ಮಣಿಪುರದ ಪೈಶಾಚಿಕ ಘಟನೆ, ಇಬ್ಬರು ಮಹಿಳೆಯರನ್ನು ಬೆತ್ತಲೇ ಮೆರವಣಿಗೆ ಮಾಡಿಸಿ ಗ್ಯಾಂಗ್ ರೇಪ್!
ಹಿಂಸಾಚಾರದಿಂದ ಬೆಂದು ಹೋದ ಮಣಿಪುರ ಇನ್ನೂ ಶಾಂತಗೊಂಡಿಲ್ಲ. ಈ ಹಿಂಸಾಚಾರದ ನಡುವೆ ಮತ್ತೊಂದು ಭಯಾನಕ ಘಟನೆ ಬಹಿರಂಗವಾಗಿದೆ. ಇಬ್ಬರು ಮಹಿಳೆಯರನ್ನು ಆಕ್ರೋಶಿತ ಗುಂಪು ಬೆತ್ತಲೇ ಮೆರವಣಿಗೆ ಮಾಡಿಸಿದೆ. ಹಾದಿ ಬೀದಿಯಲ್ಲಿ ಮೆರವಣಿಗೆ ಮಾಡಿಸಿ ಅತ್ಯಾಚಾರ ಎಸಗಲಾಗಿದ್ದಾರೆ.
ನವದೆಹಲಿ(ಜು.19) ಮಣಿಪುರದಲ್ಲಿ ನಡೆದ ಹಿಂಸಾಚಾರ, ಗಲಭೆ, ದಾಳಿಗೆ ಬಹುತೇಕ ರಾಜ್ಯವೇ ಸುಟ್ಟು ಕರಕಲಾಗಿದೆ. ಇದೀಗ ಮೇ 4 ರಂದು ನಡೆದಿರುವ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ, ವ್ಯಾಟ್ಸ್ಆ್ಯಪ್‌ಗಳಲ್ಲಿ ಹರಿದಾಡಲು ಆರಂಭಿಸಿದೆ. ಇದರಿಂದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭಗೊಂಡಿದೆ. ಇಬ್ಬರು ಮಹಿಳೆಯರನ್ನು ಕಿಡಿಗೇಡಿಗಳ ಗುಂಪು ಬೆತ್ತಲೇ ಮೆರವಣಿಗೆ ಮಾಡಿಸಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬುಡಕಟ್ಟು ಸಮುದಾಯ ಆರೋಪ ಮಾಡಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಇದೀಗ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ಕಾರಣವಾಗಿದೆ.
ಇಂಪಾಲ್‌ನಿಂದ 35 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯನ್ನು ಆಕ್ರೋಶಿತ ಹಾಗೂ ಕಿಡಿಗೇಡಿಗಳ ಗ್ಯಾಂಗ್ ಬೆತ್ತಲೆಗೊಳಿಸಿದೆ. ಬಳಿಕ ಗಲಭೆಕೋರರು ದಾರಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಮೆರವಣಿಗೆ ವೇಳೆ ಮಹಿಳೆಯರು ಕಣ್ಣೀರಿಡುತ್ತಾ ಪರಿ ಪರಿಯಾಗಿ ಬೇಡಿಕೊಂಡರು ಆಕ್ರೋಶಿತರು ಕೇಳಿಸಿಕೊಂಡಿಲ್ಲ. ಇದರ ಬದಲು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ.
ಮಣಿಪುರ ಹಿಂಸಾಚಾರ: ಮ್ಯಾನ್ಮಾರ್ ಜತೆ ಗಡಿ ಶಾಂತಿ, ಭದ್ರತೆ ವಿಚಾರವಾಗಿ ಮಾತುಕತೆ ನಡೆಸಿದ ಕೇಂದ್ರ ಸರ್ಕಾರ
ಬೆತ್ತಲೆಗೊಳಿಸಿದ ಮಹಿಳೆಯರ ಮೇಲೆ ಆಕ್ರೋಶಿತರ ಗುಂಪು ಗ್ಯಾಂಗ್ ರೇಪ್ ಮಾಡಿದೆ ಎಂದು ಬುಡಕಟ್ಟು ಸಮುದಾಯ ಆರೋಪಿಸಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮತ್ತೆ ಹಿಂಸಾಚಾರ ಆರಂಭಗೊಂಡಿದೆ.
ಸತತ ಪ್ರಯತ್ನಗಳ ಬಳಿಕ ಸುದೀರ್ಘ ಹಿಂಸಾಚಾರ ತಣ್ಣಗಾಗಿತ್ತು. ಆದರೆ ಕೆಲ ಪ್ರದೇಶಗಳಲ್ಲಿ ಭುಗಿಲೆದ್ದ ಪ್ರತಿಭಟನೆ, ಹಿಂಸಚಾರವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿತ್ತು. ಇದೀಗ ಈ ಭೀಕರ ಘಟನೆ ವಿಡಿಯೋ ಬಹಿರಂಗೊಂಡಿರುವುದು ಸಮುದಾಯಗಳನ್ನು ಮತ್ತಷ್ಟು ಕೆರಳಿಸಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್, ಮಣಿಪುರ ಹಿಂಸಾಚಾರ ಕುರಿತು ವಿಚಾರಣೆ ನಡೆಸಿತ್ತು. ‘ಮಣಿಪುರದಲ್ಲಿ ಮತ್ತಷ್ಟುಕಿಚ್ಚು ಹಚ್ಚಲು ಸುಪ್ರೀಂ ಕೋರ್ಟನ್ನು ವೇದಿಕೆ ಆಗಿ ಬಳಸಿಕೊಳ್ಳಬೇಡಿ’ ಎಂದು ಸರ್ವೋಚ್ಚ ನ್ಯಾಯಾಲಯವು, 2 ತಿಂಗಳಿಂದ ಜನಾಂಗೀಯ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಎಚ್ಚರಿಕೆ ನೀಡಿದೆ. ಆದರೆ, ಪರಿಸ್ಥಿತಿ ಸುಧಾರಿಸಲು ತಾನು ಕೆಲವು ಸಲಹೆಗಳನ್ನು ನೀಡಲು ಸಿದ್ಧ ಎಂದಿದೆ.
ಈ ನಡುವೆ ಮಣಿಪುರದ ಪರಿಷ್ಕೃತ ವಸ್ತುಸ್ಥಿತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ, 142 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. 5,995 ಎಫ್‌ಐಆರ್ ದಾಖಲಾಗಿದ್ದು, 6745 ಜನರನ್ನು ಬಂಧಿಸಲಾಗಿದೆ. 6 ಕೇಸುಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಿತು.
ಮಣಿಪುರ ಹಿಂಸಾಚಾರ ಗುಜರಾತ್ ಗಲಭೆಗೆ ಹೋಲಿಸಿದ ಆರ್ಚ್ ಬಿಷಪ್
ಸತತ ಎರಡು ತಿಂಗಳುಗಳಿಂದ ಜನಾಂಗೀಯ ಸಂಘರ್ಷದಿಂದ ಹೊತ್ತಿ ಉರಿದ ಮಣಿಪುರದಲ್ಲಿ 2 ತಿಂಗಳಿಂದ ಮುಚ್ಚಿದ್ದ ಶಾಲೆಗಳು ಇತ್ತೀಚೆಗಷ್ಟೇ ಪುನಾರಂಭವಾಗಿತ್ತು. ಆದರೆ ಇದೀಗ ಮತ್ತೆ ಗಲಭೆ ಸೂಚನೆಗಳು ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಹಿಸಲು ಹಿಂಜರಿದ್ದರಿಂದ ಮೊದಲ ದಿನ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ತೀರಾ ಕಡಿಮೆ ಇದ್ದುದು ಕಂಡು ಬಂದಿತ್ತು.
ಆದರೂ ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ಪುನಾರಂಭದ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ವೇಳೆ ಮಕ್ಕಳು ‘2 ತಿಂಗಳ ಬಳಿಕ ನಮ್ಮ ಶಾಲೆ ತೆರೆದಿದೆ. ನಮಗೆ ಶಾಲೆಗೆ ಬರಲು ಖುಷಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದರು.