ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸಿರುವ ತನ್ವಿ (ಅಮೃತಾ ಗೌಡ) ದ್ವಿತೀಯ ಪಿಯುಸಿಯಲ್ಲಿ 91% ಅಂಕ ಗಳಿಸಿದ್ದಾರೆ. ಬಿಸಿಎ, ಎಂಸಿಎ ಮಾಡುವ ಆಸೆ ಹೊಂದಿರುವ ಅಮೃತಾಗೆ ನಟಿಯಾಗುವ ಆಸೆಯೂ ಇದೆ. ಆಕೆಯ ತಾಯಿ ಸಿಎ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ ಮಗಳ ಆಸೆಗೆ ಬೆಂಬಲ ನೀಡಿದ್ದಾರೆ. ಅಮೃತಾ 600ಕ್ಕೆ 543 ಅಂಕಗಳನ್ನು ಪಡೆದಿದ್ದಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಭಾಗ್ಯಳ ಮಗಳ ಪಾತ್ರ ಮಾಡಿರುವ ತನ್ವಿ ಅರ್ಥಾತ್ ಅಮೃತಾ ಗೌಡ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಶೇಕಡಾ 91 ಅಂಕ ಗಳಿಸಿದ್ದಾಳೆ. ಮಕ್ಕಳು ಎಸ್ಸೆಲ್ಸಿನೋ, ದ್ವಿತೀಯ ಪಿಯುಸಿ ಆಗಿಬಿಟ್ಟರೆ ಅಪ್ಪ-ಅಮ್ಮಂದಿರ ಆತಂಕ ಅಷ್ಟಿಷ್ಟಲ್ಲ. ವರ್ಷದ ಮೊದಲೇ ಮಕ್ಕಳ ಎಲ್ಲಾ ಇತರ ಚಟುವಟಿಕೆಗಳನ್ನು ಬ್ಯಾನ್ ಮಾಡಿ ಮೂರು ಹೊತ್ತು ಓದು ಓದು ಎನ್ನುವುದು ಸಾಮಾನ್ಯ. ಶಾಲಾ-ಕಾಲೇಜುಗಳಲ್ಲಿಯೂ ಇದೇ ಸ್ಥಿತಿ ಇದೆ. ಮಕ್ಕಳನ್ನು ಅಂಕ ತರುವ ವಸ್ತುಗಳನ್ನಾಗಿ ಮಾಡಿ ಅವರ ಇತರ ಎಲ್ಲಾ ಚಟುವಟಿಕೆಗಳನ್ನೂ ಸ್ಟಾಪ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಹಾಗೆ ನೋಡಿದರೆ, ಅತ್ಯಧಿಕ ಅಂಕ ಗಳಿಸುವ ಮಕ್ಕಳಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳ ಮಕ್ಕಳು, ಕೂಲಿ-ನಾಲಿ ಮಾಡುತ್ತಲೇ ಜೀವನ ಸಾಗಿಸುತ್ತಿರುವವರು, ತುತ್ತು ಅನ್ನಕ್ಕೂ ಕಷ್ಟ ಪಡುವವರು... ಹೀಗೆ ಉದ್ದನೆಯ ಪಟ್ಟಿಯೇ ಸಿಗುತ್ತದೆ. ಅದರಂತೆಯೇ, ಬಿಜಿ ಶೂಟಿಂಗ್ ನಡುವೆಯೂ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ತನ್ವಿ ಕೂಡ ಈಗ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಸಹಜವಾಗಿ ತಮ್ಮ ಮಕ್ಕಳು ಮುಂದೆ ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಅಪ್ಪ-ಅಮ್ಮ ಕನಸು ಕಟ್ಟಿಕೊಳ್ಳುವುದು ಸಹಜ. ಅದೇ ರೀತಿ ಮಕ್ಕಳಿಗೂ ಅದೇನೋ ಆಸೆ ಇರುತ್ತದೆ. ಕೆಲವೊಮ್ಮೆ ಇಬ್ಬರ ಆಸೆಗಳಲ್ಲಿ ವೈರುಧ್ಯವಿದ್ದು ಮನೆಯಲ್ಲಿ ಗಲಾಟೆಯೂ ನಡೆಯುವುದು ಉಂಟು. ಆದರೆ ತನ್ವಿ ಅರ್ಥಾತ್ ಅಮೃತಾ ಮನೆಯಲ್ಲಿ ಹಾಗಲ್ಲ. ಹಾಗೆಂದು ಅಮೃತಾ ಅಮ್ಮನಿಗೆ ಮಗಳು ಸಿಎ ಆಗುವ ಆಸೆ ಇದ್ದರೆ, ಅಮೃತಾ ಆಸೆಯೇ ಬೇರೆ ಇದೆ ಅನ್ನಿ. ಈ ಕುರಿತು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಮೃತಾ ಗೌಡ ಮಾತನಾಡಿದ್ದಾಳೆ. ನನಗೆ ಬಿಸಿಎ ಮಾಡಿ ಎಂಸಿಎ ಮಾಡುವ ಆಸೆ ಎಂದಿರುವ ಆಕೆ, ಇದೇ ವೇಳೆ ಬಹುತೇಕ ನಟ-ನಟಿಯರಂತೆ ನನಗೂ ಹೀರೋಯಿನ್ ಆಗುವ ಆಸೆ ತುಂಬಾ ಇದೆ ಎಂದಿದ್ದಾಳೆ. ಓದಿನ ಜೊತೆಜೊತೆಗೇ ನಾಯಕಿಯೂ ಆಗ್ತಾಳೋ ಎನ್ನುವುದು ಈಗಿರುವ ಪ್ರಶ್ನೆ.
ರಿಯಲ್ ಅಮ್ಮ ಕೊಟ್ಟ ಟಾರ್ಚರ್ ಬಗ್ಗೆ ಪಿಯುಸಿಯಲ್ಲಿ 91% ತೆಗೆದ 'ಭಾಗ್ಯಲಕ್ಷ್ಮಿ' ತನ್ವಿ ಹೇಳಿದ್ದೇನು ಕೇಳಿ!
ಇದೇ ವೇಳೆ ಆಕೆಯ ಅಮ್ಮ ತಮಗೆ ಮಗಳು ಸಿಎ ಆಗುವ ಆಸೆ ಇದೆ. ಆದರೆ ಅದು ಅವಳಿಗೆ ಬಿಟ್ಟದ್ದು. ಅವಳಿಗೆ ಏನು ಆಸೆ ಇದ್ಯೋ ಅದೇ ನಮ್ಮದು. ಅವಳು ಏನೇ ಮಾಡಿದರೂ ಯೋಚನೆ ಮಾಡಿ ಮಾಡುತ್ತಾಳೆ, ಜಯಶಾಲಿ ಆಗ್ತಾಳೆ ಎನ್ನುವ ನಂಬಿಕೆ ಇದೆ ಎನ್ನುವ ಮೂಲಕ ಮಗಳಿಗೆ ಏನೇ ಆಸೆ ಇದ್ದರೂ ಅದನ್ನು ಪೂರೈಸುವುದಾಗಿ ಹೇಳಿದ್ದಾರೆ. ಅಮೃತಾ ಕೂಡ ತನ್ನ ಅಪ್ಪ-ಅಮ್ಮ ನನಗೆ ತುಂಬಾ ಸಪೋರ್ಟಿವ್ ಆಗಿರುವುದಾಗಿ ಹೇಳಿದ್ದಾಳೆ. ನಾನು ನಟಿಯಾಗುವುದಾದರೂ ಅವರು ಓಕೆ ಅನ್ನುತ್ತಾರೆ,, ನನಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ನಾನು ಏನೇ ಆಗುವ ಆಸೆ ಹೊಂದಿದರೂ ಅವರು ಜೈ ಎನ್ನುತ್ತಾರೆ ಎಂದಿದ್ದಾಳೆ.
ಅಂದಹಾಗೆ ಅಮೃತಾ ಅಮೃತಾ ಗೌಡ ಎಂದೇ ಕರೆದರೂ ಶಾಲೆಯ ಪ್ರಮಾಣಪತ್ರದಲ್ಲಿ ಆಕೆಯ ಹೆಸರು ಅಮೃತವರ್ಷಿನಿ ಕೆ. ಎಂದು ಇದೆ. ಈಕೆ 600ಕ್ಕೆ 543 ಅಂಕ ಪಡೆದಿದ್ದಾಳೆ. ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿರುವ ಅಮೃತಾ ಗೌಡ, ಇಂಗ್ಲಿಷ್‌ನಲ್ಲಿ 81, ಎಕನಾಮಿಕ್ಸ್‌ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನು ಅಮೃತಾ ಗೌಡ ಪಡೆದುಕೊಂಡಿದ್ದಾರೆ. ಅಂದಹಾಗೆ, 'ಭಾಗ್ಯಲಕ್ಷ್ಮೀ' ಸೀರಿಯಲ್ನಲ್ಲಿ ಈಕೆ ಸದ್ಯ ಫಸ್ಟ್ ಪಿಯುಸಿ. ಅಮ್ಮ ಭಾಗ್ಯ ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮೊದಲ ವರ್ಷದ ಪಿಯುಸಿ ಸೇರಿದ್ದಾಳೆ. ಆದರೆ ರಿಯಲ್ ಲೈಫ್‌ನಲ್ಲಿ ತನ್ವಿ ಪಾತ್ರ ಮಾಡಿರುವ ಅಮೃತಾ ಆಗಲೇ ಸೆಕೆಂಡ್ ಪಿಯುಸಿ ಮುಗಿಸಿದ್ದಾಳೆ.
ಭಾಗ್ಯಲಕ್ಷ್ಮಿ ಮಗಳು ತನ್ವಿಯ ಕ್ಯೂಟ್ ಫೋಟೋಶೂಟ್: ಬಾಲಕಿಯ ಕುರಿತು ಕೆಲವು ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ...
