Asianet Suvarna News Asianet Suvarna News

ಅಂಬಾನಿಯ 15000 ಕೋಟಿಯ ಅಂಟಿಲಿಯಾಗಿಂತ ಮೂರು ಪಟ್ಟು ದೊಡ್ಡದು ಈ ಮಹಿಳೆಯ ಐಷಾರಾಮಿ ಬಂಗಲೆ!

ಬಿಲಿಯನೇರ್‌ ಮುಕೇಶ್ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಬರೋಬ್ಬರಿ 15000 ಕೋಟಿ ರೂಪಾಯಿ ಆಂಟಿಲಿಯಾದಲ್ಲಿ ವಾಸವಿದ್ದಾರೆ. ಆದರೆ ವಿಶ್ವದ ಅತಿದೊಡ್ಡ ನಿವಾಸ ಇದಲ್ಲ..ಮತ್ಯಾವುದು?

Radhikaraje Gaekwad, who lives in worlds largest residence, bigger than Mukesh Ambanis Antilia Vin
Author
First Published Mar 16, 2024, 2:12 PM IST

ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ.  ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅಂಬಾನಿ ಕುಟುಂಬ ಬರೋಬ್ಬರಿ  15000 ಕೋಟಿ ರೂಪಾಯಿ ಲಕ್ಸುರಿಯಸ್ ಬಂಗಲೆ ಅಂಟಿಲಿಯಾದಲ್ಲಿ ವಾಸಿಸುತ್ತದೆ. ಈ ಐಷಾರಾಮಿ ಬಂಗಲೆಯಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ, ಎರಡು ಈಜುಕೊಳ, ಮಂದಿರ, ಸಲೂನ್ ಮೊದಲಾದವುಗಳನ್ನು ಹೊಂದಿದೆ. ಆದರೆ ಭಾರತದಲ್ಲಿರೋ ಅತಿ ದೊಡ್ಡ ಖಾಸಗಿ ನಿವಾಸ ಇದಲ್ಲ.

ಭಾರತದ ಅತಿದೊಡ್ಡ ಖಾಸಗಿ ನಿವಾಸ, ಲಕ್ಷ್ಮಿ ವಿಲಾಸ್ ಅರಮನೆಯು ಗುಜರಾತ್‌ನಲ್ಲಿದೆ. ಬರೋಡಾದ ಗಾಯಕ್ವಾಡ್‌ಗಳ ಒಡೆತನದಲ್ಲಿದೆ. ಲಕ್ಷ್ಮಿ ವಿಲಾಸ್ ಅರಮನೆಯು ಬ್ರಿಟನ್ ರಾಜಮನೆತನದ ನಿವಾಸವಾದ ಬಕಿಂಗ್‌ಹ್ಯಾಮ್‌ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಬರೋಡಾದ ಗಾಯಕ್ವಾಡ್‌ಗಳು ಒಮ್ಮೆ ಬರೋಡಾ ರಾಜ್ಯವನ್ನು ಆಳಿದರು ಮತ್ತು ಅಲ್ಲಿನ ಸ್ಥಳೀಯರು ಇಂದಿಗೂ ರಾಜಮನೆತನವನ್ನು ಹೆಚ್ಚು ಗೌರವಿಸುತ್ತಾರೆ. ರಾಧಿಕರಾಜೆ ಗಾಯಕ್ವಾಡ್ ಅವರನ್ನು ವಿವಾಹವಾದ HRH ಸಮರ್ಜಿತ್ ಸಿಂಗ್ ಗಾಯಕ್ವಾಡ್ ಪ್ರಸ್ತುತ ಹಿಂದಿನ ರಾಜಮನೆತನದ ಮುಖ್ಯಸ್ಥರಾಗಿದ್ದಾರೆ.

ಭರ್ತಿ 15000 ಕೋಟಿ ರೂ. ಮೌಲ್ಯದ ಅಂಬಾನಿ ಮನೆ, ಅಂಟಿಲಿಯಾ ನಿರ್ಮಿಸೋಕೆ ಎಷ್ಟ್ ವರ್ಷ ಬೇಕಾಯ್ತು ಗೊತ್ತಾ?

ಬ್ರಿಟನ್ ರಾಜಮನೆತನದ ನಿವಾಸ ಬಕಿಂಗ್‌ಹ್ಯಾಮ್‌ಗಿಂತ ದೊಡ್ಡದು ಈ ಬಂಗಲೆ
ವರದಿಗಳ ಪ್ರಕಾರ, ಲಕ್ಷ್ಮಿ ವಿಲಾಸ್ ಅರಮನೆಯು 3,04,92,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ, ಆದರೆ ಬಕಿಂಗ್ ಹ್ಯಾಮ್‌ ಅರಮನೆಯು 828,821 ಚದರ ಅಡಿಗಳಲ್ಲಿ ಹರಡಿದೆ. ಮುಕೇಶ್ ಅಂಬಾನಿ ಅವರ ಮುಂಬೈನ ಐಷಾರಾಮಿ ನಿವಾಸ ಆಂಟಿಲಿಯಾ, 15,000 ಕೋಟಿ ರೂಪಾಯಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಮನೆಯಾಗಿದೆ, ಇದು 48,780 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ.

ಗುಜರಾತ್‌ನಲ್ಲಿರುವ ಲಕ್ಷ್ಮಿ ವಿಲಾಸ್ ಅರಮನೆಯು 17ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದೆ ಮತ್ತು ಇದನ್ನು 1890 ರಲ್ಲಿ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ನಿರ್ಮಿಸಿದರು. ಇದನ್ನು ನಿರ್ಮಿಸಿದಾಗ ಅರಮನೆಯ ವೆಚ್ಚ ಸುಮಾರು GBP 180,000 ಆಗಿತ್ತು. ಲಕ್ಷ್ಮಿ ವಿಲಾಸ್ ಅರಮನೆಯು ಗಾಲ್ಫ್ ಕೋರ್ಸ್ ಅನ್ನು ಸಹ ಹೊಂದಿದೆ.

ಆಗರ್ಭ ಶ್ರೀಮಂತ ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರ ಸ್ಯಾಲರಿ ಎಷ್ಟಿರಬಹುದು?

ರಾಧಿಕರಾಜೆ ಗಾಯಕ್ವಾಡ್ ಅವರು ಜುಲೈ 19, 1978 ರಂದು ಜನಿಸಿದರು ಮತ್ತು ಗುಜರಾತ್‌ನ ವಾಂಕನೇರ್ ರಾಜ್ಯಕ್ಕೆ ಸೇರಿದವರು. ಆಕೆಯ ತಂದೆ ಡಾ.ಎಂ.ಕೆ.ರಂಜಿತ್‌ಸಿಂಗ್ ಝಾಲಾ ಅವರು ಐಎಎಸ್ ಅಧಿಕಾರಿಯಾಗಲು ರಾಜಮನೆತನದ ಪಟ್ಟವನ್ನು ತ್ಯಜಿಸಿದ್ದರು.ರಾಧಿಕರಾಜೆ ಗಾಯಕ್ವಾಡ್ ಅವರು ಓದುವುದು ಮತ್ತು ಬರೆಯುವುದನ್ನು ಇಷ್ಟಪಡುತ್ತಾರೆ ಮತ್ತು ದೆಹಲಿ ವಿಶ್ವವಿದ್ಯಾಲಯದ ಪ್ರಸಿದ್ಧ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಭಾರತೀಯ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ರಾಧಿಕರಾಜೆ ಗಾಯಕ್ವಾಡ್ ಅವರು 2002 ರಲ್ಲಿ ಮಹಾರಾಜ್ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮದುವೆಯಾಗುವ ಮೊದಲು, ಪತ್ರಕರ್ತರಾಗಿ ಕೆಲಸ ಮಾಡಿದರು. 2012 ರಲ್ಲಿ ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರಿಗೆ ಬರೋಡಾದ ಕಿರೀಟವನ್ನು ಹಸ್ತಾಂತರಿಸಲಾಯಿತು.

Follow Us:
Download App:
  • android
  • ios