Asianet Suvarna News Asianet Suvarna News

ಮಹಿಳಾ ಲೈಂಗಿಕ ಕಿರುಕುಳ ಅಂತ್ಯಗೊಳಿಸಲು ಕೇಂದ್ರದ ಮಹತ್ವದ ಹೆಜ್ಜೆ, She Box ಆರಂಭ!

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ. ಇದೀಗ ಮಹಿಳೆಯರ ಮೇಲೆ ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳ ಪ್ರಕರಣಗಳಿಗೆ ಅಂತ್ಯಹಾಡಲು ಇದೀಗ ಮಹತ್ವದ ಹೆಜ್ಜೆ ಇಡಲಾಗಿದೆ. 
 

PM Modi govt launches she box portal to monitor complaints of sexual harassment of women at workplace ckm
Author
First Published Aug 30, 2024, 10:33 AM IST | Last Updated Aug 30, 2024, 10:33 AM IST

ನವದೆಹಲಿ(ಆ.30) ಕೋಲ್ಕತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಪ್ರಕರಣ, ಕೇರಳದಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಲೈಂಗಿಕ ಕಿರುಕುಳ ಪ್ರಕರಣ ಜೊತೆಗೆ ದೇಶಾದ್ಯಂತ ಮಹಿಳೆ ಹಾಗೂ ಹೆಣ್ಣುಮಕ್ಕಳ ಮೇಲೆ ಕಿರುಕುಳ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ. ಈ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಹಲವು ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿದೆ. ದೇಶಾದ್ಯಂತ ಭಾರಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ.ಕೆಲಸ, ಕಚೇರಿ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕಳಕ್ಕೆ ಅಂತ್ಯಹಾಡಲು ಇದೀಗ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿ ಬಾಕ್ಸ್(She box) ಅನ್ನೋ ಪೋರ್ಟಲ್ ಆರಂಭಿಸಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ನೂತನ  She box ವೆಬ್‌ಸೈಟ್ ಲಾಂಚ್ ಮಾಡಿದ್ದಾರೆ.  ಈ ಪೋರ್ಟಲ್ ಮೂಲಕ ಮಹಿಳೆಯ ಮೇಲ್ವಿಚಾರಣೆ, ಕಿರುಕಳ ಸಂಬಂಧಿಸಿ ವಿಚಾರಗಳ ಕುರಿತು ತೀವ್ರ ನಿಗಾ ಇಡಲಿದೆ. ಈ ಮೂಲಕ ಕೆಲಸ, ಕಚೇರಿ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಖಾತ್ರಿ ಪಡಿಸುವ ಸಲುವಾಗಿ ಈ ಪೋರ್ಟಲ್ ಆರಂಭಿಸಲಾಗಿದೆ.

ಹೆಣ್ಣುಮಕ್ಕಳ ಮೇಲಿನ ದಾಳಿ, ಬಾಂಬ್ ಸ್ಫೋಟ ಸಾಮಾನ್ಯ ಘಟನೆಯಲ್ಲ, ನೇಹಾ ಹತ್ಯೆ ಉಲ್ಲೇಖಿಸಿ ಕಾಂಗ್ರೆಸ್ ಕುಟುಕಿದ ಮೋದಿ!

ಪ್ರಮುಖವಾಗಿ ಈ ಪೋರ್ಟಲ್ ಮೂಲಕ ಮಹಿಳೆಯರು ದೂರುಗಳನ್ನು ದಾಖಲಿಸಲು ಸಾಧ್ಯವಿದೆ. ಇದರಿಂದ ಈ ದೂರು ಹಾಗೂ ಮಾಹಿತಿ ಸಾರ್ವಜನಿಕವಾಗಿ ಬಹಿರಂಗವಾಗುವುದಿಲ್ಲ. ಗೌಪ್ಯವಾಗಿರಲಿದೆ. ಜೊತೆಗೆ ದೂರು ದಾಖಲಿಸುವವರ ಮಾಹಿಯೂ ಯಾರಿಗೂ ತಿಳಿಯದಂತೆ ದಾಖಲಾಗಲಿದೆ. ಇದರಿಂದ ಮಹಿಳೆಯ ಸುರಕ್ಷತೆ ಹಾಗೂ ಆಕೆ ಗೌರವಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಪೊರ್ಟಲ್‌ನಲ್ಲಿ ದಾಖಲಾದ ದೂರುಗಳನ್ನು ಪರಿಹರಿಸಲು, ನ್ಯಾಯ ಕೊಡಿಸಲು ಈ ವೆಬ್‌ಸೈಟ್ ನೆರವಾಗಲಿದೆ ಎಂದು ಸಚಿವೆ ಅನ್ಣಪೂರ್ಣ ದೇವಿ ಹೇಳಿದ್ದಾರೆ.

ಮಹಿಳಾ ಅದಿಕಾರಿಗಳ ತಂಡ ಈ ದೂರುಗಳ ಕುರಿತು ವಿಚಾರಣೆ ನಡೆಸಿ ನ್ಯಾಯ ಕೊಡಿಸಲಿದೆ. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಹಾಗೂ ಯಾರಿಗೂ ಹೇಳಲು ಆಗದೆ, ದೂರು ನೀಡಲು ಆಗದ ಪರಿಸ್ಥಿತಿಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವ ಹಲವು ಘಟನೆಗಳು ವರದಿಯಾಗಿದೆ. ಹೀಗಾಗಿ ಇಂತಹ ಘಟನೆ ತಪ್ಪಿಸಿ ಮಹಿಳೆಯ ಸುರಕ್ಷತೆಗೆ ಆದ್ಯತೆ ನೀಡಲು ಈ ಪೋರ್ಟಲ್ ನೆರವಾಗಲಿದೆ ಎಂದು ಸಚಿವೆ ಹೇಳಿದ್ದಾರೆ. ಎಲ್ಲಾ ಮಹಿಳೆ ಹಾಗೂ ಹೆಣ್ಣುಮಕ್ಕಳ ಸುರಕ್ಷತೆಗೆ ಪ್ರಮುಖ ಆಧ್ಯತೆ ನೀಡಲು ಈ ಪೋರ್ಟಲ್ ನೆರವಾಗಲಿದೆ ಎಂದಿದ್ದಾರೆ.

ಬೆಂಗ್ಳೂರಲ್ಲಿ ಈ 8 ಪ್ರದೇಶಗಳಲ್ಲಿ ಮಹಿಳೆಯರು ನಾಟ್ ಸೇಫ್..!

Latest Videos
Follow Us:
Download App:
  • android
  • ios