ಭರ್ತಿ 15000 ಕೋಟಿ ರೂ. ಮೌಲ್ಯದ ಅಂಬಾನಿ ಮನೆ, ಅಂಟಿಲಿಯಾ ನಿರ್ಮಿಸೋಕೆ ಎಷ್ಟ್ ವರ್ಷ ಬೇಕಾಯ್ತು ಗೊತ್ತಾ?
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅಂಬಾನಿ ಕುಟುಂಬ 15000 ಕೋಟಿ ರೂಪಾಯಿ ಬಂಗಲೆಯಲ್ಲಿ ವಾಸಿಸುತ್ತೆ. ಆದರೆ ಇದನ್ನು ನಿರ್ಮಿಸಿದ್ದು ಯಾರು, ನಿರ್ಮಿಸೋಕೆ ಎಷ್ಟು ವರ್ಷ ಬೇಕಾಯ್ತು ನಿಮ್ಗೆ ಗೊತ್ತಿದ್ಯಾ?
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ದುಬಾರಿ ಖಾಸಗಿ ಮನೆಯನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ. 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂವವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ.
ಆಂಟಿಲಿಯಾ ಬರೋಬ್ಬರಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಿಟ್ಟಿದೆ. 27 ಮಹಡಿಗಳನ್ನು ಹೊಂದಿದೆ. ಇದು 173 ಮೀಟರ್ (568 ಅಡಿ) ಎತ್ತರವಾಗಿದೆ. ಸಂಪೂರ್ಣ ರಚನೆಯು 37,000 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ. ಆಂಟಿಲಿಯಾವು 168 ಕಾರ್ ಗ್ಯಾರೇಜ್, ಬಾಲ್ ರೂಂ, 9 ಹೈ ಸ್ಪೀಡ್ ಎಲಿವೇಟರ್‌ಗಳು, 50 ಆಸನಗಳ ಥಿಯೇಟರ್, ಟೆರೇಸ್ ಗಾರ್ಡನ್ಸ್, ಈಜುಕೊಳ, ಸ್ಪಾ, ಆರೋಗ್ಯ ಕೇಂದ್ರ ಮತ್ತು ದೇವಸ್ಥಾನವನ್ನು ಹೊಂದಿದೆ.
US ಆಧಾರಿತ ಸಂಸ್ಥೆ ಪರ್ಕಿನ್ಸ್ & ವಿಲ್ ಮತ್ತು ಹಿರ್ಷ್ ಬೆಡ್ನರ್ ಅಸೋಸಿಯೇಟ್ಸ್, ಲಾಸ್ ಏಂಜಲೀಸ್ ಮೂಲದ ನಿರ್ಮಾಣ ಕಂಪನಿಯು ಆಂಟಿಲಿಯಾವನ್ನು ವಿನ್ಯಾಸಗೊಳಿಸಿದೆ. ಆಂಟಿಲಿಯಾ ನಿರ್ಮಾಣವು 2006ರಲ್ಲಿ ಪ್ರಾರಂಭವಾಯಿತು ಮತ್ತು 2010 ರಲ್ಲಿ ಕೊನೆಗೊಂಡಿತು.
ಆಂಟಿಲಿಯಾ ಹಲವು ದೊಡ್ಡ ದೊಡ್ಡ ಕೋಣೆಗಳನ್ನು ಹೊಂದಿದೆ, ಇದನ್ನು ಆಂಟಿಲಿಯಾಕ್ಕೆ ಬರುವ ಅತಿಥಿಗಳನ್ನು ಸತ್ಕಾರ ಮಾಡಲು ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರು ಬಳಸುತ್ತಾರೆ. ಲಿವಿಂಗ್ ರೂಮ್ ಅತ್ಯಾಧುನಿಕ ಸೋಫಾಗಳು ಮತ್ತು ಉನ್ನತ ದರ್ಜೆಯ ವರ್ಣಚಿತ್ರಗಳಿಂದ ತುಂಬಿದೆ
ಪರ್ಕಿನ್ಸ್ & ವಿಲ್ ಚಿಕಾಗೋದಲ್ಲಿದ್ದು ಅದರ CEO ಫಿಲ್ ಹ್ಯಾರಿಸನ್ ಬ್ರಿಟಿಷ್ ಉದ್ಯಮಿಯಾಗಿದ್ದಾರೆ. ಫಿಲ್ ಹ್ಯಾರಿಸನ್ ಅವರು ಮೈಕ್ರೋಸಾಫ್ಟ್‌ನ ಕಾರ್ಪೊರೇಟ್ ಉಪಾಧ್ಯಕ್ಷರಾಗಿ ಗೂಗಲ್‌ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಹ್ಯಾರಿಸನ್ 1989ರಿಂದ 1992ರ ವರೆಗೆ ಮೈಂಡ್‌ಸ್ಕೇಪ್ ಇಂಟರ್‌ನ್ಯಾಶನಲ್‌ನ ಅಭಿವೃದ್ಧಿಯ ಮುಖ್ಯಸ್ಥರಾಗಿದ್ದರು.
ಹ್ಯಾರಿಸನ್ 9 US ರಾಜ್ಯಗಳು ಮತ್ತು 2 ಕೆನಡಾದ ಪ್ರಾಂತ್ಯಗಳಲ್ಲಿ ಪರವಾನಗಿ ಪಡೆದ ವಾಸ್ತುಶಿಲ್ಪಿ. ಅವರು 2006 ರಲ್ಲಿ ಪರ್ಕಿನ್ಸ್ ಮತ್ತು ವಿಲ್‌ನ CEO ಆಗಿ ನೇಮಕಗೊಂಡರು. ಹ್ಯಾರಿಸನ್ ಅವರ ಕುಟುಂಬದೊಂದಿಗೆ ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದಾರೆ.
ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ. ಇಂಟರ್‌ನೆಟ್‌ನಲ್ಲಿ ಆಂಟಿಲಿಯಾದ ಸಾಕಷ್ಟು ಫೋಟೋಗಳು ಲಭ್ಯವಿದೆ.
ಐಷಾರಾಮಿ ಬಂಗಲೆ ಅಂಟಿಲಿಯಾದಲ್ಲಿ 600 ಮಂದಿ ಕೆಲಸಗಾರರಿದ್ದಾರೆ. ಇವರೆಲ್ಲಾ ಸಾಮಾನ್ಯ ಕೆಲಸದವರು ಅಲ್ಲ. ಹೈಲೀ ಎಜುಕೇಟೆಡ್. ಒಟ್ಟು 600 ಮಂದಿ 27 ಫ್ಲೋರ್‌ನ ಅಂಟಿಲಾ ಬಂಗಲೆಯಲ್ಲಿ ಕೆಲಸ ಮಾಡುತ್ತಾರೆ. ಕಸ ಗುಡಿಸಲು, ಒರೆಸಲು, ಬಟ್ಟೆ ಒಗೆಯಲು, ಅಡುಗೆ ಮಾಡಲು ಇಲ್ಲಿ ಪ್ರತ್ಯೇಕವಾಗಿ ಹಲವು ಮಂದಿ ನಿಯೋಜಿಸಲ್ಪಟ್ಟಿದ್ದಾರೆ.
ಅಂಬಾನಿ ಮನೆ ಅಂಟಿಲಿಯಾದ ಕೆಲಸಗಾರರು ವೆಲ್ ಟ್ರೈನ್‌ಡ್ ಆಗಿದ್ದಾರೆ. ಇವರು ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂ. ಸ್ಯಾಲರಿ ಪಡೆಯುತ್ತಾರೆ. ಅಂಟಿಲಿಯಾದಲ್ಲಿ ಈ ಕೆಲಸಗಾರರು ಉಳಿದುಕೊಳ್ಳಲೆಂದೇ ಸರ್ವೆಂಟ್ ಕ್ವಾರ್ಟರ್ಸ್ ಎಂಬ ಜಾಗವಿದೆ. ಇಲ್ಲಿ ಕೆಲಸಗಾರರು ಉಳಿದುಕೊಳ್ಳಬಹುದಾಗಿದೆ.