2004ರಲ್ಲೂ ಮಣಿಪುರದಲ್ಲಿ ನಡೆದಿತ್ತು 12 ಸ್ತ್ರೀಯರ ನಗ್ನ ಪೆರೇಡ್
ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕ್ರೂರವಾಗಿ ಕೊಂದು ಹಾಕಿದೆ ಎಂದು ಆರೋಪಿಸಿ 2004ರಲ್ಲಿ ಮಣಿಪುರದಲ್ಲಿ 12 ಮಹಿಳೆಯರು ನಗ್ನವಾಗಿ ಮೆರವಣಿಗೆ ಸಾಗಿ ಭಾರೀ ಪ್ರತಿಭಟನೆ ನಡೆಸಿದ್ದರು.
ಮಣಿಪುರದಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ನಡುವೆ ಇಬ್ಬರು ಮಹಿಳೆಯರನ್ನು ನಗ್ನವಾಗಿ ಪರೇಡ್ ಮಾಡಿದ ಘಟನೆಗೆ ದೇಶಾದ್ಯಂತ ದಿಗ್ಭ್ರಮೆ ಹಾಗೂ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲ ತಿಂಗಳುಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿದೆ. ಕುಕಿ ಹಾಗೂ ಮೇಟಿ ಸಮುದಾಯದ ನಡುವಿನ ಹೋರಾಟ ಇಡೀ ರಾಜ್ಯವನ್ನೇ ಸುಟ್ಟಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಇದೀಗ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಅಮಾನವೀಯ ಘಟನೆ ಭಾರತವನ್ನೇ ತಲೆ ತಗ್ಗಿಸುವಂತೆ ಮಾಡಿದೆ.
ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯಾಗಿ ಹಲವು ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಚಲನಚಿತ್ರ ನಟರು, ಕ್ರೀಡಾಪಟುಗಳು ಕಟುವಾದ ಮಾತುಗಳಲ್ಲಿ ಖಂಡಿಸಿದ್ದಾರೆ. ದೋಷಿಗಳಿಗೆ ಅತ್ಯಂತ ಕಠಿಣ ಶಿಕ್ಷೆ (Punishment) ಖಾತರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ ದೇಶದಲ್ಲಿ ಇಂಥಾ ಘಟನೆ ನಡೆದಿರೋದು ಇದೇ ಮೊದಲ ಬಾರಿಯಲ್ಲ. 2004ರಲ್ಲೂ 12 ಮಣಿಪುರಿ ಸ್ತ್ರೀಯರಿಂದ ನಗ್ನ ಪ್ರತಿಭಟನೆ (Naked protest) ನಡೆದಿತ್ತು.
ಮಣಿಪುರದ ಪೈಶಾಚಿಕ ಘಟನೆ, ಇಬ್ಬರು ಮಹಿಳೆಯರನ್ನು ಬೆತ್ತಲೇ ಮೆರವಣಿಗೆ ಮಾಡಿಸಿ ಗ್ಯಾಂಗ್ ರೇಪ್!
2004ರಲ್ಲಿ 12 ಮಣಿಪುರಿ ಸ್ತ್ರೀಯರಿಂದ ನಗ್ನ ಪ್ರತಿಭಟನೆ
ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಹಿಳೆ (Woman)ಯೋರ್ವಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕ್ರೂರವಾಗಿ ಕೊಂದು ಹಾಕಿದೆ ಎಂದು ಆರೋಪಿಸಿ 2004ರಲ್ಲಿ ಮಣಿಪುರದಲ್ಲಿ 12 ಮಹಿಳೆಯರು ನಗ್ನವಾಗಿ ಮೆರವಣಿಗೆ ಸಾಗಿ ಭಾರೀ ಪ್ರತಿಭಟನೆ ನಡೆಸಿದ್ದರು. ‘ಭಾರತೀಯ ಸೇನೆ, ನಮ್ಮನ್ನು ಅತ್ಯಾಚಾರ ಮಾಡಿ, ನಮ್ಮ ಮಾಂಸ ತೆಗೆದುಕೊಳ್ಳಿ’ ಎಂದು 12 ಮಹಿಳೆಯರು ಅಸ್ಸಾಂ ರೈಫಲ್ಸ್ ಕಚೇರಿ ಮುಂದೆ ನಡೆಸಿದ್ದ ಪ್ರತಿಭಟನೆ ಅಂದು ದೇಶದಲ್ಲೇ ಭಾರೀ ಸುದ್ದಿಯಾಗಿತ್ತು.
ಅಸ್ಸಾಂ ರೈಫಲ್ಸ್ ಸಿಬ್ಬಂದಿ 32 ವರ್ಷದ ಮನೋರಮಾ ತಂಗ್ಜಮ್ ಅವರನ್ನು ಕ್ರೂರವಾಗಿ ಕೊಂದಿದ್ದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಮನೋರಮಾ ಅವರ ಖಾಸಗಿ ಭಾಗಗಳು ಮತ್ತು ತೊಡೆಯ ಮೇಲೆ ಗುಂಡೇಟಿನ ಗಾಯಗಳು (Injury) ಪತ್ತೆಯಾಗಿತ್ತು. ಅವರನ್ನು ಮನೆಯಿಂದ ಕರೆದೊಯ್ದ ಗಂಟೆಗಳ ನಂತರ ಭತ್ತದ ಗದ್ದೆಯ ಬಳಿ ಮೃತದೇಹ ಪತ್ತೆಯಾಗಿತ್ತು. ವಿಧಿವಿಜ್ಞಾನ ಪರೀಕ್ಷೆಯಲ್ಲಿ ಆಕೆಯ ಬಟ್ಟೆಗಳ ಮೇಲೆ ವೀರ್ಯದ ಕಲೆಗಳು ಕಂಡುಬಂದಿದ್ದು, ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆಂದು ಸೂಚಿಸಿತ್ತು.
ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಓರ್ವನ ಬಂಧನ, ಇತರ ಆರೋಪಿಗಳಿಗೆ ಹುಡುಕಾಟ!
ಪ್ರಕರಣವನ್ನು ಪರಿಶೀಲಿಸಲು ಸ್ಥಾಪಿಸಲಾದ ನ್ಯಾಯಾಂಗ ಆಯೋಗವು ಮನೋರಮಾ ಅವರ ಅಂತಿಮ ಗಂಟೆಗಳಲ್ಲಿ ಅನುಭವಿಸಿದ ಚಿತ್ರಹಿಂಸೆಯ ಕಟುವಾದ ವಿವರಣೆಯನ್ನು ವಿವರಿಸಿತ್ತು. ಕಳೆದ ಜು.15ಕ್ಕೆ ಈ ಘಟನೆ ನಡೆದು 17 ವರ್ಷಗಳು ಕಳೆದಿದ್ದು ಇದೀಗ ಅದೇ ರಾಜ್ಯದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರನ್ನು ನಗ್ನವಾಗಿ ಮೆರವಣಿಗೆ ನಡೆಸಿದ ಘಟನೆ ನಡೆದಿದೆ.