ಗಂಡನಿಂದ ತನ್ನ ತಿನಿಸು ರಕ್ಷಿಸಲು ಫ್ರಿಡ್ಜ್‌ ಲಾಕ್‌ ಮಾಡಿದ ಪತ್ನಿ!

ಸ್ನ್ಯಾಕ್ಸ್‌ ಶೇರ್ ಮಾಡೋದು ಅಂದ್ರೆ ಎಲ್ರಿಗೂ ಬೇಸರಾನೇ. ಮತ್ತೊಬ್ಬರಿಗೆ ಕೊಟ್ಟು ತಿನ್ನೋದು ಅಂದ್ರೆ ನಮ್ಗೆಲ್ಲಿ ಕಡಿಮೆಯಾಗುತ್ತೋ ಅನ್ನೋ ಕಳವಳದಲ್ಲಿರುತ್ತಾರೆ. ಆದ್ರೆ ಇಲ್ಲೊಬ್ಬ ಪತ್ನಿ ಗಂಡನಿಂದ ತನ್ನ ತಿನಿಸು ರಕ್ಷಿಸಲು ಫ್ರಿಡ್ಜ್‌ನ್ನೇ ಲಾಕ್‌ ಮಾಡಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದ

Pregnant woman buys new fridge and locks it after husband steals her food Vin

ಗರ್ಭಿಣಿಯರಿಗೆ (Pregnant) ಹೆಚ್ಚಾಗಿ ಹಸಿವು ಹಾಗೂ ವಿವಿಧ ತಿನಿಸು ತಿನ್ನುವ ಬಯಕೆಗಳಾಗುವುದು ಸಾಮಾನ್ಯ. ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ 10 ವಾರದ ಗರ್ಭಿಣಿ ಮಹಿಳೆಯೊಬ್ಬಳ ಇಷ್ಟದ ತಿನಿಸುಗಳನ್ನೆಲ್ಲ ಆಕೆಯ ವಿರೋಧದ ನಡುವೆಯೂ ಗಂಡ (Husband) ಕದ್ದು ತಿಂದು ಖಾಲಿ ಮಾಡುತ್ತಿದ್ದನಂತೆ. ಆತನೂ ಓರ್ವ ತಿಂಡಿಪೋತನೆ ಇರಬೇಕು. ಇದರಿಂದ ಬೇಸತ್ತಿದ್ದ ಮಹಿಳೆ ಹೊಸ ಫ್ರಿಡ್ಜ್‌ವೊಂದನ್ನು ಖರೀದಿಸಿ ತನ್ನಿಷ್ಟದ ತಿನಿಸು (Food)ಗಳನ್ನೆಲ್ಲ ಅದರಲ್ಲಿಟ್ಟು ಫ್ರಿಡ್ಜ್‌ ಲಾಕ್‌ ಮಾಡಿ ಇಡುತ್ತಿದ್ದಾಳಂತೆ. ಈ ಕುರಿತು ಆಕೆ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

ಮಹಿಳೆ ರೆಡ್ಡಿಟ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. 'ನಾನು ಪ್ರಸ್ತುತ ಹತ್ತು ವಾರಗಳ ಗರ್ಭಿಣಿಯಾಗಿದ್ದೇನೆ ಮತ್ತು ಗರ್ಭಧಾರಣೆಯಲ್ಲಿ ಮುಖ್ಯವಾಗಿ ನಾನು ಕಡುಬಯಕೆಗಳು (Cravings) ಮತ್ತು ಹಸಿವನ್ನು ಎದುರಿಸುತ್ತಿದ್ದೇನೆ. ನಾನು ಏನು ಮಾಡಿದರೂ ನನಗೆ ಪೂರ್ಣವಾಗಿರಲು ಸಾಧ್ಯವಿಲ್ಲ. ನಾನು ಇನ್ನೂ ದಿನವಿಡೀ ತಿನ್ನುತ್ತೇನೆ ಆದರೆ 3 ಪೌಂಡ್‌ಗಳನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಬರೆದಿದ್ದಾಳೆ.

Pregnancy Cravings: ಗರ್ಭಾವಸ್ಥೆಯಲ್ಲಿ ಬಯಕೆ ಆಗದೇ ಇರೋದು ಸಾಮಾನ್ಯವೇ?

ಐದು ವಾರಗಳಿಂದ ಮನೆಗೆ ಹೋಗುವ ದಾರಿಯಲ್ಲಿ ಅವಳು ತನ್ನ ನೆಚ್ಚಿನ ತಿಂಡಿಗಳನ್ನು ಖರೀದಿಸುತ್ತಿದ್ದಾಳೆ. 'ಪಿಜ್ಜಾ, ಉಪ್ಪಿನಕಾಯಿ, ಹಣ್ಣುಗಳು, ಪಾಪ್‌ಕಾರ್ನ್, ಚಿಕನ್ ನೂಡಲ್ ಸೂಪ್, ಸ್ಟ್ರಿಂಗ್ ಚೀಸ್ ಇತ್ಯಾದಿ. ನಾನು ಇದನ್ನು ಸುಮಾರು ಐದು ವಾರಗಳಿಂದ ಮಾಡುತ್ತಿದ್ದೇನೆ' ಎಂದು ಆಕೆ ಹೇಳಿದ್ದಾಳೆ. ಜೊತೆಗೆ ಫ್ರಿಡ್ಜ್‌ಗೆ ಲಾಕ್ ಹಾಕಿರುವ ಕಾರಣವನ್ನು ಆಕೆ ಬಹಿರಂಗಪಡಿಸಿದ್ದಾಳೆ.

'ಕಳೆದ ವಾರ, ನಾನು ನನ್ನ ನೆಚ್ಚಿನ ಐಸ್ ಕ್ರೀಮ್ ಅನ್ನು ಖರೀದಿಸಿದೆ. ಅದನ್ನು ಫ್ರೀಜರ್‌ನಲ್ಲಿ ಇರಿಸಿದೆ. ನನಗೆ ತಿನ್ನಬೇಕು ಅನಿಸಿದಾಗ ನಾನು ಫ್ರೀಜರ್‌ಗೆ ಹೋಗಿ ಅದನ್ನು ತೆರೆದಿರುವುದನ್ನು ನೋಡಿದೆ. ನನ್ನ ಪತಿ ಸ್ಪಲ್ಪ ಐಸ್‌ಕ್ರೀಂ ತಿಂದರೆ ಪರವಾಗಿರಲ್ಲಿಲ್ಲ. ಆದರೆ ಅವರು ಎಲ್ಲಾ ಸ್ಟ್ರಾಬೆರಿ ಬದಿಗಳನ್ನು ತಿಂದು ಕೇವಲ ವೆನಿಲ್ಲಾ ಮತ್ತು ಚಾಕೊಲೇಟ್ ಅನ್ನು ನನಗೆ ಬಿಟ್ಟರು ಮತ್ತು ಸ್ಟ್ರಾಬೆರಿ ನನ್ನ ನೆಚ್ಚಿನ ಭಾಗವಾಗಿದೆ' ಎಂದು ಮಹಿಳೆ ನೋವಿನಿಂದ ಹೇಳಿದಳು. ನಾನು ಸಿಟ್ಟಿನಿಂದ ಕಿರುಚಾಡಿದೆ. ಗರ್ಭಾವಸ್ಥೆಯಲ್ಲಿ ಇರುವ ಕಾರಣ ನನಗೆ ಐಸ್‌ಕ್ರೀಂ ತಿನ್ನಬೇಕೆಂದು ಬಲವಾಗಿ ಅನಿಸುತ್ತಿತ್ತು. ಹೀಗಾಗಿ ನಾನು ಹೊಸ ಫ್ರಿಡ್ಜ್‌ ಖರೀದಿಸಿದೆ' ಎಂದು ಮಹಿಳೆ ಹೇಳಿದ್ದಾಳೆ. 

ಗರ್ಭಾವಸ್ಥೆಯ ಕಡುಬಯಕೆಯಲ್ಲಿ ಯಾವ ಆಹಾರ ಸೇವಿಸುವುದು ಒಳ್ಳೆಯದು

ಮಹಿಳೆ ತನ್ನ ವೈಯಕ್ತಿಕ ಉಳಿತಾಯ ಖಾತೆಯಲ್ಲಿ ಉಳಿಸಿದ ಹಣವನ್ನು ಬಳಸಿಕೊಂಡು ಪೂರ್ಣ ಗಾತ್ರದ ರೆಫ್ರಿಜರೇಟರ್ ಅನ್ನು ಆರ್ಡರ್ ಮಾಡಿದ್ದಾಳೆ. 'ನನ್ನ ಪತಿ ಮತ್ತು ನಾನು ಜಂಟಿ ಖಾತೆಯನ್ನು ಹೊಂದಿಲ್ಲ. ಆದ್ದರಿಂದ ಎರಡು ದಿನಗಳ ಹಿಂದೆ ಫ್ರಿಡ್ಜ್‌ನ್ನು ನಮ್ಮ ಮನೆಗೆ ತಲುಪಿಸುವವರೆಗೂ ನಾನು ಅದನ್ನು ಖರೀದಿಸಿರುವುದನ್ನು ಅವನು ನೋಡಲಿಲ್ಲ. ಅವನು ಕೆಲಸದಿಂದ ಮನೆಗೆ ಬಂದು ಅದನ್ನು ನಮ್ಮ  ಪ್ಲಗ್ ಮಾಡಿರುವುದನ್ನು ನೋಡಿದನು. ಬೀಗಗಳು ಏಕೆ ಇವೆ ಎಂದು ಕೇಳಿದನು. ನನ್ನ ಎಲ್ಲಾ ತಿಂಡಿಗಳನ್ನು ಅವನು ತಿನ್ನುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅದರ ಮೇಲೆ ಬೀಗಗಳಿವೆ ಎಂದು ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾಳೆ.

Latest Videos
Follow Us:
Download App:
  • android
  • ios