Asianet Suvarna News Asianet Suvarna News

ಕಿಚ್ಚ ಸರ್​ ಪ್ಲೀಸ್​ ವರ್ತೂರ್​ ಮದ್ವೆ ವಿಷ್ಯ ತಗೀಬೇಡಿ... ಈ ಜೋಡಿ ನೋಡೋಕೆ ನಮ್ಗೆ ಇಷ್ಟ...

 ವರ್ತೂರು ಸಂತೋಷ್ ಅವರ ಮದ್ವೆ ವಿಷಯವನ್ನು ಕೇಳದಂತೆ ಅವರ ಫ್ಯಾನ್ಸ್​ ಕಿಚ್ಚ ಸುದೀಪ್​ ಅವರಲ್ಲಿ ಮನವಿ ಮಾಡಿಕೊಂಡು ಮೀಮ್ಸ್​ ಮಾಡಿದ್ದಾರೆ. ಏನಿದು ವಿಷ್ಯ? ​
 

Varthur Santosh  fans requested   Sudeep not to ask  marriage issue suc
Author
First Published Dec 3, 2023, 6:24 PM IST

ಬಿಗ್​ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಮತ್ತು ತನಿಷಾ ನಡುವಿನ ಸ್ನೇಹ ಸಂಬಂಧ ಗುಟ್ಟಗಿ ಉಳಿದಿಲ್ಲ.  ಬಿಗ್​ಬಾಸ್​​ ಮನೆಯಲ್ಲಿ ಇದೀಗ ಆಟದ ಭರಾಟೆ ಜೋರಾಗಿಯೇ ನಡೆದಿದೆ. ಆಟ ಎಂದ ಮೇಲೆ ತಾವು ಗೆಲ್ಲಬೇಕು ಎನ್ನುವುದು ಎಲ್ಲ ಸ್ಪರ್ಧಿಗಳ ಬಯಕೆ ಸಹಜವೇ. ಆದರೆ ಆಟದ ಹೆಸರಿನಲ್ಲಿ ಇದಾಗಲೇ ಬಿಗ್​ಬಾಸ್​ ಮನೆಯೊಳಕ್ಕೆ ಈ ಹಿಂದೆಯೂ ದೊಡ್ಡ ದೊಡ್ಡ ಜಗಳಗಳೇ ನಡೆದು ಹೋಗುವೆ. ಬಿಗ್​ಬಾಸ್​ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೇ ಕಾರಣಕ್ಕೆ ಟಿಆರ್​ಪಿ ಕೂಡ ಹೆಚ್ಚಾಗುತ್ತದೆ. ಅದೇ ರೀತಿ ಕನ್ನಡದ ಬಿಗ್​ಬಾಸ್​ನಲ್ಲಿ ಕೂಡ ಹೊಡಿಬಡಿ ಮಿತಿ ಮೀರುತ್ತಲೇ ಸಾಗಿದೆ.  ಬಿಗ್​ಬಾಸ್​ ಸ್ಪರ್ಧಿಗಳಿಗೆ ಆಟದ ಟಾಸ್ಕ್​ ಒಂದರ ಮೇಲೊಂದರಂತೆ ನೀಡಲಾಗುತ್ತಿದ್ದು,  ಇದು ಹೊಡೆದಾಟ, ಬಡಿದಾಟಕ್ಕೂ  ಕಾರಣವಾಗ್ತಿದೆ. ಇದೀಗ ಕಾಲ್ತುಳಿತವೂ ಆಗಿದ್ದು, ಒಬ್ಬರ ಮೇಲೊಬ್ಬರು ಸ್ಪರ್ಧಿಗಳು ಬಿದ್ದು ಒದ್ದಾಡಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲಿಲ ಹನಿ ಹನಿ ಕಹಾನಿ ಟಾಸ್ಕ್‌ ಮಾಡುವ ಸಮಯದಲ್ಲಿ  ತನಿಷಾ ಅವರಿಗೆ ಕಾಲಿಗೆ ಏಟು ಬಿದ್ದು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಎರಡು ದಿನಗಳ ಬಳಿಕ ಮೊನ್ನೆ ಶುಕ್ರವಾರ ತನಿಷಾ ವಾಪಸಾಗಿದ್ದಾರೆ. ಆದರೆ  ಇದಾಗಲೇ ತನಿಷಾ - ವರ್ತೂರು ಸಂತೋಷ್‌ ಮಧ್ಯೆ ಅನುಬಂಧ ಬೆಳೆಯುತ್ತಿದ್ದು, ತನಿಷಾ ಇಲ್ಲದೆಯೇ ವರ್ತೂರು ಚಡಪಡಿಸಿದ್ದನ್ನು ನೋಡಬಹುದಾಗಿತ್ತು. ತನಿಷಾ ವಾಪಸದಾಗ ಮೇಲೆ ಫುಲ್​ ಸಂತೋಷಗೊಂಡಿರುವ ವರ್ತೂರು ಸಂತೋಷ್​, ನೀನಿಲ್ಲದೆ ಮನೆ ಖಾಲಿ ಖಾಲಿ ಅನಿಸುತ್ತಿತ್ತು. ದೇವರ ಹತ್ತಿರ ದಿನವೂ ಕುಳಿತು ನೀನು ಬೇಗ ಹುಷಾರಾಗಲಿ ಎಂದು ಕೇಳಿಕೊಳ್ಳುತ್ತಿದ್ದೆ ಎಂದಿದ್ದರು. ಬಳಿಕ, ವರ್ತೂರು ಸಂತೋಷ್ ತೊಡೆ ಮೇಲೆ ತನಿಷಾ ಮಲಗಿದ್ದರು. ಅದನ್ನ ಕಂಡು ಮಿಕ್ಕ ಸ್ಪರ್ಧಿಗಳು ಬೆಂಕಿಯ ಬಲೆ ಅಂತ ರೇಗಿಸಿದ್ದರು. 

ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಅಂತ ಡ್ರೋನ್​ಗೆ ಹೇಳ್ತಾನೇ ಇದ್ದೇನೆ...

ಇವರಿಬ್ಬರ ನಡುವೆ ಇಷ್ಟು ಸಲುಗೆ ಬೆಳೆಯುತ್ತಿರುವ ಮಧ್ಯೆಯೇ ವರ್ತೂರು ಸಂತೋಷ್​ ಅವರು ಮದುವೆಯಾಗಿರುವ ವಿಷಯ ಬಹಿರಂಗಗೊಂಡಿತು. ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯನ್ನು ದೂರ ಮಾಡಿರುವ ಬಗ್ಗೆ ಸಕತ್​ ಸುದ್ದಿಯಾಯಿತು. ಈ ಬಗ್ಗೆ ವರ್ತೂರು ಅವರಿಗೆ ಪ್ರಶ್ನೆ ಕೇಳಿದಾಗ, ಮದುವೆಯ ಕುರಿತು ನಮ್ಮದು ಕೂಡು ಕುಟುಂಬ ನಾಲ್ಕು ವರ್ಷ ವಯಸ್ಸಿನಲ್ಲಿಯೇ ನಾನು ತಂದೆ ಕಳೆದುಕೊಂಡೆ, ಆದರೆ ನನ್ನ ದೊಡ್ಡಪ್ಪಂದಿರು ಯಾವುದಕ್ಕೂ ಕೊರತೆ ಮಾಡದೆ ನನ್ನನ್ನು ಬೆಳೆಸಿದರು. ಡಿಗ್ರಿ ಓದುತ್ತಿರುವಾಗಲೇ ನನಗೆ ಮನೆ ಜವಾಬ್ದಾರಿ ಬಂತು. ನನಗೆ ಮದುವೆ ಮಾಡುವ ವಯಸ್ಸು ಬಂದಾಗ ನನ್ನ ದೊಡ್ಡಪ್ಪನಿಗೆ ಮಾತು ಕೊಟ್ಟೆ, ನೀವು ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆಂದು ಹೇಳಿದೆ.  ಒಂದು ಕಡೆ ಹೆಣ್ಣು ನೋಡಲು ಹೋದರು ಅವರು ಬಣ್ಣದ ಮಾತುಗಳಿಂದ ಮರಳು ಮಾಡಿದರು.  ದೊಡ್ಡಪ್ಪನಿಗೆ ಕೊಟ್ಟ ಮಾತಿನಂತೆ ಆ ಹುಡುಗಿಯನ್ನು ಮದುವೆಯಾದೆ. ಆದರೆ ಆಕೆ ನನ್ನ ತಾಯಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದಳು. ಅಮ್ಮನನ್ನು ಬಿಡುವಂತೆ ಹೇಳಿದಳು. ಅದಕ್ಕೆ ನಾನು ಆಕೆಯನ್ನು ದೂರ ಮಾಡಿದೆ ಎಂದಿದ್ದರು. 

ಇದರ ನಡುವೆಯೇ ಈಗ ವರ್ತೂರು ಸಂತೋಷ್​ ಫ್ಯಾನ್ಸ್​ ಮೀಮ್ಸ್ ಮಾಡಿದ್ದು, ಅದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಮ್ಮ ಹುಬ್ಬಳ್ಳಿ ಮೀಮ್ಸ್​ನಿಂದ ಈ ಮೀಮ್ಸ್​ ಮಾಡಲಾಗಿದೆ. ಇದರಲ್ಲಿ ಅವರು ಕಿಚ್ಚ ಸರ್​ ದಯವಿಟ್ಟು ಪಂಚಾಯ್ತೀಲಿ ವರ್ತೂರು ಅವ್ರು ಮದ್ವೆಯಾಗಿರೋ ಸುದ್ದಿನಾ ತೆಗೀಬೇಡಿ. ಅವರು ಇಬ್ಬರು ಹೇಗಿದ್ದಾರೆ, ಹಾಗೆಯೇ ಇರಲಿ. ಈ ಜೋಡಿನ ಹೀಗೆ ನೋಡಲು ಇಷ್ಟ ಆಗುತ್ತೆ ಎಂದು ಮೀಮ್ಸ್​ ಮಾಡಲಾಗಿದ್ದು, ಅದರಲ್ಲಿ ವರ್ತೂರು ಸಂತೋಷ್​ ಅವರ ಕಾಲ ಮೇಲೆ ತನಿಷಾ ಮಲಗಿರುವ ಫೋಟೋ ಹಾಕಿದ್ದಾರೆ. 

ಡ್ರೋನ್​ ಪ್ರತಾಪ್​ಗೆ ತುಕಾಲಿ ಸಂತೋಷ್​ ಕೇಳೋ ಈ ಪ್ರಶ್ನೆಗೆ ಉತ್ರ ಕೊಟ್ರೆ ನೀವೇ ಗ್ರೇಟ್​!

Follow Us:
Download App:
  • android
  • ios