Asianet Suvarna News Asianet Suvarna News

ಮಹಿಳೆಯರ ಎದೆ ಅಳತೆ ತೆಗೆಯುವುದು ತಪ್ಪು: ಹೈಕೋರ್ಟ್

ಸರ್ಕಾರಿ ಉದ್ಯೋಗಕ್ಕಾಗಿ ನೇಮಕಾತಿ ನಡೆಸುವ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳ ಎದೆಯ ಅಳತೆ ತೆಗೆಯುವ ಮಾನದಂಡವನ್ನು ರಾಜಸ್ಥಾನ ಹೈಕೋರ್ಟ್ ಖಂಡಿಸಿದೆ. ಮಹಿಳೆಯ ಎದೆ ಅಳತೆ ತೆಗೆಯುವ ನಿಯಮ, ಆಕೆಯ ಘನತೆ ಮತ್ತು ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. 

Rajasthan HC on chest measurement for women candidates in forest guard exam Vin
Author
First Published Aug 17, 2023, 8:47 AM IST

ಜೋಧ್‌ಪುರ: ಅರಣ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯ ಸಂದರ್ಭ ಮಹಿಳಾ ಅಭ್ಯರ್ಥಿಗಳ ಎದೆಯ ಅಳತೆ ತೆಗೆಯುವ ಮಾನದಂಡವನ್ನು ರಾಜಸ್ಥಾನ ಹೈಕೋರ್ಟ್ ಖಂಡಿಸಿದೆ. ಇದು ಸಂಪೂರ್ಣವಾಗಿ ಅತಿರೇಕ ಮತ್ತು ಮಹಿಳೆಯ ಘನತೆಗೆ ಭಂಗ ತರುವಂಥಾ ವಿಷಯ ಎಂದು ಹೇಳಿದೆ. 'ನೇಮಕಾತಿ ನೀತಿಗಳು ಮತ್ತು ನಿಯಮಗಳನ್ನು ರೂಪಿಸುವಾಗ ಆಡಳಿತಾತ್ಮಕ ಅಧಿಕಾರಿಗಳು ಸೂಕ್ಷ್ಮವಾಗಿರಬೇಕು. ಇಲ್ಲದಿದ್ದರೆ ಇಂಥಾ ತೊಂದರೆಗೊಳಗಾಗುತ್ತವೆ' ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯ ಎದೆ ಅಳತೆ ತೆಗೆಯುವ ನಿಯಮ, ಆಕೆಯ ಘನತೆ ಮತ್ತು ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಾಜಸ್ಥಾನ ಉಚ್ಚ ನ್ಯಾಯಾಲಯವು ತಿಳಿಸಿದೆ.

ಹುದ್ದೆಗೆ ನಿಯೋಜಿಸಲು ಮಹಿಳೆಯ ಎದೆಯ ಗಾತ್ರವು (Women Chest measurement) ಅಪ್ರಸ್ತುತವಾಗಿದೆ. ಆಕೆಯ ದೈಹಿಕ ಸಾಮರ್ಥ್ಯವನ್ನು ನಿರ್ಧರಿಸಲು ಇಂಥಾ ಪರೀಕ್ಷೆಯ ಅಗತ್ಯವಿಲ್ಲ ಎಂದು ನ್ಯಾಯಾಲಯವು (Court) ಹೇಳಿದೆ. ಹೆಚ್ಚಿನ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ಇತರ ಸರ್ಕಾರಿ ಉದ್ಯೋಗಗಳಿಗೆ (Government Job) ಅಂತಹ ಮಾನದಂಡಗಳನ್ನು ಅನ್ವಯಿಸುವುದಿಲ್ಲ ಎಂದು ಹೇಳಿದೆ. 'ಮಹಿಳೆಯ ಎದೆಯ ಅಳತೆಯನ್ನು ತೆಗೆದುಕೊಳ್ಳುವುದು,  ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಮಹಿಳೆಯ ಘನತೆ ಮತ್ತು ಆಕೆಯ ಖಾಸಗಿತನದ ಹಕ್ಕುಗಳ (Rights) ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ನ್ಯಾಯಮೂರ್ತಿ ದಿನೇಶ್‌ ಮೆಹ್ತಾ ಹೇಳಿದರು.

ಕಪ್ಪು ಎಂದು ಪತಿಯನ್ನು ನಿಂದಿಸುವುದು ಕ್ರೌರ್ಯ: ಹೈಕೋರ್ಟ್‌

ಮಹಿಳೆಯ ಎದೆಯ ಅಳತೆ ತೆಗೆಯುವುದು ಖಾಸಗಿ ಹಕ್ಕುಗಳ ಉಲ್ಲಂಘನೆ-ಕೋರ್ಟ್‌
ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆದರೆ ನಿಗದಿತ ಎದೆಯ ಅಳತೆ ಮಾನದಂಡಗಳನ್ನು ಪೂರೈಸದ ಕಾರಣ ಅನರ್ಹಗೊಂಡ ಮೂವರು ಮಹಿಳಾ ಅಭ್ಯರ್ಥಿಗಳ ಮನವಿಯನ್ನು ನ್ಯಾಯಮೂರ್ತಿ ದಿನೇಶ್ ಮೆಹ್ತಾ ಅವರ ಏಕ ಪೀಠವು ವಿಚಾರಣೆ ನಡೆಸಿ ಈ ಅಭಿಪ್ರಾಯ (Opinion) ವ್ಯಕ್ತಪಡಿಸಿತು. ನೇಮಕಾತಿ ಪ್ರಕ್ರಿಯೆ ಮುಗಿದಿದೆ ಎಂಬ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಿದ ಪೀಠ, ಎದೆಯ ಮಾಪನದ ಮಾನದಂಡವನ್ನು ಮರು ಮೌಲ್ಯಮಾಪನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ, ಅರಣ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ.

ನೇಮಕಾತಿ ಪ್ರಕ್ರಿಯೆ ಮುಗಿದಿರುವುದರಿಂದ ಮತ್ತು ಅರ್ಜಿದಾರರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗೆ (ಎದೆಯ ಅಳತೆಗಾಗಿ) ಒಳಗಾಗಿರುವುದರಿಂದ, ಪೂರ್ಣಗೊಂಡ ನೇಮಕಾತಿಗೆ ನ್ಯಾಯಾಲಯವು ಅಡ್ಡಿಪಡಿಸುವುದಿಲ್ಲ ಎಂದು ಪೀಠ ಹೇಳಿದೆ. 'ಆದರೆ, ಮಹಿಳಾ ಅಭ್ಯರ್ಥಿಗಳಿಗೆ ಎದೆಯ ಮಾಪನದ ಅವಶ್ಯಕತೆಯ ಬಗ್ಗೆ ಸಂಪೂರ್ಣ ಪರಿಶೀಲನೆ ಅಥವಾ ಅವಲೋಕನವು ಅತ್ಯಗತ್ಯವಾಗಿರುತ್ತದೆ, ಅದು ಅರಣ್ಯ ಸಿಬ್ಬಂದಿ, ಅರಣ್ಯಾಧಿಕಾರಿಗಳು ಅಥವಾ ಯಾವುದೇ ಇತರ ಹುದ್ದೆಗಳ ನೇಮಕಾತಿಗೆ ಅನ್ವಯಿಸುತ್ತದೆ' ಎಂದು ನ್ಯಾಯಾಲಯ ಹೇಳಿದೆ.

ಗಂಡ ವಿಪರೀತ ಕುಡಿದು ಹಿಂಸೆ ಕೊಟ್ರೆ ಹೆಂಡ್ತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್‌

ನಿಯಮದ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ
ನ್ಯಾಯಮೂರ್ತಿ ಮೆಹ್ತಾ ಅವರು 'ನ್ಯಾಯಾಲಯದ ದೃಷ್ಟಿಯಲ್ಲಿ ಮಹಿಳೆಯ ಎದೆಯ ಗಾತ್ರವು ಆಕೆಯ ಶಕ್ತಿಯನ್ನು ನಿರ್ಧರಿಸುವಾಗ ಅಪ್ರಸ್ತುತವಾಗುತ್ತದೆ' ಎಂದು ಹೇಳಿದರು. 'ಕನಿಷ್ಠ ಎದೆಯ ಸುತ್ತಳತೆ ಮಹಿಳೆಯ ದೈಹಿಕ ಸಾಮರ್ಥ್ಯವನ್ನು ಖಾತರಿಪಡಿಸುತ್ತದೆ ಎಂಬ ತಪ್ಪು ಊಹೆಗಳ ಆಧಾರದ ಮೇಲೆ ಅರ್ಹತಾ ಮಾನದಂಡಗಳು ವೈಜ್ಞಾನಿಕ ಸಿಂಧುತ್ವವನ್ನು ಹೊಂದಿಲ್ಲ. ಈ ಅಭ್ಯಾಸವು ಅವಮಾನಕರ, ಅವಹೇಳನಕಾರಿ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ. ಅಭ್ಯರ್ಥಿಗಳು ಈಗಾಗಲೇ 1.35 ಮೀಟರ್ ಸ್ಟ್ಯಾಂಡಿಂಗ್ ಬ್ರಾಡ್ ಜಂಪ್ ಮತ್ತು 4 ಕೆಜಿ ಶಾಟ್ ಪುಟ್ 4.5 ಮೀಟರ್ ಎಸೆಯುವ ಶಾರೀರಿಕ ದಕ್ಷತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿರುವುದರಿಂದ, ಕನಿಷ್ಠ ಎದೆಯ ಸುತ್ತಳತೆಯ ಷರತ್ತು ಅಭಾಗಲಬ್ಧ ಮತ್ತು ಅನಗತ್ಯವೆಂದು ತೋರುತ್ತದೆ' ಎಂದು ಅವರು ಹೇಳಿದರು.

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳಿಗೆ ಅಂತಹ ಯಾವುದೇ ಪರೀಕ್ಷೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. 'ಶ್ವಾಸಕೋಶದ ಸಾಮರ್ಥ್ಯವನ್ನು ನಿರ್ಧರಿಸಲು ವಿಸ್ತರಣೆಯನ್ನು ಅಳೆಯುವುದು ಅರ್ಥವಾಗುವಂತಹದ್ದಾಗಿದೆ. ಆದರೆ 'ಕನಿಷ್ಠ ಎದೆಯ ಸುತ್ತಳತೆ' ಕಡ್ಡಾಯವಾಗಿದೆ ಎಂಬುದು ಒಪ್ಪುವಂಥಾ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದೆ. 

Follow Us:
Download App:
  • android
  • ios