ಸೀರೆ ಉಡುವುದು ಕಷ್ಟ ಎನ್ನುವವರಿಗೆ ಇಲ್ಲೊಬ್ಬ ಪುಟ್ಟ ಬಾಲಕಿ ಸೀರೆ ಸೆಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಚುರುಕುತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೀರೆಯುಡುವುದು ಮೊದಲೆಲ್ಲಾ ಮಹಿಳೆಯರಿಗೆ ಬಹಳ ಸುಲಭವಾದ ಕೆಲಸ. ಏಕೆಂದರೆ ದಿನನಿತ್ಯದ ಉಡುಗೆಯೇ ಸೀರೆಯಾಗಿತ್ತು. ಹರೆಯಕ್ಕೆ ಕಾಲಿರಿಸುತ್ತಿದ್ದಂತೆ ಸೀರೆಯುಟ್ಟು ಅಭ್ಯಾಸವಾಗಿತ್ತು. ಆದರೆ ಈಗಿನ ಹುಡುಗಿಯರಿಗೆ ಸೀರೆಯುಡುವುದು ಬಹಳ ತ್ರಾಸದಾಯಕ ವಿಚಾರ. ನೋಡುಗರ ಕಣ್ಣಿಗೆ ಸೀರೆಯುಟ್ಟ ನಾರಿಯರು, ಹೆಂಗೆಳೆಯರು ಸೊಗಸಾಗಿ ಕಂಡರು ಅದನ್ನು ಉಟ್ಟವರಿಗೆ ಅದನ್ನು ನಿರ್ವಹಿಸುವುದು ಬಹಲ ಕಷ್ಟ ಎನಿಸುತ್ತದೆ ಹೆಜ್ಜೆ ತೆಗೆದು ಇಡುವುದಕ್ಕೆ ಬಹಳ ಕಷ್ಟಪಡಬೇಕಾಗುತ್ತದೆ. ಹೀಗಿರುವಾಗ ಬಹಳ ಹೆಣ್ಣು ಮಕ್ಕಳು ಕೇವಲ ಶುಭ ಸಮಾರಂಭಗಳಿದ್ದಾಗ ಮಾತ್ರ ಅಪರೂಪಕ್ಕೊಮ್ಮೆ ಸೀರೆಯುಡುತ್ತಾರೆ. ಅಲ್ಲದೇ ಹೀಗೆ ಸೀರೆಯುಡುವುದಕ್ಕೂ ಮೊದಲೇ ಸಾಕಷ್ಟು ಸಿದ್ಧತೆ ಮಾಡಿರುತ್ತಾರೆ. ಝರಿಯ ಅಥವಾ ಪಟ್ಟೆ ಸೀರೆಯಾಗಿದ್ದರೆ ಸಾರಿಯನ್ನು ಮೊದಲೇ ಜೋಡಿಸಿ ಪಿನ್ ಮಾಡಿಟ್ಟಿರುತ್ತಾರೆ. ಇನ್ನು ಕೆಲವರಿಗೆ ಈ ಸೀರೆಯನ್ನು ಮೊದಲೇ ಜೋಡಿಸಿ ಪಿನ್ ಮಾಡುವುದಕ್ಕೆ ಬರುವುದಿಲ್ಲ, ಹೀಗಿರುವಾಗ ಅವರು ಅದನ್ನು ಬ್ಯೂಟಿಪಾರ್ಲರ್‌ಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಹಣ ನೀಡಿ ಸಾರಿಯನ್ನು ತಮ್ಮ ಅಳತೆಗೆ ತಕ್ಕಂತೆ ಪಿನ್ ಮಾಡಿಸಿ ಬರುತ್ತಾರೆ. ಇದರಿಂದ ಸರಿಯನ್ನು ಸುಲಭವಾಗಿ ಐದು ನಿಮಿಷದಲ್ಲಿ ಉಡಬಹುದಾಗಿದೆ. ಜೊತೆಗೆ ಸಾರಿ ತುಂಬಾ ಚೆನ್ನಾಗಿ ಮೈಗೊಪ್ಪುವಂತೆ ಇಡೀ ದಿನ ಚೆನ್ನಾಗಿ ಕಾಣಿಸುತ್ತದೆ. ಇದು ಬಹುತೇಕ ಮಹಿಳೆಯರಿಗೆ ಗೊತ್ತಿರುವ ವಿಚಾರ. ಹೀಗೆ ಸಾರಿಗೆ ಪಿನ್ ಮಾಡಿ ಸೆಟ್‌ ಮಾಡುವುದು ಈಗ ನಗರ ಪ್ರದೇಶದಲ್ಲಿ ದೊಡ್ಡ ಉದ್ಯಮವೇ ಆಗಿದೆ. ಒಂದು ಸೀರೆಯನ್ನು ಪಿನ್ ಮಾಡಿ ಸೆಟ್ ಮಾಡಿ ನೀಡುವುದಕ್ಕೆ ಸೀಸನ್‌ಗೆ ತಕ್ಕಂತೆ ದರ ನಿಗದಿ ಮಾಡುತ್ತಾರೆ. ಸೀರೆಯ ಬಗ್ಗೆ ಇಷ್ಟೊಂದು ಪುರಾಣ ಏಕೆ ಅಂತೀರಾ ಇಲ್ಲೊಂದು ಪುಟ್ಟ ಹುಡುಗಿ ದೊಡ್ಡವರು ಬಹಳ ಕಷ್ಟದಿಂದ ಮಾಡುವ ಸೀರೆಗೆ ಪಿನ್ ಮಾಡಿ ಸೆಟ್ ಮಾಡುವ ಕೆಲಸವನ್ನು ಬಹಳ ಸುಲಭವಾಗಿ ಮಾಡುತ್ತಿದ್ದು ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ಪುಟ್ಟ ಬಾಲಕಿಯ ಈ ಕ್ರಿಯೇಟಿವಿಟಿ ಚುರುಕುತನಕ್ಕೆ ಶಭಾಷ್ ಎಂದಿದ್ದಾರೆ.

ವಿಡಿಯೋದಲ್ಲೇನಿದೆ ನೋಡಿ!

ವೀಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಕೆಂಪು ಬಣ್ಣದ ಪಟ್ಟೆ ಸೀರೆಯೊಂದಕ್ಕೆ ಹೀಗೆ ಪಿನ್ ಮಾಡಿ 2 ನಿಮಿಷದಲ್ಲಿ ಸುಲಭವಾಗಿ ಉಡುವುದಕ್ಕೆ ಸಹಾಯವಾಗುವಂತೆ ರೆಡಿ ಮಾಡಿದ್ದಾಳೆ. ಮೊದಲಿಗೆ ಸೀರೆಯ ಸೆರಗನ್ನು ಕೈಗಳಲ್ಲಿ ಎಳೆ ಎಳೆಯಾಗಿ ಹಿಡಿದು ಸೆಟ್ ಮಾಡಿ ಮೇಜಿನ ಮೇಲೆ ಇಟ್ಟು ಒಂದು ತುದಿಗೆ ಕ್ಲಿಪ್ ಹಾಕಿದ್ದಾಳೆ. ಬಳಿಕ ಅದನ್ನು ಕೈಗಳಲ್ಲಿ ಎಳೆದು ಜೋಡಿಸಿದ್ದಾಳೆ. ಬಳಿಕ ಅದು ಚೆನ್ನಾಗಿ ಕುಳಿತುಕೊಳ್ಳುವುದಕ್ಕಾಗಿ ಅದರ ಮೇಲೆ ಬಲೆಯನ್ನು ಇರಿಸಿ ಇಸ್ತ್ರಿ ಹಾಕಿದ್ದಾಳೆ. ಸೆರಗನ್ನು ಸೆಟ್ ಮಾಡಿದ ನಂತರ ಮಹಿಳೆಯ ಎದೆ ಭಾಗದ ಮೇಲೆ ನಿಲ್ಲುವಂತಹ ಸೀರೆಯ ಭಾಗವನ್ನು ಹಾಗೆಯೇ ಒಂದರ ಮೇಲೆ ಒಂದು ಕೂರುವಂತೆ ಸೆಟ್ ಮಾಡಿದ್ದಾಳೆ. ಅದಾದ ನಂತರ ಸೀರೆಯ ಮುಂಭಾಗ ಸಿಕ್ಕಿಸುವ ನೆರಿಗೆಯನ್ನು ಸೆಟ್ ಮಾಡಿದ್ದು, ಚೆನ್ನಾಗಿ ಜೋಡಿಸಿ ಪಿನ್ ಮಾಡಿ ಐರನ್ ಮಾಡಿದ್ದಾಳೆ. ಇದಾದ ನಂತರ ಸೀರೆಯನ್ನು ಚೆನ್ನಾಗಿ ಮುದ್ದೆಯಾಗದಂತೆ ಸೊಗಸಾಗಿ ಜೋಡಿಸಿದ್ದಾಳೆ. ಪುಟ್ಟ ಬಾಲಕಿಯ ಈ ಕಾರ್ಯಕ್ಷಮತೆಯನ್ನು ಹೆಂಗೆಳೆಯರು ಬಹಳವಾಗಿ ಮೆಚ್ಚಿದ್ದಾರೆ.

ಮಹಿಳೆಯರಿಗೆ ಗುಡ್ ನ್ಯೂಸ್: ಕೇವಲ 30 ಸೆಕೆಂಡ್‌ಗಳಲ್ಲಿ ಧರಿಸುವ ಜಿಪ್ಪಿಂಗ್ ಸೀರೆ!

ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ:
ಅನೇಕರು ಇಷ್ಟು ಪುಟ್ಟ ಬಾಲಕಿ ಇಷ್ಟು ಸೊಗಸಾಗಿ ಈ ಕೆಲಸ ಕಲಿಸಿ ಕೊಟ್ಟ ಆಕೆಯ ತಾಯಿಗೆ ಮೆಚ್ಚುಗೆ ಸೂಚಿಸಿದ್ದಾರೆ. ನೀವು ಮಗಳನ್ನು ತುಂಬಾ ಸ್ವತಂತ್ರಳಾಗಿ ಬೆಳೆಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ನಾನು ಸೀರೆಯನ್ನು ಮೊದಲೇ ಚೆನ್ನಾಗಿ ಜೋಡಿಸುವ ಹಲವು ವೀಡಿಯೋಗಳನ್ನು ನೋಡಿದ್ದೇನೆ. ಆದರೆ ಯಾವುದನ್ನು ಕೂಡ ಟ್ರೈ ಮಾಡಲಿಲ್ಲ. ಆದರೆ ಈ ಹುಡುಗಿ ಸೂಪರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಓ ಮೈ ಗಾಡ್ ಎಷ್ಟು ಸೊಗಸಾಗಿ ಮಾಡಿದ್ದಾಳೆ ಎಂದು ಇನ್ನೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ 22 ವರ್ಷ ಆಯ್ತು ಇನ್ನೂ ಸಾರಿ ಉಡೋಕೆ ಬರ್ತಿಲ್ಲ, ಆದರೆ ಈ ಪುಟ್ಟ ಹುಡುಗಿ ಗ್ರೇಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಯಾಗಿ 4 ವರ್ಷ ಆಯ್ತು ಆದ್ರೂ ನೆಟ್ಟಗೆ ಸಾರಿ ಉಡೋಕೆ ಬರ್ತಿಲ್ಲ ಈ ಬಾಲಕಿ ಸೂಪರ್ ಎಂದಿದ್ದಾರೆ ಮತ್ತೊಬ್ಬರು ಹೀಗೆ ಹೆಂಗೆಳೆಯರಿಂದ ಪ್ರಶಂಸೆಯ ಸುರಿಮಳೆಯೇ ವ್ಯಕ್ತವಾಗಿದೆ. ಪುಟ್ಟ ಬಾಲಕಿಯ ಈ ಟ್ಯಾಲೆಂಟ್ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ...

ಅಬ್ಬಬ್ಬಾ ಸೀರೆ ಉಡಿಸಲು ಇಷ್ಟು ಚಾರ್ಜ್ ಮಾಡ್ತಾರಾ?

ಪುಟ್ಟ ಬಾಲಕಿಯ ವಿಡಿಯೋ ಇಲ್ಲಿದೆ ನೀವು ಒಮ್ಮೆ ನೋಡಿ:

View post on Instagram