ರಾಖಿ ಹಬ್ಬ ಬಂತೆಂದರೆ ಸಹೋದರಿಯರಿಗೆ ಎಲ್ಲಿಲ್ಲದ ಸಂತಸ. ಬಣ್ಣ ಬಣ್ಣದ, ಬಗೆ ಬಗೆಯ ರಾಖಿಗಳನ್ನು ಅಂಗಡಿ ಅಂಗಡಿ ಸುತ್ತಾಡಿ ಹುಡುಕಿ ತಂದು ತಮ್ಮ ಸಹೋದರಿಗೆ ಕಟ್ಟುತ್ತಾರೆ. ಅದರಲ್ಲೂ ತಮಗೆ ಬೇಕಾದಂತೆ ರಾಖಿ ತಯಾರಿಸಿಕೊಡುತ್ತಾರೆ ಎಂದರೆ ಯಾವ ಸಹೋದರಿ ಒಲ್ಲೆ ಎನ್ನುತ್ತಾರೆ.

ಕಾರವಾರ (ಆ.27) : ರಾಖಿ ಹಬ್ಬ ಬಂತೆಂದರೆ ಸಹೋದರಿಯರಿಗೆ ಎಲ್ಲಿಲ್ಲದ ಸಂತಸ. ಬಣ್ಣ ಬಣ್ಣದ, ಬಗೆ ಬಗೆಯ ರಾಖಿಗಳನ್ನು ಅಂಗಡಿ ಅಂಗಡಿ ಸುತ್ತಾಡಿ ಹುಡುಕಿ ತಂದು ತಮ್ಮ ಸಹೋದರಿಗೆ ಕಟ್ಟುತ್ತಾರೆ. ಅದರಲ್ಲೂ ತಮಗೆ ಬೇಕಾದಂತೆ ರಾಖಿ ತಯಾರಿಸಿಕೊಡುತ್ತಾರೆ ಎಂದರೆ ಯಾವ ಸಹೋದರಿ ಒಲ್ಲೆ ಎನ್ನುತ್ತಾರೆ.

ಸಹೋದರಿಯರಿಗೆ ಬೇಕಾದಂತೆ ರಾಖಿಯನ್ನು ಯುವತಿ ಒಬ್ಬಳು ತಾನೆ ಸ್ವತಃ ಕೈಯಲ್ಲೇ ತಯಾರಿಸಿಕೊಡುತ್ತಾಳೆ. ತಾಲೂಕಿನ ಸದಾಶಿವಗಡ ನರಸಿಂಹಶಿಟ್ಟಾದ ಸ್ವೀಟಿ ಎನ್ನುವವರು ತಮ್ಮ ಮನೆಯಲ್ಲೇ ವಿಧವಿಧದ ರಾಖಿಗಳನ್ನು ತಯಾರು ಮಾಡುತ್ತಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಆರ್ಡರ್‌ಗಳನ್ನು ಪಡೆದು ಗ್ರಾಹಕರಿಗೆ ಬೇಕಾದ ಡಿಸೈನ್‌ಗಳಲ್ಲಿ ರಾಖಿ ತಯಾರಿಸಿಕೊಡುತ್ತಿದ್ದಾರೆ. ತಮ್ಮ ಸಹೋದರಿ ಹಾಗೂ ಸ್ನೇಹಿತೆಯ ಸಹಾಯದಿಂದ ಬಗೆಬಗೆಯ ರಾಖಿಗಳನ್ನು ಮಾಡುತ್ತಾರೆ. ಇವರು ತಯಾರಿಸುವ ರಾಖಿಗಳಿಗೆ ತಾಲೂಕಿನಲ್ಲಿ ಡಿಮ್ಯಾಂಡ್‌ ಕೂಡ ಇದೆ. ರಾಖಿಗೆ . 50ರಿಂದ . 250ರ ವರೆಗೂ ದರವಿದೆ.

ರಾಖಿ ಕಟ್ಟೋಕೆ ಅಣ್ಣನೇ ಇಲ್ವಲ್ಲ ಅಂತಾ ಮಗಳು ಹೇಳಿದ್ದಕ್ಕೆ 1 ತಿಂಗಳ ಗಂಡು ಶಿಶುವನ್ನೇ ಕಿಡ್ನಾಪ್‌ ಮಾಡಿದ ದಂಪತಿ!

ಸ್ವೀಟಿ ಅವರ ಅಕ್ಕ ಪೂಜಾ ಈ ಮೊದಲು ರಾಖಿ, ಫ್ಯಾಷನ್‌ ಜ್ಯುವೆಲ್ಲರಿಗಳನ್ನು ತಯಾರು ಮಾಡುತ್ತಿದ್ದರು. ಯೂಟ್ಯೂಬ್‌ ವಿಡಿಯೋಗಳಿಂದ ಕಲಿತು ತಯಾರಿಸುತ್ತಿದ್ದ ಸಹೋದರಿ ಪೂಜಾ ಅವರನ್ನು ನೋಡಿ ಸ್ವೀಟಿ ಕೂಡ ರಾಖಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಸ್ವೀಟಿ ರಾಖಿ, ವಿವಾಹ ಸಮಾರಂಭಗಳಿಗೆ ಬೇಕಾದ ಫ್ಯಾಷನ್‌ ಜ್ಯುವೆಲ್ಲರಿಗಳನ್ನು ತಮ್ಮ ಸ್ನೇಹಿತೆ ಸ್ಮಿತಾ ಅವರೊಡಗೂಡಿ ಮನೆಯಲ್ಲೇ ಬಿಡುವಿನ ಅವಧಿಯಲ್ಲಿ ತಯಾರಿ ಮಾಡಿಕೊಡುತ್ತಿದ್ದಾರೆ.

ರಕ್ಷಾ ಬಂಧನಕ್ಕೆ ಮಾರುಕಟ್ಟೆಗಳಲ್ಲಿ ಸಾಕಷ್ಟುಬಗೆಯ ರೆಡಿಮೇಡ್‌ ರಾಖಿಗಳಿದ್ದರೂ ಹ್ಯಾಂಡ್‌ ಮೇಡ್‌ ರಾಖಿಗಳಿಗೆ ಬೇಡಿಕೆ ತುಸು ಹೆಚ್ಚಾಗಿದೆ. ಅದರಲ್ಲೂ ಸಹೋದರಿಯರು ತಮಗಿಷ್ಟವಾಗುವಂತೆ ರಾಖಿ ತಯಾರಿಸಿಕೊಡುತ್ತಾರೆ ಎನ್ನುವ ಕಾರಣಕ್ಕೆ ಸ್ವೀಟಿ ತಯಾರಿಸುವ ರಾಖಿಗೆ ಬಹಳಷ್ಟುಬೇಡಿಕೆಯಿದೆ.

Raksha Bandhan 2023: ಬಂದೇ ಬಿಟ್ಟಿತು ರಕ್ಷಾ ಬಂಧನ; ಪ್ರೀತಿಯ ಸಹೋದರನಿಗೆ ರಾಖಿ ಹೀಗಿರಲಿ..!

ಅಕ್ಕ ಪೂಜಾ ಮಾಡುತ್ತಿದ್ದ ರಾಖಿ, ಜ್ಯುವೆಲರಿ ನೋಡಿಕೊಂಡು ನಾನು ಕಲಿತುಕೊಂಡಿದ್ದೇನೆ. ಈ ಮೊದಲು ಉಲನ್‌ನಿಂದ ರಾಖಿ ಮಾಡುತ್ತಿದ್ದೆವು. ಬಳಿಕ ಯೂಟ್ಯೂಬ್‌ ಮೊದಲಾದವನ್ನು ನೋಡಿ ಮಣಿಗಳನ್ನು ಬಳಸಿ ರಾಖಿ ಮಾಡಲಾಗುತ್ತಿತ್ತು. ಗ್ರಾಹಕರ ಆಸೆಗೆ ತಕ್ಕಂತೆ ಫೋಟೊ ರಾಖಿ, ವಾಟರ್‌ಪೂ›ಫ್‌ ರಾಖಿ ಕೂಡಾ ತಯಾರಿಸಿದ್ದೇನೆ. ಸ್ನೇಹಿತೆ ಸ್ಮಿತಾ ಕೂಡಾ ರಾಖಿ, ಜ್ಯುವೆಲ್ಲರಿ ತಯಾರಿಕೆಯಲ್ಲಿ ಜತೆಯಾಗಿದ್ದಾಳೆ.

ಸ್ವೀಟಿ ರಾಖಿ ತಯಾರಕಿ