ಮಹಿಳೆಯರಿಗೆ ಗುಡ್ ನ್ಯೂಸ್: ಕೇವಲ 30 ಸೆಕೆಂಡ್‌ಗಳಲ್ಲಿ ಧರಿಸುವ ಜಿಪ್ಪಿಂಗ್ ಸೀರೆ!

ಸೀರೆ ಉಡುವುದು ಕಷ್ಟವೇ? ಈಗ ಜಿಪ್‌ ಇರುವ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೇವಲ 30 ಸೆಕೆಂಡ್‌ಗಳಲ್ಲಿ ಧರಿಸಬಹುದು. ಈ ಹೊಸ ಸೀರೆಗಳು ಸಲ್ವಾರ್ ಸೂಟ್‌ನಂತೆ ಸುಲಭವಾಗಿ ಧರಿಸಬಹುದಾಗಿದ್ದು, ಪ್ಲೀಟ್ಸ್‌ಗಳು ರೆಡಿಮೇಡ್ ಆಗಿರುತ್ತವೆ.

Zip Saree Trend Eases Traditional Wear Making Waves Online sat

ವೈರಲ್ ನ್ಯೂಸ್: ಭಾರತೀಯ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮಹಿಳೆಯರು ಮದುವೆಯಾದ ನಂತರ ನಡೆಯುವ ಎಲ್ಲ ಕಾರ್ಯಕ್ರಮಗಳು, ಸಂಬಂಧಿಕರ ಮನೆಗೆ ಹೋಗಬೇಕಾದ ಸಂದರ್ಭಗಳಲ್ಲಿ ಸೀರೆಯನ್ನು ಉಟ್ಟುಕೊಳ್ಳಬೇಕು. ಆದರೆ, ಎಂದಿಗೂ ಸೀರೆಯನ್ನೇ ಉಟ್ಟುಕೊಳ್ಳದ ಕೆಲವು ಮಹಿಳೆಯರಿಗೆ ಇದು ನುಂಗಲಾರದ ತುತ್ತಾಗಿರುತ್ತದೆ.  ಕೆಲವು ಮಹಿಳೆಯರಿಗೆ ಸೀರೆ ಉಟ್ಟುಕೊಳ್ಳುವುದೇ ಗೊತ್ತಿರುವುದಿಲ್ಲ. ಇನ್ನು ತುಂಬಾ ಹೊತ್ತು ಪ್ರಯತ್ನ ಮಾಡಿ ಸೀರೆ ಧರಿಸಿದರೂ ಅದು ಕೂಡ ಎಲ್ಲಿ ಬಿಚ್ಚಿಬಿಡುತ್ತದೆ ಎಂಬ ಭಯವೂ ಇರುತ್ತದೆ. ಮುಖ್ಯವಾಗಿ ಸೀರೆ ಉಟ್ಟುಕೊಳ್ಳುವುದಕ್ಕೆ ಕೆಲವರು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಇದೆಲ್ಲ ಸಮಸ್ಯೆಯಿಂದ ಮುಕ್ತಿಗೊಳಿಸಲು ಇದೀಗ ಹೊಸ ಜಿಪ್ಪಿಂಗ್ ಸೀರೆಗಳು ಬಂದಿವೆ.

ನಮ್ಮ ದೇಶದಲ್ಲಿ ಮದುವೆಯಾದ ಮಹಿಳೆಯರಿಗೆ ಸೀರೆ ಉಟ್ಟುಕೊಳ್ಳುವುದೇ ಒಂದು ದೊಡ್ಡ ಟೆನ್ಶನ್‌ ಆಗಿರುತ್ತದೆ. ಎಲ್ಲಾದರೂ ಸಂಬಂಧಿಕರ ಮನೆಗೆ ಹೋಗಬೇಕೆಂದರೆ ಸೀರೆಯನ್ನೇ ಹೆಚ್ಚಾಗಿ ಧರಿಸಿಕೊಳ್ಳಬೇಕಾಗುತ್ತದೆ. ಆದರೆ, ಕೆಲವು ಮಹಿಳೆಯರಿಗೆ ಸೀರೆ ಉಟ್ಟುಕೊಳ್ಳುವುದೇ ಗೊತ್ತಿರುವುದಿಲ್ಲ. ಇನ್ನು ತುಂಬಾ ಹೊತ್ತು ಪ್ರಯತ್ನ ಮಾಡಿ ಸೀರೆ ಧರಿಸಿದರೂ ಅದು ಕೂಡ ಎಲ್ಲಿ ಬಿಚ್ಚಿಬಿಡುತ್ತದೆ ಎಂಬ ಭಯವೂ ಇರುತ್ತದೆ. ಇನ್ನು ಸೀರೆಯನ್ನು ಸರಿಯಾಗಿ ಉಟ್ಟುಕೊಳ್ಳದಿದ್ದರೆ ಎಲ್ಲರ ಮುಂದೆ ಮುಜುಗರ ಅನುಭವಿಸಬೇಕಾಗುತ್ತದೆ. ಆದರೆ, ಈಗ ಅಂಥಾ ಎಲ್ಲಾ ಚಿಂತೆಗಳಿಂದ ಮಹಿಳೆಯರಿಗೆ ಮುಕ್ತಿ ಸಿಗಲಿದೆ. ಹೌದು, ಮಾರುಕಟ್ಟೆಯಲ್ಲಿ ಜಿಪ್‌ ಇರೋ ಸೀರೆಗಳು ಬಂದಿದೆ. ಇದನ್ನ ಸಲ್ವಾರ್‌ ಸೂಟ್‌ ತರಾನೇ ತುಂಬಾ ಸುಲಭವಾಗಿ ಉಟ್ಟುಕೊಳ್ಳಬಹುದು. ಇದರಲ್ಲಿ ಪ್ಲೀಟ್ಸ್‌ ರೆಡಿ ಇರುತ್ತದೆ, ಎಲ್ಲವೂ ತುಂಬಾ ಚೆನ್ನಾಗಿ ಸೆಟ್‌ ಆಗಿರುತ್ತದೆ. ಏನನ್ನೂ ಅಡ್ಜಸ್ಟ್‌ ಮಾಡಬೇಕಾಗಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗುತ್ತಿದೆ, ಇದರಲ್ಲಿ ಒಬ್ಬ ಮಹಿಳೆ ಈ ಸೀರೆಯನ್ನ ಕೆಲವೇ ಸೆಕೆಂಡ್‌ಗಳಲ್ಲಿ ಉಟ್ಟುಕೊಳ್ಳುತ್ತಾರೆ.

ಕೆಲವೇ ಸೆಕೆಂಡ್‌ಗಳಲ್ಲಿ ಧರಿಸುವ ಜಿಪ್‌ ಇರೋ ಸೀರೆ:
@HasnaZaruriHai ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿರೋ ವಿಡಿಯೋದಲ್ಲಿ ಒಬ್ಬ ಮಹಿಳೆ ಅಂಗಡಿಯಲ್ಲಿ ನಿಂತಿದ್ದಾರೆ. ಅವರು ನೀಲಿ ಬಣ್ಣದ, ಬೆಳ್ಳಿ ಬಣ್ಣದ ಹೂವುಗಳ ಪ್ರಿಂಟ್‌ ಇರೋ ಸೀರೆಯನ್ನ ಹೇಗೆ ಉಟ್ಟುಕೊಳ್ಳಬಹುದು ಎಂದು ತೋರಿಸಿದ್ದಾರೆ. ಅವರು ಮೊದಲು ಅದನ್ನ ಲೆಹೆಂಗಾ ರೀತಿಯಲ್ಲಿ ಕಾಲುಗಳನ್ನು ಸೀರೆಯ ಒಳಗೆ ಹಾಕುತ್ತಾರೆ. ನಂತರ ಹುಡುಗರು ಪ್ಯಾಂಟ್‌ನ ಹುಕ್‌ ಹಾಕುವಂತೆ ಅವರು ಸೀರೆಯನ್ನ ಹುಕ್‌ನಿಂದ ಕಟ್ಟಿಕೊಳ್ಳುತ್ತಾರೆ.  ನಂತರ ಬ್ಲೌಸ್‌ನ ತೋಳುಗಳನ್ನ ಹಾಕಿಕೊಳ್ಳುತ್ತಾರೆ. ಬ್ಲೌಸ್ ಕೂಡ ಸೀರೆಯ ಜೊತೆಗೆ ಅಟ್ಯಾಚ್‌ ಆಗಿರುತ್ತದೆ. ನಂತರ ಅವರು ಬ್ಲೌಸ್‌ನ ಜಿಪ್‌ ಹಾಕಿ ಅದನ್ನ ಕಂಪ್ಲೀಟ್‌ ಮಾಡುತ್ತಾರೆ. ಇದಾದ ನಂತರ ಅವರು ಸೀರೆಯ ಪ್ಲೀಟ್ಸ್‌ಗಳನ್ನ (ನೆರಿಗೆಗಳನ್ನು) ತೋರಿಸುತ್ತಾರೆ. ಅವು ತುಂಬಾ ಚೆನ್ನಾಗಿ ಸೆಟ್‌ ಆಗಿರುತ್ತವೆ. ಇದನ್ನೆಲ್ಲಾ ಮಾಡೋಕೆ ಅವರಿಗೆ ಕೇವಲ 30 ಸೆಕೆಂಡ್‌ಗಳು ಬೇಕಾಗುತ್ತವೆ. ಅವರು ಪರ್ಫೆಕ್ಟ್‌ ಸೀರೆ ಲುಕ್‌ನಲ್ಲಿ ಕಾಣಿಸ್ತಾರೆ.

@HasnaZaruriHai ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿರೋ ಈ ವಿಡಿಯೋವನ್ನ ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಇದಕ್ಕೆ 5.5 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಇನ್ನು ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಒಬ್ಬ ನೆಟ್ಟಿಗರು 'ಈ ಸೀರೆ ಹಗಲು, ರಾತ್ರಿ ಮೇಕಪ್‌ ಮಾಡಿಕೊಂಡು ಹುಡುಗಿ ತರ ರೀಲ್‌ ಮಾಡೋ ಹುಡುಗರಿಗೆ ಒಳ್ಳೆಯದು ಎಂದಿದ್ದಾರೆ. ಇನ್ನೊಬ್ಬರು 'ಇದು ಭಾರತೀಯ ಸಂಸ್ಕೃತಿ, ವಿಶೇಷವಾಗಿ ಸೀರೆಯನ್ನ ಹಾಳು ಮಾಡೋ ಕಡೆಗೆ ಇಟ್ಟಿರುವ ಹೆಜ್ಜೆ ಎಂದಿದ್ದಾರೆ. ಇನ್ನೊಬ್ಬರು 'ಇದು ಎಲ್ಲರನ್ನೂ ಸೋಮಾರಿಗಳನ್ನಾಗಿ ಮಾಡೋ ಕೆಲಸ. ಇತ್ತೀಚಿನ ದಿನಗಳಲ್ಲಿ ಜನರಿಗೆ ಎಲ್ಲವೂ ರೆಡಿಮೇಡ್‌ ಬೇಕು...ಇದರಿಂದ ನಾವು ಸೋಮಾರಿಗಳಾಗುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಬೈಕ್‌ನಲ್ಲಿ ಕೋಳಿ, ಕುರಿಯಲ್ಲ, ಬೃಹತ್ ಒಂಟೆಯನ್ನೇ ಸಾಗಾಟ ಮಾಡಿದ ಮಹಾನ್ ಪರಾ'ಕ್ರಿಮಿಗಳು'!

Latest Videos
Follow Us:
Download App:
  • android
  • ios