ಡ್ಯಾನ್ಸ್‌ ಮಾಡೋದು ಅಂದ್ರೆ ಕೆಲವರಿಗೆ ಸಿಕ್ಕಾಪಟ್ಟೆ ಇಷ್ಟ. ಯಾವ ಜಾಗ ಅಂತಾನೂ ನೋಡ್ದೆ, ಸಮಯ ಪರಿವೆಯಿಲ್ಲದೆ ಡ್ಯಾನ್ಸ್ ಮಾಡ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ನೀರು ತುಂಬಿಕೊಂಡಿರೋ ರಸ್ತೆಯಲ್ಲಿ ಸಖತ್‌ ಸ್ಟೆಪ್ಸ್ ಹಾಕಿದ್ದಾಳೆ. 

ಡ್ಯಾನ್ಸ್‌ ನಿಜವಾಗಿಯೂ ಒಂದು ಅತ್ಯುತ್ತಮ ವ್ಯಾಯಾಮ. ಹಲವರ ಪಾಲಿಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡೋ ಥೆರಪಿ. ಯಾವ ಜಾಗ ಅಂತಾನೂ ನೋಡ್ದೆ, ಸಮಯ ಪರಿವೆಯಿಲ್ಲದೆ ಡ್ಯಾನ್ಸ್ ಮಾಡ್ತಾರೆ. ಹೀಗೆ ಮಾಡೋದ್ರಿಂದ ಹಲವರ ಪಾಲಿಗೆ ಟೆನ್ಶನ್‌ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತೆ. ಹೀಗಾಗಿ ಮಳೆ ಬರ್ಲಿ, ಚಳಿ ಇರ್ಲಿ, ಬಿಸಿಲೇ ಇರ್ಲಿ ಹೀಗೆ ಡ್ಯಾನ್ಸ್ ಮಾಡೋದನ್ನು ಮಾತ್ರ ಬಿಡಲ್ಲ. ಹಾಗೆಯೇ ಇಲ್ಲೊಬ್ಬ ಮಹಿಳೆ ಮಳೆ ಅಂತಾನೂ ಲೆಕ್ಕಿಸದೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಸದ್ಯ ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 

ಮದುವೆಯ (Marriage) ಮೆರವಣಿಗೆ ಅಥವಾ ಡಿಜೆ ಕಾರ್ಯಕ್ರಮಗಳನ್ನು ಎಲ್ಲರೂ ಹುಚ್ಚೆದ್ದು ಕುಣಿಯೋದು ಸಾಮಾನ್ಯವಾಗಿದೆ. ಆದರೆ ಒಬ್ಬೊಬ್ಬರೇ ಇದ್ದಾಗ ಹೆಚ್ಚಿನವರು ಡ್ಯಾನ್ಸ್ ಮಾಡಲು ಹೆಚ್ಚು ಉತ್ಸಾಹ ತೋರುವುದಿಲ್ಲ. ಎಲ್ಲರೆದುರು ಡ್ಯಾನ್ಸ್ ಮಾಡಲು ಸರಿಯಾಗೋದಿಲ್ಲ ಅಂತ ಅಳುಕುತ್ತಾರೆ. ಆದ್ರೆ ಈ ಮಹಿಳೆ (Women) ಮಾತ್ರ ರಸ್ತೆ ತುಂಬಾ ನೀರೇ ತುಂಬಿಕೊಂಡಿದ್ರೂ ಹಿಂಜರಿಯದೆ ಸಖತ್ ಆಗಿ ಸ್ಟೆಪ್ಟ್ ಹಾಕಿದ್ದಾಳೆ. ವೈರಲ್ ಆಗಿರುವ ವಿಡಿಯೋದಲ್ಲಿ ಜಲಾವೃತವಾಗಿರುವ ರಸ್ತೆಯಲ್ಲಿ (Waterlogged road) ಸೀರೆಯುಟ್ಟ ಮಹಿಳೆಯೊಬ್ಬರು ಡಿಜೆ ಬೀಟ್‌ಗಳಿಗೆ ನೃತ್ಯ (Dance) ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಕ್ಕೆ ಪದವಿ ಪ್ರಮಾಣಪತ್ರ ಕೊಡಲು ನಿರಾಕರಿಸಿದ ಪ್ರಿನ್ಸಿಪಾಲ್!

ಡಿಜೆ ಮ್ಯೂಸಿಕ್‌ಗೆ ಸ್ಟೆಪ್ ಹಾಕಿದ ಮಹಿಳೆ
itz.pmcreation ಖಾತೆ Instagram ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಸೀರೆಯುಟ್ಟ ಮಹಿಳೆ ಜಲಾವೃತ ರಸ್ತೆಯಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದರೆ, ಡಿಜೆ ಮ್ಯೂಸಿಕ್ ಸಿಸ್ಟಂ ಹೊಂದಿರುವ ಟ್ರಕ್ ಅವಳ ಮುಂದೆ ಕಾಣುತ್ತದೆ. ಮಹಿಳೆ ಖುಷಿಯಿಂದ ಮಳೆ ನೀರಿನಲ್ಲಿ ಡ್ಯಾನ್ಸ್ ಮಾಡುವುದನ್ನು ಎಂಜಾಯ್ ಮಾಡುವುದನ್ನು ನೋಡಬಹುದು. ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು ಬರೆದಿದ್ದಾರೆ, 'ಏನು ಬೇಕಾದರೂ ಆಗಲಿ ಡ್ಯಾನ್ಸ್ ಮಾಡೋದನ್ನು ಮಾತ್ರ ನಿಲ್ಲಿಸಲ್ಲ ಅನ್ನುವಂತೆ ಈ ಮಹಿಳೆ ಕುಣೀತಿದ್ದಾರೆ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ಮಹಿಳೆ ಎಲ್ಲಾ ದುಗುಡವನ್ನು ಮರೆತು ಮನಸ್ಫೂರ್ತಿಯಾಗಿ ಕುಣಿಯುತ್ತಿದ್ದಾರೆ' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು (User) 'ಮಳೆ ನೀರಲ್ಲೂ ಡ್ಯಾನ್ಸ್ ಮಾಡಬೇಕಾದರೆ ಆಕೆ ಅದೆಷ್ಟು ಡ್ಯಾನ್ಸ್ ಪ್ರಿಯಳಾಗಿರಬೇಕು' ಎಂದು ಕಮೆಂಟಿಸಿದ್ದಾರೆ. ಒಟ್ನಲ್ಲಿ ಮಳೆನೀರಿನಲ್ಲಿ ಮಹಿಳೆಯ ಡ್ಯಾನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರು ಖರೀದಿಸಿದ ಖುಷಿ: ಶೋ ರೂಮ್‌ನಲ್ಲಿ ಕುಟುಂಬದ ಬಿಂದಾಸ್ ಡಾನ್ಸ್: ವಿಡಿಯೋ ವೈರಲ್

ಸೀರೆಯುಟ್ಟು, ಹೀಲ್ಸ್ ಹಾಕಿದ್ರೂ..ಯುವತಿ ಏನ್‌ ಸಖತ್ತಾಗಿ ಡ್ಯಾನ್ಸ್‌ ಮಾಡಿದ್ಲು ನೋಡಿ!
ಡ್ಯಾನ್ಸ್ ಮಾಡೋದು ಒಂದು ಕಲೆ. ಹಾಗಂತ ಡ್ಯಾನ್ಸ್ ಮಾಡಲು ಗೊತ್ತಿದ್ದರೆ ಸಾಲದು, ಡ್ಯಾನ್ಸ್ ಮಾಡುವಾಗ ಹಾಕಿರೋ ಉಡುಪು ಸಹ ಕಂಫರ್ಟೆಬಲ್ ಆಗಿರಬೇಕು. ಕೈ ಕಾಲುಗಳನ್ನು ಆರಾಮವಾಗಿ ಅತ್ತಿತ್ತ ಮೂವ್ ಮಾಡಲು ಸಾಧ್ಯವಾಗುವಂತಿರಬೇಕು. ಆಗಷ್ಟೇ ಡ್ಯಾನ್ಸ್ ನೋಡಲು ಸುಂದರವಾಗಿರುತ್ತದೆ. ಭರತನಾಟ್ಯ, ಜಾನಪದ ನೃತ್ಯಗಳಿಗಾದರೆ ಟ್ರೆಡಿಷನಲ್ ವೇರ್ ಇದ್ದರೆ ನಡೆಯುತ್ತೆ. ಆದರೆ ವೆಸ್ಟರ್ನ್‌ ಡ್ಯಾನ್ಸ್ ಮಾಡ್ಬೇಕು ಅಂದ್ರೆ ಪಕ್ಕಾ ಪ್ಯಾಂಟ್‌, ಶರ್ಟ್‌ನಂತಾ ವೆಸ್ಟರ್ನ್‌ ಬಟ್ಟೆಗಳನ್ನೇ ಧರಿಸಬೇಕು. ಇಲ್ಲದಿದ್ದರೆ ಕೈ ಕಾಲುಗಳನ್ನು ಫಾಸ್ಟ್ ಮೂವ್‌ಗೆ ತಕ್ಕಂತೆ ಮೂವ್ ಮಾಡುವುದು ಕಷ್ಟ. ಆದರೆ ಈ ಯುವತಿ (Girl) ಮಾತ್ರ ಸೀರೆಯುಟ್ಟುಕೊಂಡು, ಹೀಲ್ಸ್ ಹಾಕ್ಕೊಂಡು ವೆಸ್ಟರ್ನ್‌ ಡ್ಯಾನ್ಸ್ ಮಾಡಿದ್ದಾಳೆ.

ಹುಡುಗಿಯೊಬ್ಬಳು ಸೀರೆ ಮತ್ತು ಹೀಲ್ಸ್ ಧರಿಸಿ ಫಂಕ್ಷನ್‌ಗೆ ಹೋಗಿದ್ದಳು. ಅಲ್ಲಿ ಎಲ್ಲರೂ ಮದುವೆ ಸಂಭ್ರಮದಲ್ಲಿ ಎಂಜಾಯ್ ಮಾಡುತ್ತಿದ್ದಾಗ ಯುವತಿ ಸೀರೆಯಲ್ಲೇ ಸಖತ್ತಾಗಿ ವೆಸ್ಟರ್ನ್ ಡ್ಯಾನ್ಸ್ ಮಾಡಿದ್ದಾಳೆ. ಅಷ್ಟೆತ್ತರದ ಹೀಲ್ಸ್ ಹಾಕಿದ್ದರೂ ಹಾರೋ, ನೆಗೆಯೋ ಸ್ಟೆಪ್ ಮಾಡೋಕೆ ಕಷ್ಟಪಡಲ್ಲಿಲ್ಲ. ಒಂದು ಸಾರಿ ಜಂಪ್‌ ಮಾಡುವಾಗ ಜಾರಿದಂತಾದರೂ ಸಂಭಾಳಿಸಿ ಡ್ಯಾನ್ಸ್ ಮುಂದುವರಿಸಿದ್ದಾಳೆ. ಫಂಕ್ಷನ್‌ನಲ್ಲಿ ಆಕೆ ಡ್ಯಾನ್ಸ್ ಮಾಡಿದ ರೀತಿಯನ್ನು ಎಷ್ಟು ಜನ ಎಂಜಾಯ್ ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂಟರ್‌ನೆಟ್‌ನಲ್ಲಿ ಈಕೆಯ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

View post on Instagram