Asianet Suvarna News Asianet Suvarna News

ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಕ್ಕೆ ಪದವಿ ಪ್ರಮಾಣಪತ್ರ ಕೊಡಲು ನಿರಾಕರಿಸಿದ ಪ್ರಿನ್ಸಿಪಾಲ್!

ಪದವಿ ಪ್ರಧಾನ ಸಮಾರಂಭಕ್ಕೆ ವಿದ್ಯಾರ್ಥಿನಿಯ ಕುಟುಂಬಸ್ಥರು ಸೇರಿ ಆಪ್ತರು ಹಾಜರಾಗಿದ್ದರು. ಹೆಸರು ಕರೆಯುತ್ತಿದ್ದಂತೆ ವಿದ್ಯಾರ್ಥಿನಿ ಸಂಭ್ರಮದಲ್ಲಿ ಒಂದೆರೆಡು ಸ್ಟೆಪ್ ಹಾಕಿ ಪದವಿ ಪ್ರಮಾಣ ಪಡೆಯಲು ಬಂದಾಗ, ಪ್ರಿನ್ಸಿಪಾಲ್ ಅಶಿಸ್ತಿನ ಕಾರಣ ನೀಡಿ ಪ್ರಮಾಣ ಪತ್ರ ನೀಡಲು ನಿರಾಕರಿಸಲಾಗಿದೆ.
 

Principal denied graduation certificate after student for celebrated with dance on stage in philadelphia ckm
Author
First Published Jun 20, 2023, 4:23 PM IST

ಫಿಲಡೆಲ್ಫಿಯಾ(ಜೂ.20): ಹೈಸ್ಕೂಲ್ ಡಿಪ್ಲೋಮಾ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು. ಹೈಸ್ಕೂಲ್ ಡಿಪ್ಲೋಮಾ ಪದವಿ ಪ್ರಮಾಣ ಸಮಾರಂಭ ಆಯೋಜಿಸಿತ್ತು. ಎಲ್ಲಾ ವಿದ್ಯಾರ್ಥಿನಿಯರ ಕುಟುಬಂಸ್ಥರು, ಆಪ್ತರು ಆಗಮಿಸಿದ್ದಾರೆ. ಒಬ್ಬೊಬ್ಬರ ಹೆಸರು ಕರೆಯುತ್ತಿದ್ದಂತೆ ವಿದ್ಯಾರ್ಥಿನಿಯರು ಪ್ರಮಾಣ ಪತ್ರ ಪಡೆದಿದ್ದಾರೆ. ಹೀಗೆ ವಿದ್ಯಾರ್ಥಿನಿ ಹಫ್ಸಾ ಅಬ್ದುರ್ ರೆಹಮಾನ್ ಹೆಸರು ಕರೆಯುತ್ತಿದ್ದಂತೆ ಪೋಷಕರು, ಕುಟುಂಬಸ್ಥರು ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ದಾರೆ. ಇತ್ತ ವಿದ್ಯಾರ್ಥಿನಿ ಕೂಡ ಅದೇ ಜೋಶ್‌ನಲ್ಲಿ ವೇದಿಕೆಯಲ್ಲಿ ಒಂದೆರಡು ಸ್ಟೆಪ್ ಹಾಕಿ ಪ್ರಮಾಣ ಪತ್ರ ಪಡೆಯಲು ತೆರಳಿದ್ದಾರೆ. ಆದರೆ ಪ್ರಿನ್ಸಿಪಾಲ್ ಡಿಪ್ಲೋಮಾ ಪದವಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ಹಫ್ಸಾ ಅಬ್ದುರ್ ರೆಹಮಾನ್ ವಿದ್ಯಾರ್ಥಿನಿ ಹಲವು ಅಡೆತಡೆಗಳನ್ನು ಮೀರಿ ಡಿಪ್ಲೋಮಾ ಕೋರ್ಸ್ ಯಶಸ್ವಿಯಾಗಿ ಮುಗಿಸಿದ್ದಳು. ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ಪ್ರಿನ್ಸಿಪಾಲ್ ಕಟ್ಟು ನಿಟ್ಟಿನ ರೂಲ್ಸ್ ಜಾರಿಗೊಳಿಸಿದ್ದರು. ಆದರೆ ವಿದ್ಯಾರ್ಥಿನಿ ಹಫ್ಸಾ ಅಶಿಸ್ತಿನಿಂದ ವರ್ತಿಸಿದ್ದಾರೆ ಎಂದು ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸಿಪಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 

 

ವಾಯುಸೇನೆ ಕಾರ್ಯಕ್ರಮ ವೇದಿಕೆಯಲ್ಲೇ ಎಡವಿಬಿದ್ದ ಅಮೆರಿಕ ಅಧ್ಯಕ್ಷ, ವಿಡಿಯೋ ವೈರಲ್!

ವಿದ್ಯಾರ್ಥಿನಿ ಹಫ್ಸಾ ಹೆಸರು ಕರೆಯುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮೂಲಕ ಕುಟುಂಬಸ್ಥರು, ನೆರೆದಿದ್ದ ಆಪ್ತರು ಹುರಿದುಂಬಿಸಿದ್ದಾರೆ. ಇತ್ತ ವಿದ್ಯಾರ್ಥಿನಿ ಡ್ಯಾನ್ಸ್ ಮೂಲಕವೇ ವೇದಿಕೆಯಲ್ಲಿ ತೆರಳಿದ್ದಾರೆ. ಇದು ಪ್ರಿನ್ಸಿಪಾಲ್ ಪಿತ್ತ ನೆತ್ತಿಗೇರಿಸಿದೆ. ಹೀಗಾಗಿ ವಿದ್ಯಾರ್ಥಿನಿ ಪ್ರಮಾಣ ಪತ್ರ ಪಡೆಯಲು ಬಂದಾಗ ನೀಡಿಲ್ಲ. ವಿದ್ಯಾರ್ಥಿನಿ ಮನವಿ ಮಾಡಿದರೂ ನಿರಾಕರಿಸಿದ್ದಾರೆ.

 

 

ಘಟನೆ ಬಳಿಕ ವಿದ್ಯಾರ್ಥಿನಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಹೋದರಿ 14 ವರ್ಷವಿದ್ದಾಗ ಮೃತಪಟ್ಟಿದ್ದರು. ನಾನು ಈ ಪದವಿಯನ್ನು ಪಡೆದು ಆಕೆಗೆ ಅರ್ಪಿಸಬೇಕು ಎಂದು ನಿರ್ಧರಿಸಿದ್ದೆ. ನಾನು ಸಂಭ್ರಮದಲ್ಲಿ ಒಂದೆರೆಡು ಹೆಜ್ಜೆ ಹಾಕಿದ್ದಾರೆ. ಇದು ನಿಯಮಕ್ಕೆ ವಿರುದ್ಧವಾಗಿದ್ದರೆ ಕ್ಷಮಿಸಿ ಪ್ರಮಾಣ ಪತ್ರ ನೀಡಬೇಕಿತ್ತು. ಆದರೆ ಈ ಸಮಾರಂಭ ಮತ್ತೆ ಬರುವುದಿಲ್ಲ. ಇದೇ ಸಮಾರಂಭದಲ್ಲಿ ಪ್ರಮಾಣ ಪತ್ರ ಪಡೆಯಬೇಕೆಂಬ ನನ್ನ ಕನಸುಗಳು ನುಚ್ಚು ನೂರಾಗಿದೆ. ಪೋಷಕರು, ಕುಟುಂಬಸ್ಥರು ಅತೀವ ಸಂಭ್ರದಲ್ಲಿದ್ದರು. ಎಲ್ಲವೂ ನೀರುಪಾಲಾಗಿದೆ ಎಂದು ಹಫ್ಸಾ ಹೇಳಿದ್ದಾರೆ.

ಸಾಧನೆಗೆ ವಯಸ್ಸಿನ ಹಂಗಿಲ್ಲ..87ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ!

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಕುರಿತು ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಫಿಲಡೆಲ್ಫಿಯಾದ ಈ  ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ. ಶಿಸ್ತು ಮುಖ್ಯ. ನಮ್ಮ ನಿಯಮದಲ್ಲೇ ಹೇಗಿರಬೇಕು? ಹೇಗೆ ಪ್ರಮಾಣ ಪತ್ರ ಪಡೆಯಬೇಕು ಅನ್ನೋ ನಿಯಮವಿದೆ. ಇದಕ್ಕೆ ವಿರುದ್ಧವಾಗಿ ಹೋದರೆ ಕ್ರಮ ಕೈಗೊಳ್ಳಬೇಕಗಾುತ್ತದೆ. ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಿಗೂ ಆಗಿರುವ ಅಡಚಣೆಗಾಗಿ ವಿಷಾಧಿಸುತ್ತೇವೆ. ಮುಂದೇ ಈ ರೀತಿ ಆಗದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಎಚ್ಚರವಹಿಸಬೇಕು ಎಂದು ಆಡಳಿತ ಮಂಡಳಿ ಹೇಳಿದೆ.
 

Follow Us:
Download App:
  • android
  • ios