Asianet Suvarna News Asianet Suvarna News

23 ಸಾವಿರ ಮರಣೋತ್ತರ ಪರೀಕ್ಷೆ ಮಾಡಿದ ಈ ಮಹಿಳೆಗೆ ಒಂದು ಹೆಣ ಕಣ್ಣು ಮಿಟುಕಿಸಿತ್ತಂತೆ!

ಈಗಿನ ಕಾಲದಲ್ಲಿ ಜನರು ಕಾಲೆಳೆಯೋದು ಹೇಗೆ ನೋಡ್ತಾರೆಯೇ ವಿನಃ ಜನರ ಪರಿಶ್ರಮಕ್ಕೆ ಬೆಲೆ ನೀಡೋದಿಲ್ಲ. ತಪ್ಪನ್ನು ಎತ್ತಿ ಹೇಳುವ ಜನರ ಸಂಖ್ಯೆ ಹೆಚ್ಚಾಗಿದೆ. ಒಂದು ವಿಷ್ಯ ಸಿಕ್ಕಿದ್ರೆ ಸಾಕು ಅದು ಸಾಮಾಜಿಕ ಜಾಲತಾಣದ ತಮಾಷೆ ವಸ್ತುವಾಗುತ್ತದೆ. 
 

Postmortem Woman Worker Viral Video Social Media People Mocking Know Who Is She roo
Author
First Published Dec 4, 2023, 5:17 PM IST

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳ ಸಂದರ್ಶನ ತುಂಬ ವೈರಲ್ ಆಗ್ತಿದೆ. ಆಕೆ ಈವರೆಗೆ 22-23 ಸಾವಿರ ಶವಗಳ ಮರಣೋತ್ತರ ಪರೀಕ್ಷೆ ಮಾಡಿರೋದಾಗಿ ಹೇಳ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ಹೇಳಿದ ಮಾತುಗಳು ಸಾಕಷ್ಟು ಕಮೆಂಟ್ ಗೆ ಕಾರಣವಾಗಿದೆ. ಅನೇಕರು ಆಕೆಯ ಮಾತುಗಳನ್ನು ಮೋಜಿನ ರೂಪದಲ್ಲಿ ತೆಗೆದುಕೊಂಡಿದ್ದು, ತಮಾಷೆ ಮಾಡ್ತಿದ್ದಾರೆ. 

ಸಂದರ್ಶನ (Interview) ದಲ್ಲಿ ಮೊದಲು ವ್ಯಕ್ತಿ ಆಕೆಯನ್ನು ನೀವು ಎಷ್ಟು ಮರಣೋತ್ತರ ಪರೀಕ್ಷೆ (Test) ಮಾಡಿದ್ದೀರಿ ಎಂದು ಪ್ರಶ್ನೆ ಕೇಳ್ತಾನೆ. ಅದಕ್ಕೆ ಅವರು ಈವರೆಗೆ 22-23 ಸಾವಿರ ಶವಗಳ ಮರಣೋತ್ತರ (Posthumous) ಪರೀಕ್ಷೆ ಮಾಡಿದ್ದೇನೆ ಎನ್ನುತ್ತಾರೆ. ಮರಣೋತ್ತರ ಪರೀಕ್ಷೆ ವೇಳೆ ಶವ ಎದ್ದು ಕುಳಿತುಕೊಳ್ಳುತ್ತೆ, ಜೀವ ಬರುತ್ತದೆ ಎನ್ನುತ್ತಾರಲ್ಲ. ಅದು ನಿಮ್ಮ ಅನುಭವಕ್ಕೆ ಬಂದಿದ್ಯಾ ಎಂದು ಆತ ಮತ್ತೊಂದು ಪ್ರಶ್ನೆ ಕೇಳ್ತಾನೆ. ಅದಕ್ಕೆ ಇಲ್ಲ ಎನ್ನುವ ಮಹಿಳೆ, ಒಂದು ಬಾರಿ ಹೀಗೆ ಆಗಿತ್ತು ಎನ್ನುತ್ತಾರೆ. 

ಕಣ್ಣು ಮಿಟುಕಿಸಿದ್ದ ಶವ : ಒಂದು ದಿನ ನಾನು ಮರಣೋತ್ತರ ಪರೀಕ್ಷೆ ಮಾಡ್ತಿದ್ದೆ. ಏಳರಿಂದ ಎಂಟು ಗಂಟೆ ಹಿಂದೆ ನಡೆದ ಸಾವಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಎರಡು ಬಾರಿ ಕಣ್ಣು ಮಿಟುಕಿಸಿತ್ತು. ಮೂರನೇ ಬಾರಿ ನಾನು ಕಣ್ಣು ಮುಚ್ಚಿದ್ದಲ್ಲದೆ, ಶಾಂತವಾಗಿರುವ ನೀನು ಸಾವನ್ನಪ್ಪಿದ್ದೀಯಾ ಎಂದಿದ್ದೆ. ಅದ್ರ ನಂತ್ರ ಶವದ ಕಣ್ಣು ತೆರೆದುಕೊಳ್ಳಲಿಲ್ಲ ಎಂದು ಮಹಿಳೆ ಹೇಳೋದನ್ನು ನೀವು ಈ ವಿಡಿಯೋದಲ್ಲಿ ನೋಡ್ಬಹುದು. ಅಷ್ಟೆ, ಮಹಿಳೆ ಈ ಮಾತುಗಳನ್ನು ಕಟ್ ಮಾಡಿ ಅದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.  

ಕ್ರಿಶ್ಚಿಯನ್ ಕುಟುಂಬದಲ್ಲಿ ನಟಿಸಿ ಧರ್ಮ ಬದಲಾಯಿಸಿಕೊಂಡ ಯುವತಿ, ಈಗ ಭರ್ತಿ 11 ಕೋಟಿ ಸಂಭಾವನೆ ಪಡೆಯೋ ನಟಿ!

ಈಗಿನ ದಿನಗಳಲ್ಲಿ ಸಣ್ಣ ವಿಷ್ಯ ಸಿಕ್ಕಿದ್ರೂ ಅದು ವೈರಲ್ ಆಗುತ್ತದೆ. ಜನರು ಮುಂದೇನಾಯ್ತು, ಹಿಂದೇನಿದೆ ಎಂಬುದನ್ನು ನೋಡಲು ಹೋಗೋದಿಲ್ಲ. ಶಾಂತವಾಗು, ನೀನು ಡೆಡ್ ಬಾಡಿ  ಎಂಬ ಮಾತನ್ನಷ್ಟೇ ಜನರು ತೆಗೆದುಕೊಂಡಿದ್ದು, ಎಕ್ಸ್ ಖಾತೆಯಲ್ಲಿ ಕಮೆಂಟ್ ಶುರು ಮಾಡಿದ್ದಾರೆ. ಈ ವಿಡಿಯೋ ಈವರೆಗೆ 159 ಸಾವಿರ ವೀವ್ಸ್ ಪಡೆದಿದೆ. ಐದು ನೂರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಎಲ್ಲರೂ ಮಹಿಳೆಯ ಈ ಮಾತಿಗೆ ತಮಾಷೆ ಮಾಡಿದ್ದಾರೆ.

ಕಿಚ್ಚ ಸರ್​ ಪ್ಲೀಸ್​ ವರ್ತೂರ್​ ಮದ್ವೆ ವಿಷ್ಯ ತಗೀಬೇಡಿ... ಈ ಜೋಡಿ ನೋಡೋಕೆ ನಮ್ಗೆ ಇಷ್ಟ...

ಯಾರು ಈ ಮಹಿಳೆ? : ಸಾಮಾಜಿಕ ಜಾಲತಾಣದಲ್ಲಿ ಒಂದು ಮಾತಿನಿಂದ ಎಲ್ಲರ ತಮಾಷೆ ವಸ್ತುವಾಗಿರುವ ಮಹಿಳೆ ಹೆಸರು  ಮಂಜು ದೇವಿ. ಅವರು ಬಿಹಾರದ ಸಮಸ್ತಿಪುರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಸಹಾಯಕರಾಗಿದ್ದಾರೆ. ತಮಾಷೆ ಮಾಡಿದಷ್ಟು ಮಂಜು ದೇವಿ ಕೆಲಸ ಸುಲಭವಲ್ಲ. ಮೃತದೇಹಕ್ಕೆ ಛೇದನ ಮಾಡೋದು, ಸೀಲ್ ಮಾಡೋದು, ಪ್ಯಾಕ್ ಮಾಡುವ ಕೆಲಸವನ್ನು ಮಂಜು ದೇವಿ ಮಾಡುತ್ತಾರೆ. ಅವರು 2000 ರಲ್ಲಿ ಈ ಕೆಲಸಕ್ಕೆ ಸೇರಿದ್ದರು. ಅಂದರೆ 23 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.

ಮಂಜು ದೇವಿ ಕೆಲಸ ಈವರೆಗೂ ಪರ್ಮನೆಂಟ್ ಆಗಿಲ್ಲ. ಹಾಗಾಗಿ ಕಾನೂನು ಹೋರಾಟವನ್ನು ಮಾಡಿರೋದಾಗಿಯೂ ಮಂಜು ದೇವಿ ಹೇಳಿದ್ದಾರೆ. ಮಂಜು ದೇವಿ ಪ್ರಕಾರ, ದಿನಕ್ಕೆ ಒಂದು ಮೃತ ದೇಹ ಬಂದರೆ 380 ರೂಪಾಯಿ ಸಿಗುತ್ತದೆ. ಒಂದಕ್ಕಿಂತ ಹೆಚ್ಚು ಮೃತದೇಹ ಬಂದರೂ ಮಂಜು ದೇವಿಗೆ ದಿನಕ್ಕೆ ಸಿಗೋದು ಬರಿ 380 ರೂಪಾಯಿ ಮಾತ್ರ. ಒಂದ್ವೇಳೆ ಒಂದೇ ಒಂದು ಮೃತದೇಹವೂ ಬಂದಿಲ್ಲ ಎಂದಾದ್ರೆ ಆ ದಿನ ಮಂಜು ಖಾಲಿ ಕೈನಲ್ಲಿ ಮನೆಗೆ ಹೋಗ್ಬೇಕು. ಅವರು ಇರುವ ಸ್ಥಳದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಎಸಿ ಹೋಗ್ಲಿ ಕುಡಿಯುವ ನೀರು ಸರಿಯಾಗಿ ಸಿಗ್ತಿಲ್ಲ. ಇಷ್ಟಾದ್ರೂ ಮಂಜು ಯಾರ ಬಗ್ಗೆಯೂ ದೂರು ಹೇಳೋದಿಲ್ಲ. ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡ್ತಿದ್ದಾರೆ.
 

Follow Us:
Download App:
  • android
  • ios