ್ಲ, ಅವರಿಗೆ ಹೊರಗೆ ಹೋಗಿ ದುಡಿಯಲು ಕೊಡುವುದೇ ಇಲ್ಲ ಎನ್ನುವ ಮಾತಿದೆ. ಅದು ಕೆಲವೊಂದು ದೇಶಗಳಲ್ಲಿ ನಿಜವಾಗುತ್ತಿದೆ ಕೂಡ. ಆದರೆ ಅಷ್ಟೊಂದು ಕಟ್ಟಳೆಗಳ ನಡುವೆಯೇ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದ ಅರ್ಧ ದೇಶ ಈ ಮಹಿಳೆಯರ ಕೈಯಲ್ಲಿ ಇದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ದೇಶದ ಅರ್ಥವ್ಯವಸ್ಥೆಯಲ್ಲಿ ಈ ದೇಶದಲ್ಲಿ ಮಹಿಳೆಯರ ಪಾಲು ಬಹುದೊಡ್ಡದಿದೆ ಎನ್ನುವ ರೋಚಕ ಸತ್ಯವಿದು. 

ಇವರು ಸೀತಾ ಅಲ್ಲಾ ಗೀತಾ! ಸೀತಾರಾಮ ಸಿಹಿ ರಿಯಲ್​ ಅಮ್ಮನ ಕ್ಯೂಟ್​ ಡಾನ್ಸ್​ ವೈರಲ್​

ಸೌದಿ ಅರೇಬಿಯಾದ ವಸತಿ ಮತ್ತು ಆಹಾರ ಸೇವಾ ವಲಯದಲ್ಲಿರುವ ಎಲ್ಲಾ ಸಂಸ್ಥೆಗಳಲ್ಲಿ ಸುಮಾರು ಅರ್ಧದಷ್ಟು ಈಗ ಮಹಿಳೆಯರ ಒಡೆತನದಲ್ಲಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಮಾನ್ಯ ಪ್ರಾಧಿಕಾರ (ಮೊನ್ಶಾತ್) ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 59,800 ಮಹಿಳಾ ಒಡೆತನದ ವ್ಯವಹಾರಗಳು, ಆರ್ಥಿಕತೆಯ ಈ ಪ್ರಮುಖ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಾಗದಲ್ಲಿನ ಎಲ್ಲಾ ಸಂಸ್ಥೆಗಳಲ್ಲಿ 49.7 ಪ್ರತಿಶತವನ್ನು ಪ್ರತಿನಿಧಿಸುತ್ತವೆ. ಇದು ನಿಜಕ್ಕೂ ಅಚ್ಚರಿಯ ವಿಷಯವೇ ಆಗಿದೆ. ಈ ವರದಿಯಲ್ಲಿ ವಸತಿ ಮತ್ತು ಆಹಾರ ಸೇವಾ ವಲಯಕ್ಕೆ ಶಕ್ತಿ ತುಂಬುವ ಕಾರ್ಯಪಡೆಯ ವಿವರವಾದ ವಿವರಣೆಯನ್ನು ಸಹ ನೀಡಲಾಗಿದೆ. 2024 ರಲ್ಲಿ, ವಸತಿ ಮತ್ತು ಆಹಾರ ಸೇವಾ ಉದ್ಯಮವು 7 ಲಕ್ಷದ 12 ಸಾವಿರ ಕಾರ್ಮಿಕರನ್ನು ನೇಮಿಸಿಕೊಂಡಿದೆ, ಇದರಲ್ಲಿ 2 ಲಕ್ಷದ 50 ಸಾವಿರ ಸೂಕ್ಷ್ಮ ಉದ್ಯಮಗಳು, 2 ಲಕ್ಷದ 58 ಸಾವಿರದ 600 ಸಣ್ಣ ಉದ್ಯಮಗಳು, 1 ಲಕ್ಷದ 15 ಸಾವಿರ ಮಧ್ಯಮ ಗಾತ್ರದ ಸಂಸ್ಥೆಗಳು ಮತ್ತು 88 ಸಾವಿರ ದೊಡ್ಡ ಕಂಪೆನಿಗಳು ಸೇರಿವೆ.

ವ್ಯಾಪಾರ ಚಟುವಟಿಕೆಯಲ್ಲಿನ ಈ ಏರಿಕೆಯ ಪ್ರವೃತ್ತಿ ಆತಿಥ್ಯ ವಲಯಕ್ಕೆ ಸೀಮಿತವಾಗಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025 ರ ಮೊದಲ ತ್ರೈಮಾಸಿಕದಲ್ಲಿ ವಾಣಿಜ್ಯ ನೋಂದಣಿಗಳಲ್ಲಿ ಶೇಕಡಾ 48 ರಷ್ಟು ಹೆಚ್ಚಳವಾಗಿದೆ ಎಂದು ವಾಣಿಜ್ಯ ಸಚಿವಾಲಯ ವರದಿ ಮಾಡಿದೆ. ಜನವರಿ ಮತ್ತು ಮಾರ್ಚ್ ನಡುವೆ 1 ಲಕ್ಷದ 54 ಸಾವಿರಕ್ಕೂ ಹೆಚ್ಚು ಹೊಸ ವಾಣಿಜ್ಯ ನೋಂದಣಿಗಳನ್ನು ನೀಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು ಸಕ್ರಿಯ ನೋಂದಣಿಗಳ ಸಂಖ್ಯೆ 1.68 ಮಿಲಿಯನ್‌ಗಿಂತ ಹೆಚ್ಚಾಗಿದೆ.

ಭಾಗ್ಯಲಕ್ಷ್ಮಿ ತನ್ವಿಯ ರಿಯಲ್​ ಅಮ್ಮಂಗೆ ಮಗಳು ಸಿಎಯಾಗುವ ಕನಸು: ಆದ್ರೆ ಈಕೆಯ ಪ್ಲ್ಯಾನೇ ಬೇರೆ...

View post on Instagram